Skip to main content

ಮರೆಯಲಾಗದ ಅಪಾರ ಪಾಂಡಿತ್ಯದ ಒಡೆಯ ಶೈಖುನಾ ನೆಲ್ಲಿಕುತ್ತ್ ಉಸ್ತಾದ್

ವಿದ್ಟಾಂಸನ ಮರಣ ವಿಶ್ಟದ ಮರಣ  ಎಂಬ ನುಡಿಯು ಅನುಭಕ್ಕೆ ಬಂದ ದಿನವಾಗಿತ್ತು ಶೈಖುನಾ *ಶೈಖುಲ್ ಹದೀಸ್ ನೆಲ್ಲಿಕುತ್ತುಸ್ತಾದ್* ವಫಾತಾದ ದಿನ.

  ಹಿರಿಯ ವಿದ್ಟಾಂಸ ˌಕೇರಳ ಕಂಡ ವಿದ್ಯೆಯ ಭಂಢಾರˌ   ಕರ್ಮ ಶಾಸ್ತ್ರ ˌಗೋಳ ಶಾಸ್ತ್ರ ಭೂಮಿ ಶಾಸ್ತ್ರ ಮುಂತಾದ ಎಲ್ಲಾ ವಿಷಯಗಳಲ್ಲಿ ಆಳವಾದ ಜ್ಞಾನವಿರುವ ಶೈಖುನಾ  ಉಸ್ತಾದರು ನಮ್ಮನ್ನಗಲಿ ಹತ್ತು ವರ್ಷವಾದರೂ ನೆನಪಿನಂಗಳದಲ್ಲಿ ಮಾಸದೆ ನೆಲೆಯೂರಿದ್ದಾರೆ .

ಉಸ್ತಾದೆಂದರೆ ಎಲ್ಲರಿಗೂ ಅಚ್ಚುಮೆಚ್ಚು ಕಾರಣ ಯಾವ ವಿಷಯದಲ್ಲಿ ತರಗತಿ ಮಂಡಿಸಿದರೂ ಸವಿಸ್ತಾರವಾಗಿ ವಿವರಿಸಿ ಕೊಡುವುದರೊಂದಿಗೆ ಕೇಳುವ ಎಲ್ಲಾ ಪ್ರಶ್ನೆಗಳಿಗೆ ದಿಟ್ಟವಾದ ಉತ್ತರ ಕೊಡುತಿದ್ದರು.

ಸಂಶಯ ನಿವಾರಣೆಯಾಗುವವರೆಗೆ ಉತ್ತರಿಸುತಿದ್ದರು.

*ಜಾಮಿಅ* *ಮರ್ಕಝುಸ್ಸಖಾಫತಿಸ್ಸುನ್ನಿಯ್ಯಾ* ದಲ್ಲಿ

ಶೈಖುನಾ ಉಸ್ತಾದರ ಬಳಿ ಎರಡು ವರ್ಷ ಕಲಿಯಳು ಭಾಗ್ಯ ಲಭಿಸಿದ ನನಗೆ ಉಸ್ತಾದರ ಅರಿವಿನ ಬಗ್ಗೆ ಹೇಳಲು ಅರ್ಹತೆಯಿಲ್ಲವೆಂದು ಚೆನ್ನಾಗಿ ತಿಳಿದಿದೆ ಆದರೂ ಶೈಖುನಾರ ಪಾಂಡಿತ್ಯವನ್ನು ವಿದ್ವಾಂಸ ದಿಗ್ಗಜರೇ ಅಂಗೀಕರರಿಸುತ್ತಾರೆ ಎಂಬುದನ್ನು ಮನವರಿಕೆ ಮಾಡಿದ್ದೇನೆ.

ಉಸ್ತಾದರ ಮಾತೆಂದರೆ 

ಮುತ್ತಿನಂತಹ ಮಾತು

ಆ ಮಾತು ಕೇಳಿದರೆ  ಎಂತಹ ನೀಚರೂ ಒಳಿತಿನೆಡೆಗೆ ಬಗ್ಗತಿದ್ದರು 

ಅವರ ಮಾತಿಗೆ ಪೈಪೋಟಿ ಮಾಡಲು ಹೊರಟರೆ ಅವನು ಸೋತು ಸುಣ್ಣವಾಗುವನೆಂಬುದರಲ್ಲಿ ಸಂದೇಹವಿಲ್ಲ.

 ಕೇಳುಗರ ಅರ್ಹತೆಗೆ ತಕ್ಕಂತೆ ಮಾತಾಡುತಿದ್ದರು.

