Skip to main content

*ಗರ್ಭಿಣಿಗಳು ಮತ್ತು ಖರ್ಜೂರ* 🌴🌴🌴🌴🌴🌴🌴 ➖➖➖➖➖➖➖ ✍ ಗಫೂರ್ ಬಾಯಾರ್

*ಗರ್ಭಿಣಿಗಳು ಮತ್ತು ಖರ್ಜೂರ*
🌴🌴🌴🌴🌴🌴🌴
➖➖➖➖➖➖➖
✍ ಗಫೂರ್ ಬಾಯಾರ್
➖➖➖➖➖➖➖
ಭ್ರೂಣ ಶಾಸ್ತ್ರದ ಕುರಿತು ಖುರ್'ಆನ್ ಮತ್ತು ಹದೀಸ್' ಗಳಲ್ಲಿ ವರದಿಯಾದ ಹಲವಾರು ಅದ್ಬುತಗಳನ್ನು ನಾವು ತಿಳಿದವರಾಗಿದ್ದೇವೆ.

ಅವುಗಳಲ್ಲಿ ಪ್ರಮುಖವಾಗಿ, ಗರ್ಭಿಣಿ ಸ್ತ್ರೀಯರು ತಿಳಿದಿರಬೇಕಾದ ಒಂದು ಪ್ರಮುಖ ವಿಷಯಕ್ಕೆ ಖುರ್'ಆನ್ ಸೂಚನೆ ನೀಡುತ್ತದೆ.
ಗರ್ಭಿಣಿಯರು ಖರ್ಜೂರ ತಿನ್ನುವ ಕುರಿತಾಗಿದೆ ಅದು.

ಗರ್ಭಿಣಿಯರು ಖರ್ಜೂರ ತಿಂದರೆ ಲಭಿಸುವ ಪ್ರಯೋಜನಗಳಲ್ಲಿ  ಕೆಲವೂಂದನ್ನು  ನೋಡೋಣ.

1⃣ ಗರ್ಭಿಣಿಗಳಿಗೆ ವೈದ್ಯರು
ಫೊಳಿಕ್ ಆಸಿಡ್
( Folic Acid )
ಮಾತ್ರೆಗಳನ್ನು ನಿರ್ದೇಶಿಸುತ್ತಾರೆ.
*ಖರ್ಜೂರದಲ್ಲಿ ಧಾರಾಳವಾಗಿ ಪೊಳಿಕ್ ಆಸಿಡ್ ಒಳಗೊಂಡಿದೆ.*

2⃣ ಗರ್ಭಿಣಿಯ ಶರೀರದಲ್ಲಿ ಅಧಿಕ ರಕ್ತವನ್ನು ಉತ್ಪಾದಿಸಬೇಕಾಗುತ್ತದೆ. ಅಥವಾ ಅಧಿಕ ರಕ್ತ ಇರುವಿಕೆ ಅನಿವಾರ್ಯವಾಗಿದೆ.
( ಕಾರಣ ಗರ್ಭ ಕಾಲದಲ್ಲಿ ಮಗುವಿಗೂ ರಕ್ತ ಬೇಕಾಗುತ್ತದೆ ತಾನೇ..)
ಹೆಚ್ಚು ರಕ್ತವನ್ನು ಉತ್ಪಾದಿಸಲು ವೈದ್ಯರು ಕಬ್ಬಿನಾಂಶ ( Fe ) ಜಾಸ್ತಿ ಇರುವ ಟಾನಿಕ್ ( Tonic ) ನಿರ್ದೇಶಿಸುತ್ತಾರೆ.
*ಕಬ್ಬಿನಾಂಶ  ಕೂಡ ಖರ್ಜೂರದಲ್ಲಿ ಅಧಿಕವಾಗಿದೆ.*

3⃣ ನಮ್ಮ ಶರೀರದಲ್ಲಿ ಹಲವು ವಿಧದಲ್ಲಿ ಒಟ್ಟು ಸೇರುವ ವಿಷ ಪದಾರ್ಥಗಳಾಗಿದೆ ಫ್ರಿ ರಾಡಿಕಲ್'ಸ್. ಇದರಿಂದ ಶರೀರವನ್ನು ಶುದ್ದೀಕರಿಸುವ ವಸ್ತುಗಳಾಗಿದೆ ಆಂಟಿ ಓಕ್'ಸಿಡಂಟುಗಳು.
*ಖರ್ಜೂರದಲ್ಲಿ ಆಂಟಿ ಓಕ್'ಸಿಡಂಟುಗಳು ಅತ್ಯಧಿಕವಿದೆ.*

