ಝಿಯಾರತ್ತ್ ಕೇಂದ್ರ
🍂🍂3⃣3⃣🍂🍂
➖➖➖➖➖➖➖
ಅಲಾಈದ್ದೀನ್ ಹಿಂಸ್ಸಿ (ರ)
ಇಡಿಯಂಙರ, ಕಲ್ಲಿಕೋಟೆ.
➖➖➖➖➖➖➖
اللَّهُمَّ صَلِّ عَلَى سَيِّدِنَا مُحَمَّدٍ
وَعَلَى آلِ سَيِّدِنَا مُحَمَّدٍ
وَبَارِكْ وَسَلِّمْ عَلَيْه
☘☘☘☘☘☘☘
✍ಗಫೂರ್ ಬಾಯಾರ್
〰〰〰〰〰〰〰
ಕೇರಳದ ಕಲ್ಲಿಕೋಟೆ ಜಿಲ್ಲೆಯ ಇಡಿಯಂಙರ ಶೈಖ್ ಮಸ್ಜಿದ್ ಬಹಳಾ ಸುಪ್ರಸಿದ್ದವಾದ ಮಸಿದಿಗಳಲ್ಲೊಂದಾಗಿದೆ.
ಫ್ರಾನ್ಸಿಸ್ ರಸ್ತೆಯ ಇಡಿಯಂಙರ ಎಂಬ ಸ್ಥಳದಲ್ಲಿ ನೆಲೆಗೊಳ್ಳುವ ಶೈಖವರ ಪುಣ್ಯ ಮಖಾಮಿಗೂ ವೈವಿಧ್ಯವಾದ ಸವಿಶೇಷತೆಯೂ ಪುರಾತನ ಇತಿಹಾಸವೂ ಇದೆ.
ರಜಬ್ ತಿಂಗಳ ಪ್ರಥಮ ವಾರದಲ್ಲಿ ಆರಂಭಗೊಳ್ಳುವ
*ಅಪ್ಪವಾಣಿಭ ನೇರ್ಚೆ* ಎಂಬ ಹಸರಿನಲ್ಲಿ ಕೇರಳದಲ್ಲಿ ಅತೀ ಪುರಾತನ ಕಾಲದಿಂದ ಇಂದಿನ ವರೆಗೂ ಬಹಳ ಪ್ರಖ್ಯಾತಿಯು ಮತ್ತು ವೈಶಿಷ್ಟ್ಯತೆಯನ್ನು ಹೊಂದಿದ ಉರೂಸುಗಳಲ್ಲಿ ಒಂದಾಗಿದೆ.
ದೇಹಾ ಭಾಗಗಳ ರೂಪದಲ್ಲಿರುವ ಹಪ್ಪಲಗಳು ತೆಗೆದುಕೊಂಡು ಮಖಾಮಿನಲ್ಲಿ ದಾನ ಕೊಡುವುದರೊಂದಿಗೆ ಕಾಣಿಕೆಯ ರೂಪದಲ್ಲೂ, ಹರಕೆಯ ರೂಪದಲ್ಲೂ ಸಮರ್ಪಣೆ ಮಾಡುವ ಇಲ್ಲಿಯ ನೇರ್ಚೆಯ ವೃತಿರಿಕ್ತ ರೀತಿ ಮತ್ತು ವಾಡಿಕೆ.
ಉರೂಸಿನ ಮೊದಲ ದಿನ ಧ್ವಜಾರೋಹನದ ಮೂಲಕ ಚಾಲನೆಗೊಂಡು ಕೆಲವು ದಿನಗಳವರೆಗೆ ನಡೆಯಲಿರುವ ಉರೂಸಿನಲ್ಲಿ ಮೌಲಿದ್ ಪಾರಾಯಣ, ಖುರ್'ಆನ್ ಪಾರಾಯಣ, ರಾತ್ತಿಬ್'ಗಳು, ಧಾರ್ಮಿಕ ಮತ ಪ್ರವಚನಗಳು, ಅನುಸ್ಮರಣೆ, ಉಲಮಾ ಸಮ್ಮೇಳನ, ಅನ್ನದಾನ, ಮೊದಲಾದ ಕಾರ್ಯಕ್ರಮಗಳಿರುತ್ತದೆ.
