ಕಾಂತಪುರಂ ಉಸ್ತಾದ್ ಕೋಟ್ಯಂತರ ರೂಪಾಯಿ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಾರೆ ಎಂದು ನಾಡಿನುದ್ದಗಲಕ್ಕೂ ಹೇಳಿ ನಡೆಯುವವರೊಂದಿಗೆ.
ಸುಲ್ತಾನುಲ್ ಉಲಮಾ ಉಸ್ತಾದರು ತನ್ನ ಅತಿದೊಡ್ಡ ನಿಧಿಯಾದ ತಮ್ಮ ಶಿಷ್ಯರಿಗೆ ಮರ್ಕಝಿನಲ್ಲಿ ಹೇಳಿದ ಹೃದಯ ಕರಗಿಸುವ ಮಾತುಗಳು ...
ನನಗೆ ಒಳ್ಳೆಯ ಅಡಿಕೆ ತೋಟವಿದೆ. ಅದರಿಂದ ಪ್ರತೀ ವರ್ಷ ಅಡಿಕೆ ಮಾರಿ ಉತ್ತಮ ಸಂಖ್ಯೆ ನನಗೆ ಲಭಿಸುತ್ತಿತ್ತು. ಈ ಬಾರಿ ನನಗೆ 40,000 ಸಿಕ್ಕಿತು, ಕಳೆದ ಬಾರಿ ನನಗೆ 30,000 ಸಿಕ್ಕಿತು ಮತ್ತು ಅದರ ಹಿಂದಿನ ವರ್ಷ ನನಗೆ 50,000 ಸಿಕ್ಕಿತು. ಇದು ಮಾಸಿಕ ಆದಾಯವಲ್ಲ, ಇದು ಒಂದು ವರ್ಷದ್ದಾಗಿದೆ. ನನ್ನ ಬಳಿ ಒಂದು ಅಂಗಡಿ ಇದೆ ಮತ್ತು ಅದರಿಂದ ತಿಂಗಳಿಗೆ ನಾಲ್ಕು ಸಾವಿರ ರೂಪಾಯಿ ಸಿಗುತ್ತದೆ. ಇದರ ಹೊರತು ನನ್ನದೆಂದು ಹೇಳುವ ಯಾವುದೊಂದೂ ನನ್ನ ಬಳಿ ಇಲ್ಲ. ನನಗೆ ಅನಾರೋಗ್ಯ ಉಂಟಾಗಿ ಹಾಸಿಗೆ ಹಿಡಿದರೆ ಚಿಕಿತ್ಸೆಗಾಗಿಯೂ ನನ್ನ ಬಳಿ ಹಣ ಇಲ್ಲ. ಮಾಸಿಕ ಮತ್ತು ವಾರ್ಷಿಕವಾಗಿ ಸಿಗುವ ಈ ಆದಾಯ ನನಗೆ ಹೇಗೆ ಸಾಕಾಗಬಹುದು. ನಾನು ಶುಕ್ರವಾರ ಮನೆಯಲ್ಲಿದ್ದಾಗ ಮನೆಗೆ ಬರುವವರಿಗೆ ಆಹಾರವನ್ನು ನೀಡಲು ಅಥವಾ ಬಡವರು ನನ್ನನ್ನು ಕೇಳಿದಾಗ ನೀಡಲು ಈ ಸಂಖ್ಯೆ ಸಾಕಾಗುವುದಿಲ್ಲ. ಮುತಅಲ್ಲಿಮರು, ಅನಾಥರು ಮತ್ತು ಇತರ ಧಾರ್ಮಿಕ ಚಟುವಟಿಕೆಗಳಿಗಾಗಿ ನಾನು ಸಾಕಷ್ಟು ದೇಣಿಗೆ ಪಡೆದಿದ್ದೇನೆ. ಆದರೆ ಇಲ್ಲಿಯವರೆಗೆ ನನ್ನ ಅಗತ್ಯಗಳಿಗಾಗಿ ನಾನು ಸಂಗ್ರಹಿಸಿದ ದೇಣಿಗೆಯಿಂದ ಐದು ಪೈಸೆ ಕೂಡ ತೆಗೆದುಕೊಂಡಿಲ್ಲ. ಮತ್ತು ಇನ್ನು ಮುಂದೆಯೂ ತೆಗೆದುಕೊಳ್ಳುವುದಿಲ್ಲ. ಮತ್ತು ಈ ಸಂಗ್ರಹಗಳಿಂದ ನಾನು ಒಂದು ಪೈಸೆಯನ್ನೂ ಕಮೀಷನ್ ರೂಪದಲ್ಲಿ ಕೈ ವಶ ಮಾಡಿಲ್ಲ. ಕಮಿಶನ್ ಮಾತ್ರ ತೆಗೆದುಕೊಂಡಿದ್ದರೆ ನಾನು ಇಂದು ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಿದ್ದೆ. ಅಲ್ಲಾಹನಿಗೆ ಇದೆಲ್ಲವೂ ತಿಳಿದಿದೆ .. ಬಹಳಷ್ಟು ಜನರು ಮರ್ಕಝ್‌ಗಾಗಿ, ಮಕ್ಕಳಿಗಾಗಿ ಎಂದು ಹೇಳಿ ನನಗೆ ಹಣವನ್ನು ನೀಡುತ್ತಾರೆ. ಇದು ಉಸ್ತಾದರಿಗೆ ಎಂದು ಹೇಳಿ ನನಗೆ ಕೊಟ್ಟ ಹಣವನ್ನು ದಾನ ನೀಡಲು ಮತ್ತು ನನ್ನ ಸಣ್ಣ ಪುಟ್ಟ ಅಗತ್ಯಗಳಿಗಾಗಿ ಬಳಸುತ್ತೇನೆ.
ಮತ್ತು ಕೆಲವರು ಮೋಸ ಮತ್ತು ವಂಚನೆಯಿಂದ ದುನಿಯಾವನ್ನು ಹಣಕ್ಕಾಗಿ ಮಾರಿದ್ದಾರೆ ಎಂದು ಹೇಳುವುದನ್ನು ನಾನು ಕೇಳಿದಾಗ ನನಗೆ ಅವರ ಮೇಲೆ ಯಾವುದೇ ದೂರುಗಳಿಲ್ಲದಿದ್ದರೂ ನನಗೆ ದುಃಖವಾಗುತ್ತದೆ.
ನೀವು ಇಹಕ್ಕಾಗಿ ಬದುಕಬಾರದು. ನೀವು ಅಲ್ಲಾಹನ ಧರ್ಮಕ್ಕಾಗಿ ಬದುಕಬೇಕು. ಆ ಸಮಯದಲ್ಲಿ ನಿಮಗೆ ಅಗತ್ಯವಿರುವಾಗ ಅಲ್ಲಾಹನು ನಿಮಗೆ ಎಲ್ಲವನ್ನೂ ನೀಡುತ್ತಾನೆ .. ""
ಉಸ್ತಾದ್ ಹೇಳಿದ್ದಕ್ಕೆ ನಾವು ಇನ್ನೂ ಒಂದು ವಿಷಯವನ್ನು ಸೇರಿಸಬೇಕಾಗಿದೆ. ಉಸ್ತಾದ್ 43 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮರ್ಕಝಿನಲ್ಲಿ ಮೊದಲ ಹತ್ತು ವರ್ಷಗಳನ್ನು ಹೊರತುಪಡಿಸಿ ಉಸ್ತಾದ್ ಅವರಿಗೆ ಅರ್ಹವಾದ ಸಂಬಳವನ್ನು ಸಹ ಪಡೆದಿಲ್ಲ!
ನಮ್ಮ ಸುಲ್ತಾನುಲ್ ಉಲಮಾ ಉಸ್ತಾದರಿಗೆ ಅಲ್ಲಾಹನು ಆರೋಗ್ಯದೊಂದಿಗಿನ ದೀರ್ಘಾಯುಷ್ಯ ನೀಡಲಿ ಮತ್ತು ನಮಗೆ ಅವರ ನೆರಳು ಇನ್ನಷ್ಟು ಕಾಲ ದೀರ್ಘಿಸಲಿ. ಆಮೀನ್
ಕನ್ನಡಕ್ಕೆ : ನವಾಝ್ ಸಖಾಫಿ ಉಳ್ಳಾಲ

Comments