4⃣ ಹೆರಿಗೆ ಸಮಯದಲ್ಲಿ ಗರ್ಭಾಶಯ ಚಿಕ್ಕದಾಗಿ ಮಗುವನ್ನು ಹೊರಗೆ ತಳ್ಳಲು ಸಹಾಯವಾಗುವ ಒಂದು ಹಾರ್ ಮೋನ್ ಆಗಿದೆ "ಓಕ್ಸಿಟ್ಟೂಸಿನ್"
( Oxytosin )
ಈ ಹಾರ್ಮ್ಮೊನ್ ಪ್ರಸವ ಸಮಯದಲ್ಲಿ ಶರೀರದೊಳಗೆ ಕಡಿಮೆಯಾದರೆ ಮಗು ಹೊರ ಬರಲು  ತಾಯಿಯಂದಿರು ಕಷ್ಟಪಡಬೇಕಾಗಿ ಬರಬಹುದು.
ಮಾತ್ರವಲ್ಲ, ಇದೇ ಹಾರ್ ಮೋನ್  ಹೆರಿಗೆ ನಂತರ ಎದೆ ಹಾಲು ಉತ್ಪಾದಿಸಲು ಕೂಡಾ ಸಹಾಯ ಮಾಡುತ್ತದೆ.
*ಖರ್ಜೂರದಲ್ಲಿ ಈ ಹಾರ್ಮೋನ್ ಬಹಳಷ್ಟು ಅಡಗಿದೆ*

📗 _ಖುರ್'ಆನ್ ಹೇಳುತ್ತದೆ_📗

ಮರಿಯಂ ಬೀವಿ (ರ) ಪ್ರವಾದಿ ಈಸ ನಬಿ ಅಲೈಸಲಾಂ ರವರನ್ನು ಗರ್ಭ ಧರಿಸಿದ ಸಂದರ್ಭ ಮತ್ತು ಪ್ರಸವವನ್ನು ಖುರ್'ಆನ್ ಹೇಳುತ್ತದೆ. ಅದು ಈ ರೀತಿ;
*فَحَمَلَتْهُ فَانتَبَذَتْ بِهِ مَكَانًا قَصِيًّا*
*ಮರ್ಯಂ ಬೀವಿ (ರ) ಯವರು ಆ ಮಗುವಿನ ಗರ್ಭಧರಿಸಿದರು ಹಾಗೂ ದೂರದ ಒಂದು ಸ್ಥಳಕ್ಕೆ ತೆರಳಿದರು.*

*فَأَجَاءَهَا الْمَخَاضُ إِلَى جِذْعِ النَّخْلَةِ قَالَتْ يَا لَيْتَنِي مِتُّ قَبْلَ هَذَا وَكُنتُ نَسْيًا مَّنسِيًّا*
*ಪ್ರಸವದ ವೇದನೆಯು ಅವರನ್ನು ಒಂದು ಖರ್ಜೂರದ ಮರದೆಡೆಗೆ ಕೊಂಡೊಯ್ಯಿತು. ಆವಾಗ ಅವರು ಹೇಳಿದರು; "ನಾನು ಇದಕ್ಕಿಂತ ಮುಂಚೆಯೇ ತೀರಿ ಹೋಗಿದ್ದರೆ ಮತ್ತು ಮರೆಯಲ್ಪಟ್ಟವಳಾಗಿದ್ದಲ್ಲಿ ಚೆನ್ನಾಗಿತ್ತು."*

*فَنَادَاهَا مِن تَحْتِهَا أَلاَّ تَحْزَنِي قَدْ جَعَلَ رَبُّكِ تَحْتَكِ سَرِيًّا*
*ಕೆಲಭಾಗದಿಂದ ಅಲ್ಲಾಹನು ಈ ರೀತಿ ಕರೆದು ಹೇಳಿದನು;" ನೀವು ದುಃಖಿಸಬೇಡಿ. ನಿಮ್ಮ ಪರಿಪಾಲಕನು ನಿಮ್ಮ ತಲ ಭಾಗದಲ್ಲೊಂದು ಚಿಲುಮೆಯನ್ನು ಹರಿಸಿದ್ದಾನೆ.*

