ನೆನಪುಗಳ ಮುಂದೆ ಎರಡು ಹನಿ ಕಣ್ಣೀರು..!!!
ಮಜೀದ್ ಪುತ್ತೂರು ರಿಯಾದ್ ಅವರ ಮುಖಪುಟದ ಗೋಡೆಯಿಂದ..
====================
ಕನ್ನಡ ಅನುವಾದ : ಆಸೀಫ್ ಅಜಿಲಮೊಗರು
ಅಂಬಲಕಂಡಿ ಕೂಟತ್ತೊಡುಕ್ಕ ಮುಹಮ್ಮದ್ ಎಂಬವರ ಪ್ರೀತಿಯ ಪುತ್ರನಾದ *"K.T.C ಅಂಬಲಕಂಡಿ ಅಬ್ದುಲ್ ಖಾದರ್"* ಆದರ್ಶವೆಂಬ ಬಲಿ ಕಲ್ಲುಗಳಿಗೆ ತನ್ನ ಶಿರಸ್ಸನ್ನಿಟ್ಟು ಧೀರ ರಕ್ತ ಶಾಕ್ಷಿ ವಹಿಸಿ ಸುನ್ನೀ ಸಮೂಹ ವೈರಿಗಳ ಕರಾಳ ಹಸ್ತದಿಂದ ವಿಲವಿಲನೇ ಒದ್ದಾಡಿ ತನ್ನ ಪ್ರಾಣವನ್ನೇ ಸುನ್ನೀ ಸಮೂಹಕ್ಕೆ ಸಮರ್ಪಿಸಿದ ಧರ್ಮತ್ಯಾಗಿ. ಆ ಯುವ ಚೇತನದ ನೆನಪುಗಳ ಮುಂದೆ ಅತ್ತು, ಕೂಗಿ, ಕರಗಿ, ನೊಂದು, ಬೆಂದು ಹೋದ ಮನಸ್ಸನ್ನು ಹೃದಯಾಂತರಾಳದಲ್ಲಿ ಅದುಮಿಟ್ಟು ಬೆವರಿಳಿಯುವ ಕರಗಳಲ್ಲಿ ದುಖಃತೃಪ್ತನಾಗಿ ನಾಲ್ಕಕ್ಷರಗಳನ್ನು ನಿಮ್ಮ ಮುಂದಿರಿಸುತ್ತಿದ್ದೇನೆ..
ಕಳೆದ 23 ವರ್ಷಗಳಿಗೆ ಮುಂಚೆ ಇದೇ ರೀತಿಯ ರಮಳಾನಿನ ಉಪವಾಸ ಈದುಲ್ ಫಿತರ್ (ಪೆರ್ನಾಲ್)ಮುಗಿದು ಮರುದಿನ *"ಸಿರಾಜ್ ದಿನ ಪತ್ರಿಕೆ"*ಯಲ್ಲಿ ಪ್ರಕಟವಾದಂತಹಾ *("ವೇದನೆಯಿಲ್ ಚಾಲಿಚ್ಚ ಕಣ್ಣೀರ್")* ಎಂಬ ವೇದನಾಜನಕ ವಾರ್ತೆಯ ವಾಕ್ಯಗಳನ್ನು ಓದಿದ ಪ್ರತಿಯೊಬ್ಬ ಸುನ್ನೀ ಕಾರ್ಯಕರ್ತರು ಹಾಗೂ ದೀನೀ ಸ್ನೇಹಿಗಳ ದುಃಖಃತೃಪ್ತ ಕಣ್ಣುಗಳಿಂದ ಉದುರಿದ ಕಣ್ಣೀರಿನಿಂದ ಅಂದಿನ ಪತ್ರಿಕೆಗಳೇ ತೋಯ್ದು ಹೋಗಿತ್ತು. ಅಂತಹ ಒಂದು ಅಕ್ಷರಗಳನ್ನು ಮುಂಚೆಯೋ ನಂತರವೋ ನಾನು ದರ್ಶಿಸಲಿಲ್ಲ. ಓದಿದ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದರೆಂದು