ಲೈಲತುಲ್ ಖದ್ರ್
✍🏻 *_ಹಸ ಗುಲ್ವಾಡಿ_*
📞 *_7483211231_*
_ಪವಿತ್ರ ರಮಳಾನಿನ ಅತೀ ದೊಡ್ಡ ಸವಿಶೇಷತೆಯಾಗಿದೆ ಲೈಲತುಲ್ ಖದ್ರ್ (ನಿರ್ಣಯದ ರಾತ್ರಿ). ಜೀವಿಗಳ ಆಹಾರ , ಜನನ , ಮರಣ , ಮಳೆ , ಮುಂತಾದ ಮಹತ್ವದ ಕಾರ್ಯಗಳೆಲ್ಲವೂ ಈ ರಾತ್ರಿಯಲ್ಲಿ ನಿರ್ಣಯಿಸುವುದರಿಂದ ಇದಕ್ಕೆ ಈ ಹೆಸರು ಬರಲು ಕಾರಣ. "ಖದ್ರ್" ಎನ್ನುವುದಕ್ಕೆ ಸ್ಥಾನ , ಮಹತ್ವ , ಎಂಬ ಅರ್ಥವೂ ಇದೆ. ಈ ವೀಕ್ಷಣೆಯನುಸರಿಸಿ ವಿಶುದ್ಧ ಕುರ್ಆನ್ ಅವತೀರ್ಣಗೊಂಡ ಮಹತ್ವವಾದ ರಾತ್ರಿ ಎಂಬರ್ಥದಲ್ಲಿ ಹೇಳಬಹುದು. ಈ ರಾತ್ರಿಯಲ್ಲಿ ಸತ್ಕರ್ಮಗಳನ್ನು ಕೈಗೊಂಡರೆ ಉನ್ನತವಾದ ಸ್ಥಾನ ಲಭಿಸುವುದು ಎಂದು ವ್ಯಾಖ್ಯಾನಿಸಬಹುದು.ಲೈಲತುಲ್ ಖದ್ರನ್ನು ಪರಾಮರ್ಶಿಸುವ ಒಂದು ಅಧ್ಯಾಯವೇ ಪವಿತ್ರ ಕುರ್ಆನಿನಲ್ಲಿದೆ. " ನಿಶ್ಚಯವಾಗಿಯೂ ನಾವು ಕುರ್ಆನ್ ಅವತೀರ್ಣಗೊಳಿಸಿದ್ದು ಲೈಲತುಲ್ ಖದ್ರಿನಲ್ಲಾಗಿದೆ. ಲೈಲತುಲ್ ಖದ್ರ್ ಏನೆಂದು ತಾವು ಭಾವಿಸಿದ್ದೀರಿ...? ಲೈಲತುಲ್ ಖದ್ರ್ ಸಾವಿರ ತಿಂಗಳಿಗಿಂತಲೂ ಪವಿತ್ರವಾದದ್ದು.ಅಲ್ಲಾಹನ ಸಮ್ಮತಿಯೊಂದಿಗೆ ಮಲಕುಗಳು ರೂಹ್ ಆ ರಾತ್ರಿಯಲ್ಲಿ ಧರೆಗಿಳಿಯುತ್ತಾರೆ.ಮುಂಜಾನೆ ತನಕ ನಿರಂತರ ರಕ್ಷೆಯ ರಾತ್ರಿಯಾಗಿದೆ."_
_ಈ ಅಧ್ಯಾಯದ ಅವತರಣ ಶೈಲಿ ಮನದಟ್ಟು ಮಾಡಬೇಕು. ಮಾಲಿಕ್ ಬ್ನ್ ಅನಸ್ (ರ) ಹೇಳುತ್ತಾರೆ; ಪೂರ್ವ ಸಮುದಾಯದ ದೀರ್ಘಾಯಸ್ಸಿನ ಬಗ್ಗೆ ಚಿಂತಿಸಿದಾಗ ಅವರ ಸನಿಹಕ್ಕೆ ತನ್ನ ಸಮುದಾಯದ ಆಯಸ್ಸು ತಲುಪುವುದಿಲ್ಲ ಎಂದು ನಬಿ ﷺ ಪರಿತಪಿಸಿದಾಗ ಇದಕ್ಕೆ ಪರಿಹಾರವಾಗಿ ಲೈಲತುಲ್ ಖದ್ರ್ ಪ್ರಖ್ಯಾಪಿಸಿ ಪ್ರಸ್ತುತ ಅಧ್ಯಾಯ ಅವತೀರ್ಣಗೊಳಿಸಿದ್ದು.