ಹೊ, ಅಂದೊಮ್ಮೆ ನನ್ನ ಜೀವನದಲ್ಲಿ ಮರೆಯಲಾಗದ ದಿನವಾಗಿತ್ತದು
Author - Asim Ullal
ಇನ್ನು ಮಹಾನರ ಮರಣ ವಾರ್ತೆ ಕೇಳಿ ಕಾರಿನಲ್ಲಿ ಹೊರಟ ನಮ್ಮ ಪರಿಸ್ಥಿತಿ ಹೇಳಿ ತೀರದು, ಇಡೀ ಸುನ್ನೀ ಸಮೂಹವೇ ಕಣ್ಣೀರ ಕಡಲಾಗಿತ್ತದು. ಒಂದು ಕಡೆ ಎಟ್ಟಿಕ್ಕುಳಂ ಸಮುದ್ರದ ಅಲೆಗಳು , ಮಗದೊಂದೆಡೆ ಜನಸ್ತೋಮವು ಪರಸ್ಪರ ಒಂದಾದ ಅನುಭವ. ರಾತ್ರಿ 10ಗಂಟೆಗೆ ಮಹಾನರನ್ನು ಅಂತಿಮವಾಗಿ ಒಂದು ನೋಟ ನೋಡಬೇಕೆಂಬ ಮಹದಾಸೆಯಿಂದ ಸರದಿ ಸಾಲಿನಲ್ಲಿ ನಿಂತ ನಾವು, ಸುಬ್ಹಾನಲ್ಲಾಹ್ ಬೆಳಿಗ್ಗೆ ಸುಬಹಿ ಬಾಂಗ್ ಸಮಯ ಮಹಾನರ ಸಾನಿಧ್ಯಕ್ಕೆ ತಲುಪಿ ಕೊನೆಯ ಬಾರಿ ಹತ್ತಿರದಿಂದ ಮುಖಪ್ರಸನ್ನ ವದನವನ್ನೊಮ್ಮೆ ನೋಡಿದೆನು.
7ವರ್ಷದ ಮೊದಲು, ಪ್ರಥಮ ಪಿಯುಸಿ ಶೈಕ್ಷಣಿಕ ವರ್ಷದ ಅಧ್ಯಯನದ ಸಮಯ. ಮಧ್ಯಾಹ್ನ ಗರಬಡಿದಂತೆ ಆ ವಾರ್ತೆ ಕಿವಿಗಪ್ಪಳಿಸಿತು. ಜೀವನದಲ್ಲಿ ಕೇಳಲು ಇಚ್ಚಿಸದ ವಾರ್ತೆಯಾದರೂ ಅಲ್ಲಾಹನ ತೀರ್ಮಾನ ಬಂದೆರಗಿತ್ತು. ಅದೇ ತಾಜುಲ್ ಉಲಮಾ ವಫಾತ್ ಆದ ವಾರ್ತೆ. ಇನ್ನಾಲಿಲ್ಲಾಹಿ ವ ಇನ್ನಾ ಇಲಹಿ ರಾಜಿಹೂನ್.
ತಾಜುಲ್ ಉಲಮಾರನ್ನು ನೇರವಾಗಿ ದೂರದಿಂದ ಕಂಡಿದ್ದೇನೆಯಾದರು ಸಾಮಿಪ್ಯವನ್ನು ತಲುಪಿ ಭೇಟಿಯಾದ ಅನುಭವ ಅದಕ್ಕಿಂತ ಮೊದಲು ನೆನಪಿಲ್ಲ, ಕಾರಣ ಆ ಮಹಾ ವ್ಯಕ್ತಿತ್ವದ ಮಾತುಗಳು ವೀಡಿಯೋಗಳ ಮೂಲಕವೇ ನೋಡುವಾಗ ಮೈ ಜುಮ್ಮೆನಿಸುತ್ತಿತ್ತು. ಮುಂದೆ ನಿಂತುಕೊಳ್ಳುವ ಧೈರ್ಯ ಇರಲಿಲ್ಲ. ಆದರೆ ಸಣ್ಣ ಪ್ರಾಯವಿರುವಾಗ ಮಹಾನರ ಮುಂದೆ ನಿಂತಿರುವ ಅವಕಾಶ ಸಿಕ್ಕಿರಬಹುದಾದರೂ ಅದನ್ನು ಸ್ವಂತ ವಾಗಿ ನೆನಪಿಸಿ ಮೆಲುಕು ಹಾಕುವ ನೆನಪಿನ ಶಕ್ತಿ ಹೊಂದುವ ಪ್ರಾಯವಾಗಿರಲಿಲ್ಲ ಅದು.
