ಲೈಲತುಲ್ ಖದರ್ ದಿನದಂದು ಏನು ಮಾಡಬೇಕು
✍🏽 *ರಜಬ್ ನಾವುಂದ(ಜ್ಞಾನದಾಹಿ)*
```{ ಸೂಚನೆ:- ಇದರಲ್ಲಿ ಲೈಲತುಲ್ ಖದರ್ ದಿನದಂದು ಏನು ಮಾಡಬೇಕು. ಮತ್ತು ಆ ದಿನದ ಮಹತ್ವ ಮತ್ತು ಆ ದಿನದ ಪ್ರತಿಫಲ ಲಭಿಸದೆ ಇರುವರ್ಯಾರು ಈ 3 ರ ಬಗ್ಗೆ ತಿಳಿಸಲಾಗಿದೆ. ಅದರ ಮಹತ್ವದ ಬಗ್ಗೆ ತಿಳಿದವರು ಆ ದಿನದಂದು ತನ್ನ ಇಬಾದತ್ತಿನ ಮೂಲಕ ಸಜೀವಗೊಳಿಸದೆ ಇರಲಾರ. }```
_ಸಾವಿರ ಮಾಸಗಳ ಕಾಲ ಆರಾಧಿಸಿದರೂ ದೊರೆಯದ ಹೇರಳ ಪುಣ್ಯವನ್ನು ಒಂದೇ ಒಂದು ರಾತ್ರಿಯ ಆರಾಧನೆಯ ಮೂಲಕ ಬಾಚಿ ಕೊಳ್ಳಬೇಕಾದರೆ ಆ ರಾತ್ರಿಯನ್ನು ಪ್ರತ್ಯೇಕವಾಗಿ ಪರಿಗಣಿಸಬೇಕಾದುದ್ದೇ. ನೆಬಿ ( ﷺ ), ಸ್ವಹಾಬಿಗಳು, ತಾಬಿಅಗಳು, ನಂತರದ ಮಹಾತ್ಮರುಗಳು ರಮಳಾನಿನ ಹಗಲು-ರಾತ್ರಿಗಳನ್ನು ಸತ್ಕರ್ಮಗಳಿಂದ ಜೀವಂತಗೋಳಿಸಿದ್ದಾರೆಂಬುವುದನ್ನು ಚರಿತ್ರೆಯು ನಮ್ಮೊಂದಿಗೆ ಸಾರಿ ಹೇಳುತ್ತದೆ._
_ಆಯಿಷಾ ( ರ.ಅ )ರಿಂದ ವರದಿಯಾದ ಹದೀಸೊಂದರಲ್ಲಿ ಹೀಗಿದೆ. ಆಯಿಷಾ ( ರ.ಅ ) ಹೇಳುತ್ತಾರೆ, *"ನಾನು ಲೈಲತುಲ್ ಖದರ್ ನಂದು ಏನು ಹೇಳಬೇಕೆಂದು ಪ್ರವಾದಿ ( ﷺ )ರವರೊಂದಿಗೆ ಕೇಳಿದೆ." ಆಗ ಪ್ರವಾದಿ ( ﷺ )ರವರು ಹೇಳಿದರು "ಆಯಿಷಾ... ನೀನು*_
*اَللَّهُمَّ إِنَّكَ عَفُوٌّ تُحِبُّ الْعَفُوَ فَاعْفُ عَنِّي*
*{ ಅಲ್ಲಾಹುಮ್ಮ ಇನ್ನಕ ಅಫ್ಫುವ್ವುನ್ ತುಹಿಬ್ಬುಲ್ ಅಫ್ವ ಫಅಫು ಅನ್ನೀ } ಎಂಬ ಝೀಕ್ರನ್ನು ಹೇಳು."* _ಈ ದುವಾವನ್ನು ಹೆಚ್ಚಿಸಲು, ಖುರ್ ಆನ್ ಪಾರಾಯಣ ಗೈಯ್ಯಲು ಇತರ ಝಿಕ್ರಗಳನ್ನು ತಲ್ಲೀನವಾಗಲು ಸುನ್ನತ್ತಾಗಿದೆಯೆಂದು ಶಾಫಿಈ ಇಮಾಮರ ಅಸ್ಹಾಬ್ ಹೇಳಿದ್ದಾರೆ._