ಮುಜಾಹಿದ್ (ರ) ಹೇಳುತ್ತಾರೆ; ಬನೂ ಇಸ್ರಾಯಿಲ್ ಸಮುದಾಯದಲ್ಲಿ ರಾತ್ರಿ ಪೂರ್ತಿ ಆರಾಧನೆ ನಡೆಸಿ ಹಗಲು ಪೂರ್ತಿ ದೀನಿನ ಉನ್ನತಿಗಾಗಿ ಸಮರ ನಡೆಸಿ ಸಾವಿರ ವರ್ಷ ಜೀವಿಸಿದ ಒಬ್ಬ ವ್ಯಕ್ತಿಯಿದ್ದರು. ಆ ವ್ಯಕ್ತಿಯ ಕುರಿತು ಕೇಳಿ ನಬಿ ﷺ ಹಾಗೂ ಸಹಚರರು ಆಶ್ಚರ್ಯಪಟ್ಟರು. ತಮ್ಮ ಸತ್ಕರ್ಮಗಳು ತೀರಾ ಕಡಿಮೆಯಾಯಿತು ಎಂದು ದುಃಖಿತರಾದರು. ಈ ಖೇದಕ್ಕಾಗಿ ಪ್ರಸ್ತುತ ಅಧ್ಯಾಯ ಅವತೀರ್ಣಗೊಂಡಿತು._
*_ಲೈಲತುಲ್ ಖದ್ರ್ ಯಾವಾಗ...?_*
_ಇಬಾದತು ಬ್ನ್ ಸ್ವಾಮಿತ್ (ರ) ಹೇಳುತ್ತಾರೆ; ನಬಿ ﷺ ಒಂದು ದಿನ ಲೈಲತುಲ್ ಖದ್ರ್ ಯಾವಾಗ ಎಂದು ತಿಳಿಸಲು ತನ್ನ ಸಹಚರರ ಸನಿಹ ಬಂದರು, ಆ ಸಂದರ್ಭ ಇಬ್ಬರು ವ್ಯಕ್ತಿಗಳು ಮಸೀದಿಯಲ್ಲಿ ಏನೋ ಕಲಹವನ್ನುಂಟು ಮಾಡುತ್ತಿದ್ದರು. ಇದನ್ನು ನೋಡಿ ನಬಿ ﷺ ಹೇಳಿದರು;_
*_خرجت لأخبركم بليلة القدر فتلاحى فلان ابن فلان فرفعت وعسى ان يكون خيرالكم_*
_ಲೈಲತುಲ್ ಖದ್ರ್ ಯಾವ ದಿವಸ ಎಂದು ಪ್ರಖ್ಯಾಪಿಸಲು ನಾನು ಬಂದದ್ದು, ಆದರೆ ಇವರು ಕಲಹ ಉಂಟು ಮಾಡುವುದನ್ನು ಕಂಡಾಗ ಆ ವಿವರ ನನ್ನಿಂದ ಹಿಂಪಡೆಯಲ್ಪಟ್ಟಿತು.ಅದರಲ್ಲಿ ಏನಾದರು ಒಳ್ಳೆಯದಿರಬಹುದು. ಲೈಲತುಲ್ ಖದ್ರ್ ಯಾವಾಗ ಎಂದು ವ್ಯಕ್ತವಾದ ವಿವರ ನಮಗೆ ಇಲ್ಲವಾದರೂ ಬಲವಾದ ಸಾಕ್ಷಿಗಳ , ಸೂಚನೆಗಳ , ಆಧಾರದಲ್ಲಿ ವಿದ್ವಾಂಸರು ಕೆಲ ಅಭಿಪ್ರಾಯಗಳನ್ನು ಹೇಳಿದ್ದಾರೆ.ವಿಶ್ವದಾದ್ಯಂತ ವಿಶ್ವಾಸಿಗಳು ರಮಳಾನ್ ಇಪ್ಪತ್ತೇಳರ ರಾತ್ರಿಯನ್ನು ಲೈಲತುಲ್ ಖದ್ರ್ ಆಗಿ ಆಚರಿಸುತ್ತಾರೆ.ನಬಿ ﷺ ಹೇಳುತ್ತಾರೆ;_
