ಬದ್ರ್ ಯುದ್ಧ
✍🏾ಗಫೂರ್ ಬಾಯಾರ್.
ಬದ್ರ್ ಎಲ್ಲಿ ನೆಲೆಗೊಂಡಿದೆ❓
👉�ಮದೀನದಿಂದ 135 ಕಿ.ಮೀಟರ್, ಮಕ್ಕದಿಂದ 345 ಕಿ.ಮೀಟರ್ ದೂರದಲ್ಲಿದೆ.
ಆ ಸ್ಥಳಕ್ಕೆ ಬದ್ರ್ ಎಂಬ ಹೆಸರು ಬರಲು ಕಾರಣ❓
👉�ಬದ್ರ್ ಬಿನ್ ಯಕ್ಲದ್ ಎಂಬವರು ವಾಸ ಮಾಡಿರುವುದರಿಂದಾಗಿದೆ.
ಒಂದನೇ ಬದ್ರ್ ಎಂದು ಚರಿತ್ರೆಗಾರರು ಉಲ್ಲೇಖಿಸಿದ ಘಟನೆ ಯಾವುದು❓
👉�ಕುರ್ಸ್ ಬಿನು ಜಾಬಿರ್ ಅಲ್ ಫಿಹ್ರಿ ಎಂಬವರು ಮದೀನಾದವರ ಜಾನುವಾರುಗಳನ್ನು ಕಳ್ಳತನ ಮಾಡಿದ್ದನ್ನು ವಿಚಾರಿಸಲು ನಬಿ ﷺ ರವರು ಹಾಗೂ ಕೆಲವು ಅನುಯಾಯಿಗಳು ಬದ್ರ್ ಗೆ ಹೋದರೂ ಫಿಹ್ರಿನನ್ನು ಕಾಣದೆ ಹಿಂದಿರುಗಿ ಬಂದ ಘಟನೆಯಾಗಿದೆ.
ಬದ್ರ್ ನಲ್ಲಿ ಯುದ್ಧ ನಡೆದದ್ದು ಯಾವಾಗ❓
👉�ಹಿಜರಿ 2ನೇ ರಮಳಾನ್ 17ಕ್ಕೆ ಆಗಿದೆ.
ಮುಸ್ಲಿಂ ಸಂಘಬಲ ಎಷ್ಟು❓
👉�313 ಜನರು.
ಶತ್ರು ಸೈನ್ಯ ಬಲ ಎಷ್ಟು❓
👉� ಸಾವಿರದಷ್ಟು ಜನರು.
ಬದ್ರ್ ಗೆ ಹೊರಡುವಾಗ ಮುಸ್ಲಿಂಗಳ ಗುರಿ ಏನಾಗಿತ್ತು❓
👉�ಶಾಮಿನಿಂದ ಬರುವ ಅಬೂ
ಸುಫ್ಯಾನ್ ನ ವ್ಯಾಪಾರ ಸಂಘವನ್ನು ಎದುರಿಸುವುದಾಗಿದೆ.
ಮುಸ್ಲಿಂಗಳ ವಾಹನ ಎಷ್ಟು❓
👉�70 ಒಂಟೆಗಳು.
ನಬಿ ﷺ ರವರೊಂದಿಗೆ ಒಂಟೆಯ ಮೇಲೆ ಸಹ ಯಾತ್ರಿಕರು ಯಾರಾಗಿದ್ದರು❓
👉� ಅಲಿ (ರ) ಮತ್ತು ಮಾರ್ಸದ್ ಬಿನ್ ಮಾರ್ಸದ್ (ರ) ಆಗಿದ್ದರು.