ಉರೂಸಿನ ಸಮಾರೋಪ ಸಮಾರಂಭದಂದು ಸಾವಿರಾರು ಜನರು ಒಟ್ಟುಗೂಡುವ ಹಾಗು ದಾರಿಯ ಎರಡು ಭಾಗದಲ್ಲೂ ಕಿಲೋ ಮೀಟರ್'ಗಳಷ್ಟು ಉದ್ದವಿರುವ ಹಪ್ಪಲ ವ್ಯಾಪಾರಗಳು ಕಾಣವುದು ಒಂದು ವ್ಯತ್ಯಾಸ್ತ ಅನುಭವವಾಗಿದೆ.
ಸರಿ ಸುಮಾರು 500 ವರ್ಷಗಳ ಮೊದಲು ಹಿಂಸಿ ಎಂಬ ಊರಿನಿಂದ ಕೇರಳದ ಕಲ್ಲಿಕೋಟೆಗೆ ಹಡಗಿನ ಮೂಲಕ ವ್ಯಾಪಾರಕ್ಕಾಗಿ ಬಂದ ಅಲಾವುದ್ದೀನ್ (ರ) ರವರ ಮಗನಾಗಿ ಜನಿಸಿದ ಶೈಖ್ ಶಂಶುದ್ದೀನ್ ಮುಹಮ್ಮದ್ ಇಬ್ನು ಅಲಾಈದ್ದೀನ್ ಹಿಂಸ್ಸಿ (ರ) ರವರು ಬಾಲ್ಯದಲ್ಲೇ ಖುರ್'ಆನ್ ಕಂಠಪಾಠ ಮಾಡಿದ ಮಹಾನವರು ಧಾರ್ಮಿಕ ಪ್ರಭೋಧನಾ ರಂಗದಲ್ಲಿ ಅತ್ಯುನ್ನತಿ ಪ್ರಾಪ್ತಿಸಿ ಜಗದೊಡೆಯನಾದ ಅಲ್ಲಾಹನ ಇಷ್ಟ ದಾಸರಲ್ಲಿ ಒಬ್ಬರಾಗಿದ್ದರು.
ತದನಂತರ ಆತ್ಮೀಯ ರಂಗದ ಪುಣ್ಯ ಹಾದಿಯಲ್ಲಿ ಸಂಚರಿಸಿದರು.
ಜೀವಿತ ಕಾಲದಲ್ಲಿಯೂ, ವಫಾತ್ತಿನ(ಮರಣ) ನಂತರವೂ ಹಲವಾರು ಕರಾಮತ್ತು(ಪವಾಡ)ಗಳು ಪ್ರಕಟವಾಗುತ್ತಿತ್ತು.
ಮಹಾನುಭಾವರು *ಖಾದಿರಿಯ್ಯಾ, ಜಿಶ್ತೀಯಾ* ತ್ವರೀಖತ್ತುಗಾರರಾಗಿದ್ದರು. ಅಲ್ಲದೇ ಅಪಾರವಾದ ಶಿಷ್ಯಂದಿರುಗಳನ್ನು ಹೊಂದಿದ್ದರು.
ಪೋರ್ಚ್ಚುಗೀಸುಗಳ ಹಾಗೂ ವಿದೇಶಿ ಅಧಿಪತ್ಯದ ವಿರುದ್ಧ ದೇಶಕ್ಕಾಗಿ ಹೋರಾಡಲು ತನ್ನ ಆತ್ಮೀಯ ಶಕ್ತಿಯನ್ನು ಮಹಾನವರು ಸಮರ್ಪಿಸಿದ್ದರು.