*_التمسوا ليلة القدر ليلة سبع وعشرين_*
_"ರಮಳಾನ್ ಇಪ್ಪತ್ತೇಳರ ರಾತ್ರಿಯಲ್ಲಿ ನೀವು ಲೈಲತುಲ್ ಖದ್ರನ್ನು ನಿರೀಕ್ಷಿಸಿ."_
_ಲೈಲತುಲ್ ಖದ್ರ್ ಇಪ್ಪತ್ತೇಳರ ರಾತ್ರಿ ಆಗಲಿಕ್ಕಿರುವ ಸಾಧ್ಯತೆಗಳ ಕುರಿತು ಇಬ್ನು ಅಬ್ಬಾಸ್ (ರ) ಹೇಳುತ್ತಾರೆ; ಲೈಲತುಲ್ ಖದ್ರ್ನ ಕುರಿತ ಕುರ್ಆನ್ ಅಧ್ಯಾಯದಲ್ಲಿ 30 ವಾಕ್ಯಗಳಿವೆ. ಅದರಲ್ಲಿ ಲೈಲತುಲ್ ಖದ್ರನ್ನು ಪ್ರತ್ಯೇಕ ಅರ್ಥದಲ್ಲಿ ಸೂಚಿಸುವ 'ಹಿಯ' ಎಂಬ ಪದ ಇಪ್ಪತ್ತೇಳನೆಯದ್ದಾಗಿದೆ. ಲೈಲತುಲ್ ಖದ್ರ್ ಇಪ್ಪತ್ತೇಳನೆ ರಾತ್ರಿಯಾಗಿದೆ ಎನ್ನುವುದಕ್ಕೆ ಇದು ಸುಳಿವು ನೀಡುತ್ತದೆ. ಅದೇ ಪ್ರಕಾರ ಲೈಲತುಲ್ ಖದ್ರ್ ಎಂಬ ಪದದಲ್ಲಿ ಒಂಭತ್ತು ಅಕ್ಷರಗಳಿವೆ. ಲೈಲತುಲ್ ಖದ್ರ್ ಎಂಬ ಪದ ಅಧ್ಯಾಯದಲ್ಲಿ ಮೂರು ಸಲ ಆವರ್ತನೆಗೊಂಡಿದೆ. ಇದನ್ನು ಪರಸ್ಪರ ಗುಣಿಸಿದರೆ ಇಪ್ಪತ್ತೇಳು ಲಭಿಸುತ್ತದೆ.(9×3=27). ಇಪ್ಪತ್ತೇಳರ ರಾತ್ರಿಯಲ್ಲಿ ಲೈಲತುಲ್ ಖದ್ರ್ ಬರುವುದೆಂಬುದಕ್ಕೆ ಇದು ಕೂಡ ಸುಳಿವು ನೀಡುತ್ತದೆ.ವರ್ಷದಲ್ಲಿ ಯಾವ ದಿವಸವೂ ಆಗಬಹುದು, ಪರಿಶುದ್ಧ ರಮಳಾನಿನಲ್ಲಿ, ರಮಳಾನಿನ ಎರಡು ಮೂರು ಹತ್ತರಲ್ಲಿ, ಕೊನೆಯ ಹತ್ತರಲ್ಲಿ, ಕೊನೆಯ ಹತ್ತರ ಬೆಸ ರಾತ್ರಿಯಲ್ಲಿ, ಇಪ್ಪತ್ತೇಳರ ರಾತ್ರಿಯಲ್ಲಿ, ಹೀಗೆ ಅನೇಕ ಅಭಿಪ್ರಾಯಗಳು ಲೈಲತುಲ್ ಖದ್ರ್ನ ವಿಷಯದಲ್ಲಿ ನೆಲೆಗೊಂಡಿದೆ. ನಬಿ ﷺ ಹೇಳುತ್ತಾರೆ;_
.. *_تحروا ليلة القدر فى الوتر من العشر الأواخر من رمضان_*
*_" ನೀವು ರಮಳಾನ್ ತಿಂಗಳ ಕೊನೆಯ ಹತ್ತರ ಬೆಸ ರಾತ್ರಿಯಲ್ಲಿ ಲೈಲತುಲ್ ಖದ್ರನ್ನು ನಿರೀಕ್ಷಿಸಿ."_*
*_ಲೈಲತುಲ್ ಖದ್ರ್ ಗೌಪ್ಯವಾಗಿರಿಸಿದ್ದೇಕೆ..?_*
_ಲೈಲತುಲ್ ಖದ್ರ್ ಗೌಪ್ಯವಾಗಿರಿಸಿದ ರಹಸ್ಯದ ಕುರಿತು ಇಮಾಂ ರಾಝಿ (ರ) ಹೇಳುತ್ತಾರೆ;ಲೈಲತುಲ್ ಖದ್ರನ್ನು ಕೆಲವು ಕಾರ್ಯಗಳ ಹಾಗೆ ಅಲ್ಲಾಹನು ರಹಸ್ಯವಾಗಿಟ್ಟಿದ್ದಕ್ಕೆ ಅನೇಕ ಕಾರಣಗಳು (ಹಿಕ್ಮತ್) ನಮಗೆ ಕಂಡುಕೊಳ್ಳಬಹುದು.ಮನುಷ್ಯನು ಒಳ್ಳೆಯ ಕಾರ್ಯಗಳನ್ನು ನಿರೀಕ್ಷೆಯೊಂದಿಗೆ ಮಾಡಲುಬೇಕಾಗಿ ಸತ್ಕರ್ಮಗಳ ಹಿಂದೆ ತನ್ನ ತೃಪ್ತಿ ಅಲ್ಲಾಹನು ಮರೆಯಾಗಿಸಿದ್ದಾನೆ.ಪಾಪ ಕರ್ಮದ ಹಿಂದೆ ಅಲ್ಲಾಹನ ಕಠಿಣವಾದ ಕೋಪವಿದೆ. ಆದರೆ ಆ ಕೋಪವನ್ನು ನಿರ್ಣಯಿಸಲು ನಮಗೆ ಅಸಾಧ್ಯ. ನಾವು ಸರ್ವ ಪಾಪಗಳಿಂದ ದೂರ ಸರಿಯಲು ಬೇಕಾಗಿದೆಯದು.ಅಲ್ಲಾಹನು ತನ್ನ ಇಷ್ಟ ದಾಸರಾದ ಔಲಿಯಾಗಳನ್ನು ಜನ ಮಧ್ಯದಿಂದ ಗೌಪ್ಯವಾಗಿರಿಸಿದ್ದು , ಜನರು ಎಲ್ಲರನ್ನು ಗೌರವದಿಂದ ಕಾಣಲುಬೇಕಾಗಿ. ಪ್ರಾರ್ಥನೆಗಿರುವ ಉತ್ತರವನ್ನು ರಹಸ್ಯವಾಗಿಸಿದ್ದು , ದಾಸರು ಎಲ್ಲ ತರಹದ ಪ್ರಾರ್ಥನೆಗಳಲ್ಲಿ ಪುನಃ ಪುನಃ ಉತ್ಸಾಹ ತೋರಲಿಕ್ಕೆಬೇಕಾಗಿ.ಅಲ್ಲಾಹನ ನಾಮಗಳಲ್ಲಿ ಇಸ್ಮುಲ್ ಅಹ್ಲಮನ್ನು ಮರೆಯಾಗಿಸಿದ್ದು, ಅಲ್ಲಾಹನ ಎಲ್ಲಾ ನಾಮಗಳನ್ನು ಗೌರವಿಸಲು ಬೇಕಾಗಿ.