ಅಂದು ಹಲವಾರು ಜನರು ನನ್ನ ಬಳಿ ತಿಳಿಸಿದ್ದರು. ಅಂದು ಓಮನಶ್ಯೇರಿ ನಗರದಲ್ಲಿ ಸಾವಿರಾರು ಕಾರ್ಯಕರ್ತರನ್ನು ಒಳಗೊಂಡ ಪ್ರತಿಭಟನಾ ಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ನಾನು ನನಗರಿವಿಲ್ಲದೇ ಕಣ್ಣಿನಿಂದ ಕಣ್ಣೀರ ಹನಿಗಳು ಉದುರಿಹೊಗಿತ್ತು. ಮಾತ್ರವಲ್ಲ ಆಲಿಸುತ್ತಿದ್ದ ಪ್ರತಿಯೊಬ್ಬರು ಕಣ್ಣೀರು ಹಾಕಿದ್ದನ್ನೂ ನಾನು ಕಣ್ಣಾರೆ ಕಂಡಿದ್ದೇನೆ.
*"ಜುನೈದ್"* ಒಬ್ಬ ನಿರ್ಮಲನೆಂದು ನಾವು ಕರೆಯುತ್ತೇವೆ.
*"ಅಖ್ಲಾಕ್"* ಒಬ್ಬ ನಿರಪರಾಧಿ ಎಂದು ನಾವು ಕಾಣುತ್ತೇವೆ.
*"ಫೈಝಲ್"* ನಿರುದ್ರೋಹಿ ಎಂದು ನಾವು ಹೇಳುತ್ತೇವೆ.
*"ರಿಯಾಝ್ ಮುಸ್ಲಿಯಾರ್"* ಒಬ್ಬ ನಿಶ್ಪಕ್ಷವಾದ ದೀನಿ ಸೇವಕನೆಂದು ನಾವು ಗುರುತಿಸುತ್ತೇವೆ.
ಆದರೆ ಅವರೆಲ್ಲರಿಗಿಂತಲೂ ಎರಡು ಪಟ್ಟು ಮಿಗಿಲಾಗಿದ್ದರು ಅಬ್ದುಲ್ ಖಾದರ್. ಖಾದರ್ ಯಾರಿಗೂ ದ್ರೋಹ ಬಗೆದವರಲ್ಲ ಯಾವೊಬ್ಬನಲ್ಲೂ ದ್ವೇಷ ವೈಷಮ್ಯವಿಟ್ಟುಕೊಂಡಿರದೆ ನಿಷ್ಕಳಂಕನಾದ, ನಿರ್ಮಲ ಮನಸ್ಸಿನ ಒಬ್ಬ ದೀನೀ ಸೇವಕನಾಗಿದ್ದರು, ವಿಶಾಲ ಮನಸ್ಥಿತಿಯ ಒಡೆಯನಾಗಿದ್ದರು. ಅನಾಥ, ನಿರ್ಗತಿಕ ಕುಟುಂಬಗಳ ಸಾಂತ್ವನವಾಗಿದ್ದರು. *ಕೊಲ್ಲುವವನು ಕೊಲ್ಲಲ್ಪಟ್ಟವನೂ ತಿಳಿಯಲಾರದೆ ತಾನು ಯಾಕಾಗಿ ಕೊಲ್ಲುತ್ತೇನೆಂದೋ ಕೊಲ್ಲಲ್ಪಟ್ಟವನು ನನ್ನ ಯಾಕಾಗಿ ಕೊಲ್ಲುತ್ತಾರೆಂದೋ ಅರಿಯಲಾರದ ಒಂದು ಕಾಲವೂ ಬರಲಿವೇ ಎಂದಲ್ಲವೇ *"ಪ್ರವಾದಿ"(ﷺ)*ರ ನುಡಿ.