ವ್ಯಾಪಾರ ಸಂಘವನ್ನು ಮುಸ್ಲಿಂಗಳಿಂದ ರಕ್ಷಿಸಬೇಕೆಂದು ತಿಳಿಸಲು ಅಬೂ ಸುಫ್ಯಾನ್ ಮಕ್ಕಾಗೆ ಕಳುಹಿಸಿದ್ದು ಯಾರನ್ನು❓
👉�ಲಂಳಮು ಇಬ್ನು ಅಂರಿಲ್ ಗಿಫಾರಿಯನ್ನು
ವ್ಯಾಪಾರ ಸಂಘ ಪಾರಾದ
ವಿಷಯ ತಿಳಿದಾಗ ಖುರೈಷಿ ಪಕ್ಷದಿಂದ ಒಂದು ಸಂಘ ಹಿಂದಿರುಗಿ ಹೋದವರು ಯಾರು❓
👉�ಅಖ್ನಸು ಇಬ್ನು ಶರಿಖಿನ ನೇತೃತ್ವದಲ್ಲಿನ ಸಹ್ರಾ ಗೋತ್ರದವರು.
ಮುಸ್ಲಿಂಗಳ ಜಲಸಂಭರಣಿ ಹೊಡೆಯಲು ಬಂದರು ಯಾರು❓
👉�ಅಸ್ವದ್ ಬಿನ್ ಅಬ್ದುಲ್ ಅಸದ್.
ಅಸ್ವದ್ ನನ್ನು ವಧಿಸಿದ್ದು ಯಾರು❓
👉�ಹಜ್ರತ್ ಹಂಝ (ರ)ರವರು.
ಖುರೈಷಿ ಮುಖಂಡನಾದ ಅಬೂ ಜಹ್ಲನನ್ನು ಕೊಂದದ್ದು ಯಾರು❓
👉�ಮುಹಾದ್ ಇಬ್ನು ಅಂರ್ (ರ), ಮುಹವ್ವಿದ್ ಇಬ್ನು ಅಫ್ರಾಹ್ ಎಂಬ 2 ಮಕ್ಕಳು.
ಖುರೈಷಿ ಪ್ರಮುಖನಾದ ಉಮಯ್ಯತ್ ನನ್ನು ಹತ್ಯೆ ಮಾಡಿದ್ದು ಯಾರು❓
👉�ಮೊದಲು ತನ್ನ ಅಡಿಯಾಲಾಗಿದ್ದ ಬಿಲಾಲ್ (ರ)ರವರು.
ಬದ್ರ್ ನಲ್ಲಿ ಪಿಶಾಚಿ ಯಾರ ವೇಷದಲ್ಲಿ ಬಂದದ್ದು❓
👉� ಕಿನಾನ ಗೋತ್ರ ಪ್ರಮುಖನಾದ ಸುರಾಖತು ಇಬ್ನು ಮಾಲಿಕಿನ ವೇಷದಲ್ಲಾಗಿದೆ.
ಬದ್ರ್ ಗೆ ನಬಿ ﷺ ರವರು ಹೊರಟದ್ದು ಯಾವಾಗ❓
👉�ರಮಳಾನ್ 12ನೇ ಶನಿವಾರ.
ಮದೀನದಲ್ಲಿ ನಮಾಜಿಗೆ ನೇತೃತ್ವ ಕೊಡಲು ನಬಿ ﷺ ರವರು ನೇಮಿಸಿದ್ದು ಯಾರನ್ನು❓
👉�ಅಬ್ದುಲ್ಲಾಹಿ ಇಬ್ನು ಉಮ್ಮಿ ಮಕ್ತುಮ್ (ರ) ರವರನ್ನಾಗಿದೆ.
ಮದೀನಾದ ಆಡಳಿತ ನೇತೃತ್ವವನ್ನು ನೀಡಿದ್ದು ಯಾರಿಗೆ❓
👉�ರೌಹಾಇನ್ ನಿಂದ ಹಿಂದಿರುಗಿಸಿದ ಅಬೂ ಲುಬಾಬ (ರ)ರವರನ್ನು.
16 ವಯಸ್ಸಿನವರಾದ ಒಬ್ಬರನ್ನು ನಬಿ ﷺ ರವರು ಯುದ್ಧ ಭೂಮಿಯಿಂದ ಹಿಂದಿರುಗಲು ಹೇಳಿದಾಗ ಅವರು ಅತ್ತರು. ಆಗ ನಬಿ ﷺ ರವರು ಅವರಿಗೆ ಯುದ್ಧದಲ್ಲಿ ಭಾಗವಹಿಸಲು ಅನುಮತಿ ಕೊಟ್ಟರು. ಅವರು ಬದ್ರ್ ಯುದ್ಧದಲ್ಲಿ ರಕ್ತಸಾಕ್ಷಿ ಕೂಡ ಆದರು.
