Skip to main content

*ಝಿಯಾರತ್ತ್ ಕೇಂದ್ರ* 3⃣4⃣ ➖➖➖➖➖➖➖ ಹಝ್ರತ್ ಸೈಯ್ಯದ್ ಮಾಲಿಕ್ ಇಬ್ನ್ ದೀನಾರ್ (ರ). ತಳಂಗರ, ಕಾಸರಗೋಡು. ➖➖➖➖➖➖➖ ✍ ಗಫೂರ್ ಬಾಯಾರ್

*ಝಿಯಾರತ್ತ್ ಕೇಂದ್ರ*
            3⃣4⃣
➖➖➖➖➖➖➖
ಹಝ್ರತ್ ಸೈಯ್ಯದ್ ಮಾಲಿಕ್ ಇಬ್ನ್ ದೀನಾರ್ (ರ).
ತಳಂಗರ, ಕಾಸರಗೋಡು.
➖➖➖➖➖➖➖
✍ ಗಫೂರ್ ಬಾಯಾರ್
🔹🔹🔹🔹🔹🔹🔹

🕌 ಪರಿಶುದ್ಧ ಇಸ್ಲಾಮ್ ಧರ್ಮವನ್ನು ಸ್ವೀಕರಿಸಲು ಮಕ್ಕಾಕ್ಕೆ ತೆರೆಳಿದ ಕೊನೆಯ ಚೇರಮಾನ್ ಪೆರುಮಾಳ್ ರಾಜರ ಜೊತೆಗೆ ಪ್ರವಾದಿ ﷺ ರವರು ಇಸ್ಲಾಮಿನ ಸುಂದರವಾದ ಸತ್ಯ ಸಂದೇಶವನ್ನು ಭಾರತಕ್ಕೆ  ತಲುಪಿಸಲು ಕಳುಹಿಸಿದ ಪ್ರಭೋಧನಾ ತಂಡವು ಹಿಜರಿ ವರ್ಷ 21ರಲ್ಲಿ ( A.D. 642-643 )ರಂದು ಹಝ್ರತ್ ಮಾಲಿಕ್ ಇಬ್ನು ದಿನಾರ್ (ರ)ರವರ ನೇತೃತ್ವದಲ್ಲಿ ತನ್ನ 44 ಶಿಷ್ಯಂದಿರರೊಂದಿಗೆ ಭಾರತ ದೇಶದ ಕೇರಳ ರಾಜ್ಯವನ್ನು ಲಕ್ಷ್ಯವಿಟ್ಟು ಯಾತ್ರೆ ಹೊರಟರು.

ಕೇರಳಕ್ಕೆ ಹೋರಟ 44 ಮಹಾನರುಗಳನ್ನು ಒಳಗೊಂಡ  ಈ ದೌತ್ಯ ಸಂಘ ಒಮಾನ್ ದೇಶದ ಸಲಾಲ ಎಂಬ ಸ್ಥಳದ ಶಹರ್ ಮಹಲ್ಲಾಕ್ಕೆ ತಲುಪಿದಾಗ
ಚೇರಮಾನ್ ಪೆರುಮಾಳ್ ಎಂಬ ತಾಜುದ್ದೀನ್ (ರ )ರವರು ತೀರಾ ಅಸ್ವಸ್ಥರಾಗಿ ಮಲಗಿದರು. ಅವರ ಕಾಯಿಲೆ ಉಲ್ಬವಿಸಿ ಯಾತ್ರೆ ಮುಂದುವರಿಸಲು ಅಸಾದ್ಯವಾದಾಗ ಉಳಿದವರಿಗೆ ತನ್ನ ಲಿಖಿತವಿರುವ ಶಿರಫಾಸಿನ ಪತ್ರವನ್ನು ಕೊಟ್ಟು ಯಾತ್ರೆ ಮುಂದುವರಿಸಲು ಹೇಳಿದರು. ಆ ಪತ್ರದೊಂದಿಗೆ ದೌತ್ಯ ಸಂಘ ಕೇರಳದ ಕೊಡುಂಗಲ್ಲೂರಿಗೆ ತಲುಪಿದರು. [ತಾಜುದ್ದೀನ್ (ರ)ರವರ ಮಕ್ಬರ ಶಹರ್ ಮಹಲ್ಲಾದಲ್ಲಿದೆ]

ಆತ್ಮೀಯ ನಕ್ಷತ್ರಗಳಾದ ಸ್ವಹಾಬಿವರ್ಯರ ಜೀವನ ಶೈಲಿಯನ್ನು ನೋಡಿದ ಕೇರಳದ ಅಮುಸ್ಲಿಮರ   ಎಡೆಯಲ್ಲಿ ಮುಸ್ಲಿಮರಿಗೆ ಇಸ್ಲಾಮಿಕ ಅಂತರಿಕ್ಷವನ್ನು ವ್ಯಾಪಿಸಲು ಹಾಗೂ ಸಾವಿರಾರು ಅಮುಸ್ಲಿಂಗಳು ಇಸ್ಲಾಮ್ ಧರ್ಮ ಸ್ವೀಕರಿಸಲು ಕಾರಣರಾದರು.