ಆದರೆ ನಮ್ಮ ಗೆಳೆಯರು, ಹಿರಿಯರು, ಬಂದು ಬಳಗದವರ ಮಾತುಗಳೂ, ನಡೆ ನುಡಿಗಳೂ ಎಲ್ಲವೂ ಅಲ್ಲಾಹನ ಭಯದೊಂದಿಗೆ ಜೀವಿಸಲು ತಾಜುಲ್ ಉಲಮಾ ಉಳ್ಳಾಲದಲ್ಲಿ ಇದ್ದಾರೆಂಬ ಒಂದು ಕಾರಣ ಸಾಕಿತ್ತು. ಅದೇನು, ಆವೇಶವೋ ಮಹಾನರ ಪ್ರತಿ ನಡೆಗಳನ್ನು ,ನುಡಿಗಳನ್ನು ಸ್ಮರಿಸುವಾಗ ಅಲ್ಲಾಹನೇ ಬಲ್ಲ.
ಅಲ್ಲಾಹನ ಭಯ ಮನಸ್ಸಲ್ಲಿ ಮೂಡಿಸುವಲ್ಲಿ ತಾಜುಲ್ ಉಲಮಾರ ಮಾತುಗಳು ವೀಡಿಯೋಗಳ ಮೂಲಕ ವೀಕ್ಷಿಸಿದರೆ ಸಾಕಿತ್ತು. ಹಲವರು ಹೇಳುವುದನ್ನು ಕೇಳಿದ್ದೆ "ತಾಜುಲ್ ಉಲಮಾ ಗೌರವಾಧ್ಯಕ್ಷರಾಗಿ ರುವ ಮೊಹಲ್ಲಾಗಳ ಮಹಾಸಭೆಗೆ ತಾಜುಲ್ ಉಲಮಾ ಬರುವ ಅಗತ್ಯವಿರಲಿಲ್ಲ, ಮಹಾನರು ಉಳ್ಳಾಲದಲ್ಲಿ ಇದ್ದಾರೆ ಎಂಬ ಒಂದು ಕಾರಣ ಸಾಕಿತ್ತು, ಮಹಾಸಭೆಗಳು ಸುಸೂತ್ರವಾಗಿ ನಡೆಯಲು. ಅಲ್ಲಾಹನನ್ನು ಮಾತ್ರ ಭಯಪಟ್ಟ ಆ ವ್ಯಕ್ತಿತ್ವದ ಮುಂದೆ ಯಾವ ಶ್ರೀಮಂತನೂ, ಅಧಿಕಾರಿಯೂ, ರಾಜಕಾರಣಿಯೂ ಮಂಡಿಯೂರುತ್ತಿದ್ದುದು ಇತಿಹಾಸ.
