Skip to main content

ಫಿತರ್ ಝಕಾತಿನ ಸಂಪೂರ್ಣ ಸ್ವರೂಪ

ಫಿತರ್  ಝಕಾತಿನ ಸಂಪೂರ್ಣ ಸ್ವರೂಪ

✍🏼 *ಶಿಹಾಬ್ ಅಲ್ ವಫಾ*

ಫಿತ್ರ್ ಝಕಾತ್
ರಮಳಾನ್ ಸಮಾಪ್ತಿ ಮತ್ತು ಶವ್ವಾಲ್ ಆರಂಭ ನಿಮಿಷಗಳಲ್ಲಿ ಫಿತ್ರ್ ಝಕಾತ್ ಕಡ್ಡಾಯವಾದವನು ಎಲ್ಲಿರುವುದೋ ಆ ಊರಿನಲ್ಲಿ ಸಾಮಾನ್ಯವಾಗಿ ಅಲ್ಲಿನ ಬಡ ಜನತೆ ಸ್ವೀಕರಿಸಿರುವ ಮುಖ್ಯ ಆಹಾರ ಧಾನ್ಯವನ್ನೇ ಫಿತ್ರ್ ಝಕಾತ್ ಆಗಿ ನೀಡಬೇಕು.

ಝಕಾತ್ ಸಂದಾಯ ಮಾಡುವವನು ವಿವಿಧ ಅನ್ನಾಹಾರಗಳನ್ನು ಆ ಸಮಯದಲ್ಲಿ ಸೇವಿಸುತ್ತಿದ್ದಾನೆ ಎಂಬುದಕ್ಕೆ ಇಲ್ಲಿ ಮಹತ್ವವಿಲ್ಲ. ಧಾನ್ಯಕ್ಕೆ ಬದಲಾಗಿ ಅದರ ಮೌಲ್ಯವನ್ನು ನೀಡಿದರೆ ಝಕಾತ್ ಸಂದಾಯವಾಗಲಾರದು.

ಫಿತ್ರ್ ಝಕಾತ್ ಕಡ್ಡಾಯವಾದ ಸಮಯದಲ್ಲಿ ಝಕಾತ್ ಸಂದಾಯ ಮಾಡುವವನು ಎಲ್ಲಿರುವನೋ ಆ ಊರಿನ ಜನತೆಗೇ ಝಕಾತನ್ನು ಹಂಚಬೇಕು.

*ಫಿತ್ರ್ ಝಕಾತ್ ಯಾರಿಗೆ ಯಾವಾಗ ಕಡ್ಡಾಯವಾಗುತ್ತದೆ..❓*
ಸ್ವಯಂ ಸಾಲ, ಅವನು ಮತ್ತು ಅವನು ಖರ್ಚು ನೀಡಲು ನಿರ್ಬಂಧವಿರುವವರಿಗೆ ಅನಿವಾರ್ಯವಾದ ವಸ್ತ್ರ, ವಸತಿ ಸೌಕರ್ಯ ಮತ್ತು ಪೆರ್ನಾಳಿನ ರಾತ್ರಿ ಹಗಲಿಗೆ ಸಾಕಾಗುವ ಆಹಾರ, ಪಾನೀಯಗಳ ಹೊರತು ಏನಾದರೂ ಅವನ ಬಳಿ ಬಾಕಿಯಿದ್ದರೆ ಅವನ ಮೇಲೆ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ. ಖರ್ಚು ನೀಡಲು ಕಡ್ಡಾಯವಾದವರು ಎಂಬ ಪಟ್ಟಿಯಲ್ಲಿ ಮನುಷ್ಯರು ಮಾತ್ರವಲ್ಲ ಜಾನುವಾರುಗಳೂ ಕೂಡಾ ಒಳಪಡುತ್ತದೆ. ಶವ್ವಾಲ್ ಆಗಮನ ಸಮಯದಲ್ಲಿ ಝಕಾತ್ ನೀಡಲು ಅರ್ಹತೆಯಿಲ್ಲದ ವ್ಯಕ್ತಿಗೆ ಪೆರ್ನಾಳ್ ಸೂರ್ಯಾಸ್ತಕ್ಕಿಂತ ಮುಂಚಿತವಾಗಿ ಅರ್ಹತೆಯುಂಟಾದರೆ ಝಕಾತ್ ನೀಡುವುದು ಅವನಿಗೆ ಸುನ್ನತ್ತಾಗುತ್ತದೆ.

