ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮುಗುಳ್ನಕ್ಕ ಕ್ಷಣಗಳು 🍀🍀🍀🍀🍀🍀🍀🍀🍀🍀 _ಇಸ್ಮಾಈಲ್ ನಈಮಿ ಮಂಗಳಪೇಟೆಯವರ ಕೃತಿಯಿಂದ _ _✍ನಾಸಿರ್ ಕಾವೂರ್_
ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮುಗುಳ್ನಕ್ಕ ಕ್ಷಣಗಳು
🍀🍀🍀🍀🍀🍀🍀🍀🍀🍀
_ಇಸ್ಮಾಈಲ್ ನಈಮಿ ಮಂಗಳಪೇಟೆಯವರ ಕೃತಿಯಿಂದ _
_✍ನಾಸಿರ್ ಕಾವೂರ್_
_[ಇದನ್ನು ಓದುತ್ತಾ ಹೋದಂತೆ ತುಟಿಯಂಚಲ್ಲಿ ಮುಗುಳ್ನಗು ಮೂಡಿ ಬರುವುದರೊಂದಿಗೆ ಪ್ರವಾದಿ ಪ್ರೇಮದ ಸವಿಯನ್ನೂ ಅನುಭವಿಸುವಿರಿ.]
ಜಿಝ್'ಯಾ ವಸೂಲಿ
ಅಲಾವುಬ್ನು ಹಳರಮೀಯ್ಯ್ ರಳಿಯಲ್ಲಾಹು ಅನ್ಹುರವರನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಜಿಝ್'ಯ ವಸೂಲಿ ಮಾಡಲು ಬಹ್ರೈನಿಗೆ ಕಳುಹಿಸಿದರು. ಅವರು ಅಲ್ಲಿಂದ ಮರಳುವಾಗ ಅದೆಷ್ಟು ಸಂಪತ್ತನ್ನು ಶೇಖರಿಸಿ ತಂದರೆಂದರೆ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅಷ್ಟು ಸಂಪತ್ತನ್ನು ತಮ್ಮ ಜೀವನದಲ್ಲಿ ಅದಕ್ಕಿಂತ ಮುಂಚೆಯಾಗಲಿ ನಂತರವಾಗಲಿ ಕಂಡಿರಲಿಲ್ಲ.
ಸಂಪತ್ತನ್ನೆಲ್ಲಾ ಒಂದೆಡೆ ಹರಡಿ 'ಯಾರಿಗೆಲ್ಲಾ ಸಂಪತ್ತಿನ ಅಗತ್ಯವಿದೆಯೂ ಅವರು ಬಂದು ಪಡೆದುಕೊಳ್ಳಿರಿ. ಎನಿಸುವ ಅಗತ್ಯವಿಲ್ಲ ಎಂದು ಘೋಷಿಸಲಾಯಿತು.
ಅಬ್ಬಾಸ್ ರಳಿಯಲ್ಲಾಹು ಅನ್ಹುರವರು ಚಾದರವನ್ನು ಹಿಡಿದುಕೊಂಡು ಅಲ್ಲಿಗೆ ಬಂದರು. ಚಾದರವನ್ನು ನೆಲದಲ್ಲಿ ಹಾಸಿ ತುಂಬಾ ಸಂಪತ್ತನ್ನು ಅದರಲ್ಲಿ ತುಂಬಿದರು. ನಂತರ ಅದನ್ನು ಬಿಗಿಯಾಗಿ ಕಟ್ಟಿ ಎತ್ತಬೇಕೆನ್ನುವಾಗ ಭಾರದಿಂದ ಎತ್ತಲು ಸಾಧ್ಯವಾಗಲಿಲ್ಲ. ಅವರ ಪಕ್ಕದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ನಿಂತುಕೊಂಡಿದ್ದರು. ಅಬ್ಬಾಸ್ ರಳಿಯಲ್ಲಾಹು ಅನ್ಹು ಅವರತ್ತ ನೋಡಿ, "ಯಾ ರಸೂಲಲ್ಲಾಹ್! ಸ್ವಲ್ಪ ಎತ್ತಿ ನನ್ನ ತಲೆಯ ಮೇಲಿಡಿ" ಎಂದರು.
ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅವರ ಮಾತುಕೇಳಿ ಮುಗುಳ್ನಕ್ಕರು. ತಮಗೆ ಸ್ವತ ಎತ್ತಲು ಎಷ್ಟು ಸಾಧ್ಯವಾಗುವುದೋ ಅಷ್ಟನ್ನು ಮಾತ್ರ ತುಂಬಿಸಿ ಕೊಂಡೊಯ್ಯಿರಿ ಎಂದರು. (ತಫ್ಸೀರ್ ಇಬ್ನು ಕಸೀರ್-2-399)
ನನ್ನ ಪಾಲು ಕೊಡಿ ಎನ್ನುತ್ತಾ ನಕ್ಕುಬಿಟ್ಟರು
ಅಬೂಸಈದ್ ರಳಿಯಲ್ಲಾಹು ಅನ್ಹುರವರಿಂದ ವರದಿ: ಅವರು ಹೇಳಿದರು, ಸ್ವಹಾಬಿಗಳ ಪೈಕಿ ಕೆಲವರು ಯಾತ್ರೆ ಹೊರಟರು. ಸಾಗುತ್ತಾ ಅರಬಿಗಳ ಒಂದು ಗೋತ್ರದವರ ಬಳಿ ತಲುಪಿದರು. ಆ ಸಂದರ್ಭದಲ್ಲಿ ಆ ಗೋತ್ರದ ನಾಯಕನಿಗೆ ವಿಷ ಸರ್ಪವೊಂದು ಕಚ್ಚಿತು. ಯಾವ ಚಿಕಿತ್ಸೆಯನ್ನು ನಡೆಸಿದರೂ ಫಲಕಾರಿಯಾಗಲಿಲ್ಲ. ಕೊನೆಗೆ ಆ ಗೋತ್ರಕ್ಕೊಳಪಟ್ಟ ಓರ್ವ ವ್ಯಕ್ತಿಯು ಸ್ವಹಾಬಿಗಳ ಹತ್ತಿರ ಬಂದು ಕೇಳಿದರು. "ನಿಮ್ಮ ಪೈಕಿ ಹಾವಿನ ವಿಷವನ್ನು ತೆಗೆಯುವವರು ಯಾರಾದರೂ ಇದ್ದಾರೆಯೇ?" "ಹೌದು, ಇದ್ದಾರೆ" ಎಂದರು ಸ್ವಹಾಬಿಗಳು.
ಅಬೂ ಸಈದಿಲ್ ಖುದ್'ರಿ ರಳಿಯಲ್ಲಾಹು ಅನ್ಹುರವರು ಆ ಗೋತ್ರ ನಾಯಕನಿಗೆ ಸೂರತುಲ್ ಫಾತಿಹbಓದಿ ಮಂತ್ರಿಸಿದರು. ತಕ್ಷಣವೇ ಹಾವಿನ ವಿಷ ದೂರವಾಯಿತು. ಫ್ರತಿಫಲವಾಗಿ ಅವರು ಆಡುಗಳನ್ನು ನೀಡಿದರು. ಸ್ವಹಾಬಿಗಳೆಲ್ಲರೂ ಸಂತೋಷ ದೊಂದಿಗೆ ಆ ಆಡುಗಳನ್ನು ಪಡೆದು ಊರಿಗೆ ಮರಳಿದರು. ದಾರಿಮಧ್ಯೆ ಯಾತ್ರಾ ಸಂಘದಲ್ಲಿದ್ದ ಕೆಲವರು "ಆ ಆಡುಗಳನ್ನು ಹಂಚಿರಿ" ಎಂದು ಹೇಳಿದರು.
ಅಬೂಸಈದಿಲ್ ಖುದ್'ರೀ ರಳಿಯಲ್ಲಾಹು ಅನ್ಹುರವರು ಹೇಳಿದರು. "ಇಲ್ಲ. ಇಲ್ಲಿ ಹಂಚುವುದು ಬೇಡ ನಾವು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸನ್ನಿಧಿಯಲ್ಲೇ ಹಂಚೋಣ" ಎಲ್ಲರೂ ಉಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸನ್ನಿಧಿಗೆ ಬಂದು ತಲುಪಿದರು. ಯಾತ್ರೆಯಲ್ಲಿ ನಡೆದ ಘಟನೆಯನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ವಿವರಿಸಿದರು. "ಅದು ಮಂತ್ರವಾಗಿದೆಯೆಂದು ನಿಮಗೆ ತಿಳಿಸಿಕೊಟ್ಟವರಾರು?" ಎಂದು ಕೇಳುತ್ತಾ "ನಿಮಗೆ ಪ್ರತಿಫಲ ಸಿಕ್ಕಿದೆಯಲ್ಲವೇ? ಹಾಗಾದರೆ ಅದನ್ನು ಹಂಚಿರಿ." ನನ್ನ ಪಾಲು ನನಗೆ ಕೊಟ್ಟು ಬಿಡಿ ಎಂದು ಹೇಳುತ್ತಾ ನಕ್ಕು ಬಿಟ್ಟರು.
ಪತ್ನಿಯ ಮಾತು ಕೇಳಿ ಮುಗುಳ್ನಕ್ಕರು
ಆಯಿಶಾ ರಳಿಯಲ್ಲಾಹು ಅನ್ಹರವರು ಹೇಳುತ್ತಾರೆ. ಒಂದು ದಿನ ನಾನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಲ್ಲಿ ಕೇಳಿದೆ, "ತಮಗೆ ಎರಡು ವಸ್ತುಗಳು ಸಿಕ್ಕರೆ, ಅದರಲ್ಲಿ ಒಂದು ಬಳಸಲ್ಪಟ್ಟದ್ದೂ ಮತ್ತೊಂದು ಬಳಸಲ್ಪಡದ್ದೂ ಆದರೆ ನೀವು ಯಾವುದನ್ನು ಇಷ್ಟಪಡುವಿರಿ?"