ಅಲ್ಲಾಹನ ಹೊರತಾದ ಜನರ ಭಯ ಎಂಬ ಕಲ್ಪನೆ ಆ ಮಾಹಾ ಮನುಷ್ಯಿಯ ಚಿಂತನೆಗಳಲ್ಲೂ ಇರಲಿಲ್ಲ. ಆ ಭಯ ಇದ್ದಿದ್ದರೆ ಅಂದು ಕೇರಳದ ಬಲಿಷ್ಠ ರಾಜಕೀಯ ಶಕ್ತಿಯಾಗಿದ್ದ ಮುಸ್ಲಿಂ ಲೀಗ್ ವಹ್ಹಾಬಿಗಳ ಆಶ್ರಯ ತಾಣವಾಗುವ ಸನ್ನಿವೇಶ ಸೃಷ್ಟಿಯಾದಾಗ ಸೆಟೆದೆದ್ದು ನಿಲ್ಲುವ ಧೈರ್ಯ ತೋರುತ್ತಿರಲಿಲ್ಲ. ಯಾರಿಗೆ ತಾನೆ ಸಾಧ್ಯವಿದೆ. ಲೋಕಸಭೆ, ವಿಧಾನಸಭೆ ಯಲ್ಲಿ ಸದಸ್ಯ ಬಲವನ್ನು ಹೊಂದಿರುವ ಶಕ್ತಿಯನ್ನು ಎದುರು ಹಾಕಿಕೊಳ್ಳುವ ಧೈರ್ಯ. ಆದರೆ ತಾಜುಲ್ ಉಲಮಾರಿಗೆ ತನ್ನ ಈಮಾನಿನ ಶಕ್ತಿಯ ಮುಂದೆ ಅದು ವಿಚಾರವೇ ಆಗಲಿಲ್ಲ. ನೆನಪಿಡಿ,'ಅಂದು ಸುನ್ನೀ ಸಂಘಟನೆ ಇಂದಿನ ರೀತಿಯ ಯಾವುದೇ ಬಲಿಷ್ಠತೆ, ಶಕ್ತಿ, ಸಾಮರ್ಥ್ಯ ಇಲ್ಲದ ಕಾಲವಾಗಿತ್ತು.'
ಆದರೆ ಮಹಾನರ ಕುರಿತು ಏನಾದರೂ ಸಂಘಟನಾತ್ಮಕ ,ಆದರ್ಶ ಭಿನ್ನತೆಯ ವ್ಯಕ್ತಿಗಳೂ ಕೂಡಾ ಮಹಾನರ ಮುಂದೆ ನಿಂತು ವಿರೋಧಿಸುವ ಸಾಮರ್ಥ್ಯವನ್ನು ತೋರಿಸುತ್ತಿರಲಿಲ್ಲ. ಮಹಾನರ ಜೀವಿತ ಕಾಲದಲ್ಲಿ ಪರಿಸರ ಪ್ರದೇಶದ ಖಾಝಿಗಳು ಕೂಡಾ ಮಹಾನರ ಸಾನಿಧ್ಯ ತಲುಪಿದಾಗ ವಿನಯತೆ ಮತ್ತು ಗೌರವ ಸೂಚಿಸುತ್ತಿದ್ದರು. ಮತ್ತು ಮಹಾನರ ಸುತ್ತ ಮುತ್ತ ಪ್ರದೇಶಗಳ ಧೀನೀ ಚಟುವಟಿಕೆಗಳಿಗೆ ನಾಯಕತ್ವ ನೀಡಲು ಹಿಂಜರಿಯುತ್ತಿದ್ದರು.
ಯಾರೊಂದಾಗೂ ಅತಿಯಾದ ಬೆರೆಯುವಿಕೆ ಮಹಾನರು ಬಯಸುತ್ತಿರಲಿಲ್ಲ. ಸದಾ ಇಬಾದತ್ ಗಳಲ್ಲಿ ತಲ್ಲೀನರಾಗುತ್ತಿದ್ದ ಮಹಾನರು, ತನ್ನ ಇಲ್ಮ್ ಪ್ರಸರಣ ಮತ್ತು ಇಬಾದತ್ ಗಳಿಗೆ ಅಡಚಣೆಯಾಗುವ ಕೆಲಸ ಕಾರ್ಯಗಳಿಂದ ,ಸಂಪರ್ಕಗಳಿಂದ ಅಂತರ ಕಾಯ್ದುಕೊಂಡಿದ್ದರು. ಸಧಾ ಕುರ್ ಆನ್ ಪಾರಾಯಣ ಮಹಾನರ ದಿನಚರಿಯಾಗಿತ್ತು. ರಮಳಾನ್ ತಿಂಗಳಲ್ಲಿ 85ವರ್ಷ ದಾಟಿದ ಬಳಿಕವೂ ಖುರ್ ಆನ್ ಖತಂ 10ಕ್ಕಿಂತ ಹೆಚ್ಚು ಪೂರ್ಣ ಗೊಳಿಸಲು ಸಾಧ್ಯವಾಗದ್ದನ್ನು ಹೇಳಿ ದುಃಖಿಸುತ್ತಿದ್ದ ಶೈಖುನಾರನ್ನಾಗಿತ್ತು ಈ ಸಮೂಹ ಕೊನೆಯ ಸಮಯಗಳಲ್ಲಿ ಕಂಡದ್ದು.