ಮಖ್ಡೂಮ್ ತಂಙಳ್(ರ)ರವರ ನಿರ್ದೇಶನ ಪ್ರಕಾರ ಆತ್ಮೀಯ ಪ್ರಕಾಶದ ಪ್ರಭೆ ಪಸರಿಸಲು ಮಹಾನುಭಾವರು ಪೊನ್ನಾನಿ, ವೆಳಿಯಂಗೋಡು ಹಾಗು ತಾನೂರು ಎಂಬೀ ಸ್ಥಳಗಳಲ್ಲಿ ಸಂಚರಿಸಿದರು. ಇಸ್ಲಾಮಿನ ಧಾರ್ಮಿಕ ರಂಗದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ ಮಹಾನುಬಾವರ ಜೀವನ ಶೈಲಿಯನ್ನು ಕಂಡು ಅದರ ಮೂಲಕ ಧಾರಾಳ ಜನರು ಇಸ್ಲಾಂ ಧರ್ಮಕ್ಕೆ ಆಹ್ವಾನಿಸಲು ಅದೊಂದು ನಿಮಿತ್ತವೂ ಆಯಿತು.
〰〰〰〰〰〰〰
ಕರಾಮತ್ತು (ಪವಾಡ)ಗಳು
ಅಲಾಈದ್ದೀನ್ ಹಿಂಸಿ(ರ)ರವರು ಒಬ್ಬ ಮಹಾ ಪವಾಡ ಪುರುಷರಾಗಿದ್ದರು. ಅಲ್ಲಾಹನ ದೀನಿಗಾಗಿ ಸೇವನೆಗೈಯ್ಯುವಾಗ ಹಲಾವರು ರೀತಿಯಲ್ಲಿ ಅನೇಕ ಪವಾಡಗಳನ್ನು ಅಲ್ಲಾಹನ ಅನುಗ್ರಹದಿಂದ ಪ್ರತ್ಯಕ್ಷಶಾಕ್ಷಿಗೊಳಿಸಿದ್ದನ್ನು ಕೇರಳದ ಪ್ರಮುಖ ಇತಿಹಾಸ ಚರಿತ್ರೆಗಳಲ್ಲಿ ಉಲ್ಲೇಖವಾಗಿದೆ.
ಒಂದು ದಿನ ರಾಜರ ಆಸ್ಥಾನಕ್ಕೆ ಆಸ್ಥಾನದ ನೌಕರರು ಸಕ್ಕರೆಯ ಮೂಟೆಗಳನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗುತ್ತಿರುವಾಗ ಮಹಾನವರು ಕೇಳಿದರು ಅದೇನು ಚಿಲದೊಳಗಡೆ..?
ಇದು ಉಪ್ಪಾಗಿದೆ. ಎಂದು ನೌಕರರು ತಮಾಷೆ ರೂಪದಲ್ಲಿ ಮರು ಉತ್ತರ ನೀಡಿದರು..!
ಶೈಖವರು ಪ್ರತಿವಾದಿಸಿದರು. ಆಗಲಿ ಉಪ್ಪಾದರೆ ಉಪ್ಪು!!
ನೌಕರರು ಅರಮನೆಗೆ ತಲುಪಿ ಮೂಟೆಗಳನ್ನು ಬಿಚ್ಚಿ ನೋಡಿದಾಗ ಅಲ್ಲೊಂದು ಅದ್ಬುತ ಆಶ್ಚರ್ಯ ಕಾದಿತ್ತು..! ಸಕ್ಕರೆ ತುಂಬಿಸಿ ತಂದಂತಹಾ ಮೂಟೆಗಳೆಲ್ಲ ಉಪ್ಪಾಗಿ ಮಾರ್ಪಟ್ಟಿತ್ತು.