"ಬಳಸಲ್ಪಡದ್ದು" ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್. ನಾನು ಹೇಳಿದೆ,
"ನಾನು ನಿಮ್ಮ ಇತರ ಪತ್ನಿಯರಂತಲ್ಲ. ಕಾರಣ, ಅವರು ಇತರರ ಪತ್ನಿಯರಾಗಿದ್ದು ಬಂದವರು. ನಾನು ಕೇವಲ ನಿಮಗಾಗಿಯೇ ಬಂದವಳು" ಎಂದು ಹೇಳಿದೆ.
ಇದನ್ನು ಕೇಳಿದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮುಗುಳ್ನಕ್ಕು ಬಿಟ್ಟರು. (ತಬಖಾತು ಇಬ್ನ್ ಸ'ಅದ್ 8-55)
ಆಯಿಶಾ ರಳಿಯಲ್ಲಾಹು ಅನ್ಹರವರ ಮಾತು ಕೇಳಿ ಮುಗುಳ್ನಕ್ಕರು
ಆಯಿಶಾ ರಳಿಯಲ್ಲಾಹು ಅನ್ಹರವರು ಹೇಳುತ್ತಾರೆ. ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಜನ್ನತುಲ್ ಬಖೀಅನಿಂದ ಮರಳಿ ಬಂದಾಗ ನನಗೆ ವಿಪರೀತ ತಲೆ ಸಿಡಿಯುತ್ತಿತ್ತು. ನಾನು ನೋವು ತಾಳಲಾರದೆ "ಆಹ್! ನನ್ನ ತಲೆಯೇ" ಎಂದು ಹೇಳುತ್ತಿದ್ದೆ.
ನಾನು ನೋವಿನಿಂದ ಬಳಲುತ್ತಿರುವುದನ್ನು ಕಂಡ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು. "ಆಯಿಶಾ, ಹೆದರಬೇಡ ತಲೆ ನೋವಿನಿಂದ ನೀನು ಮರಣ ಹೊಂದಿದರೆ ನಾನೇ ನಿನಗೆ ಕಫನು ತೋಡಿಸುತ್ತೇನೆ, ನಾನೇ ನಿನಗೆ ಜನಾಝ ನಮಾಝ್ ನಿರ್ವಹಿಸಿ, ನಿನ್ನನ್ನು ದಫನ ಮಾಡುತ್ತೇನೆ" ಎಂದರು.
"ನಾನು ಮರಣ ಹೊಂದಿದರೆ ಈ ಮನೆಗೆ ಬೇರೆ ಪತ್ನಿಯನ್ನು ಕರೆ ತರಬೇಕೆಂದು ತಾವು ಬಯಸುತ್ತೀರ?" ಎಂದು ಕೇಳಿದೆ.
ನನ್ನ ಮಾತನ್ನು ಕೇಳಿದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮುಗುಳ್ನಕ್ಕು ಬಿಟ್ಟರು. (ಇಬ್ನ್ ಹಿಶಾಮ್ 4-321
_ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಹೆಚ್ಚೆಚ್ಚು ಸ್ವಲಾತ್ ಹೇಳುವವರ ಕೂಟದಲ್ಲಿ ಅಲ್ಲಾಹು ನಮ್ಮನ್ನು ಸೇರಿಸಲಿ. ಆ ಮೂಲಕ ಮುತ್ತು ನೆಬಿಯ (ಸ್ವಲ್ಲಲ್ಲಾಹು ಅಲೈಹಿವಸಲ್ಲಮ್) ಪ್ರಜ್ವಲಭರಿತ ಪ್ರಶೋಭಿತ ಮುಖವನ್ನು ಸ್ವಪ್ನದಲ್ಲಿ ಕಾಣಲು ಅಲ್ಲಾಹು ತೌಫೀಖ್ ನೀಡಲಿ. ಆಮೀನ್
ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಮೇಲೆ ಪ್ರೀತಿಯಿಂದ ಒಂದು ಸ್ವಲಾತ್
ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯಿದಿನಾ ಮುಹಮ್ಮದಿನ್ ವ'ಅಲಾ ಆಲಿಹಿ ವಸ್ವಹ್'ಬಿಹಿ ವಸಲ್ಲಿಂ
_✍ನಾಸಿರ್ ಕಾವೂರ್._
➖➖➖➖➖➖➖➖➖
Best Regards ,
ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು
ಹಂಝ ಬಜ್ಪೆ (ಹಂಷಮಿ ಬಜ್ಪೆ )
Comments