ಮಸ್ಜಿದುಲ್ ಹರಾಮಿನಿಂದ ಪರಾರಿಯಾದ ಸಲಫಿ..‼
ಯೂಸುಫ್ ನಬ್‌ಹಾನಿ ಕುಕ್ಕಾಜೆ
ವೀಡಿಯೋ ನೋಡಲು 2 ಬಾರಿ ಒತ್ತಿರಿ.
▪️ ಖ್ಯಾತ ವಿದ್ವಾಂಸ ಮತ್ತು ಸೂಫಿವರ್ಯ ಶೈಖ್ ಇಮಾದುದ್ದೀನ್ ಜಮೀಲ್ ಹಲೀಮ್‌ರವರು (ಲೆಬನಾನ್) ನಡೆಸಿದ ಒಂದು ಅರಬಿ ಪ್ರಭಾಷಣದ ನೇರ ತರ್ಜುಮೆ ಇದು.
▪️ ನನಗೆ ಮಕ್ಕಾ ನಿವಾಸಿಯಾದ ನನ್ನ ಮಿತ್ರರೊಬ್ಬರು ಹೇಳಿದ ಒಂದು ಸತ್ಯ ಕತೆಯನ್ನು ನಾನು ನಿಮ್ಮ ಮುಂದಿಡುತ್ತೇನೆ. ಆ ಘಟನೆ ಈ ರೀತಿಯಾಗಿದೆ. "ನಾವು ಕೆಲವು ಮಂದಿ ಒಮ್ಮೆ ಮಕ್ಕಾದ ಮಸ್ಜಿದುಲ್ ಹರಾಮಿನಲ್ಲಿರುವಾಗ ಮಸೀದಿಯೊಳಗೆ ಅಲ್ಲಲ್ಲಿ ಹಲವು ಉಲಮಾಗಳ, ವಿದ್ವಾಂಸರ ವಿಭಿನ್ನ ಇಸ್ಲಾಮೀ ತರಗತಿಗಳು ನಡೆಯುತ್ತಿತ್ತು. ನಾವು ನಮ್ಮ ಗುರುವರ್ಯರಾದ ಸುನ್ನತ್ ಜಮಾಅತಿನ ನೇತಾರ ಶೈಖ್ ಹಸನುಲ್ ಮಶ್ಶಾತ್ ರಹಿಮಹುಲ್ಲಾಹ್ ರವರ ಮಜಿಲಿಸಿನಲ್ಲಿ ಕುಳಿತು ಅವರ ಅರ್ಥವತ್ತಾದ ತರಗತಿಯನ್ನು ಬಹಳ ಕುತೂಹಲದಿಂದ ಆಲಿಸುತ್ತಿದ್ದೆವು. ಮಸ್ಜಿದುಲ್ ಹರಾಮಿನ ಮುದರ್ರಿಸ್ ಮತ್ತು ಮಕ್ಕಾದ ಅಂದಿನ ಖಾಝಿಯಾಗಿದ್ದ ಅವರಿಗೆ, ಸಮಾನರಾದ ಬೇರೊಬ್ಬ ವಿದ್ವಾಂಸ ಅಂದು ಇರಲಿಲ್ಲ. ಅವರ ತರಗತಿಯೆಂದರೆ ಬಹಳ ಆಕರ್ಷಣೀಯವಾಗಿತ್ತು. ನೂತನವಾದಿಗಳ ಸುಳ್ಳು ವಾದಗಳನ್ನು ಯಾರನ್ನೂ ಭಯಪಡದೆ ಬಹಳ ಧೈರ್ಯದಿಂದ ಆಧಾರ ಸಹಿತ ಖಂಡಿಸುವವರಾಗಿದ್ದರು.