ಯಾರು ಆ ವ್ಯಕ್ತಿ❓
👉�ಉಮೈರು ಇಬ್ನು ಅಬಿ ವಖಾಸ್ (ರ)ರವರು.
ಕಾವಲುಪಡೆಯ ನೇತಾರನ್ನಾಗಿ
ನೇಮಿಸಿದು ಯಾರನ್ನು❓
👉�ಖೈಸು ಇಬ್ನು ಅಬಿ ಸಹ್ ಸಹ (ರ)ರವರನ್ನಾಗಿದೆ.
ವ್ಯಾಪಾರಸಂಘದವರು ಪಾರಾಗಿದ್ದಾರೆಂದು ತಿಳಿದ ಅಬೂ ಸುಫ್ಯಾನ್, ಖುರೈಷಿಯವರತ್ತಿರ ಮರಳಿ ಹೋಗಲು ಆಜ್ಞಾಪಿಸಲು ಯಾರ ಹತ್ತಿರ ಹೇಳಿ ಕಳುಹಿಸಿದು❓
👉�ಖೈಸು ಇಬ್ನು ಇಂರಿಲ್ ಖೈಸ್ ನನ್ನು.
ಬದ್ರ್ ನಲ್ಲಿ ಭಾಗವಹಿಸದೆ ಬದ್ರ್ ಶುಹಾದ ಆದವರಾಗಿದ್ದಾರೆ ಉಸ್ಮಾನ್ (ರ) ರವರು.
ಕಾರಣ ಏನು❓
👉�ತನ್ನ ಮಡದಿಯು, ಪವಿತ್ರ ನಬಿ ﷺ ರವರ ಮಗಳು ಆದ ರುಖಿಯ್ಯ (ರ) ರವರು ಬದ್ರ್ ಯುದ್ಧ ಸಮಯದಲ್ಲಿ ರೋಗಶಯ್ಯೆಯಲ್ಲಿ ಇದ್ದರಿಂದ್ದ
ಶುಶ್ರೂಷಸೆಗೆ ಪವಿತ್ರ ನಬಿ ﷺ ರವರು ಉಸ್ಮಾನ್ (ರ)ರವರಿಗೆ ಅನುಮತಿ ಕೊಟ್ಟಿದ್ದರು.
ಬದ್ರ್ ನಲ್ಲಿ ಮುಸ್ಲಿಂ ಪಕ್ಷದ ಪತಾಕೆ ವಾಹಕರು ಯಾರು❓
👉�ಮುಸ್ವಹಬ್ ಇಬ್ನು ಉಮೈರ್ (ರ) ರವರಾಗಿದ್ದರು.
ಸೈನ್ಯದ ಎರಡು ಭಾಗದಲ್ಲಿಯೂ ಕಪ್ಪು ಬಣ್ಣದ ಒಂದೊಂದು ಪತಾಕೆ ಇತ್ತು. ಅದರ ವಾಹಕರು ಯಾರು❓
👉�ಅಲಿ (ರ) ರವರು ಮತ್ತು ಓರ್ವ ಅನ್ಸ್ವಾರಿಯಾಗಿದ್ದರು.
ಬದ್ರ್ ನ ಪ್ರಥಮ ಮುಸ್ಲಿಂ ಶಹೀದ್ ಯಾರು❓
👉�ಉಮರ್ (ರ) ರವರ ಅಡಿಯಾಳು ಆಗಿದ್ದ ಮಿಹ್ಜಹ್ (ರ) ರವರಾಗಿದ್ದರೆ.
🎀🎀🎀🎀🎀🎀🎀
✍🏾 ಗಫೂರ್ ಬಾಯಾರ್.
*اَشْهَدُ اَن لَاإِلَهَ اِلَّاالله أَسْتَغْفِرُ الله أَسْئَلُكَ الجنة واعوذ بك من النار.*
*اللهم اغفرلى ذنوبى يارب العالمين*
🌺🌺🌺🌺🌺🌺🌺
Comments