Skip to main content

ಝಿಯಾರತ್ತ್ ಕೇಂದ್ರ​​​ ​ ಮುಹ್ಯಿದ್ದೀನ್ ರಾತಿಬ್'ನ ಕರ್ತೃ ಸಯ್ಯಿದ್ ಇಬ್'ರಾಹೀಂ ಸಕ್ರಾನ್ ಅಲ್ ಬುಖಾರಿ (ರ) ಕಣ್ಣೂರು ಸಿಟಿ. ಕಣ್ಣೂರು

ಝಿಯಾರತ್ತ್ ಕೇಂದ್ರ​​​
      ​
ಮುಹ್ಯಿದ್ದೀನ್ ರಾತಿಬ್'ನ ಕರ್ತೃ ಸಯ್ಯಿದ್ ಇಬ್'ರಾಹೀಂ ಸಕ್ರಾನ್ ಅಲ್ ಬುಖಾರಿ (ರ) ಕಣ್ಣೂರು ಸಿಟಿ. ಕಣ್ಣೂರು
*********************
​اَللَّهُمَّ صَلِِّ عَلىٰ سَيِدِنَا مُحَمَّدٍ النَّبِيّ اْلاُمِِّي وَعَلىٰ آلِهِ وَصَحْبِهِ وَسَلِِّمْ عَدَدَ مَا عَلِمْتَ وَزِنَةَ مَا عَلِمْتَ وَمِلْاَ مَا عَلِمْتَ​
☪☪☪☪☪☪☪☪☪

✍ ಗಫೂರ್ ಬಾಯಾರ್
***********************

ಅಲ್ಲಾಹನ ಏಕತ್ವವನ್ನು ವಿಶ್ವಾಸೀ ಹೃದಯಗಳು ದೃಢೀಕರಿಸಿ ಬದುಕಿನುದ್ದಕ್ಕೂ ಅವನ ದಿವ್ಯ ಸ್ಮರಣೆಯೊಂದಿಗೆ ಕಾಯಾ ವಾಚಾ ಮನಸಾ ಇಬಾದತ್ ನಡೆಸುತ್ತಾ ಇಹಪರ ವಿಜಯದ ಹಾದಿ ಸುಗಮವಾಗಿಸುವ ಸಂಸ್ಕರಣೇೂಪಾದಿಗಳಲ್ಲೊಂದಾಗಿದೆ  *ಮುಹ್ಯಿದ್ದೀನ್ ರಾತಿಬ್.*

ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ)ರವರ ಆಧ್ಯಾತ್ಮಿಕ ಸಂಸ್ಕರಣ ಪರಂಪರೆಯಿಂದ ಪ್ರೇರಿತರಾದ ಶೈಖ್ ಜೀಲಾನಿ (ರ)ರವರ ಅನುಯಾಯಿಗಳು ಶೈಖ್'ರವರ ನಾಮದೇಯದಲ್ಲಿ ಅವರ ಬದುಕಿನಿಂದ ಕ್ರೂಡೀಕರಿಸಿದ   ಅದ್ಸ್'ಕಾರ್ ಹಾಗೂ ಖುರ್'ಆನ್ ಮತ್ತು ಸುನ್ನತ್ತಿನ ದ್ಸಿಕ್ರ್ ಅಡಕವಾದ ತೌಹೀದಿನ ವ್ಯಾಖ್ಯಾನ ಮತ್ತು ತತ್ವಗಳನ್ನೊಳಗೊಂಡ ಸ್ವಲಾತ್ ಆಗಿದೆ "ಮುಹ್ಯಿದ್ದೀನ್ ರಾತಿಬ್"