_ಇಮಾಂ ಶಾಫಿಈ ( ರ.ಅ ) ರವರು ಹೇಳುತ್ತಾರೆ. *"ಆ ರಾತ್ರಿಯಲ್ಲಿ ನಿಮಗೆ ಎಷ್ಟು ಪರಿಶ್ರಮ ಪಡಲು ಸಾಧ್ಯವೋ ಅದರ ಹಗಲಿನಲ್ಲಿಯೂ ಸಹಾ ಅದೇ ರೀತಿ ಪರಿಶ್ರಮ ಪಡಬೇಕು. ಮುಸ್ಲಿಮರು ಮುಖ್ಯವಾದ ವಿಷಯದಲ್ಲಿ ದುವಾ ನಡೆಸಬೇಕು. ಇದು ಸಜ್ಜನರ ರೂಢಿಯಾಗಿದೆ"*_ { ಅದ್ಸ್ ಕಾರ್ -173 }
👇 👇🏻 👇🏼 👇🏽 👇🏾 👇🏿
*' ಲೈಲತುಲ್ ಖದರ್ 'ನ ಮಹತ್ವ*
_ನಬಿ( ﷺ ) ಹೇಳಿದರು:-_
*"ಯಾರಾದರೂ ಲೈಲತುಲ್ ಖದರ್ ದಿನದಂದು ವಿಶ್ವಾಸದೊಂದಿಗೆ ಪುಣ್ಯಾಪೇಕ್ಷೆಯೊಂದಿಗೆ ನಮಾಝ್ ನಿರ್ವಹಿಸಿದರೆ ಅವರ ಸಕಲ ಪಾಪಗಳನ್ನು ಮನ್ನಿಸಲ್ಪಡುವುದು."*
{ ಇರ್ಶಾದುಲ್ ಇಬಾದ್ -72 }
_ಆಯಿಷಾ ( ರ ) ಹೇಳಿದರು:-_
*"ಯಾರಾದರೂ ಲೈಲತುಲ್ ಖದರ್ ದಿನವನ್ನು ಸಜೀವಗೊಳಿಸಿದರೆ, ಆ ರಾತ್ರಿಯಲ್ಲಿ ಎರಡು ರಕಾತ್ ನಮಾಝ್ ನಿರ್ವಹಿಸಿ ತನ್ನ ಗತಕಾಲದ ಪಾಪಗಳಿಂದ ಪಶ್ಚಾತ್ತಾಪಪಟ್ಟರೆ ಅಲ್ಲಾಹನ ಅನುಗ್ರಹದಲ್ಲಿ ಅವರು ಮುಳುಗಿಹೋಗುವರು. ಮತ್ತು ಜಿಬ್ರೀಲ್( ಅ ) ರವರು ತನ್ನ ರೆಕ್ಕೆಯಿಂದ ಅವರನ್ನು ಸವರುವರು. ಹಾಗೇನಾದರೂ ಸವರಿದರೆ ಖಂಡಿತವಾಗಿಯೂ ಅವರು ಸ್ವರ್ಗಕ್ಕೆ ಪ್ರವೇಶಿಸುತ್ತಾರೆ."*
{ ಮುಕಾಶಫತುಲ್ ಖುಲೂಬ್ 418 }
👇 👇🏻 👇🏼 👇🏽 👇🏾 👇🏿
*4⃣ ವಿಭಾಗದವರಿಗೆ ಲೈಲತುಲ್ ಖದರ್ ನ ಪವಿತ್ರತೆ ಲಭಿಸುವುದಿಲ್ಲ.*
1⃣. *ಮಧ್ಯಪಾನ ಸೇವಿಸುವವನು.*
2⃣. *ತಾಯಿ ತಂದೆಯರನ್ನು ತೊಂದರೆಯಾಗಿಸುವವನು.*
3⃣. *ವಿಶ್ವಾಸಿಗಳಾದ ಸಹೋದರರೊಂದಿಗೆ ಕೋಪಿಸಿರುವವನು.*
4⃣. *ಕುಟುಂಬ ಸಂಬಂಧ ಮುರಿಯುವವನು.*
_ಅಲ್ಲಾಹನು ನಮಗೆಲ್ಲರಿಗೂ ಲೈಲತುಲ್ ಖದರ್ ದಿನದಂದು ಆರಾಧನೆಯಲ್ಲಿ ಸಕ್ರೀಯವಾಗಲು ತೌಫೀಕ್ ನೀಡಲಿ._
Comments