ಕೂಡಲೇ ಸತ್ಯವನ್ನು ಮನಗಂಡ ನೌಕರರು ಬರುವಾಗ ದಾರಿಯಲ್ಲಿ ನಡೆದ ಸಂಭವ ರಾಜರಲ್ಲಿ ಸವಿಸ್ತಾರವಾಗಿ ವಿವರಿಸುತ್ತಾರೆ. ಮಹಾನವರ ಹತ್ತಿರ ನೌಕರರು ಅಪಹಾಸ್ಯ ರೀತಿಯಲ್ಲಿ ಹೇಳಿದ ಉತ್ತರದ ಗೌರವವನ್ನು ಮನಗಂಡ ರಾಜರು ಮತ್ತು ಪರಿವಾರದವರು ಮಹಾನುಬಾವರೊಂದಿಗೆ ಕ್ಷಮೆ ಕೇಳಿದರು ನಂತರ ಉಪ್ಪು ಮೊದಲಿನಂತೆ ಸಕ್ಕರೆಯಾಗಿ ಮಾರ್ಪಾಡಾಯಿತು.
ಪ್ರಸ್ತುತ ಚರಿತ್ರೆಯನ್ನು ಶೈಖುನಾ ಶಂಸುಲ್ ಉಲಮಾ ಈ.ಕೆ. ಉಸ್ತಾದ್ (ನ:ಮ) ರವರು, ಹಿಂಸ್ಸಿ (ರ) ರವರ ನಾಮದಲ್ಲಿ ರಚಿಸಲ್ಪಟ ಮೌಲಿದ್ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
*ನಿಶ್ಚಯ ಅಲ್ಲಾಹನಿಗೆ ಕೆಲವು ಅಡಿಯಾರುಗಳು ಇದ್ದಾರೆ. ಅವರು ಒಂದು ಕಾರ್ಯವನ್ನು ಹೇಳಿದರೆ, ಅಲ್ಲಾಹನು ಅದು ಸತ್ಯ ಮಾಡುತ್ತಾನೆಂಬ ಪ್ರವಾದಿ ﷺ ವಚನವನ್ನು ಅನ್ವರ್ಥ ಮಾಡುದಾಗಿದೆ ಈ ಘಟನೆ.*
ಹಲವಾರು ಕರಾಮತ್ತುಗಳು ಪ್ರಕಟವಾಗುತಿದ್ದ ಮಹಾನವರುಗಳ ಸಾನಿಧ್ಯ ಜಾತಿ ಮತಭೇದವಲ್ಲದೆ ಸಮೂತಿರಿ ರಾಜರು ಒಳಗೊಂಡ ಎಲ್ಲರಿಗೂ ಅನುಗ್ರಹವಾಗಿತ್ತು.
ಹಿಜರಿ ವರ್ಷ 981ರ ರಜಬ್ ತಿಂಗಳ 15'ರಂದು ಅಲಾಈದ್ದೀನ್ ಹಿಂಸ್ಸಿ(ರ)ರವರು ಸೃಸ್ಟಿಕರ್ತನಾದ ಅಲ್ಲಾಹನ ವಿಧಿಗೆ ವಿಧೇಯನಾಗಿ ಇಹಲೋಕವನ್ನು ತೊರೆದು ಪರಲೊಕಕ್ಕೆ ಯಾತ್ರೆಯಾದರು.
ಆತ್ಮೀಯ ಪದವಿಯಲ್ಲಿ ಶೈಖ್ ಅವರ ಸ್ಥಾನವು ಅತುಲ್ಯವಾಗಿತ್ತು. ಎಂಬುದರಲ್ಲಿ ಯಾರಿಗೂ ಪಕ್ಷಾಂತರವಿಲ್ಲ.