ಮಾಲಿಕ್ ಇಬ್ನು ದೀನಾರ್ (ರ)ರವರು ಮತ್ತು ಸಂಗಡಿಗರು ಕೇರಳದಲ್ಲಿ 10 ಮಸ್ಜಿದನ್ನು ಸ್ಥಾಪಿಸಿದ್ದರು. ಅದರಲ್ಲಿ ಒಂದು ಮಸ್ಜಿದಾಗಿದೆ ಕಾಸರಗೋಡಿನ ತಳಂಗರೆಯಲ್ಲಿರುವ ಮಸ್ಜಿದ್.
ಇದು ಹಿಜರಿ ವರ್ಷ 22ರ ರಜಬ್ ತಿಂಗಳ 18 ರಂದಾಗಿದೆ ನಿರ್ಮಿಸಿರುವುದು.

ಪರಿಶುದ್ಧ ಮಕ್ಕಾದಿಂದ ಆಗಮಿಸಿದ ಸಹಾಬಿವರ್ಯರ ಜೀವನ ಶೈಲಿ ಮಾದರಿಯೋಗ್ಯವಾಗಿತ್ತು. ಹಲವಾರು ಅಮಾನುಷಿಕ ಘಟನೆಗಳು, ಜೀವನ ರೀತಿ ಹಾಗು ಆತ್ಮ ವಿಶುದ್ಧಿಯ ಕಾರಣ ಕೇರಳದ ಅಮುಸ್ಲಿಂಗಳು ಮತ್ತು ಊರ ರಾಜರುಗಳು *ಮಹಾಪಿಳ್ಳ* ರೆಂಬ ವಿಶೇಷಣವನ್ನು ಮುಸ್ಲಿಂಮರಿಗೆ ಕೊಟ್ಟರು.

ಅವರು ಉಡುಗೊರೆಯಾಗಿಯು, ಕಾಣಿಕೆಯಾಗಿಯೂ, ಆಹಾರವಾಗಿಯೂ ಕೊಡುತ್ತಿದ್ದ ಯಾವುದೊಂದನ್ನು ನಿಷಿದ್ಧವಾದ ಸೊತ್ತಲ್ಲವೆಂದು ಖಚಿತಪಡಿಸಿದ ನಂತರವೇ ಉಪಯೋಗಿಸುತ್ತಿದ್ದರು.
ಎಳನೀರು ಕೊಟ್ಟು ಮಾಲಿಕ್ ಇಬ್ನು ದೀನಾರ್ (ರ) ಮತ್ತು ತಂಡವನ್ನು ಸ್ವೀಕರಿಸಿದಾಗ ಈ ಎಳನೀರು ಯಾವ ತೋಟದಿಂದಾಗಿದೆ ತಂದಿರುವುದು? ಇದರ ಒಡೆಯ ಯಾರು? ಒಡೆಯನ ಸಂತೋಷವು, ಅನುಮತಿಯು ಇದೆಯಾ? ಎಂದೆಲ್ಲಾ ಖಚಿತಪಡಿಸಿದ ನಂತರವಾಗಿತ್ತು ಅವರು ಎಳನೀರು ಕುಡಿದಿರುವುದು.
ಇವರ ಸೂಕ್ಷ್ಮತೆ, ಜೀವನ ಶೈಲಿ ಹಾಗು ಆತ್ಮೀಯ ಸಿದ್ದಿಯಲ್ಲಿ ವಿಸ್ಮಯಗೊಂಡು ಊರವರು ಅಂದು *ಮುಸ್ಲಿಂಮರಿಗೆ ಮಲಯಾಳದಲ್ಲಿ ಮಹಾ ಪಿಳ್ಳಮಾರ್ ಎಂದು ಹೆಸರಿಟ್ಟು ಕರೆಯುತ್ತಿದರು.*
*ನಂತರದ ಕಾಲದಲ್ಲಿ ಆ ಹೆಸರು ವಿಸ್ತರಿಸಿ  ಮಾಪ್ಪಿಳಮಾರ್ ಎಂದು ಬದಲಾವಣೆಯಾಗಿ ಇಂದಿಗೂ ಚಾಲ್ತಿಯಲ್ಲಿದೆ*

