Skip to main content

*ಝಿಯಾರತ್ತ್ ಕೇಂದ್ರ* 🕌 3⃣5⃣🕌 ➖➖➖➖➖➖➖ ಶೈಖ್ ಮುಹಮ್ಮದುಲ್ ಮೌಲಲ್ ಬುಖಾರಿ (ರ) ಬಂದರು, ಮಂಗಳೂರು. ➖➖➖➖➖➖➖ ✍ಗಫೂರ್ ಬಾಯಾರ್

*ಝಿಯಾರತ್ತ್ ಕೇಂದ್ರ*
      🕌 3⃣5⃣🕌
➖➖➖➖➖➖➖
ಶೈಖ್ ಮುಹಮ್ಮದುಲ್ ಮೌಲಲ್ ಬುಖಾರಿ (ರ)
ಬಂದರು, ಮಂಗಳೂರು.
➖➖➖➖➖➖➖
✍ಗಫೂರ್ ಬಾಯಾರ್
🔹🔹🔹🔹🔹🔹🔹
🕌 ಶೈಖ್ ಮಹಮ್ಮದುಲ್
ಮೌಲಲ್ ಬುಖಾರಿ (ರ) ಎಂಬ ಪುಣ್ಯ ಮಹಾತ್ಮರು ತನ್ನ ಬಾಲ್ಯ ಕಾಲದಿಂದಲೇ ಜೀವನದ ಪ್ರತಿಯೊಂದು ಘಟಕದಲ್ಲಿಯೂ ಅಲ್ಲಾಹನು ಖುರ್ ಆನಿನಲ್ಲಿ ವಿವರಿಸಿದ್ದನ್ನು ಅನುಸರಿಸಿ ಸನ್ಮಾರ್ಗದ ಹಾದಿಯಲ್ಲಿ ಜೀವಿಸಿ ಆತ್ಮೀಯ ರಂಗದಲ್ಲಿ ಚಲಿಸಿದ ಮಹಾನರು. ಅವರ ಅಮಾನುಷ್ಕ ಸಾಧನೆಗಳು ವಿವರಣಾತೀತವಾಗಿದೆ.

ಖಾದಿರಿಯ್ಯ, ರಿಫಾಯಿಯ್ಯ, ತ್ವರಿಕತ್ತಿನಲ್ಲಿ ಮಹಾನವರ ಆತ್ಮೀಯ ಗುರು ಯೂಸುಫು ಇಬ್ನು ಅಬಿಸ್ವಾಲಿಹ್ (ರ) ರವರು,  ಚಿಶ್ತಿಯ್ಯ ತ್ವರಿಕತ್ತಿನ ಆತ್ಮೀಯ ಗುರು ಶೌಖುಲ್ ಮುಹಮ್ಮದ್ ಶಾಹುಲ್ ಚಿಶ್ತೀ (ರ) ಎಂಬವರು, ಸುಹ್'ರವರ್ದಿ ತ್ವರಿಕತ್ತಿನ ಆತ್ಮೀಯ ಗುರು ಶೈಖ್ ಮುಹಮ್ಮದ್ ಇಬ್ನು ಕಮಾಲುದ್ದೀನ್ (ರ) ರವರಾಗಿದ್ದಾರೆ.

ಹಿಜರಿ 1284 ರಜಬ್ 27'ನೇ ಶುಕ್ರವಾರ (ಮಿಹ್ರಾಜ್ ದಿನ )ದಂದು ಮಹಾನುಭಾವರ ಜನನ.
ಲಕ್ಷದ್ವೀಪಿನ ಕವರತ್ತಿ ದ್ವೀಪಿನಲ್ಲಿ ಜನಿಸಿದ ಮಹಾನರ ಜನನವು ಆತ್ಮೀಯ ಲೋಕದ ಮಹಾಗೋಪುರವಾಗಿದ್ದ ಕಣ್ಣೂರು ಮೌಲ (ರ)  (ಕಣ್ಣೂರು ಸಿಟಿಯಲ್ಲಿ ಮಕ್ಬರ ಇದೆ.) ಪ್ರತ್ಯೇಕ ಪ್ರಾರ್ಥನೆ ಮತ್ತು ಆಗ್ರಹದ ಫಲವಾಗಿತ್ತು ಎಂದಾಗಿದೆ ಚರಿತ್ರೆ.