*وَهُزِّي إِلَيْكِ بِجِذْعِ النَّخْلَةِ تُسَاقِطْ عَلَيْكِ رُطَبًا جَنِيًّا*
*ಹಾಗೂ ನೀವು ಆ ಖರ್ಜೂರ ಮರದ ಕಾಂಡವನ್ನು ಅಲುಗಾಡಿಸಿರಿ. ನಿಮಗೆ ಹಣ್ಣಾದ ಖರ್ಜೂರವು ಬೀಳುವುದು.*

*فَكُلِي وَاشْرَبِي وَقَرِّي عَيْنًا*
*ನೀವು ಅದರಿಂದ ತಿಂದು, ಕುಡಿದು ಕಣ್ಮನಗಳನ್ನು ತಣಿಸಿರಿ.*
(ಸೂರಾ : ಮರ್ಯಂ 22--26)

ಈ ವಚನದ ತಫ್ಸಿರ್'ನಲ್ಲಿ ಇಮಾಂ ಇಬ್ನು ಕಸ್ಸೀರ್ (ರ) ಹೇಳುತ್ತಾರೆ.

ಅಂರು ಬಿನ್ ಮೈಮೂನ್ (ರ) ರವರು ಈ ವಚನವನ್ನು ಓದಿಕೊಂಡು ಈ ರೀತಿ ಹೇಳಿರುತ್ತಾರೆ.
*ಹೆರಿಗೆ ಸಮಯದಲ್ಲಿ ಒಂದು ಮಹಿಳೆಗೆ ಖರ್ಜೂರಕ್ಕಿಂತಲೂ, ಉತ್ತುತ್ತೆಕ್ಕಿಂತಲೂ ಒಳ್ಳೆಯ ಆಹಾರ ಬೇರೆ ಯಾವುದೂ ಇಲ್ಲ.*
(ತಫ್ ಸೀರ್ ಇಬ್ನ್ ಕಸೀರ್)

ಹಳೇ ಕಾಲದಲ್ಲಿ ತಾಯಿಯರು ಗರ್ಭ ಕಾಲದಲ್ಲಿ ಮನೆ ಮದ್ದೇ ಔಷಧಿಯಾಗಿ ಸ್ವೀಕರಿಸುತ್ತಿದ್ದರು. ಮನೆಯಲ್ಲಿಯೇ ಸುಖ ಪ್ರಸವ ನಡೆಯುತ್ತಿದ್ದವು.
ಗರ್ಭಕಾಲದಲ್ಲಿ ಮನೆ ಕೆಲಸ ಇನ್ನಿತರ ಚಟುವಟಿಕೆಗಳಲ್ಲಿ ಅವರು ನಿರತರಾಗುತ್ತಿದ್ದರು. ಆದರೆ ಈ ಆಧುನಿಕ ಕಾಲದಲ್ಲಿ ಸೌಕರ್ಯಗಳು ಅಧಿಕಗೊಂಡಾಗ ಪ್ರಸವಕ್ಕೆ ಮನೆ ಸಾಲದಾಯಿತು. ತಿಂಗಳಿಗೊಮ್ಮೆ ವೈಧ್ಯರನ್ನು ಸಮೀಪಿಸಬೇಕಾಯಿತು. ಹಲವಾರು ಔಷಧಿಗಳನ್ನು ಸೇವಿಸಬೇಕಾಗಿ ಬರುತ್ತದೆ.
ಅದೆಲ್ಲವೂ ಬೇಕಾದ ರೀತಿಯಲ್ಲಿ ಇರಲಿ. ಅದನ್ನು ತಪ್ಪೆಂದು ಹೇಳುತ್ತಿಲ್ಲ. ಆದರೆ ಖುರ್ ಆನ್ ನಮಗೆ ಕಲಿಸಿ ಕೊಟ್ಟ ಈ ಖರ್ಜೂರದ ಉಪಯೋಗವನ್ನು ಗರ್ಭಿಣಿ ಸ್ತ್ರೀಯರು ಮರೆಯಬಾರದು.
ತಾಯಿ ಮತ್ತು ಮಗು ಆರೋಗ್ಯದಿಂದಿರಲು ಔಷಧಿ ಯುಕ್ತವಾದ ಖರ್ಜೂರ ಅಧಿಕವಾಗಿ ಗರ್ಭಿಣಿಯರು ಉಪಯೋಗಿಸಲಿ.

ಅಲ್ಲಾಹು ನಮ್ಮ ಸಹೋದರಿಯರಿಗೆ ಸುಖ ಪ್ರಸವ ನೀಡಲಿ ಆಮೀನ್

✍ಗಫೂರ್ ಬಾಯಾರ್
🌴🌴🌴🌴🌴🌴🌴

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...