▪️ ಅಂತೆಯೇ ಮಸ್ಜಿದುಲ್ ಹರಾಮಿನ ಬೇರೊಂದು ಕಡೆಯಲ್ಲಿ ಬರಕತ್ ಪಡೆಯುವುದನ್ನು ಮತ್ತು ಮಹಾತ್ಮರನ್ನು ಮಧ್ಯವರ್ತಿಯಾಗಿ ದುಆ ಮಾಡುವುದನ್ನು ವಿರೋಧಿಸುವ ಸಲಫಿಗಳ ಒಂದು ತರಗತಿಯೂ ನಡೆಯತ್ತಿತ್ತು. ಸಲಫಿಗಳ ನೇತಾರ ಇಬ್‌ನ್ ಉಸೈಮೀನರ ಗುರುವಾದ ಮತ್ತೊಬ್ಬ ಸಲಫಿ ಅಬ್ದುರ್ರಹ್ಮಾನ್ ಅಲ್ ಸಅ್‌ದಿಯವರಿಗಾಗಿತ್ತು ಆ ತರಗತಿಯ ಚುಕ್ಕಾಣಿ.
▪️ ತರಗತಿ ನಡೆಯುತ್ತಿರುವಾಗ ಹೊರಗೆ ಧಾರಾಕಾರ ಮಳೆ ಸುರಿಯಲು ಶುರುವಾಯಿತು. ಶೈಖ್ ಹಸನ್ ಮಶ್ಶಾತ್ ರವರ ಶಿಷ್ಯಂದಿರಾದ ನಾವೆಲ್ಲರೂ ಪವಿತ್ರ ಕಅಬಾಲಯದ ಮೇಲೆ ಸುರಿದು ಕೆಳಗೆ ಬೀಳುವ ಮಳೆ ನೀರನ್ನು ಜಮಾಯಿಸಲು ಹೊರಗೆ ಹೋದೆವು. ನಮ್ಮ ಈ ಬರಕತ್ ಪಡೆಯುವ ಸುನ್ನತ್ ಜಮಾಅತಿನ ಕೃತ್ಯವನ್ನು ನೋಡಿದರೆ ಹೊಟ್ಟೆನೋವು ಶುರುವಾಗುವ ಸಲಫಿ ಅಬ್ದುರ್ರಹ್ಮಾನ್ ಅಲ್ ಸಅ್‌ದಿಯವರ ಶಿಷ್ಯಂದಿರು ತಮ್ಮ ಗುರುವಾದ ಸಅ್‌ದಿಯವರಲ್ಲಿ ಕೇಳಿದರು. " ಏನಿದು ನಡೆಯುತ್ತಿರುವುದು.? ನೀವು ನಿದ್ರೆಯಲ್ಲಿದ್ದೀರಾ.? ಶೈಖ್ ಮಶ್ಶಾತ್‌ರವರ ಶಿಷ್ಯಂದಿರು ಕಅಬಾದ ಮೇಲೆ ಸುರಿದು ಕೆಳಗೆ ಬೀಳುವ ಮಳೆ ನೀರನ್ನು ತೆಗೆದು ಕುಡಿಯುತ್ತಿದ್ದಾರೆ. ಬಾಟಲಿಯಲ್ಲಿ ಶೇಖರಣೆ ಮಾಡುತ್ತಿದ್ದಾರೆ. ಶರೀರಕ್ಕೆ ಹಚ್ಚುತ್ತಿದ್ದಾರೆ. ಏನಿದು ಅವಸ್ಥೆ.? ನೀವು ಎಲ್ಲಿದ್ದೀರಿ.?"ಆಗ ಸಲಫಿ ಗುರುಗಳು ಹೇಳಿದರು. "ನಾನೇನು ಮಾಡಬೇಕು? ನೀವೇ ಹೇಳಿ." ಶಿಷ್ಯರು ಹೇಳಿದರು. " ನೀವು ಶೈಖ್ ಮಶ್ಶಾತ್‌ರವರ ಬಳಿ ಹೋಗಿ ಅವರನ್ನು ತರಾಟೆಗೆ ತೆಗೆದುಕೊಳ್ಳಿ. ಅವರಲ್ಲಿ ಅದರ ವಿವರಣೆ ಮತ್ತು ಆಧಾರ ಕೇಳಿ."