ಕಾಸರಗೋಡು ತಳಂಗರ ಜುಮಾ ಮಸ್ಜಿದ್ ಚರಿತ್ರಾ ಇತಿಹಾಸ ಪ್ರಸಿದ್ಧವು, ಖಾಝಿಗಳ ಆಸ್ಥಾನವು ಆಗಿದೆ.
ಮಾಲಿಕ್ ಇಬ್ನು ದೀನಾರ್ (ರ) ಜುಮಾ ಮಸ್ಜಿದಿನ ವರಾಂಡದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವುದು ಪ್ರಥಮ ಖಾಝಿಯು, ಸೂಫಿ ಪ್ರಮುಖರು ಆದ ಮಾಲಿಕ್ ಇಬ್ನು ದೀನಾರ್ (ರ) ರವರ ಪ್ರಿಯ ಪುತ್ರರಾದ ಶೈಖ್ ಮುಹಮ್ಮದ್ ಇಬ್ನು ಮಾಲಿಕ್ ಖುರೈಶಿ (ರ) ರವರಾಗಿದ್ದಾರೆ.
ಅವರ ವಿಯೋಗ ಹಿಜರಿ 100'ರ ಮೊದಲಾಗಿತ್ತು.

ಅರೇಬಿಯಕ್ಕೆ ಮರಳಿ ಹೋದ ಮಾಲಿಕ್ ಇಬ್ನು ದೀನಾರ್ (ರ) ರವರು ವೃದ್ದಾಪ್ಯ ಸಹಜವಾದ ರೋಗ ಕಾರಣ ಹಿಜರಿ ವರ್ಷ 24ರ ರಜಬ್ 23'ರಂದು ಗುರುವಾರ ಖುರಾಸಾನಿನಲ್ಲಿ ವಫಾತಾದರು.

ಕೇರಳ ಹಾಗು ಕರಾವಳಿ ಭಾಗದ ಇಸ್ಲಾಮಿಕ ಪ್ರಭೋದನೆಗೆ ನಾಯಕತ್ವ ವಹಿಸಿದರಲ್ಲಿ ಪ್ರಮುಖರಾದ ಮುಹಮ್ಮದ್ ಇಬ್ನು ಮಾಲಿಕ್ (ರ) ರವರ ಸಾನಿಧ್ಯ ನಮಗೆ ಅನುಗ್ರಹವು, ಐಶ್ವರ್ಯವು, ಆತ್ಮೀಯ ಮುನ್ನಡೆ ಲಭಿಸಲು ನಿಮಿತವಾಗಿರುತ್ತದೆ.

ಉದ್ದೇಶ ಸಫಲೀಕರಣಕ್ಕೆ ಕೀರ್ತಿಯಾದ ಈ ಪುಣ್ಯ ಮಖಾಮಿಗೆ ದಿನನಿತ್ಯ ಸಾವಿರಾರು ಮುಅ್ ಮಿನ್ ಗಳು, ಸತ್ಯ ವಿಶ್ವಾಸಿಗಳು ಝಿಯಾರತ್ತಿಗೆ ಬರುತ್ತಾರೆ.

ಚಂದ್ರಗಿರಿ ನದಿ ಅರಬಿ ಸಮುದ್ರದೊಂದಿಗೆ ಸಂಗಮಿಸುವ ಅಯಿಮುಖದ ಹತ್ತಿರವಾಗಿದೆ
ತಳಂಗರ ಜುಮಾ ಮಸ್ಜಿದ್ ಮತ್ತು ಮಖಾಮಿರುವುದು. ಈಗ ಇಲ್ಲಿ ಬೃಹತ್ತಾದ ಮಸೀದಿಯ ಪುಣರ್ ನಿರ್ಮಾಣ ಕಾಮಗಾರಿಯ ಕೊನೇಯ ಹಂತದಲ್ಲಿದೆ.

ಇಲ್ಲಿಯ ಉರೂಸ್ ನೇರ್ಚೆಯು 3 ವರ್ಷಗಳಿಗೊಮ್ಮೆ ನಡೆಯುತ್ತದೆ.
ಪರಿಸರದಲ್ಲಿ ಇನ್ನೂ ಹಲವಾರು ಮಕ್ಬರಗಳೂ ಇವೆ..

🛣ದಾರಿ : ಕಾಸರಗೋಡು ರೈಲು ನಿಲ್ದಾಣದಿಂದ 4 ಕಿ.ಮಿ ದೂರವಾಗಿದೆ ತಳಂಗರ.

✍ಗಫೂರ್ ಬಾಯಾರ್
🥀🥀🥀🥀🥀🥀🥀

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...