ತಾಯಿ
ಶಾಲೆಯಿಂದ ಮರಳಿ ಬಂದ ಮಗುವಿನಲ್ಲಿ ತಾಯಿ ವಿಚಾರಿಸಿದರು : ಯಾಕೆ ಮಗು ಹಿಂತಿರುಗಿ ಬಂದದ್ದೆಂದು
ಆಗ ಮಗ ಟೀಚರ್ ಕೊಟ್ಟ ಕಾಗದವನ್ನು ತಾಯಿಯ ಕೈಗೆ ನೀಡುತ್ತಾನೆ.
ತಾಯಿ ಪತ್ರ ಓದುತ್ತಾ ಕಣ್ಣಿನಿಂದ ಅಶ್ರುಧಾರೆ ಹರಿಯಿತು..
ಮಗ : ಯಾಕಮ್ಮಾ ಏನಾಯಿತು?
ಯಾಕೆ ಅಳುತಿದ್ದೀ ?
ತಾಯಿ: ಇಲ್ಲಮ್ಮಾ ಏನಿಲ್ಲ, ಟೀಚರ್ ಹೇಳುವುದೇನೆಂದರೆ ನಿಮ್ಮ ಮಗು ಒಳ್ಳೆಯ ಚುರುಕಾಗಿದ್ದಾನೆ. ಎಲ್ಲದರಲ್ಲೂ ಮುಂದು, ಕಲಿಕೆಯಲ್ಲಿ ಎತ್ತಿದ ಕೈ ,ಅವನಿಗೆ ಶಾಲೆಯ ಅಗತ್ಯ ಕಾಣುವುದಿಲ್ಲ,ಎಂದು
ಇದನ್ನು ಕೇಳಿದ ಮಗು ಖುಷಿಯಿಂದ, ಹೆಮ್ಮೆಯಿಂದ ತಾಯಿಯ ಕಡೆಗೆ ನೋಡಿದನು.
ತಾಯಿಯು ಇವನ ಸಂತೋಷ ನೋಡಿ ನಗಾಡಿದಳು..
ಹೀಗೆ ವರ್ಷ ಉರುಳಿತು..
ತಾಯಿ ಇಹಲೋಕ ತ್ಯಜಿಸಿದಳು.
ಹುಡುಗ ದೊಡ್ಡವನಾದ,ಒಳ್ಳೆಯ ಕಲಿಕೆಯ ಮೂಲಕ ಉತ್ತುಂಗಕ್ಕೆ ಏರಿದನು..
ಅವನೊಬ್ಬ ಪ್ರಖ್ಯಾತ ವಿಜ್ಞಾನಿ ಯಾದನು..
ಹೀಗಿರುವಾಗ ಒಂದು ದಿನ ತಾಯಿಯ ನೆನಪು ಅವನಿಗೆ ಕಾಡಿತು,ಹಾಗೆ ಅವನು ತಾಯಿಯ ಹಳೆಯ ಪೆಟ್ಟಿಗೆ ತೆರದು ನೋಡುತಿದ್ದನು, ಇವನ ಆಟಿಕೆ ಸಾಮಾಗ್ರಿಗಳು ,ಅದರ ಜೊತೆ ಇವನಿಗೆ ಪತ್ರ ಸಿಕ್ಕಿತು..
ವರ್ಷಗಳ ಹಿಂದೆ ಇವನ ತಾಯಿಗೆ ಇವನ ಮೂಲಕ ಟೀಚರ್ ಕಳುಹಿಸಿದ ಅದೇ ಪತ್ರ..
ಅವನು ತೆರೆದು ನೋಡಿದ
ಅದರಲ್ಲಿ ಹೀಗಿತ್ತು....
ನೀವು ನಿಮ್ಮ ಮಗನನ್ನು ಇನ್ನು ಶಾಲೆಗೆ ಕಳುಹಿಸಬೇಡಿ..
ನಿಮ್ಮ ಮಗು ಬುಧ್ದಿಮಾಂದ್ಯನಾದ ಕಾರಣ ಅವನು ಕಲಿಯಲು ಅನರ್ಹನಾಗಿದ್ದಾನೆ...
ಅವನು ಶಾಲೆಗೆ ಬಂದರೆ ಒಳ್ಳೆಯ ರೀತಿಯಲ್ಲಿ ಕಲಿಯುವ ಉಳಿದ ಮಕ್ಕಳಿಗೆ ತೊಂದರೆಯಾಗುತ್ತದೆ..
ಇದು ಓದಿದಾಗ ಕಣ್ಣೀರಿನ ಹೊಳೆ ಹರಿಯಿತು ಇವನ ಕಣ್ಣಿನಿಂದ ಹರಿಯಿತು..
ಆವತ್ತು ತಾಯಿ ಹೇಳಿದ್ದು ಸುಳ್ಳು ಹೇಳಿದ್ದು ಇವನಿಗೆ ಮನವರಿಕೆಯಾಗಿತ್ತು..
ಇವನ ಮನಸ್ಸು ನೋವಾಗದಿರಲಿ ಎಂಬ ಕಾರಣದಿಂದ ತಾಯಿ ಈ ರೀತಿ ಹೇಳಿದ್ದರು..
➖➖➖➖➖➖➖
ನೀತಿ ಪಾಠ :-
ಪ್ರತಿಯೊಬ್ಬರೂ ಯಾವುದಾದರೂ ಒಂದು ವಿಷಯದಲ್ಲಿ ಪ್ರತಿಭೆ ಸಾಧಿಸುವವರಾಗಿದ್ದಾರೆ..
ಪ್ರತಿ ಮಕ್ಕಳಲ್ಲಿ ಪ್ರತಿಭೆಗಳಿವೆ.
ಅದನ್ನು ನಾವು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಬದಲು ಅವರ ಹೃದಯದಲ್ಲಿ ಮೊಳಕೆಯೊಡೆಯುವ ಪ್ರತಿಭೆಯನ್ನು ಚಿವುಟಿ ಬಿಡಬೇಡಿ. ಅದಕ್ಕೆ ಬೇಕಾದ ಪ್ರೋತ್ಸಾಹ ವನ್ನು ನೀಡಿದರೆ ಅವರು ಭವಿಷ್ಯದಲ್ಲಿ ಒಳ್ಳೆಯ ಯಶಸ್ಸು ಸಾಧಿಸಬಹುದು..
ಸಮೀರಾ ಬಿಂತ್ ಅಹ್ಮದ್ ✍🌹
Comments