Skip to main content

ಶತ್ರುವಾಗಿ ಕಾಣುವವರಿಗೂ ಕರುಣೆಯ ಹಸ್ತ ಚಾಚುವ "ಮಹಾ ಕರುಣಾಮಯಿ": ಸುಲ್ತಾನುಲ್ ಉಲಮಾ, ಎಪಿ ಉಸ್ತಾದ್ ಮಲಯಾಳಂ ಮೂಲ: ಹುಸೈನ್ ತಂಗಳ್, ವಾಡಾನ ಹಳ್ಳಿ. ಕನ್ನಡಕ್ಕೆ: ಇಬ್ರಾಹಿಂ. ಡಿ.ಕರೋಪಾಡಿ.

ಶತ್ರುವಾಗಿ ಕಾಣುವವರಿಗೂ ಕರುಣೆಯ ಹಸ್ತ ಚಾಚುವ "ಮಹಾ ಕರುಣಾಮಯಿ": ಸುಲ್ತಾನುಲ್ ಉಲಮಾ, ಎಪಿ ಉಸ್ತಾದ್
ಮಲಯಾಳಂ ಮೂಲ: ಹುಸೈನ್ ತಂಗಳ್, ವಾಡಾನ ಹಳ್ಳಿ.
ಕನ್ನಡಕ್ಕೆ: ಇಬ್ರಾಹಿಂ. ಡಿ.ಕರೋಪಾಡಿ.

ಎಲ್ಲಾ ತಿಂಗಳ ಪ್ರಥಮ ವಾರದಲ್ಲಿ ಎಪಿ ಉಸ್ತಾದರನ್ನು ಕಾಣಲು ಮರ್ಕಝ್ ಗೆ ಬರುವ ಓರ್ವ ವಯೋವೃದ್ಧರಾದ  ಉಸ್ತಾದರನ್ನು ನಾನು ಕಂಡೆ. ನಾಲ್ಕು ತಿಂಗಳಿನಿಂದಲೂ ನಾನು ಅವರನ್ನು ಕಂಡಾಗ, ಜನರು ಬಿಟ್ಟುನಿಂತ ನಂತರ ನಾನು ಅವರ ಹತ್ತಿರ ಹೋದೆ. "ನೀವು ಎಲ್ಲಾ ತಿಂಗಳೂ ನಿರಂತರವಾಗಿ ಬರುತ್ತಿದ್ದೀರಲ್ಲ ಏನು ವಿಷಯ" ಎಂದು ಕೇಳಿದೆ. ಅದಕ್ಕೆ ಅವರ ಉತ್ತರ ಕಣ್ಣೀರಾಗಿತ್ತು. 'ಅಲ್ಲಾಹು ಉಸ್ತಾದರಿಗೆ ದೀರ್ಘಾಯುಷ್ಯವನ್ನು ಕರುಣಿಸಲಿ' ಎನ್ನುತ್ತಾ 'ನಾನು ಇಂದು ಜೀವಿಸಿರುವುದು ಎಪಿ ಉಸ್ತಾದರ ಕರುಣೆಯಿಂದ ಮಾತ್ರವಾಗಿದೆ' ಇದಾಗಿತ್ತು ಆ ಉಸ್ತಾದರ ಉತ್ತರ.

ಅವರ ಕಥೆಯು ಹೀಗಿತ್ತು..

ಎಂಟು ವರ್ಷಗಳ ಮುಂಚೆ ಇವರು ಕುನ್ನ ಮಂಗಳದ ಒಂದು ಮದ್ರಸದಲ್ಲಿ ಕೆಲಸ ಮಾಡುತ್ತಿದ್ದರು. (ಆವಾಗ ಇವರು ಎಪಿ ಉಸ್ತಾದರನ್ನು ಅಂಗೀಕರಿಸುವವರಾಗಿರಲ್ಲಿಲ್ಲ) ಒಮ್ಮೆ ಕೆಲಸದ ಮಧ್ಯೆ ಇವರಿಗೆ ಎದೆ ನೋವು ಕಾಣಿಸಿಕೊಂಡವು. ತಕ್ಷಣ ಆಸ್ಪತ್ರೆಗೆ ಹೋಗಿ ಎಡ್ಮಿಟ್ ಆದರು.ಡಾಕ್ಟರ್ ಹೇಳಿದರು,  ಹಾರ್ಟ್ ಬ್ಲೋಕ್ ಆಗಿದ್ದು ತಕ್ಷಣವೇ ಓಪರೇಷಣ್ ಮಾಡಬೇಕೆಂದು.ಓಪರೇಷಣ್ ಗೆ ತುಂಬಾ ಹಣದ ಅವಶ್ಯಕತೆ ಇತ್ತು.ಅದಕ್ಕಾಗಿ ತುಂಬಾ ಜನರನ್ನು ಸಮೀಪಿಸಿದರು. ಆದರೂ ಪ್ರಯೋಜನವಾಗಲಿಲ್ಲ.  ಹಾಗೆ ಕೆಲವರು ಎಪಿ ಉಸ್ತಾದರ ಹತ್ತಿರ ಈ ವಿಷಯವನ್ನು ಪ್ರಸ್ತಾಪಿಸಿದರು. ಎಪಿ ಉಸ್ತಾದ್ ಓಪರೇಷಣ್ ಗೆ ಬೇಕಾಗುವ ಹಣವನ್ನು ಸಂಗ್ರಹಿಸಿ ಕೊಟ್ಟರು.  ಹಾಗೆ ಓಪರೇಷಣ್ ಮುಗಿದು ನಂತರ ಒಂದುದಿನ ಅವರು ಎಪಿ ಉಸ್ತಾದರನ್ನು ಕಾಣಲು ಬಂದರು.

ಆದರೆ, ಉಸ್ತಾದ್ ಆ ವಿಷಯವನ್ನೆಲ್ಲಾ ಮರೆತಿದ್ದರು. ಎಪಿ ಉಸ್ತಾದರನ್ನು ಕಠಿಣವಾಗಿ ವಿರೋಧಿಸುತ್ತಿದ್ದ ಅವರ ಮನಸ್ಸು ಉಸ್ತಾದರನ್ನು ಕಂಡು ಬೇಸರಿಸಿದವು. ಉಸ್ತಾದರ ಒಡನಾಟವನ್ನು, ಉಸ್ತಾದರ ಸಾಮೀಪ್ಯವನ್ಮು ನೋಡಿ ತಾನು ಇದುವರೆಗೂ ಟೀಕಿಸುತ್ತಿದ್ದ ಮನುಷ್ಯ ಅಲ್ಲವೇ ಇವರು ಅಂತ ಮರುಕಪಟ್ಟರು.ನಂತರ ಎಪಿ ಉಸ್ತಾದರ ಬಗ್ಗೆ ಅವರಲ್ಲಿದ್ದ ಭಾವನೆ ಬದಲಾಯಿತಾದರೂ ತನ್ನ ಕೆಲಸವು ಮಾತ್ರ ಅಲ್ಲೇ ಮುಂದುವರೆಸಿದರು.

ತಾನು ರೋಗಿಯಾದರೂ ಮೂರು ಹೆಣ್ಣುಮಕ್ಕಳನ್ನು ಮದುವೆ ಮಾಡಿಸುವ ಜವಬ್ದಾರಿಯು ಅವರನ್ನು ಕೆಲಸದಲ್ಲಿ ಮುಂದುವರೆಯುವಂತೆ ಮಾಡಿತ್ತು. ಈ ಮಧ್ಯೆ ಹೆಂಡತಿಗೆ ಕಿಡ್ನಿ ರೋಗವು ಕಾಣಿಸಿಕೊಂಡವು. ಕಣ್ಣೀರಿನೊಂದಿಗೆ ಅವರು ಹಲವರನ್ನು ಸಮೀಪಿಸಿದರು. ಆದರೆ,ಮತ್ತೂ ಕಾಂತಪುರಂ ಉಸ್ತಾದರ ಕರುಣೆಯೇ ಬೇಕಾಗಿಬಂತು ಅವರ ಎಲ್ಲಾ ಕಷ್ಟಕಾರ್ಪಣ್ಯಗಳಿಗೆ.