*ಫಿತ್ರ್ ಝಕಾತ್ ನೀಡಬೇಕಾದ  ಸಮಯ..❓*
ರಮಳಾನಿನ ಮೊದಲ ರಾತ್ರಿಯ ಆರಂಭದಲ್ಲಿಯೇ ಫಿತ್ರ್ ಝಕಾತ್ ನೀಡುವುದು ಅನುವದನೀಯ. ಆದರೆ ಹಾಗೆ ನೀಡಬಾರದೆಂದು ಹೇಳುವವರ ಅಭಿಪ್ರಾಯಗಳನ್ನು ಪರಿಗಣಿಸಿ ರಮಳಾನ್ ಆರಂಭದಲ್ಲಿ ನೀಡದಿರುವುದೇ ಉತ್ತಮ. ಇನ್ನು ಹಾಗೆ ನೀಡಿದರೆ ನೀಡಿದ ವ್ಯಕ್ತಿ ಶವ್ವಾಲ್ ಆರಂಭದಲ್ಲಿ ನೀಡಲು ಅರ್ಹತೆಯಿರುವವನಾಗಿರಬೇಕು. ಅದೇ ರೀತಿ ನೀಡಲ್ಪಟ್ಟ ವ್ಯಕ್ತಿ ಪಡೆಯಲು ಅರ್ಹನಾಗಿರಬೇಕು.

ಫಿತ್ರ್ ಝಕಾತ್ ನೀಡಲು ನಿಂತರೆ ಪೆರ್ನಾಳ್ ನಮಾಝಿನ ಜಮಾಅತ್ ನಷ್ಟ ಹೊಂದುತ್ತದೆಯೆಂಬ ಭಯವಿದ್ದರೆ ಅಲ್ಲಿ ಜಮಾಅತ್‍ಗೆ ಪ್ರಾಮುಖ್ಯತೆ ನೀಡಬೇಕು. ಆದರೆ ಝಕಾತ್ ಪಡೆಯುವವರಿಗೆ ಧಾನ್ಯದ ತುರ್ತು ಅಗತ್ಯವಿದ್ದರೆ ಅಂತಹ ಸಂದರ್ಭದಲ್ಲಿ ಜಮಾಅತ್‍ಗಿಂತ ಫಿತ್ರ್ ಝಕಾತ್‍ಗೆ ಆದ್ಯತೆ ನೀಡಬೇಕು.

*ಫಿತ್ರ್ ಝಕಾತನ್ನು ಮುಂದೂಡಬಹುದೇ..❓*
ಪೆರ್ನಾಳ್ ನಮಾಝಿಗಿಂತ ಮೊದಲು ಝಕಾತ್ ನೀಡುವುದು ಸುನ್ನತ್. ನಮಾಝ್‍ನ ಬಳಿಕ ನೀಡುವುದು ಕರಾಹತ್. ಇನ್ನು ಕುಟುಂಬಿಕರು, ನೆರೆಮನೆಯವರು ಅಥವಾ ಸಜ್ಜನರಿಗೆ ನೀಡಲೋಸ್ಕರ ಪೆರ್ನಾಲಿನ ಸೂರ್ಯಾಸ್ತಮಾನದ ತನಕವೂ ಹಿಂದೂಡಬಹುದು. ಅದು ಸುನ್ನತ್ ಕೂಡಾ ಆಗಿರುತ್ತದೆ. ವಿನಾ ಕಾರಣ ಪೆರ್ನಾಳ್ ದಿನಕ್ಕಿಂತ ಮುಂದೂಡುವುದು ನಿಷಿದ್ದವಾಗಿದೆ.

*ಖರ್ಚು ನೀಡಲು ತನ್ನ ಮೇಲೆ ಕಡ್ಡಾಯವಿಲ್ಲದವನ ಝಕಾತ್ ತಾನು ನೀಡಬಹುದೇ..❓*

ಈ ರೀತಿ ನೀಡುವುದರಿಂದ ಝಕಾತ್ ಸಂದಾಯವಾಗುತ್ತದೆ. ಆದರೆ ಅವನ ಸಮ್ಮತಿ ಬೇಕು. ಸಮ್ಮತಿ ಪ್ರಕಾರ ಅವನ ಝಕಾತ್ ಸಂದಾಯ ಮಾಡುವಾಗ ಒಂದೋ ಆ ವ್ಯಕ್ತಿ ನಿಯ್ಯತ್‍ಗೈಯಬೇಕು. ಅಲ್ಲದಿದ್ದರೆ ನಿಯ್ಯತ್ತಿನ ಪರಮಾಧಿಕಾರವನ್ನು ಅವನು ಝಕಾತ್ ನೀಡುವವನಿಗೆ ವಹಿಸಿಕೊಟ್ಟಿರಬೇಕು..

*ವಿದೇಶದಲ್ಲಿರುವವರ  ಝಕಾತನ್ನು  ಎಲ್ಲಿ  ಕೊಡಬೇಕು..*❓

ಝಕಾತ್  ಕಡ್ಡಾಯವಾಗುವ  ಸಮಯದಲ್ಲಿ  ಆ  ವ್ಯಕ್ತಿ  ಎಲ್ಲಿರುತ್ತಾನೋ  ಅಲ್ಲಿಯವರಿಗೆ  ಕೊಡಬೇಕು .

*ಝಕಾತಿಗಿರುವ  ಶರತ್ತುಗಳು  ಯಾವುವು ❓ ಅದರ  ಹಕ್ಕುದಾರರು ಯಾರು❓*
ಝಕಾತ್  ಕೊಡುವಾಗ  ಅಥವಾ  ಅದಕ್ಕಿಂತ  ಮೊದಲು  ನಿಯ್ಯತ್  ಮಾಡಬೇಕು.