ಖಾದರ್ ಒಂದೇ ಒಂದು ಅಪರಾಧ ಮಾಡಿದವನೆಂದು ಅಂದಿನಿಂದ ಇಂದಿನವರೆಗೂ ಯಾರೂ ಹೇಳಿದ್ದಾಗಿ ಕೇಳಲಿಲ್ಲ. ಖಾದರ್ ತನ್ನ ಹೃದಯಾಂತರಾಳದಲ್ಲಿ ಎತ್ತಿ ಹಿಡಿದ ಆದರ್ಶ ಧಾರ್ಢ್ಯತೆಯನ್ನು ನಶಿಸಲಾಗಿತ್ತು ವಿರೋಧಿಗಳ ಶ್ರಮ. ಆದರೆ ಅದು ಸಾಧ್ಯವಾಗಲಿಲ್ಲ ಆ ಆದರ್ಶದ ಪ್ರಕಾಶಧಾರೆಯು ದುಪ್ಪಟ್ಟು ಶಕ್ತಿಯುತವಾಗಿ ಇಂದಿಗೂ ಜಗತ್ತಿನಾಧ್ಯಂತ ಪ್ರಜ್ವಲಿಸುತ್ತಿದೆ.!
1994 ಮಾರ್ಚ್ ತಿಂಗಳ 17'ರ
ತಾರೀಖಿನಂದಾಗಿತ್ತು ಆ ದುಃಖ ವಾರ್ತೆ ಕೇಳಲ್ಪಟ್ಟಿತು. ಇಂತಹ ಒಂದು ಘಟನೆ ಶವ್ವಾಲ್ ತಿಂಗಳ ಪ್ರಥಮ ದಿನಗಳಲ್ಲಿ ಅಂಬಲಕಂಡಿಯಲ್ಲಿ ಒಂದು ಪತಾಕೆ (ದ್ವಜ) ನೆಡುವ ವಿಷಯದಲ್ಲಿ ಸಣ್ಣ ಪುಟ್ಟ ಗಲಭೆ ಕೋಲಾಹಾಲಗಳು ನಡೆದಿತ್ತು. ನಂತರದ ದಿನಗಲಲ್ಲಿ ಅದು ಓಮನಶ್ಯೇರಿಗೂ ವ್ಯಾಪಿಸಿ ಅಲ್ಪ ಸ್ವಲ್ಪ ಮಟ್ಟಿಗೆ ಕೆಲವೊಂದು ಅಪಸ್ವರಗಳು ಕೇಳಿಬರುತ್ತಿದ್ದಾದರೂ ಖಾದರ್ ಆಗಲೀ ನಾನಾಗಲಿ ಇದ್ಯಾವುದರಲ್ಲೂ ಶಾಮಿಲಾಗಿರಲಿಲ್ಲ. ಖಾದರ್ ತಲಶ್ಯೇರಿ ಬಾಗದಲ್ಲಿ ಒಬ್ಬ ಮದ್ರಸ ಅಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದರು ಮದ್ರಸ ರಜೆಯ ಸಂಧರ್ಭಗಳಲ್ಲಿ ಮಾತ್ರ ಊರಿಗೆ ಮರಳುತ್ತಿದ್ದರು. ಓಮನಶ್ಯೇರಿ ಭಾಗದ ಸುನ್ನೀ ಸಂಘಟನೆಯ ಒಬ್ಬ ಸಕ್ರೀಯ ಕಾರ್ಯಕರ್ತನೆಂಬ ಅಪರಾಧವೇ ನನ್ನ ಮೇಲಿರುವುದು.