ಅವರು ಹೇಳುತ್ತಿದ್ದರು, ತನ್ನ ಮೂರು ಹೆಣ್ಣುಮಕ್ಕಳನ್ನು ಮದುವೆ ಮಾಡಿಸಲು ಎಪಿ ಉಸ್ತಾದ್ ಸಹಾಯ ಮಾಡಿದರು.ಹಾಗೆ, ನನ್ನ ಮತ್ತು ನನ್ನ ಹೆಂಡತಿಯ ಜೀವನವನ್ನು ಉಳಿಸಲು ಪ್ರತೀ ತಿಂಗಳು 7000 ರೂಪಾಯಿಯ ಮದ್ದಿನ ಅವಶ್ಯಕತೆ ಇತ್ತು. ಆರು ವರ್ಷವಾಯಿತು, ಒಂದು ತಿಂಗಳೂ ಬಿಡದೆ ಎಪಿ ಉಸ್ತಾದ್ ನಮಗೆ ಈ ಮೊತ್ತವನ್ನು ಕೊಡುತ್ತಿದ್ದಾರೆ. ಈ ವಿಷಯವನ್ನು ಹೇಳುವಾಗ, 75 ವರ್ಷ ವಯಸ್ಸಿನ ವಯೋವೃದ್ಧರಾದ  ಆ ಉಸ್ತಾದರ ಕಣ್ಣಲ್ಲಿ ತುಂಬಿತುಳುಕುತ್ತಿದ್ದ ಸಂತೋಷವು ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದ್ದವು,  ಎಪಿ ಉಸ್ತಾದ್ ಎಂಬ ಆ ಮಹಾ ಮನುಷ್ಯನ ಸ್ಥಾನವನ್ನು ಚಿಂತಿಸಿ. ನಂತರ ನಾನು ಈ ವಿಷಯವನ್ನು ಮರ್ಕಝ್ ನಲ್ಲಿ ಕೆಲಸಮಾಡುವವರೊಂದಿಗೆ ಹೇಳಿದಾಗ, ಅವರಾರಿಗೂ ಈ ವಿಷಯ ಗೊತ್ತಿರಲಿಲ್ಲ.

ಕಳೆದ ಆರು ವರ್ಷಗಳಿಂದಲೂ
ಯಾರೂ ಅರಿಯದೆ ಎರಡು ಜೀವಗಳು ಎಪಿ ಉಸ್ತಾದರ ಕಾರಣದಿಂದ ಬದುಕುತ್ತಿವೆ ಎಂದು ತಿಳಿದಾಗ, ಈ ಮಹಾ ಮನುಷ್ಯ (ಎಪಿ ಉಸ್ತಾದ್) ಎಷ್ಟು ಎತ್ತರದಲ್ಲಿದ್ದಾರೆಂದು ನಾನು ಚಿಂತಿಸಿಬಿಟ್ಟೆ.

ಅಲ್ಲಾಹುವೇ ಉಸ್ತಾದರನ್ನು ಅರಿಯದೆ ಟೀಕಿಸುವವರಿಗೆ ಸತ್ಯವನ್ನು ಮನವರಿಕೆ ಮಾಡಿಕೊಡು.....
ಉಸ್ತಾದರಿಗೆ ದೀರ್ಘಾಯುಷ್ಯವನ್ನು, ಆರೋಗ್ಯವನ್ನು ಕರುಣಿಸು...ಆಮೀನ್..😭😭

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...