ಜ್ಞಾನ, ಭಕ್ತಿ ಮತ್ತು ಸಲ್ಕರ್ಮಗಳನ್ನು ಪರಸ್ಪರ ಸಮ್ಮೇಳಿಸಿದ ಮಹಾನವರ ಪವಾಡಗಳು ಅನೇಕಾರು ಇದೆ..!

ಒಮ್ಮೆ ಶತ್ರುಗಳಿಂದ ಸಂಭವಿಸಿದ ಕಠಿಣವಾದ ಮಾರಣದಿಂದ ಮೌಲಾ (ರ) ರವರ ಕಣ್ಣಿಗೆ ಅಂದತೆ ಬಾಧಿಸಿತ್ತು.
2 ಕಣ್ಣಿಗೂ ಬಾಧಿಸಿದ ಅಂಧತೆಯಿಂದ ತೃಪ್ತಿಪಟ್ಟ ಮಹಾನವರು ಈ ರೀತಿ ಹೇಳಿದರು.
ಅಲ್ಲಾಹನ ಈ ವಿಧಿಯಿಂದ ನಾನು ಪೂರ್ಣ ತೃಪ್ತಿಪಟ್ಟಿರುವೆನು ಎಂದು.

ಆದರೆ ಸ್ವಜೀವನಕ್ಕಿಂತಲೂ, ಅಭಿಮಾನಕ್ಕಿಂತಲೂ ಆತ್ಮೀಯ ಗುರುವಿಗೆ ಮಹತ್ವ ಕೊಟ್ಟಿರುವ ಓರ್ವ ಮುರಿದ್ ಚಾಕು ತೆಗೆದು ತನ್ನ ಕಣ್ಣಿನ ನೇರಕ್ಕೆ ಚಾಚಿ ಈ ರೀತಿ ಹೇಳಿದರು.
ನನ್ನ ಮೌಲಾಕ್ಕೆ (ರ) (ಗುರುವಿಗೆ) ಕಣ್ಣು ಕಾಣುವುದು ಬೇಡವೆಂದಾದರೆ ಅವರ ಶಿಷ್ಯನಾದ ನನಗೂ ಅದು ಬೇಡ.!
ಶೈಖುನರೊಂದಿಗೆ ಇರುವ ಅತೀ ಸ್ನೇಹದಿಂದಾರೂ ಕೂಡ ಈ ಕೃತ್ಯ ಮಾಡಬಾರದೆಂದು ನಿರ್ಬಂಧವಿರುವ ಮೌಲಾ (ರ) ರವರು ಹೇಳಿದರು ನೀನು ಹಾಗೆ ಮಾಡಬೇಡ.
ನಾನು ನನ್ನ 2 ಕಣ್ಣಿನ ಮೇಲೆ ತಿಕ್ಕುತೇನೆ. ಅಲ್ಲಾಹು ಅವನ ಔದಾರ್ಯದಿಂದ ನನಗೆ ಕಾಣುವ ಶಕ್ತಿ ಕೊಡುವನು.
ಇದು ಹೇಳಿ ಮಹಾನವರು ತನ್ನ ಕಣ್ಣನ್ನು ತಿಕ್ಕಿದ ಕೂಡಲೇ ನಷ್ಟವಾಗಿದ್ದ ತನ್ನ ಆ 2 ಕಣ್ಣಿನ ಕಾಣುವ ಶಕ್ತಿಯನ್ನು ಅಲ್ಲಾಹು ಹಿಂದಿರುಗಿಸಿದನು.