ಈ ರೀತಿ ಶೈಖುನಾ ರನ್ನು ವಿವರಿಸುತ್ತಾ ಓದರೆ ದಿನಗಟ್ಟಲೆ, ಪುಟಗಟ್ಟಲೆ ಬರೆಯುತ್ತಲೇ, ಮದ್ಹ್ ಮಾಡುತ್ತಲೇ ಹೋಗಬಹುದು. ಇಲ್ಲೆಲ್ಲೂ ಮಹಾನರ ಇಲ್ಮ್ ನ ಆಳ, ಪಾಂಡಿತ್ಯ, ಶಿಷ್ಯ ವೃಂದ, ಅವ್ಲಿಯಾಗಳೊಂದಿಗಿನ ಸಂಪರ್ಕ, ಮಹಾನರ ನಾಲಿಗೆಯ ಒಂದು ಮಾತುಗಳಿಂದ ಸಮೂಹ ಕಂಡ ಅದ್ಭುತಗಳು ಯಾವುದೂ ವಿವರಿಸಿಲ್ಲ.
ಇನ್ನು ಮಹಾನರ ಮರಣ ವಾರ್ತೆ ಕೇಳಿ ಕಾರಿನಲ್ಲಿ ಹೊರಟ ನಮ್ಮ ಪರಿಸ್ಥಿತಿ ಹೇಳಿ ತೀರದು, ಇಡೀ ಸುನ್ನೀ ಸಮೂಹವೇ ಕಣ್ಣೀರ ಕಡಲಾಗಿತ್ತದು. ಒಂದು ಕಡೆ ಎಟ್ಟಿಕ್ಕುಳಂ ಸಮುದ್ರದ ಅಲೆಗಳು , ಮಗದೊಂದೆಡೆ ಜನಸ್ತೋಮವು ಪರಸ್ಪರ ಒಂದಾದ ಅನುಭವ. ರಾತ್ರಿ 10ಗಂಟೆಗೆ ಮಹಾನರನ್ನು ಅಂತಿಮವಾಗಿ ಒಂದು ನೋಟ ನೋಡಬೇಕೆಂಬ ಮಹದಾಸೆಯಿಂದ ಸರದಿ ಸಾಲಿನಲ್ಲಿ ನಿಂತ ನಾವು, ಸುಬ್ಹಾನಲ್ಲಾಹ್ ಬೆಳಿಗ್ಗೆ ಸುಬಹಿ ಬಾಂಗ್ ಸಮಯ ಮಹಾನರ ಸಾನಿಧ್ಯಕ್ಕೆ ತಲುಪಿ ಕೊನೆಯ ಬಾರಿ ಹತ್ತಿರದಿಂದ ನೋಡುವ ಮುಖಪ್ರಸನ್ನ ವದನವನ್ನೊಮ್ಮೆ ನೋಡಿದೆನು.
ನಮಗೆ ಅಧ್ಭುತಗಳಾಗಿತ್ತು ಅಂದಿನ ಪ್ರತಿ ನೋಟಗಳು, ಹೋ, ಅದೇನು ಸಾಮರ್ಥ್ಯವೋ, ಶಕ್ತಿಯೋ ಅಲ್ಲಾಹನೇ ಬಲ್ಲ. ಕಾಳಿಲ್ಲದ ಅಂಗವಿಕಲರೂ, 15ಕಿಲೋಮೀಟರ್ ಆಚೆಗಿನ ಪಯ್ಯನ್ನೂರ್ ರೈಲ್ವೈ ಸ್ಟೇಷನ್ ನಿಂದ ನಡೆದುಕೊಂಡು ಎಟ್ಟಿಕ್ಕುಳಂ ಕಡೆ ಬರುತ್ತಿದ್ದ ಆ ದೃಶ್ಯವಂತೂ ಮನಕಳಕುವಂತಿತ್ತು. ಕಾಸರಗೋಡಿನಿಂದಲೇ ಎಲ್ಲಾ ರಸ್ತೆಗಳ ವಾಹನ ದಟ್ಟನೆಯಿಂದ ರಸ್ತೆಗಳು ಜನನಿಭಿಡವಾದ ಸನ್ನಿವೇಶ. ಗಂಟೆಗಟ್ಟಲೆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಗೆ ಸಿಲುಕಿಕೊಂಡ ಪರಿಸ್ದಿತಿ. ಸುಬ್ಹಾನಲ್ಲಾಹ್, ರಾತ್ರಿ ಸರದಿ ಸಾಲಿನಲ್ಲಿ ನಿಂತ ಮೇಲಿನ ಪರಸ್ದಿತಿ ಹೇಳ ತೀರದು. ಎಲ್ಲಿ ಅನಾಹುತ ಸಂಭವಿಸುವುದೋ ಎಂಬ ಭಯ ಕಾಡುತ್ತಿತ್ತು. ಕಿಲೋಮೀಟರ್ ಗಟ್ಟಲೆ ನೂಕುನುಗ್ಗಲು ಪರಿಸ್ದಿತಿಯಾಗಿತ್ತು. ಹಲವು ಬದಲಿ ರಸ್ತೆಗಳ ವ್ಯವಸ್ದೆ ಮಾಡಿಯೂ ಜನರನ್ನು ನಿಯಂತ್ರಣಕ್ಕೆ ಕೊಂಡೊಯ್ಯಬಲ್ಲ ಪರಿಸ್ಥಿತಿ ಅಲ್ಲಿ ಇರಲಿಲ್ಲ. ಸಾಧ್ಯವೂ ಇರಲಿಲ್ಲ. ಜನರ ಪ್ರವಾಹದ ಪರಿಸ್ಥಿತಿ ಕಂಡು ಸ್ದಳೀಯ ದೇವಸ್ದನಾದ ಜಾತ್ರೆಯನ್ನು ಹಿಂದೂ ಬಾಂಧವರು ನಿಲ್ಲಿಸಿದರು. ಪ್ರತಿ ಹಿಂದೂ ,ಕ್ರೈಸ್ತ ಧರ್ಮ ಭಾಂದವರು ತಮ್ಮ ಮನೆಗಳನ್ನು ಮುಸ್ಲಿಂ ಸಹೋದರರಿಗೆ ಪ್ರಾರ್ಥನೆಗಾಗಿ ಬಿಟ್ಟುಕೊಟ್ಟರು. ಎಲ್ಲಾ ಹಿಂದೂ ಬಾಂಧವರು ಅಂದಿನ ರಾತ್ರಿಯ ನಿದ್ದೆಯನ್ನು ಬಿಟ್ಟು ತಮ್ಮ ಮನೆಯ ಮುಂಭಾಗ ದಲ್ಲಿ ಜನರಿಗೆ ಕುಡಿಯಲು ನೀರು ವ್ಯವಸ್ಥೆ ಕಲ್ಪಿಸಿದರು. ತಾವೇ ನಿಂತು ಬೆಳಿಗ್ಗೆಯವರೆಗೆ ಸ್ವಯಂ ಸೇವಕರಾದರು. ಇಡೀ ಜಗತ್ತೇ ಅನಾಥವಾದ ಭಾವನೆಗೆ ಸಿಲುಕಿದ ಜನರ ಕಣ್ಣೀರ ಕಟ್ಟೆ ಹೊಡೆದಿತ್ತು. ಹಲವು ಹಿರಿಯ 80ದಾಟಿದ ವಯಸ್ಕರೂ ತಮ್ಮ ಅನಾರೋಗ್ಯ, ವಾರ್ಧಕ್ಯವನ್ನು ಲೆಕ್ಕಿಸದೆ ಅಂದು ಧಾವಿಸಿದ್ದರು. ಹೇಗೆ ಬರೆಯಲಿ, ಅನುಭವ, ಅಂತಾರಾಳವನ್ನು ಕೆಣಕಿದಷ್ಟು ಆ 7ವರ್ಷ ಕೊನೆಯದಾಗಿ ಕಂಡ 95ವರ್ಷ ದಾಟಿದ್ದ ಮುಗ್ಧ ಮಗುವಿನ ಮುಖದಂತಿದ್ದ ಮಹಾನರ ಅಂತಿಮ ವದನ ಕಣ್ಣ ಮುಂದೆ ದರ್ಶಿಸುತ್ತಿದೆ.

Comments