ಖುತುಬುಝ್ಜಮಾನ್ ಮಂಬುರಂ ತಂಙಳ್ (ರ)ರವರು ಮಹಾನುಭಾವರ ಸನ್ನಿದಿಗೆ ಬರುತ್ತಿದ್ದ ಸಂಧರ್ಭದಲ್ಲಿ ಬಹು ದೂರ ಮೆಟ್ಟಿಲು ಕಳಚಿಟ್ಟು ನಗ್ನಪಾದದೊಂದಿಗೆ ನಡೆದು ಬಂದಾಗಿತ್ತು ಮಹಾನವರ ಮಖಾಂ ಝಿಯಾರತ್ತ್ ಮಾಡುತ್ತಿದ್ದರೆಂಬುದು ಕೂಡ ಶೈಖ್ ಹಿಂಸ್ಸಿ (ರ) ರವರ ಮಹತ್ವವನ್ನು ತಿಳಿಯಲು ನಮ್ಮನ್ನು ಪ್ರಾಪ್ತ ಮಾಡುತ್ತದೆ.
ಮೊದಲು ಮಹಾನವರ ಮಕ್ಬರ ಕಡಲಿನ ಕಿನಾರೆಯಲ್ಲಾಗಿತ್ತು ನೆಲೆಗೊಂಡಿದದ್ದು.
100 ವರ್ಷ ಕಳೆದ ನಂತರ ಅಲ್ಲಿಗೆ ನೀರು ಹತ್ತಿ ಮಕ್ಬರ ಸಮುದ್ರದ ಪಾಲಾಗುವ ಸ್ಥಿತಿ ಬಂದಾಗ, ಅಂದಿನ ಖಾಝಿಗೂ ಹಾಗು ಊರ ಪ್ರಮುಖರಿಗೂ ಮಹಾನವರ ಕನಸು ನಿರಂತರ ಕಾಣಲಾಯಿತು.
ಕನಸಿನಲ್ಲಿ ಮಹಾನುಭಾವರು ಹೇಳುತ್ತಿದ್ದರು *ನನ್ನನ್ನು ಇಲ್ಲಿಂದ ಮತ್ತೊಂದು ಸ್ಥಳಕ್ಕೆ ಬದಲಿಸಬೇಕು.*
*ಈ ಕನಸಿನ ಕಾರಣದಿಂದ ಮಹಾನವರ ಪುಣ್ಯ ಶರೀರವನ್ನು ಇಂದು ನೆಲೆಗೊಳ್ಳುವ ಇಡಿಯಂಙರಕ್ಕೆ ಸ್ಥಳಾಂತರಿಸುವಾಗ 100 ವರ್ಷದ ಕಾಲದ ಅಂತರವಿತ್ತು. ಆದರೂ ಮಹಾನವರ ಜನಾಝಕ್ಕೆ ಯಾವುದೇ ಬದಲಾವಣೆ ಆಗಿರಲಿಲ್ಲ ಎಂಬುದು ಸತ್ಯ ಸಾಕ್ಷಿಯಾಗಿದೆ.*
ಪುಣ್ಯಾತ್ಮಗಳಲ್ಲಿ ಉನ್ನತ ಪದವಿ ಅಲಂಕರಿಸಿದ ಮಹಾನವರ ಮಕ್ಬರವನ್ನು ಸಂದರ್ಶಿಸಲು ಹಾಗು ಪುಣ್ಯ ಗಳಿಸಲು ಅಲ್ಲಾಹು ನಮಗೆ ತೌಫೀಕ್ ನೀಡಲಿ ಆಮೀನ್.
🛣 ದಾರಿ:👉 ಕಲ್ಲಿಕೋಟೆ ರೈಲು ನಿಲ್ದಾಣದ ಹತ್ತಿರ, ಕುಟ್ಟಿಚಿರ ಇಡಿಯಂಙರ ಶೈಖ್ ಮಸ್ಜಿದ್.
✍ ಗಫೂರ್ ಬಾಯಾರ್.
🌾🌾🌾🌾🌾🌾🌾
Comments