ಆದರೆ ನನ್ನನ್ನು ಹುಡುಕುತ್ತಾ ಅವರು ಪುತ್ತೂರು ತಲುಪಿದ್ದರು. ಸಂಜೆಯ ಸಮಯದಲ್ಲಾಗಿತ್ತು ವಿಷಯ ತಿಳಿದ ನನ್ನ ಹಿರಿಯ ಸಹೋದರರು ಸ್ನೇಹಿತರು ಸ್ಥಳಕ್ಕಾಗಮಿಸಿದ್ದರು. ಅವರನ್ನು ಕಂಡ ತಕ್ಷಣ ಬಂದವರು ಅಲ್ಲಿಂದ ಜೀಪು ಹತ್ತಿ ಪರಾರಿಯಾಗಿದ್ದರು.
ಅಂದು ರಾತ್ರಿ ಅವರು ಬಲಿಯನ್ನು ಹುಡುಕುತ್ತಾ ಅಂಬಲಕಂಡಿಯಲ್ಲಿ ತಂಗಿದ್ದರು. ಓಮನಶ್ಯೇರಿಯಿಂದ ಬಸ್ಸು ಇಳಿದು ಕೆಳಗಿನ ಓಮನಶ್ಯೇರಿಯ ಒಳ ರಸ್ತೆಯ ಮೂಲಕ ಕುಂಬಳೋಟ್ ಎಂಬ ರಸ್ತೆಯಾಗಿ ನಡೆದು ಬರುತ್ತಿದ್ದ ಖಾದರ್ ಹತ ಭಾಗ್ಯನಾಗಿದ್ದ ಹಿಂಬದಿಯಿಂದ ಓಡಿ ಸುತ್ತುವರಿದ ಕೊಲೆಗಡುಕರು ಖಾದರ್ ನನ್ನು ವಧಿಸಿದ ರೀತಿ ವಿವರಣಾತೀತವಾಗಿತ್ತು. ಹೊಡೆದುರುಳಿಸಿ ರಸ್ತೆಯಲ್ಲಿ ಧರಧರನೇ ಎಳೆದು ಕೊನೇಗೆ ನೆಲದಲ್ಲಿ ಅಂಗಾತವಾಗಿ ಮಲಗಿಸಿ ಹರಿತವಿಲ್ಲದ ತುಕ್ಕು ಹಿಡಿದ ಕಬ್ಬಿಣದ ಸಲಾಕೆಯನ್ನು ತಲೆಯೊಳಗೆ ಹೊಡೆದು ತುರುಕಿಸಿ ಅವರು ಆ ಕೃತ್ಯವನ್ನು ನಿರ್ವಹಿಸಿದ್ದರು.
ಜೀವಕ್ಕಾಗಿ ಹಾತೊರೆಯುತ್ತಿದ್ದ ಆ ಯುವಕನ ಸುತ್ತಲು ಕ್ರೂರಿಗಳು ಆರ್ಭಟಿಸಿ ಅಟ್ಟಹಾಸ ಮೆರೆದ ಕೃತ್ಯವು ಚರಿತ್ರೆಯಲ್ಲೇ ತುಲ್ಯವಿಲ್ಲದಂತಹದ್ದು. ನಂತರದ ನಾಲ್ಕೈದು ದಿವಸಗಳ ಕಾಲ ಮೆಡಿಕಲ್ ಕಾಲೇಜಿನ 11'ನೇ ವಾರ್ಡಿನಲ್ಲಿ ಕೋಮಾಸ್ಥಿತಿಯಲ್ಲಿ ಮಲಗಿದ್ದ ಖಾದರಿನ ಸ್ಥಿತಿಯು ಚಿಂತಾಜನಕ ವಾಗಿತ್ತು. ಕೈ ಕಾಲುಗಳೆಡೆಯಲ್ಲಿ ಬಂಧಸ್ತನಾಗಿ ಮಲಗಿದ್ದ ಖಾದರ್ ಪ್ರಜ್ಞೆ ಬಂದಾಗಲೆಲ್ಲ ಪರಿಶುದ್ಧ ಖುರ್-ಆನ್ ವಚನಗಳು ಮತ್ತು ಧಿಕ್ರ್ ಗಳ ಮಂತ್ರಧ್ವನಿಯನ್ನು ಉಚ್ಚರಿಸುತ್ತಾ ಇದ್ದದ್ದನ್ನು ಖಾದರಿನ ಸತ್ಯ ವಂತರಾದ ಸಹಪಾಠಿಗಳು ಕಣ್ಣಾರೆ ಕಂಡ ದೃಶ್ಯಾಕ್ಷಿಗಳಾಗಿದ್ದರು.