ಪಶ್ಚಾತಾಪ ಸ್ವೀಕರಿಸುವ ಸಮಯದ ಕುರಿತು ರಹಸ್ಯವಾಗಿಸಿದ್ದು, ಎಲ್ಲಾ ತರಹದ ಪಶ್ಚಾತಾಪದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬೇಕಾಗಿ.ಮರಣದ ಸಮಯವನ್ನು ಗೌಪ್ಯವಾಗಿರಿಸಿದ್ದು, ಎಲ್ಲಾ ಸಮಯ ಅಲ್ಲಾಹನನ್ನು ನೆನಪಿಸಿ ಜೀವಿಸಲಿಕ್ಕೆ ಬೇಕಾಗಿ. ಅದೇ ರೀತಿ ಲೈಲತುಲ್ ಖದ್ರನ್ನು ಗೌಪ್ಯವಾಗಿರಿಸಿದ್ದು, ರಮಳಾನ್ ರಾತ್ರಿ ಪೂರ್ಣವಾಗಿ ಉಪಯೋಗಪಡಿಸಿಕೊಳ್ಳಲು, ಸಜೀವಗೊಳಿಸಲು ಬೇಕಾಗಿ.ಲೈಲತುಲ್ ಖದ್ರ್ ಯಾವಾಗ ಎಂದು ಕಂಡುಕೊಳ್ಳಲು ಸತ್ಯವಿಶ್ವಾಸಿ ಪ್ರಾಮಾಣಿಕವಾಗಿ ಶ್ರಮಿಸುತ್ತಾನೆ. ಅದೇ ರೀತಿ ಆ ಶ್ರಮದ ಪ್ರತಿಫಲವನ್ನು ಪಡೆಯುವಲ್ಲಿ ಸಫಲನಾಗುತ್ತಾನೆ.ಅಲ್ಲಾಹು ಉದ್ದೇಶಿಸಿದ ಮಹಾತ್ಮರಿಗೆ ಅಲ್ಲಾಹನು ಲೈಲತುಲ್ ಖದ್ರನ್ನು ವ್ಯಕ್ತಗೊಳಿಸುವನು._
*_ಮಲಕುಗಳು ಧರೆಗಿಳಿಯುತ್ತಾರೆ...!_*
_ಲೈಲತುಲ್ ಖದ್ರನ್ನು ವಿಶೇಷಿಸುವ ಸಮಯದಲ್ಲಿ ಕುರ್ಆನ್ ಆ ರಾತ್ರಿಯಲ್ಲಿ 'ಮಲಕುಗಳು ಧರೆಗಿಳಿಯುತ್ತಾರೆ' ಎಂದು ಹೇಳಿದೆ.ಮಲಕುಗಳು ಧರೆಗಿಳಿದು ಬರುತ್ತಾರೆ ಎಂದು ಬಾಹ್ಯಾರ್ಥದಲ್ಲೆ ಹೇಳಬಹುದು.ಭೂಲೋಕದ ಮನುಷ್ಯರ ಆರಾಧನೆಗಳು, ಇನ್ನಿತರ ಕಾರ್ಯಗಳನ್ನು ತಿಳಿದುಕೊಳ್ಳಲು ಮಲಕುಗಳು ಭೂಮಿಗೆ ಇಳಿದು ಬರುತ್ತಾರೆ.ಒಂದನೇ ಆಕಾಶಕ್ಕೆ ಮಲಕುಗಳು ಇಳಿದು ಬರುತ್ತಾರೆ ಎಂದು ಹೇಳಿದ ವಿದ್ವಾಂಸರು ಇದ್ದಾರೆ.ಭೂಲೋಕಕ್ಕೆ ಬರಲು ಮಲಕುಗಳು ಅಲ್ಲಾಹನೊಂದಿಗೆ ಸಮ್ಮತಿಯನ್ನು ಕೇಳುವರು, ಅದಕ್ಕೆ ಅಲ್ಲಾಹನು ಸಮ್ಮತಿಯನ್ನು ಸೂಚಿಸುವನು.