Skip to main content

ತಸ್'ಬೀಹ್ ನಮಾಜ್

ತಸ್'ಬೀಹ್ ನಮಾಜ್
  ~~~~~~~~~~~~~~       

ತಸ್'ಬೀಹ್ ನಮಾಜ್ ಒಂಟಿಯಾಗಿ ನಿರ್ವಹಿಸಲ್ಪಡುವ ನಮಾಜ್ ಗಳ ಸಾಲಿಗೆ ಸೇರಿದೆ.ಈ ನಮಾಜಿಗೆ ಬಹಳ ಪ್ರಾಮುಖ್ಯ ತೆಯಿದೆ.ಸಾಧ್ಯವಿರುವವರು ಈ ನಮಾಜನ್ನು ಪ್ರತಿದಿನವೂ ನಿರ್ವಹಿಸಬೇಕು.ಇಲ್ಲವೇ ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ, ಈ ಕ್ರಮದಲ್ಲಾದರೂ ಅವರವರ ಸಾಧ್ಯತೆಗನುಗುಣವಾಗಿ ನಿರ್ವಹಿಸಬೇಕು.ಇದ್ಯಾವುದೂ ಸಾಧ್ಯವಾಗದವನು ಅವನ ಬದುಕಿನಲ್ಲೊಂದು ಬಾರಿಯಾದರೂ ನಿರ್ವಹಿಸಬೇಕು.ಇದರ ಮಹಿಮೆಗಳನ್ನು ತಿಳಿದ ಬಳಿಕವೂ ಈ ನಮಾಜನ್ನು  ತೊರೆಯುವವನು ಧರ್ಮದಲ್ಲಿ ಶ್ರದ್ಧೆ ಇಲ್ಲದ ಉದಾಸೀನನೇ ಸರಿ ಎಂದು ಉಲಮಾಗಳು ಹೇಳಿದ್ದಾರೆ.

ನಮಾಜಿನ ಕ್ರಮ. ..

ತಸ್'ಬೀಹ್ ನಮಾಜ್ ಗೆ 4 ರಕಅತ್ ಗಳಿವೆ.ಹಗಲು ನಿರ್ವಹಿಸುವುದಾದರೆ 4 ರಕಅತ್ ಗಳನ್ನು ಜೊತೆಯಾಗಿ ಒಂದೇ ಸಲಾಮಿನಲ್ಲಿ ನಿರ್ವಹಿಸುವುದು ಮತ್ತು ರಾತ್ರಿ ಯಾದರೆ ಎರಡು ಸಲಾಮಿನಲ್ಲಿ ತಲಾ 2 ರಕಅತ್ ನಿರ್ವಹಿಸುವುದು ನಮಾಜಿನ ಉತ್ತಮ ಕ್ರಮವಾಗಿದೆ.

ತಸ್'ಬೀಹ್ ನಮಾಜ್ ನ ನಿಯ್ಯತ್.
"ತಸ್ ಬೀಹ್ ನಮಾಜ್ 2 ರಕಅತ್ ಅಲ್ಲಾಹನಿಗಾಗಿ ನಾನು ನಿರ್ವಹಿಸುವೆ"(4 ರಕಅತ್ ಗಳನ್ನು ಒಟ್ಟಿಗೆ ನಿರ್ವಹಿಸುವುದಾದರೆ 4 ರಕಅತ್ ಎಂದು ನಿಯ್ಯತ್ತ್ ಮಾಡಬೇಕು).ಎಂದು ನಿಯ್ಯತ್ ಮಾಡಿ ಕೈಕಟ್ಟಿದ ಬಳಿಕ ದುಆ ಉಲ್ಇಫ್ತಿತಾಹ್(ವಜ್ಜಹ್ತು) ನಂತರ ಸೂರತುಲ್ ಫಾತಿಹಾ ಓದಿ ನಂತರ ಸೂರತುತ್ತ ಕಾಸುರ್(ಅಲ್ ಹಾಕುಮುತ್ತ ಕಾಸುರ್) ಇವುಗಳನ್ನು ಕ್ರಮವಾಗಿ ಓದಬೇಕು.
ನಂತರ "ಸುಬ್'ಹಾನಲ್ಲಾಹಿ ವಲ್ ಹಮ್ದು ಲಿಲ್ಲಾಹಿ ವಲಾ ಇಲಾಹ ಇಲ್ಲಲ್ಲಾಹು ವಲ್ಲಾಹು ಅಕ್ಬರ್" ಎಂಬ ತಸ್-ಬೀಹ್ 15 ಬಾರಿ ಹೇಳಬೇಕು.ಆ ಮೇಲೆ ರುಕೂಱ್ ಮಾಡಿ ರುಕೂಱ್ ನ ತಸ್-ಬೀಹ್ ಹೇಳಿದ ಬಳಿಕ ಹತ್ತು ಬಾರಿ ಈ ತಸ್-ಬೀಹ್ ಹೇಳಬೇಕು
ಅನಂತರ ಇಱ್-ತಿದಾಲ್ 2ಸುಜೂದ್,2 ಸುಜೂದ್ ಗಳ ಮಧ್ಯೆಯಿರುವ ಕೂರುವಿಕೆ, ಇವುಗಳೆಲ್ಲೆಲ್ಲಾ ಅವುಗಳ ನಿಶ್ಚಿತ ತಸ್-ಬೀಹ್ ಗಳ ಬಳಿಕ ತಲಾ 10 ಬಾರಿ ಮೇಲಿನ ತಸ್-ಬೀಹ್ ಹೇಳಬೇಕು.