ಅರವತ್ತು ಮೂರು ವರ್ಷ ದಾಟಿದ ಒಬ್ಬ ಸಾಮಾನ್ಯ ಮನುಷ್ಯನನ್ನು  ಚಾ ಕುಡಿಯಲು ಕರೆದಾಗ ಉಸ್ತಾದರೊಂದಿಗೆ ಅವರು ಹೇಳಿದರಂತೆ  ಪ್ರವಾದಿ (ಸ)ರವರು ಚಾ ಕುಡಿಯಲಿಲ್ಲ ಆದ ಕಾರಣ ನಾನು ಕುಡಿಯುದಿಲ್ಲ

 ತಕ್ಷಣವೇ ಶೈಖುನಾ ಉತ್ತರಿಸಿದರು 

ಹಾಗಾದರೆ ನಿಮ್ಮನ್ನು ಕೊಲ್ಲಬೇಕು ನಿಮಗೆ ಅರವತ್ತು ಮೂರು ವರ್ಷ ದಾಟಿತಲ್ಲವೇ  

ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಂ ಜೀವಿಸಿದ್ದು ಅರವತ್ತ ಮೂರು ವರ್ಷವಲ್ಲವೇ  ....

ಇದನ್ನು ಕೇಳಿದಾಗ ಆ ಮನೀಷ್ಯನು ಇಂಗು ತಿಂದ ಮಂಗನಂತಾದರು 

 ಕೇಳುಗರು ನಗಳಾರಂಭಿಸಿದರು.

 ಶೈಖುನಾ   ತರಗತಿ ನಡೆಸಲು ಬಂದರೆ ವಿದ್ಯಾರ್ಥಿಗಳಿಗೆ   

ಮನದಲ್ಲಡಗಿರುವ ಸಂದೇಹಗಳನ್ನು  ನೀಗಿಸಲಿರುವ ಹಂಬಲ

ಅಗತ್ಯವಾದ ಹಾಸ್ಯಗಳೊಂದಿಗಿರುವ ಸ್ಪುಟವಾದ ರೀತಿಯಲ್ಲಿ ಪುರಾವೆಗಳ ಆಧಾರದಲ್ಲಿ ವಿವರಿಸುವಾಗ ಎಲ್ಲರಿಗೂ ಸ್ಪಷ್ಟವಾಗಿ ತಿಳಿಯುತಿತ್ತು

ಅವರ ಆಳವಾದ ಅಧ್ಯಯನ ವಿದ್ಟಾಂಸರ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗುತಿತ್ತು

ಎಂತಹ ಪ್ರಶ್ನೆಗಳು ಬಂದರೂ ದಿಟ್ಟ ಉತ್ತರ ನೀಡುವ ಉಸ್ತಾದರ ಶೈಲಿಯು ಜ್ಞಾನದಾಹಿಗಳಿಗೆ ಮೆಚ್ಚುಗೆಯಾಗುತಿತ್ತು

ಒಂದು ವಿಷಯವನ್ನು  ಮನಮುಟ್ಟುವ ರೀತಿಯಲ್ಲಿ ವಿವರಿಸುವಾಗ ಸಾಮಾನ್ಯ ಜನರಿಗೂ ಮನವರಿಕೆ ಯಾಗುತಿತ್ತು

ಶೈಖುನಾ ಪೇರೋಡ್ ಉಸ್ತಾದ್   ಸಹಿತವಿರುವ ಅಗ್ರಗಣ್ಯ  ನಾಯಕರ ಉಸ್ತಾದರಾದ ಶೈಖುನಾ  ಮರೆಯಲಾಗದ ನಿಧಿಯಾಗಿದ್ದಾರೆ

ಯಾವ ಸಮಸ್ಯೆಗೂ ಪರಿಹಾರ ಕೊಡಬಲ್ಲ ಶೈಖುನಾ ಉಸ್ತಾದರ 

ಸಾಮರ್ಥ್ಯವನ್ನು ಮೆಚ್ಚಲೇ ಬೇಕು

ಅವರ ವೀದ್ಯೆಯು ಕೇರಳಕ್ಕೆ ಮಾತ್ರ ಸೀಮಿತ ಗೊಳ್ಳದೆ ಉತ್ತರ ಭಾರತದಲ್ಲೂ ಪ್ರಭಬೀರಿದೆ  

ಸಂಘಟನಾ ಚತುರರಾದ ಉಸ್ತಾದರು  ಸುನ್ನಿ ಸಂಘಟನೆಗಳಿಗೆ ಬೆನ್ನೆಲುಬಾಗಿದ್ದರು

ಅವರ ಬರಕತ್ ನಿಂದ ಅಲ್ಲಾಹು  ಉಪಕಾರವಿರುವ ವಿದ್ಯೆ ನೀಡಲಿ 

ಆಮೀನ್

ರಬೀಉಲ್ ಆಖರ್ 29 ಶೈಖುನಾರ ವಫಾತ್ ದಿನ

ಎಲ್ಲರೂ ಉಸ್ತಾದರ ಹೆಸರಲ್ಲಿ ಖುರ್ಆನ್ ಪಠಿಸಿ ದಿಕ್ರ್ ಹೇಳಿ ದುಹಾ ಮಾಡಿ

ಅಲ್ಲಾಹು ಅವರ ದರಜ ಉನ್ನತಿಗೊಳಿಸಲಿ  ಆಮೀನ್

*ಟಿ ಎಂ ಸಖಾಫಿ ತಂಬಿನಮಕ್ಕಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...