*ಝಕಾತಿನ  ಹಕ್ಕುದಾರರು* ಬಡವರು , ಮತ್ತು  ದರಿದ್ರರು , ಝಕಾತಿನ  ವಸೂಲಿಗಾಗಿ  ಇಮಾಮ್  ನೇಮಿಸಿದ  ನೌಕರರು,ನೂತನ  ಧರ್ಮ ವಿಶ್ವಾಸಿಗಳು , ಗುಲಾಮ ವಿಮೋಚನೆಯ  ಒಪ್ಪಂದದಲ್ಲಿ  ಏರ್ಪಟ್ಟವರು , ಸಾಲದಿಂದ ಕಂಗಾಲಾದವರು,ಯೋಧರು, ಪ್ರಯಾಣಿಕರು..!

       ಆಶ್ರಿತರ ಝಕಾತ್
ತಂದೆ ಮತ್ತು ತಂದೆಯ ಪತ್ನಿಯ ಖರ್ಚು ನೀಡಲು ಕಡ್ಡಾಯವಾದ ಮಕ್ಕಳಿಗೆ ತಂದೆಯ ಪತ್ನಿಯ ಫಿತ್ರ್ ಝಕಾತ್ ನೀಡಲು ಕಡ್ಡಾಯವಿಲ್ಲ.
ವ್ಯಭಿಚಾರದಿಂದ ಉಂಟಾದ ಮಕ್ಕಳ ಝಕಾತನ್ನು ಅವರ ತಾಯಂದಿರು ನೀಡಬೇಕು.

ಪೆರ್ನಾಳ್‍ನ ರಾತ್ರಿ ಹಗಲಿಗೆ ಬೇಕಾದ ಆಹಾರ ಪದಾರ್ಥಗಳು ಕೈವಶವಿರುವ ಮಗನ ಫಿತ್ರ್ ಝಕಾತ್ ನೀಡಲು ತಂದೆಗೆ ಕಡ್ಡಾಯವಿಲ್ಲ.

ಅದೇ ರೀತಿ ಈ ರೂಪದಲ್ಲಿರುವ ತಂದೆಯ ಝಕಾತ್ ನೀಡಲು ಮಗನಿಗೂ ಕಡ್ಡಾಯವಿಲ್ಲ. ಇನ್ನು ಅವರು ನೀಡುವುದಾದರೆ ಪರಸ್ಪರ ಸಮ್ಮತಿ ಪ್ರಕಾರವಲ್ಲದೆ ನೀಡುವಂತಿಲ್ಲ.

ಪತ್ನಿಯ ಫಿತ್ರ ಝಕಾತ್ ನೀಡಲು ಪತಿಗೆ ಸಾಧ್ಯವಿಲ್ಲದಿದ್ದರೆ ಅವಳಿಗೆ ಸ್ವತಃ ತನ್ನ ಫಿತ್ರ್ ಝಕಾತ್ ಸಂದಾಯ ಮಾಡುವುದು ಸುನ್ನತ್ತಾಗಿದೆ. ಅದೇ ರೀತಿ ತನ್ನ ಫಿತ್ರ್ ಝಕಾತ್ ಇತರರ ಮೇಲೆ ಕಡ್ಡಾಯವಾಗಿದ್ದು, ಅದನ್ನವರು ನೀಡುತ್ತಿಲ್ಲವಾದರೆ ಸ್ವತಃ ಅದನ್ನು ನೀಡುವುದು ಪ್ರತಿಯೊಬ್ಬರಿಗೂ ಪ್ರತ್ಯೇಕ ಸುನ್ನತ್ತಾಗಿದೆ.

ಫಿತ್ರ್ ಝಕಾತ್ ನೀಡಲು ಸಾಧ್ಯವಿರುವ ಸಣ್ಣ ಮಕ್ಕಳ ಝಕಾತನ್ನು ಅವರ ಸೊತ್ತಿನಿಂದಲೇ ಅವರ ರಕ್ಷಕರ್ತನು ನೀಡಬೇಕು. ಇನ್ನು ಸಾಧ್ಯವಿರುವ ಸಣ್ಣ ಮಗನ ಝಕಾತನ್ನು ತಂದೆಯು ಸ್ವತಃ ತನ್ನ ಸಂಪತ್ತಿನಿಂದಲೇ ಸಂದಾಯ ಮಾಡಿದ್ದರೆ ಬಳಿಕ ಇವನಿಗೆ ಮಗನ ಸೊತ್ತಿನಿಂದ ಅದನ್ನು ಹಿಂದಕ್ಕೆ ಪಡೆಯಬಹುದು. ಆದರೆ ಝಕಾತ್ ನೀಡುವಾಗ ನಾನು ಮರಳಿ ಪಡೆಯುತ್ತೇನೆಂಬ ಸಂಕಲ್ಪ ಮಾಡಿರಬೇಕು..

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...