ಜಿಬ್ರೀಲ್(ಅ) ತನ್ನ ಪರಮಾವಧಿ ವೇಗವನ್ನು ಉಪಯೋಗಿಸಿದ ನಾಲ್ಕು ಸಂದರ್ಭಗಳು..
=============================
ಒಂದು ದಿನ ನಬಿﷺ ರವರು ಜುಬ್ರೀಲ್(ಅ) ರವರೊಂದಿಗೆ ಪ್ರಶ್ನಿಸಿದರು:
"ತಾವು ಯಾವಾಗಲಾದರೂ ತಮ್ಮ ಪರಮಾವಧಿ ವೇಗದಲ್ಲಿ ಸಂಚರಿಸಿದ್ದೀರಾ.??"
ಜಿಬ್ರೀಲ್(ಅ) ಹೇಳಿದರು:
"ಹೌದು. ನಾಲ್ಕು ಬಾರಿ."
ನಂತರ ಜಿಬ್ರೀಲ್(ಅ) ವಿವರಿಸಿದರು..
🌱 "ಇಬ್ರಾಹಿಂ ನಬಿ(ಅ)ರವರನ್ನು ನಮ್ರೂದ್ ಅಗ್ನಿಕುಂಡಕ್ಕೆ ಎಸೆದಾಗ ಆಗಮಿಸಿದ್ದಾಗಿದೆ ಪ್ರಥಮ ಬಾರಿ. ಆ ಸಮಯದಲ್ಲಿ ನಾನು ಅರ್ಶಿನ ಸಮೀಪದಲ್ಲಿದ್ದೆ. ಅಲ್ಲಾಹನು ಆ ಅಗ್ನಿಯನ್ನು ಶೀತಲೀಕರಿಸಲು ನನ್ನೊಂದಿಗೆ ಆಜ್ಞಾಪಿಸಿದಾಗ ನಾನು ಅತಿವೇಗವಾಗಿ ಏಳು ಆಕಾಶಗಳನ್ನು ಇಳಿದು ಅಲ್ಲಿಗೆ ತಲುಪಿದೆ.
🌱 ಇಸ್ಮಾಯಿಲ್ ನಬಿ(ಅ) ರವರನ್ನು ಬಲಿ ನೀಡಲು ಕೊಂಡುಹೋಗುವ ಸಮಯದಲ್ಲಾಗಿದೆ ಎರಡನೇ ಬಾರಿ. ಇಸ್ಮಾಯಿಲ್ ನಬಿ(ಅ)ರವರ ಬದಲು ಆಡನ್ನು ಬಲಿ ನೀಡಬೇಕೆಂದು ಅಲ್ಲಾಹು ನನ್ನೊಂದಿಗೆ ಆಜ್ಞಾಪಿಸಿದ. ಇಬ್ರಾಹಿಂ ನಬಿ(ಅ) ಕತ್ತಿಯನ್ನು ಇಡುವ ಮೊದಲು ಅತಿವೇಗವಾಗಿ ಅಲ್ಲಿಗೆ ತಲುಪಿದೆ.
🌱 ಯೂಸುಫ್ ನಬಿ(ಅ)ರವರನ್ನು ಸಹೋದರರು ಬಾವಿಗೆ ತಳ್ಳಿದಾಗ ರಕ್ಷಿಸಲು ತಲುಪಿದ್ದಾಗಿದೆ ಮೂರನೆಯ ಬಾರಿ.
ಯೂಸುಫ್ ನಬಿ(ಅ) ಬಾವಿಯಲ್ಲಿ ನೆಲ ಮುಟ್ಟುವುದಕ್ಕಿಂತ ಮೊದಲು ನಾನು ಅಲ್ಲಿಗೆ ತಲುಪಿ, ಬೀಳುತ್ತಲಿದ್ದ ಅವರನ್ನು ನನ್ನ ರೆಕ್ಕೆಯಿಂದ ರಕ್ಷಿಸಿದೆ.
💚ಯಾ ರಸೂಲಲ್ಲಾಹ್ﷺ...
ಕಡೆಯದಾಗಿ ನಾನು ಅತಿ ವೇಗವಾಗಿ ತಲುಪಲು ಕಾರಣವಾಗಿದ್ದು, ಉಹ್ದ್ ನಲ್ಲಿ ತಮ್ಮ ಪವಿತ್ರವಾದ ದಂತಕ್ಕೆ(ಹಲ್ಲು) ಪೆಟ್ಟು ಬಿದ್ದಾಗ. ತಮ್ಮ ಪವಿತ್ರ ರಕ್ತವು ಭೂಮಿಯು ಸ್ಪರ್ಶಿಸುವುದನ್ನು ತಡೆಯಲು ಅಲ್ಲಾಹನು ನನ್ನೊಂದಿಗೆ ಆಜ್ಞಾಪಿಸಿದ.
*ಅದೇನಾದರೂ ಭೂಮಿಯನ್ನು ಸ್ಪರ್ಶಿಸುತ್ತಿದ್ದರೆ ಅಂತ್ಯ ದಿನದವರೆಗೆ ಈ ಭೂಮಿಯಲ್ಲಿ ಒಂದು ಸಸಿಯೋ, ಮರವೋ ಹುಟ್ಟುತ್ತಿರಲಿಲ್ಲ..!!*
ಅದನ್ನು ತಡೆಯಲು ನಾನು ಅತಿ ಶೀಘ್ರವಾಗಿ ಭೂಮಿಗೆ ತಲುಪಿ ತನ್ನ ರೆಕ್ಕೆಯಿಂದ ತಮ್ಮ ಪವಿತ್ರವಾದ ರಕ್ತವು ಭೂಮಿಯನ್ನು ಮುಟ್ಟವುದರಿಂದ ಸಂರಕ್ಷಿಸಿದೆ.
✍ *ಇಕ್ಬಾಲ್ ಜಿ.ಕೆ.ಗುಲ್ವಾಡಿ*
🍁🍁🍁🍁🍁🍁🍁🍁🍁🍁
🔹ನಬಿ ﷺ ರವರ ಮೇಲೆ ಸ್ವಲಾತ್.
💫اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله🌹
〰〰〰〰〰〰〰〰〰〰
Comments