ಸೃಷ್ಟಿಕರ್ತನಾದ ಅಲ್ಲಾಹನ ವಿಶೇಷತೆಗಳನ್ನೂ ಮತ್ತು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ರಿಸಾಲತ್ತಿನ ವೈಶಿಷ್ಟ್ಯತೆಗಳ ಜೊತೆಗೆ ಶೈಖ್ ಅಬ್ದುಲ್ ಖಾದಿರ್ ಜೀಲಾನಿ (ರ)ರವರ ಹೃದಯವನ್ನು ಆಧ್ಯಾತ್ಮಿಕವಾಗಿ ಸಂಸ್ಕರಿಸಿದ ಆ ಸಂಸ್ಕರಣಾ ಪ್ರಕ್ರಿಯೆಗಳ ಮಹತ್ವವನ್ನು ಎತ್ತಿ ಹೇಳುವ ಪದ್ಯಗಳೂ ಇದರಲ್ಲಿ ಒಳಗೊಂಡಿದ್ದು ತಸವ್ವುಫ್ ಮತ್ತು ಇಲ್ಮು  ತಝ್ಕಿಯದಲ್ಲಿ ಒಲವುಳ್ಳವರಿಗೆ ಇದೊಂದು ಅಮೂಲ್ಯ ನಿಧಿಯಾಗಿದೆ.

ಇಷ್ಟೊಂದು ಮಹತ್ವಪೂರ್ಣವಾದ ಮುಹ್ಯಿದ್ದೀನ್ ರಾತಿಬ್'ಅನ್ನು ಕ್ರೂಡೀಕರಿಸಿ ಸುನ್ನೀ ಸಮುದಾಯಕ್ಕೆ ಸಮರ್ಪಿಸಿದವರು *ಕೇರಳದ ತ್ರಿಶೂರ್ ಜಿಲ್ಲೆಯ ಚಾವಕ್ಕಾಡ್'ನ ಸಯ್ಯಿದ್ ಅಹ್ಮದುಲ್ ಬುಖಾರಿ (ರ) ಮತ್ತು ಝೈನಬಾ (ರ) ದಂಪತಿಗಳ ಪುತ್ರರಾದ    ಇಬ್'ರಾಹೀಂ ಸಕ್ರಾನ್ ಅಲ್ ಬುಖಾರಿ (ರ) ರವರಾಗಿದ್ದಾರೆ.*

ಈ ಮುಹ್ಯಿದ್ದೀನ್ ರಾತಿಬನ್ನು ಇಬ್'ರಾಹೀಂ ಸಕ್ರಾನ್ (ರ) ಸಂಕ್ಷಿಪ್ತವಾಗಿ ಪ್ರಸ್ತುತ ಪಡಿಸಿದ್ದಾರಾದರೂ ಇದು ಬುಖಾರಿ ರಾತಿಬ್ ಎಂದೂ, ಮಸ್ತಾನ್ ರಾತಿಬ್ ಎಂದೂ, ವಲಿಯ ಮುಹ್ಯಿದ್ದೀನ್ ರಾತಿಬ್ ಎಂದೂ ಅರಿಯಲ್ಪಡುತ್ತಿದೆ.

ಕಾರಣ ಈ ರಾತೀಬನ್ನು ನಂತರ ಸಯ್ಯದ್ ಹಿಬತ್ತುಲ್ಲಾಹಿ (ರ) ತಂಙಳರ ತಂದೆಯವರಾದ ವಲಿಯ ಕೇೂಯಮ್ಮ(ರ) ತಂಙಳ್'ರವರು ಅದನ್ನು ಮತ್ತಷ್ಟು ಚುಟುಕಾಗಿ ನಿರೂಪಿಸಿದ್ದಾರೆ.

ಎಳೆಯ ವಯಸ್ಸಿನಲ್ಲಿ ಕಲಿಕೆಯಲ್ಲಿ ಬಹಳ ಹಿಂದಿದ್ದ ಸಕ್ರಾನ್ (ರ) ರವರನ್ನು ಒಮ್ಮೆ ಅವರ ತಾಯಿಯ ತಂದೆಯವರಾದ ಸಯ್ಯಿದ್ ಮೌಲಲ್ ಬುಖಾರಿ (ರ)ರವರು ಕನಸಿನಲ್ಲಿ ಸಂದರ್ಶಿಸಿ ಪ್ರಾರ್ಥಿಸಿದ ನಂತರ ಕಲಿಕೆಯಲ್ಲಿ ಉನ್ನತಿ ಗಳಿಸಿದರಲ್ಲದೆ ಆಧ್ಯಾತ್ಮಿಕವಾಗಿ ಉನ್ನತ ಸ್ಥಾನಕ್ಕೇರಿ ಪಂಡಿತ ವಲಯದಲ್ಲಿ ಸಕ್ರಾನ್ ಎಂದೇ ಗುರುತಿಸಿಕೊಳ್ಳಲಾರಂಭಿಸಿದರು.