ಹಾಗೆ ಅವರು ಲೈಲತುಲ್ ಖದ್ರಿನಲ್ಲಿ ಮನುಷ್ಯರು ಅಲ್ಲಾಹನ ತೃಪ್ತಿ ಲಭಿಸಲು ಕಠಿಣ ಪರಿಶ್ರಮಪಡುವುದನ್ನು ಕಂಡು ಸಂತೃಪ್ತರಾಗಿ ತಿರುಗಿ ಹೋಗುವರು.ಲೈಲತುಲ್ ಖದ್ರ್ ನಲ್ಲಿ ಆರಾಧನೆಗಳು ನಿರ್ವಹಿಸಿದವರಿಗೆ ಬೇಕಾಗಿ ಅವರು ಪಾಪ ಮೋಚನೆಯನ್ನು ಬೇಡುವರು.ನಬಿ ﷺ ಹೇಳುತ್ತಾರೆ: ನಿಮಗೆ ಸಲಾಂ ಹೇಳಲು, ಶಿಫಾರಸು ನಡೆಸಲು ಮಲಕುಗಳು ಇಳಿದು ಬರುತ್ತಾರೆ.ಹೀಗೆ ಮಲಕುಗಳ ಸಲಾಂ ತಲುಪಿದವರ ಪಾಪಗಳನ್ನು ಮನ್ನಿಸಲ್ಪಡುವುದು._
*_ಯಾರು ಈ 'ರೂಹ್'.…?_*
_ಪವಿತ್ರ ಕುರ್ಆನ್ ಮಲಕುಗಳು ಮತ್ತು ರೂಹ್ ಲೈಲತುಲ್ ಖದ್ರಿನಲ್ಲಿ ಇಳಿದು ಬರುತ್ತಾರೆ ಎಂದು ಹೇಳಿದೆ... ಯಾರು ಈ ರೂಹ್...? ಇದರ ಬಗ್ಗೆ ಅನೇಕ ಅಭಿಪ್ರಾಯಗಳಿವೆ.ಲೈಲತುಲ್ ಖದ್ರಿನಲ್ಲಿ ಮಾತ್ರ ಪ್ರತ್ಯಕ್ಷಗೊಳ್ಳುವ ಒಂದು ವಿಭಾಗ ಮಲಕುಗಳಾಗಿದ್ದಾರೆ ಎಂದಾಗಿದೆ ಅಭಿಪ್ರಾಯ. ರೂಹ್ ಎಂದರೆ ಮಲಕುಗಳೋ, ಮನುಷ್ಯರೋ ಅಲ್ಲದ ಒಂದು ವಿಭಾಗ ಸೃಷ್ಟಿಗಳು ಎಂದಾಗಿದೆ ಇನ್ನೊಂದು ಅಭಿಪ್ರಾಯ.ರೂಹ್ ಎಂದು ಉದ್ದೇಶಿಸುವುದು ಈಸಾ ನಬಿ (ಅ) ಆಗಿದ್ದಾರೆ ಎಂಬ ಅಭಿಪ್ರಾಯವು ಇದೆ.ಮಲಕುಗಳೊಂದಿಗೆ ನಬಿ ﷺ ರ ಸಮುದಾಯವನ್ನು ವೀಕ್ಷಿಸಲು ಈಸಾ ನಬಿ (ಅ) ರು ಇಳಿದು ಬರುತ್ತಾರೆ. ರೂಹ್ ಎಂದರೆ ಕುರ್ಆನ್, ಅಲ್ಲಾಹನ ರಹ್ಮತ್(ಕಾರುಣ್ಯ), ಜಿಬ್ರೀಲ್ (ಅ) ಎಂದು ಅನೇಕ ಅಭಿಪ್ರಾಯವೂ ಇದೆ._
*_ಮುಂಜಾನೆ ತನಕ ಸಲಾಂ.._*