ವಸೂರಿ ಬಾಧಿಸಿ ಸಹಿಸಲು ಸಾಧ್ಯವಾದೆ ಬಂದಾಗ ಒಂದು ದೊಡ್ಡ ಅಗ್ನಿ ಕುಂಡ ತಯಾರಿಸಿ ಅದಕ್ಕೆ ಜಿಗಿಯಲು ಹೇಳಿದರು.
ಜಿಗಿದವರಿಗೆಲ್ಲ ಒಂದು ರೋಮಕ್ಕೆ ಕೂಡ ಬೆಂಕಿ ತಗಳದೆ ಸುಖಾಂತಿರಿಕ್ಷದಲ್ಲಿ ಅಗ್ನಿಯಲ್ಲಿ ಇದ್ದೂ, ಅಲ್ಲಿ ಒಳ್ಳೆಯ ಕಾಲಮಾನವಾಗಿತೆಂದೂ, ಮಲಗಳು ಮಂಚಗಳೂ ಇತ್ತು ಎಂದು ಹೇಳಿ ಜನರಿಗೆ ಧೈರ್ಯವನ್ನು ಕೊಟ್ಟ ಮಹಾನವರ ಚರಿತ್ರೆ ಪ್ರಸಿದ್ದವಾಗಿದೆ.

ಆತ್ಮಧೈರ್ಯದಿಂದ ಕೂಡಿದ ಜೀವನವನ್ನು ಅಲ್ಲಾಹನ ಮಾರ್ಗದಲ್ಲಿ ಸಮರ್ಪಿಸಿದ ಆ ಮಹಾಮನುಷಿಯ ಪ್ರಿಯರಾದ ಆತ್ಮೀಯ ಶಿಷ್ಯರಾಗಿದ್ದಾರೆ ಪಾಡತ್ತಕಾಯಿಲ್ ಶೈಖ್ ಮುಹಮ್ಮದ್ ಸ್ವಾಲಿಹಿಲ್ ಮೌಲಾ (ರ).

63 ಪ್ರಾಯದವರೆಗೆ ಜೀವಿಸಿದ ಮಹಾನುಬಾವರು 1347 ದುಲ್'ಖಅದ 23ಕ್ಕೆ ವಫಾತ್ತ್ ಆದರು.

ಮಹಾನವರ ಮಖ್ಬರದ ಎದುರಿನಲ್ಲಿ,
1 ಶೈಖ್ ಚಾಂದ್ ಮಿಯಾನ್ ಹಝ್ರತ್ತ್ ಜಲಾಲಿ (ಖ:ಸಿ)
2 ಶೈಖ್ ಸಯೀದ್ ಮುಹಮ್ಮದ್ ಮೌಲಾ ಅರ್'ಬಹಿಯತಿ (ಖ:ಸಿ)
3 ಸಯ್ಯಿದ್ ಅತ್ತಸ್ ಕೋಯ ಬೌಲುಯ ತಂಙಳ್ (ಖ:ಸಿ)
ಎಂಬಿ ಮಹತ್ಮರುಗಳು ಅಂತ್ಯ ವಿಶ್ರಮ ಗೊಳ್ಳುತ್ತಾರೆ.
ಅಲ್ಲದೆ ಮಸೀದಿಯ ಪರಿಸರದಲ್ಲಿ ಇನ್ನೂ ಅನೇಕ ಮಹಾತ್ಮರುಗಳ ಮಕ್ಬರಗಳು ಇವೆ.

*ಝೀನತ್ತ್ ಬಕ್ಷ್ ಜುಮಾ ಮಸ್ಜಿದ್*

ಮಂಗಳೂರಿನ ಮೊತ್ತ ಮೊದಲ ಹಾಗೂ ಭಾರತದ ಮೂರನೆಯ ಮಸ್ಜಿದಾಗಿದೆ ಝೀನತ್ತ್ ಬಕ್ಷ್ ಮಸ್ಜಿದ್.

ಕೇರಳದ ಕೊಡುಂಗಲ್ಲೂರಿನ ಚೇರಮನ್ ಮಸ್ಜಿದ್ AD 622ರಲ್ಲಿ ನಿರ್ಮಾಣಗೊಂಡಿತು. 2 ವರ್ಷದ ನಂತರ ಕಾಸರಗೋಡಿನ ಮಾಲಿಕ್ ಬಿನ್ ದೀನಾರ್ ಮಸೀದಿ ನಿರ್ಮಿಸಲಾಯಿತು.