▪️ *ಶಿಷ್ಯರಿಂದ* ಹೊರಲು ಸಾಧ್ಯವಾಗದ ಒಂದು ಮೂಟೆಯನ್ನು ಹೊತ್ತುಕೊಂಡು ಗುರುವಾದ ಸಲಫಿ ಸಅ್‌ದಿಯವರು ಶೈಖ್ ಮಶ್ಶಾತ್‌ರವರ ಬಳಿ ಹೋಗಿ ಕೇಳಿದರು. *"ಏನಿದು ನಿಮ್ಮ ಶಿಷ್ಯರು ಮಾಡುತ್ತಿರುವ ನೀಚ ಕೆಲಸ.? ಇದಕ್ಕೆ ಇಸ್ಲಾಮಿನಲ್ಲಿ ಏನಾದರೂ ಪುರಾವೆ ಇದೆಯಾ? "* ಶೈಖ್ ಮಶ್ಶಾತ್ ರವರು ಕಅಬಾಲಯಕ್ಕೆ ಸನ್ನೆ ಮಾಡಿ ಕೇಳಿದರು. "ಪವಿತ್ರ ಕುರ್‌ಆನಿನಲ್ಲಿ ಅಲ್ಲಾಹನು *ಜಗತ್ತಿನಲ್ಲಿ ಮೊಟ್ಟಮೊದಲಿಗೆ ನಿರ್ಮಾಣವಾದ ಈ ಪವಿತ್ರ ಕಅಬಾಲಯವು ಬರಕತಿನಿಂದ ಕೂಡಿದೆ* ಎಂದು ಹೇಳಲಿಲ್ಲವೇ.? ಅದರಲ್ಲಿ ನಿಮಗೆ ಸಂಶಯವಿದೆಯಾ.?" ಸಲಫಿ ಸಅ್‌ದಿಯವರು ಹೇಳಿದರು. *ಹೌದು ಹೇಳಿದ್ದಾನೆ. ಅದರಲ್ಲಿ ನನಗೆ ಸಂಶಯವಿಲ್ಲ.* ನಂತರ ಶೈಖ್ ಮಶ್ಶಾತ್‌ರವರು ಎರಡನೆಯ ಪ್ರಶ್ನೆ ಕೇಳಿದರು. *ನಾವು ಆಕಾಶದಿಂದ ಬರಕತಿನಿಂದ ಕೂಡಿದ ನೀರನ್ನು ಸುರಿಸಿದ್ದೇವೆ* ಎಂದು ಅಲ್ಲಾಹನು ಹೇಳಲಿಲ್ಲವೇ.? *ಹೌದು ಹೇಳಿದ್ದಾನೆ. ಅದರಲ್ಲಿಯೂ ಸಂಶಯವಿಲ್ಲ.* ಎಂದಾಗಿತ್ತು ಸಲಫಿಯ ಉತ್ತರ. ನಂತರ ಮಶ್ಶಾತ್‌ರವರು ಹೇಳಿದರು. *ಒಂದು ಬರಕತ್ ಇರುವ ಜಾಗಕ್ಕೆ ಬೇರೊಂದು ಬರಕತ್ ಬಂದು ಬೀಳುವಾಗ ಎರಡು ಬರಕತುಗಳು ಪರಸ್ಪರ ಸಮ್ಮಿಲನವಾಗಿ ಬರಕತಿನ ಪವರ್ ಇಮ್ಮಡಿಯಾಯಿತು. ಅದನ್ನು ತೆಗೆದು ಬರಕತ್ ಬಡೆಯುವುದು ಯಾವ ಸುನ್ನತಿಗೆ ಎದುರಾಗಿದೆ?*
*ಶೈಖ್* ಮಶ್ಶಾತ್‌ರವರಿಂದ ಈ ಗಡುಸಿನ ಉತ್ತರ ದೊರೆತದ್ದೇ ತಡ ಈ ಸವಾಲಿಗೆ ಜವಾಬು ಕೊಡಲಾಗದೆ ಸಲಫಿಯು ಅಲ್ಲಿಂದ ಕಾಲ್ಕಿತ್ತನು."
Comments