_ಲೈಲತುಲ್ ಖದ್ರಿನ ವಿಶೇಷತೆಗಳಲ್ಲೊಂದಾಗಿ ಕುರ್ಆನ್ ಹೇಳುವ ಇನ್ನೊಂದು ವಿಷಯ "ಅದು ಮುಂಜಾನೆ ತನಕ ಸಲಾಂ" ಎಂದು.ಈ ರಾತ್ರಿಯಲ್ಲಿ ಮಲಕುಗಳು ವಿಶ್ವಾಸಿಗಳಿಗೆ ಸಲಾಂ ಹೇಳುತ್ತಾರೆ.ಮಲಕುಗಳು ಸಾಲು ಸಾಲಾಗಿ ಬಂದು ಭುವಿಯಲ್ಲಿ ಸಲಾಂ ವರ್ಷಿಸುತ್ತಾರೆ.ಹೀಗೆ ಆ ರಾತ್ರಿ ಸಲಾಂ ಮಯವಾಗಿರುತ್ತದೆ.ಮತ್ತೊಂದು ವೀಕ್ಷಣೆ ಪ್ರಕಾರ ಲೈಲತುಲ್ ಖದ್ರ್ ದುರಂತಗಳು, ಆಪತ್ತುಗಳಿಂದ ರಕ್ಷೆಯೆಂದಾಗಿದೆ. ಲೈಲತುಲ್ ಖದ್ರ್ ಬಿರುಗಾಳಿ, ಪ್ರಕೃತಿ ವಿಕೋಪಗಳಿಂದ ಮುಕ್ತವಾಗಿರುವುದರಿಂದ "ಸಲಾಂ" ಎಂದು ಪ್ರಯೋಗಿಸಿದ್ದು ಎಂಬ ಅಭಿಪ್ರಾಯವಿದೆ._
*_ಲೈಲತುಲ್ ಖದ್ರ್ ಲಭಿಸದವರು._*
_ಸಾವಿರ ತಿಂಗಳ ಪುಣ್ಯವಿರುವ , ಅಲ್ಲಾಹನ ಕಾರುಣ್ಯ ವರ್ಷಿಸುವ ಲೈಲತುಲ್ ಖದ್ರಿನ ಮಹತ್ವ ನಾಲ್ಕು ವಿಭಾಗ ಜನರಿಗೆ ಲಭಿಸುವುದಿಲ್ಲ ಎಂದು ನಬಿ ﷺ ಕಲಿಸಿಕೊಟ್ಟಿದ್ದಾರೆ._
. *_أربعة لا يدخل لا يغفرلهم فى ليلة القدر مدمن خمر ، وعاق الوالدين ، وقاطع رحم ، ومشاحن._*
* _ನಿತ್ಯ ಮದ್ಯಪಾನಿ._
* _ಮಾತಾ ಪಿತರನ್ನು ಪೀಡಿಸಿದವರು._
* _ರಕ್ತ ಸಂಬಂಧ ವಿಚ್ಛೇಧಿಸಿದವರು._
* _ಹೃದಯದಲ್ಲಿ ಕಾಪಟ್ಯವಿರುವ ಅಧರ್ಮಿಗಳು._
*_ಇಲ್ಲಿ ಮಲಕುಗಳು ಪ್ರವೇಶಿಸಲಾರರು._*
_ಲೈಲತುಲ್ ಖದ್ರಿನಲ್ಲಿ ಬರುವ ಮಲಕುಗಳು ಪ್ರವೇಶಿಸದ ಕೆಲ ಸ್ಥಳಗಳನ್ನು ಇಸ್ಮಾಯೀಲ್ ಹೀಖಿ (ರ) ವಿವರಿಸುತ್ತಾರೆ._
* _ಕ್ರೈಸ್ತ ದೇವಾಲಯಗಳು._
* _ಬಹುದೈವ ಮೂರ್ತಿ ಆರಾಧನೆ ಭವನಗಳು._
* _ಅನುವದನೀಯವಲ್ಲದ ರೀತಿಯಲ್ಲಿ ಸಾಕುವ ನಾಯಿ ಇರುವ ಭವನಗಳು._
* _ಜೀವಿಗಳ ಪ್ರತಿಮೆಯಿರುವ ಸ್ಥಳಗಳು._
* _ಮದ್ಯ ವ್ಯಸನಿ ಕುಳಿತಿರುವ ಸ್ಥಳ._