ಸಕ್ರಾನ್ ಅಥವಾ ಮಸ್ತಾನ್ ಎಂದರೆ, ಆಧ್ಯಾತ್ಮಿಕ ಸಾಧನೆಯ ಮೂಲಕ ಆಂತರಂಗಿಕವಾಗಿ ಅಲ್ಲಾಹನಿಗೆ ನಿಕಟವಾಗುವ ಸೂಫಿಗಳ ಸ್ಥಾನಕ್ಕೇರಿದವರು ಎಂದರ್ಥ.

ಪುದಿಯಂಙಾಡಿ ಎಂಬಲ್ಲಿಯ ಕೊಟ್ಟತ್ತರ ಅಬ್ದುಲ್ ಅಝೀಝ್ ಎಂಬುವವರ ಮಗಳನ್ನು ವಿವಾಹವಾಗಿದ್ದ ಸಯ್ಯಿದರಿಗೆ ಸಯ್ಯಿದ್ ಮುಹಮ್ಮದ್ (ಖ.ಸಿ), ಸಯ್ಯಿದ್ ಪಖ್ರುದ್ದೀನ್ (ಖ.ಸಿ) ಮತ್ತು ಸಯ್ಯಿದ್ ಅಹ್ಮದ್ (ಖ.ಸಿ) ಎಂಬ ಮೂರು ಮಕ್ಕಳು ಜನಿಸಿದ್ದು ಫಖ್ರುದ್ದೀನ್ (ಖ.ಸಿ) ಎಂಬ ಪುತ್ರರಂತೂ ಕೇರಳದ ಇಮಾಂ ಗಝ್ಝಾಲಿ ಎಂದೇ ಪ್ರಖ್ಯಾತರಾದ ಸೂಫಿವರ್ಯರಾಗಿದ್ದರು. ಈ ಮಹಾನರು ಪಾಡೂರ್ ವಳಪ್ಪಿಲ್ ಎಂಬಲ್ಲಿ ಇರುವ ಮಸೀದಿಯ ಸಮೀಪ ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

ಇಬ್'ರಾಹಿಂ ಸಕ್ರಾನ್ (ರ) ರವರು ತಮ್ಮ ಅಣ್ಣನ ಮರಣಾನಂತರ ಅಣ್ಣನ ಪತ್ನಿಯನ್ನು ಮರುವಿವಾಹವಾಗಿ ಕಣ್ಣೂರಿನಲ್ಲಿ ವಾಸವಾಗಿದ್ದರು. ಹಿಜರಿ 1256 ರ ಜಮಾದಿಲ್ ಆಖಿರ್ 29 ರಂದು ಇಹಲೇೂಕಕ್ಕೆ ವಿದಾಯ ಹೇಳಿದ ಮಹಾನರು ಕಣ್ಣೂರು ಸಿಟಿ ಹತ್ತಿರ ತಮ್ಮ ತಾಯಿಯ ತಂದೆಯರಾದ ಮೌಲಲ್ ಬುಖಾರಿ (ರ)ರವರ ಮಖಾಮಿನ ಪಕ್ಕದಲ್ಲೇ ಅಂತ್ಯ ವಿಶ್ರಮ ಪಡೆಯುತ್ತಿದ್ದಾರೆ.

ದಾರಿ: 🚘 ಕಣ್ಣೂರು ಸಿಟಿ ಕಣ್ಣೂರು

✍ ಗಫೂರ್ ಬಾಯಾರ್
🌀🌀🌀🌀🌀🌀🌀🌀🌀

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...