Skip to main content

ಹಜ್ ಮತ್ತು ಈದುಲ್ ಅಳ್‌ಹಾ ಆಚರಿಸುವ ಅರ್ಹತೆ ಇರುವುದು ಸುನ್ನೀಗಳಿಗೆ ಮಾತ್ರ.

ಹಜ್  ಮತ್ತು ಈದುಲ್ ಅಳ್‌ಹಾ ಆಚರಿಸುವ ಅರ್ಹತೆ ಇರುವುದು  ಸುನ್ನೀಗಳಿಗೆ ಮಾತ್ರ.

 ▶ ಅಬೂ ರಾಝೀ

ಬಕ್ರೀದ್ ಮತ್ತು ಹಜ್ ಗಳಲ್ಲಿ ಸುನ್ನೀಗಳದ್ದೇ ದರ್ಬಾರ್.

ಯಾಕೆ ಗೊತ್ತಾ ?

ಮಹಾತ್ಮರ ಅನುಸ್ಮರಣೆ ಅದು ಇಸ್ಲಾಮೀ ಸಂಸ್ಕೃತಿಯ ಭಾಗ.

ಖುರ್‌ಆನ್, ಹದೀಸ್ ಅದನ್ನೇ ಪ್ರತಿಪಾದಿಸಿದೆ.

ಖುರ್‌ಆನ್ ನಲ್ಲಿ ಅನೇಕ ಕಡೆ ಮಹಾತ್ಮರಾದ ಅಂಬಿಯ - ಔಲಿಯಾಗಳ ಸ್ಮರಣೆ ಮಾಡಿದೆ.

ಪ್ರವಾದಿ ﷺ ರವರು ಕೂಡ ಮಹಾತ್ಮರನ್ನು ಅನುಸರಿಸಲು ಅಜ್ಞಾಪಿಸಿದ್ದಾರೆ.

ಇಸ್ಲಾಮಿನ ಅತೀ ದೊಡ್ಡ ಹಬ್ಬ ಈದುಲ್ ಅಳ್‌ಹಾ,

ಇಸ್ಲಾಮಿನ ಅತೀ ದೊಡ್ಡ ಮಹಾ ಸಂಗಮ ಹಜ್ 

ಈ ಎರಡೂ ಕೂಡ ಮಹಾತ್ಮರ ಅನುಸ್ಮರಣೆಯ ಸಂಕೇತಗಳು.

ಹಜ್ ಮತ್ತು ಬಕ್ರೀದ್ ನಲ್ಲಿ ನಡೆಯುವ ಪ್ರಮುಖ ಕಾರ್ಯಕ್ರಮಗಳು

ಬಲಿದಾನ

ಇದು ಅಲ್ಲಾಹನಿಗಾಗಿ ತನ್ನ ಮಗನನ್ನು ಬಲಿ ನೀಡಲು ಸಿದ್ದರಾದ ಪ್ರವಾದಿ ಇಬ್ರಾಹಿಂ ( ಅ ) ರವರ ಸ್ಮರಣೆಗಾಗಿ ನಡೆಯುವ ಕ್ರಿಯೆ.

ಹಜ್ ಸಂದರ್ಭ ಸ್ವಫಾ ಮರ್ವಾದ ನಡುವೆ ಓಡಾಡುವುದು..

ಇದು ಹಾಜಿರಾ ಬೀವಿಯವರು ಮಗನ ಬಾಯರಿಕೆ ನೀಗಿಸಲು ಓಡಾಡಿದ ಸ್ಮರಣೆ.

ಝಂ ಝಂ..

ಇದು ಇಸ್ಮಾಯಿಲ್ ( ಅ ) ಮಗುವಾಗಿದ್ದಾಗ ಕಾಲಿನ ಬಲಿ ಹೊರ ಚಿಮ್ಮಿದ ಬರಕತ್‌ನ ನೀರು.

ಮಖಾಂ ಇಬ್ರಾಹಿಂ.

ಇಬ್ರಾಹಿಂ ( ಅ ) ರವರ ಕಾಲಿನ ಗುರುತಿರುವ ಸ್ಥಳ. ಅದನ್ನು ಅಲ್ಲಾಹು ಗೌರವಿಸಿ ಅದಕ್ಕೆ ಬರಕತ್ ನೀಡಿದ . ಅದನ್ನು ಮಖಾಂ ಇಬ್ರಾಹಿಂ ಎಂದು ಖುರ್‌ಆನ್ ಕರೆದಿದೆ.