ಖಾದರ್ ಮತ್ತು ಇನ್ನಿತರರು ನಿರಪರಾಧಿ ಗಳಾಗಿದ್ದರೆಂದು ಸೃಸ್ಟಿಕರ್ತನೇ ಶಾಕ್ಷಿ ಘಟನೆಯ ಸಂಧರ್ಭದಲ್ಲಿ ಕೊಟ್ಟಂತಹಾ ಕೌಂಟರ್ ಕೇಸಿನಲ್ಲಿ ನಾನು ಪ್ರಮುಖ ವಿಚಾರಣಾ ಖೈಧಿಯಾಗಿದ್ದೆ. ಕೊಡುವಳ್ಳಿ ಪೋಲೀಸ್ ಠಾಣೆಯಲ್ಲಿ SI ಮತ್ತು CSI ಹಾಗೂ DYSP ಸೇರಿದಂತೆ ನನ್ನನ್ನು ವಿಚಾರಣೆ ನಡೆಸಿ ಅವರುಗಳಿಗೆ ನಾನು ನಿರಪರಾಧಿ ಎಂದು ಸಾಭೀತುಪಡಿಸಿ ಬಿಡುಗಡೆಗೊಳಿಸಿದರು. ಖಾದರ್'ನ ಹೆಸರನ್ನು ಕೂಡ ಅವರು ಆರೋಪಿ ಸ್ಥಾನದಲ್ಲಿ ಸೂಚಿಸಿದ್ಧರು. ಆದರೆ 4 ದಿನಗಳ ನಂತರ ಅಲ್ಲಾಹನ ನ್ಯಾಯಾಲಯಕ್ಕೆ ಖಾದರ್ ಹಾಜರಾದರು ಖಾದರಿನ ನಂತರ ಸಿಕ್ಕಿದ ಅಯಸ್ಸಿಗೀಗ 23 ವರ್ಷಗಳು ಹಿಂದಿಕ್ಕಿತು.
ಪ್ರಸ್ಥಾನ ಸೇವೆಗಳೊಂದಿಗೆ ಆದರ್ಶವನ್ನು ಬಿಟ್ಟು ಕೊಡದ ಧೀರತೆಯ ಮನಸ್ಸಿನಿಂದ ಖಾದರ್ ಕಲಿಸಿದ ವಿಶ್ವಾಸದ ಹಾದಿಯಲ್ಲಿ ನಾವೂ ಸಂಚರಿಸೋಣ..!
ಅಲ್ಲಾಹುವೇ ಉಮರ್(ರ.ಅ), ಅಲೀ(ರ.ಅ) ಬಿಲಾಲ್ (ರ.ಅ), ಜ-ಅಫರ್(ರ.ಅ) ರವರೊಂದಿಗೆ ಖಾದರ್ ನನ್ನೂ ಸೇರಿಸು.. ಖಾದರ್ ನೊಂದಿಗೆ ನಮ್ಮನ್ನೂ ಸ್ವರ್ಗೀಯ ಲೋಕದಲ್ಲಿ ಒಂದುಗೂಡಿಸು ಅಲ್ಲಾಹ್.. ಅಮೀನ್.
ಮೂಲ:ಮಳಯಾಲಂ.
*✍🏻ಕನ್ನಡ ಅನುವಾದ :-ಆಸೀಫ್ ಅಜಿಲಮೊಗರು.*
https://m.facebook.com/story.php?story_fbid=392397587824264&id=100011620788893
Comments