ಮಲಬಾರ್ ಮತ್ತು ಕರಾವಳಿಯ ಸುತ್ತಮುತ್ತಗಳಲ್ಲಿ ಅರಬಿ ವ್ಯಾಪಾರಿಗಳು ನೆಲೆಗೊಂಡಾಗ ನಮಾಜಿಗೆ ಮಸೀದಿಯ ಅಗತ್ಯದ ಬಗ್ಗೆ  ಮಾಲಿಕ್ ದೀನಾರ್ (ರ)ರವರ ಹತ್ತಿರ ಪ್ರಸ್ತಾವ ಬಂದಾಗ, ಅವರು ಚೇರಮನ್ ಪೆರುಮಾಳ್ ಅವರ ಸಹಕಾರದೊಂದಿಗೆ  ನಿರ್ಮಿಸಲ್ಪಟ್ಟ 10 ಮಸ್ಜಿದುಗಳಲ್ಲಿ ಒಂದಾಗಿದೆ ಝೀನತ್ತ್ ಬಕ್ಷ್ ಮಸ್ಜಿದ್. ಈ ಮಸ್ಜಿದನ್ನು ಜುಮಾತ್ತುಲ್ ಅವ್ವಲ್ ತಿಂಗಳ 22ರ ಹಿಜರಿ 22ಕ್ಕೆ ಶುಕ್ರವಾರದಂದು ಉದ್ಘಾಟಿಸಲಾಯಿತು. ಹಝ್ರತ್ತ್ ಮೂಸಾ ಇಬ್ನು ಮಾಲಿಕ್ (ರ) ರವರು ಪ್ರಥಮ ಖಾಝಿ ಆಗಿದ್ದರು.
ಮುಸ್ಲಿಂ ಸಮುದಾಯದಲ್ಲಿ ಈ ಮಸೀದಿಗೆ ವಿಶೇಷ ಮಹತ್ವವಿದೆ.

ಮೈಸೂರು ಆಡಳಿತಧಿಕಾರಿಯಾದ ಟಿಪ್ಪು ಸುಲ್ತಾನ್ (ರ) ರವರು 18ನೇ ಶತಮಾನದ ಉತ್ತರಾರ್ಧದಲ್ಲಿ ಮಂಗಳೂರಿನ ಆಳ್ವಿಕೆಯ ಅವಧಿಯಲ್ಲಿ ಅವರು ಈ ಮಸೀದಿಯನ್ನು ಸಂಪೂರ್ಣವಾಗಿ ಕೆತ್ತಿದ ಮರದ ಸ್ತ0ಭಗಳೊಂದಿಗೆ ನವೀಕರಿಸಿದರು.
ಮೇಲ್ಛಾವಣಿಯನ್ನು ಕೂಡ ಅವರು ನಿರ್ಮಿಸಿರುದೆಂದು ಹೇಳಲಾಗುತ್ತದೆ. ಇಲ್ಲಿಯ ಪರಿಸರ ಹಾಗು ಮಸ್ಜಿದ್ ಹಳೆ ಕಾಲದ ಪ್ರೌಢಿಯೊಂದಿಗೆ ಈಗಲೂ ನೆಲೆಗೊಂಡಿದೆ. ನೋಡಲೇಬೇಕಾದ ಪುಣ್ಯ ಸ್ಥಳವಾಗಿದೆ.

ಈ  ಮಸ್ಜಿದಿನ ವರಾಂಡದಲ್ಲಿ ಶೈಖ್ ಮುಹಮ್ಮದುಲ್ ಮೌಲಲ್ ಬುಖಾರಿ (ರ) ರವರು ಅಂತ್ಯ ವಿಶ್ರಮಗೊಳ್ಳುತ್ತಾರೆ.

🛣👉ದಾರಿ: ಸ್ಟೇಟ್ ಬ್ಯಾಂಕ್, ಬಂದರು ಮಂಗಳೂರು.

✍ಗಫೂರ್ ಬಾಯಾರು.
⛩⛩⛩⛩⛩⛩⛩

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...