2ನೇ ಸುಜೂದ್ ಮುಗಿದ ಬಳಿಕ 2 ನೇ ರಕ್ಅತಿಗೆ ಎದ್ದೇಳುವಾಗ ಸ್ವಲ್ಪ ಕುಳಿತುಕೊಂಡು 10 ಬಾರಿ ತಸ್-ಬೀಹ್ ಹೇಳಬೇಕು. ಹೀಗೆ ಒಂದು ರಕಅತ್ ನಲ್ಲಿ 75 ತಸ್-ಬೀಹ್ ಪೂರ್ಣವಾಗುತ್ತದೆ.
ಇದೇ ರೀತಿ ನಂತರದ ಎಲ್ಲಾ ರಕಅತ್ ಗಳಲ್ಲೂ ಹೇಳಬೇಕು. ಆದರೆ ಒಂದನೇ ರಕಅತ್ ನಿಂದ ಏಳುವಾಗ ಕುಳಿತು ಹೇಳುವ 10 ತಸ್-ಬೀಹ್ ಗಳನ್ನು 2 ನೇ ರಕಅತ್ ನ ಬಳಿಕ ಅತ್ತಹಿಯ್ಯಾತ್ ಓದುವುದಕ್ಕೆ ಮೊದಲು ಓದಬೇಕು.

ಎರಡೆರಡು ರಕಅತ್ ಗಳನ್ನು ಬೇರೆ ಬೇರೆಯಾಗಿ ನಿರ್ವಹಿಸುವುದಾದರೆ ಅತ್ತಹಿಯ್ಯಾತ್ ಓದಿದ ಬಳಿಕ ಸಲಾಂ ಹೇಳಿ ಪುನಃ ನಿಯ್ಯತ್ತ್ ಮಾಡಿ ಇದೇ ರೀತಿ 2 ರಕಅತ್ ನಮಾಜ್ ನಿರ್ವಹಿಸಬೇಕು.  4 ರಕ್ಅತ್ ಒಟ್ಟಿಗೆ ನಿರ್ವಹಿಸುವುದಾದರೆ 2 ನೇ ರಕ್ಅತ್ ನ ಬಳಿಕ ಅತ್ತಹಿಯ್ಯಾತ್ ಓದಿ ಸಲಾಂ ಹೇಳದೆ ಎದ್ದು 3 ಮತ್ತು 4 ನೇ  ರಕ್ಅತ್ ಪೂರ್ಣಗೊಳಿಸಬೇಕು.ಒಂದನೇ ರಕ್ಅತ್ ನಿಂದ ಏಳುವಾಗ ಕುಳಿತು ಹೇಳಿದಂತೆ 3ನೇ ರಕ್ಅತ್ ನಿಂದ ಏಳುವಾಗ ಕುಳಿತು 10 ಬಾರಿ ತಸ್-ಬೀಹ್ ಹೇಳಬೇಕು.
ಹೀಗೆ 4 ರಕ್ಅತ್ ಗಳಲ್ಲಿ 300 ತಸ್ - ಬೀಹ್ ಗಳು ಪೂರ್ಣ ವಾಗುತ್ತದೆ.

ತಸ್ - ಬೀಹ್ ನಮಾಜ್ ನಲ್ಲಿ ಓದಬೇಕಾದ ಸೂರತ್ ಗಳು.⤵
1 ನೇ ರಕ್ಅತ್ ನಲ್ಲಿ ಸೂರತುಲ್ ಕಾಸುರ್(ಅಲ್  ಹಾಕುಮುತ್ತ ಕಾಸುರ್)
2 ನೇ ರಕ್ಅತ್ ನಲ್ಲಿ ಸೂರತುಲ್ ಅಸ್'ರ್(ವಲ್ ಅಸ್'ರಿ)
3 ನೇ ರಕ್ಅತ್ ನಲ್ಲಿ ಸೂರತುಲ್ ಕಾಫಿರ್ (ಕುಲ್ ಯಾ ಅಯ್ಯಹಲ್ ಕಾಫಿರೂನ)
4 ನೇ ರಕಅತ್ ನಲ್ಲಿ ಸೂರತುಲ್ ಇಖ್-ಲಾಸ್(ಕುಲ್ ಹುವಲ್ಲಾಹು ಅಹದ್)
ಸೂರತ್ ಓದಬೇಕು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...