* _ಮದ್ಯವಿರುವ ಮನೆಗಳು._
* _ರಕ್ತ ಸಂಬಂಧ ವಿಚ್ಛೇಧಿಸಿದವರ ಮನೆಗಳು._
* _ದೊಡ್ಡ ಅಶುದ್ಧಿಯಿರುವವನು ವಾಸಿಸುವ ಮನೆ._
* _ಹಂದಿ ಮಾಂಸ ಭಕ್ಷಿಸುವವರು ವಾಸಿಸುವ ಭವನ._
*_ಈ ರಾತ್ರಿಯಲ್ಲಿ ಏನು ಮಾಡಬೇಕು..?_*
_ಲೈಲತುಲ್ ಖದ್ರನ್ನು ಆರಾಧನೆಗಳಿಂದ ಧನ್ಯಗೊಳಿಸಬೇಕು. ಅಮ್ರ್ ಬಿನ್ ಖೈಸ್ (ರ) ಹೇಳುತ್ತಾರೆ: ಆ ರಾತ್ರಿಯ ಸತ್ಕರ್ಮ ಸಾವಿರ ತಿಂಗಳ ನಿರಂತರ ಸತ್ಕರ್ಮಗಳಿಗೆ ಸಮವಾಗಿದೆ.ನಬಿ ﷺ ಹೇಳುತ್ತಾರೆ:_
*_من قام ليلة القدر ايمانا واحتسابا غفر له ما تقدم من ذنبه_*
_ಲೈಲತುಲ್ ಖದ್ರಿನಲ್ಲಿ ವಿಶ್ವಾಸದೊಂದಿಗೆ, ಪ್ರತಿಫಲ ಆಕಾಂಕ್ಷೆಯೊಂದಿಗೆ ಯಾರಾದರೂ ನಮಾಝ್ ನಿರ್ವಹಿಸಿದರೆ,.ಅವನ ಗತಕಾಲ ಪಾಪಗಳನ್ನು ಪೂರ್ಣವಾಗಿ ಮನ್ನಿಸಲ್ಪಡುವುದು.(ಬುಖಾರಿ)_
_ಬೀವಿ ಆಯಿಷಾ (ರ) ಹೇಳುತ್ತಾರೆ: ನಾನು ನಬಿಯವರೊಂದಿಗೆ ಕೇಳಿದೆ ನಬಿಯೇ, ಲೈಲತುಲ್ ಖದ್ರಿನಲ್ಲಿ ಪ್ರತ್ಯೇಕವಾಗಿ ಏನಾದರೂ ನಿರ್ವಹಿಸಬೇಕೆ....? ತಕ್ಷಣ ನಬಿ ﷺ ಹೇಳಿದರು_
*_اللّهم انّك عفوّ تحبّ العفو فاعف عنّى_*
_ಎಂಬ ದ್ಸಿಕ್ರನ್ನು ವರ್ಧಿಸು ಎಂಬ ಉತ್ತರವಾಗಿತ್ತು.( ಅಲ್ಲಾಹನೇ, ನೀನು ಮನ್ನಿಸುವವನು, ಅದನ್ನು ಇಷ್ಟ ಪಡುವವನು, ಆದ್ದರಿಂದ ಪಾಪಿಯಾದ ನನ್ನನ್ನು ಮನ್ನಿಸು... ಆಮೀನ್._
*_تقبل الله منّي_*
_ಇದನ್ನು ಇತರರಿಗೆ ರವಾನಿಸಲು ಜಿಪುಣತನ ತೋರದಿರಿ._
hasangulvadi@gmail.com
*_MAXIMUM SHARE_*
Comments