ಅದರ ಹಿಂದೆ ನಮಾಝ್ ಮಾಡಲು ಸುನ್ನತ್ತಿದೆ.

ಒಬ್ಬ ಪ್ರವಾದಿಯ ಕಾಲಿನ ಗುರುತಿಗೆ ಇಷ್ಟೊಂದು ಮಹತ್ವ ಇರುವಾಗ,

ಅವರ ಶರೀರಕ್ಕೆ ಎಷ್ಟೊಂದು ಮಹತ್ವವಿರಬೇಡ ? 

ಎಷ್ಟೊಂದು ಬರಕತ್ ಇರಬೇಡ ?

ಅದನ್ನೆ ಸುನ್ನೀಗಳು ಮಾಡುತ್ತಿರುವುದು.

ಮಖಾಂ,ದರ್ಗಾ ಬೇರೆ ಬೇರೆಯಲ್ಲಾ.  ಚಿಂತಿಸಲು ಸ್ವಲ್ಪ ಬುದ್ದಿಯಿದ್ದರೆ ಸಾಕು.

ಆದರೆ ನೂತನವಾದಿಗಳಿಗೆ ಮಹಾತ್ಮರೆಂದರೆ ಅಲರ್ಜಿ.

ಅವರ ಅನುಸ್ಮರಣೆ ಅಸಹ್ಯ.

ಕರಾಮತ್ ಅಂದರೆ ಹೊಟ್ಟೆಉರಿ

ಪಾಶ್ಚಾತ್ಯ, ಯಹೂದಿ, ನಾಸ್ತಿಕರ ಇಂಗಿತಕ್ಕೆ ಅನುಸಾರ ಇಸ್ಲಾಮನ್ನು ಬದಲಿಸಲು ಹೊರಟ ಸಲಫಿಗಳು,

ಮೊದಲು ಮಾಡಿದ ಕೆಲಸ ಮಹಾತ್ಮರ ಚಿಹ್ನೆ, ಗುರುತುಗಳನ್ನು ಅಳಿಸಿ ಹಾಕಿದ್ದು,

ಆದ್ದರಿಂದಲೇ ಸಲಫಿಸಂನ ಸ್ಥಾಪಕ ಮೊತ್ತ ಮೊದಲು ಮಾಡಿದ ಕೆಲಸ,

ಮಕ್ಕಾ, ಮದೀನಾದಲ್ಲಿದ್ದ ಪ್ರವಾದಿ ﷺ ರವರ ಮತ್ತು ಸ್ವಹಾಬಿಗಳ ಗುರುತುಗಳನ್ನು ಸರ್ವ ನಾಶ ಮಾಡಿದ್ದು..

ಇಂದಿಗೂ ಸಲಫಿಸಂ ಜೀವಿಸುವುದು ಇಂತಹ ನಾಸ್ತಿಕ ಸಿದ್ದಾಂತಗಳಿಂದ.

ತಮ್ಮ ಬುದ್ದಿಗೆ ತೋಚಿದ್ದನ್ನು ಹೇಳುವುದು. ಅಲ್ಲದವುಗಳನ್ನು ತಿರಸ್ಕರಿಸುವುದು.

ಮೊದಮೊದಲು ಇಮಾಮರನ್ನು ವಿರೋಧಿಸಿದರು.

ಇದೀಗ ಹದೀಸ್ ನಿಷೇಧಿಸ ತೊಡಗಿದ್ದಾರೆ.

ಮುಂದೊಂದು ದಿನ ಖುರ್‌ಆನಿನ ಕೆಲವು ಆಯತ್‌ಗಳನ್ನು ನಿಷೇಧಿಸಬಹುದು.

ಇಸ್ಲಾಮಿನಲ್ಲಿ ನಾಸ್ತಿಕವಾದವನ್ನು ತುರುಕಿಸಿ, ಸಮುದಾಯವನ್ನು ಛಿನ್ನ, ಭಿನ್ನ ಮಾಡಿ, ಪರಸ್ಪರ ಬೈದಾಡುವಂತೆ ಮಾಡಿದ ಕುಖ್ಯಾತಿ ಈ ಸಲಫಿಗಳಿಗೆ ಸಲ್ಲಬೇಕು.

ಧರ್ಮದ ಹೊರಗಿರುವ ನಾಸ್ತಿಕರು ಎಷ್ಟು ಅಪಾಯಕಾರಿಗಳೋ,

ಅಷ್ಟೇ ಅಪಾಯಕಾರಿ

ಧರ್ಮದ ಒಳಗಿರುವ ಈ ಮತ ನಾಸ್ತಿಕರು

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...