Skip to main content

*ಹೂರುಲ್ ಈನ್ ಸ್ವರ್ಗ ಸ್ತ್ರೀಯರು* 🍀🍀🍀🍀🍀🍀🍀🍀🍀 *✍ನಾಸಿರ್ ಕಾವೂರು🍇*

*ಹೂರುಲ್ ಈನ್ ಸ್ವರ್ಗ ಸ್ತ್ರೀಯರು*
🍀🍀🍀🍀🍀🍀🍀🍀🍀

*✍ನಾಸಿರ್ ಕಾವೂರು🍇*

ಇಹಲೋಕದ ಸುಂದರವಾದ ಹೆಣ್ಣನ್ನು ನೋಡಿ ಆಸೆಪಡುವ ನಾವು ಸ್ವರ್ಗದಲ್ಲಿರುವ *ಹೂರುಲ್ ಈನ್* ಎಂಬ ಸುಂದರ ತರುಣಿಯರ ಬಗ್ಗೆ ಅತ್ಯಂತಾ ಸಂಕ್ಷಿಪ್ತವಾಗಿ ತಿಳಿಯುವ

*ಸ್ವರ್ಗ ಸ್ತ್ರೀಯ ಸೌಂದರ್ಯದ ಬಗ್ಗೆ ಒಂದು ಘಟನೆ ಹೀಗಿದೆ*

*ಒಮ್ಮೆ ಜಿಬ್ರೀಲ್(ಅ) ಸ್ವರ್ಗದಲ್ಲಿ ಸಂಚರಿಸುತ್ತಿರುವಾಗ ಆಕಸ್ಮತ್ತಾಗಿ  ಒಂದು ಸ್ವರ್ಗ ಸ್ತ್ರೀಯನ್ನು ನೂಡುತ್ತಾರೆ. ಅವಳ ಸೌಂದರ್ಯ ನೂಡಿ ಬೆರಗಾಗಿ ಜಿಬ್ರೀಲ್(ಅ) ಬೋದ ರಹಿತವಾಗಿ ಬೀಳುತ್ತಾರೆ. سبحان الله ಆಶ್ಚರ್ಯವಲ್ಲವೇ.... ಜಿಬ್ರೀಲ್(ಅ) ಯಾರು....? ಅವರ ಮಹತ್ವವೇನು....?*

ಅಲ್ಲಾಹುವಿನ ಕೊಟ್ಯಾನುಕೋಟಿ ಮಲಕುಗಳ ಪೈಕಿ ಅತ್ಯಂತಾ ಶ್ರೇಷ್ಟರಾದ ಮಲಕುಗಳ ಸಂಖ್ಯೆ *ಹತ್ತು* ಇವರ ಹೆಸರುಗಳು ನಮಗೆಲ್ಲಾ ತಿಳಿದಿದೆ. ಈ ಹತ್ತರಲ್ಲಿ ಅತ್ಯಂತಾ ಶ್ರೇಷ್ಟರಾದ ಮಲಕುಗಳು *ಜಿಬ್ರೀಲ್(ಅ), ಮೀಕಾಯಿಲ್(ಅ),ಇಸ್ರಾಫೀಲ್(ಅ), ಅಝ್ರಾಯೀಲ್(ಅ)* ಎಂಬೀ ನಾಲ್ಕು ಮಲಕುಗಳಾಗಿದ್ದಾರೆ. ಈ ನಾಲ್ಕು ಮಲಕ್ ಗಳಲ್ಲಿ ಅತ್ಯಂತಾ ಶ್ರೇಷ್ಟತೆ ಇರುವ ಮಲಕ್ ಆಗಿದ್ದಾರೆ *ತ್ವಾಲೂಕುಲ್ ಅಮ್ಲಾಕ್ ಜಿಬ್ರೀಲ್(ಅ).* ಮಾತ್ರವಲ್ಲ ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಅಂಬಿಯಾ ಮುರ್ಸಲ್ ಗಳಿಗೆ ಅಲ್ಲಾಹುವಿನ ದಿವ್ಯ ಸಂದೇಶವನ್ನು ತಲುಪಿಸುವ ಮಹತ್ತರವಾದ ಜವಾಬ್ದಾರಿಯನ್ನು ಹೊತ್ತುಕೊಂಡ ಮಲಕ್ ಆಗಿದ್ದಾರೆ *ರೂಹುಲ್ ಅಮೀನ್ ಜಿಬ್ರೀಲ್(ಅ).*

ಇನ್ನು *ಜಿಬ್ರೀಲ್(ಅ)* ರವರ ನೈಜ್ಯರೂಪವನ್ನು ಸಂಕ್ಷಿಪ್ತವಾದ ರೀತಿಯಲ್ಲಿ ಹೆಳುವುದಾದರೆ *ಜಿಬ್ರೀಲ್(ಅ)* ರಿಗೆ ಆರುನೂರು ರೆಕ್ಕೆಗಳಿವೆ ಆ ಆರುನೂರು ರೆಕ್ಕೆಯಲ್ಲಿ ಒಂದು ರೆಕ್ಕೆಯನ್ನು ಬಿಡಿಸಿದರೆ ಅದರ ಮಧ್ಯದಲ್ಲಿ ಏಳು ಆಕಾಶ ಹಾಗೂ ಏಳು ಭೂಮಿಯಷ್ಟು ವಿಶಾಲತೆ ಇರುವುದು. *ಸುಬುಹಾನಲ್ಲಾಹ್....!*

ಇಷ್ಟೊಂದು ಶ್ರೇಷ್ಟತೆ ಇರುವ ಹಾಗೂ ಉನ್ನತ ಸ್ಥಾನದಲ್ಲಿರುವ *ಜಿಬ್ರೀಲ್(ಅ)* ಸ್ವರ್ಗಸ್ತ್ರೀಯ ಸೌಂದರ್ಯ ಕಂಡು  ಬೊದರಹಿತವಾಗಿ ಬಿದ್ದರೆ ಅವರ ಸೌಂದರ್ಯ ಎಷ್ಟಿರಬಹುದು....? ನಮಗೆ ಊಹಿಸಲೂ ಅಸಾಧ್ಯ. ಆದರೆ *ಖುರ್ ಆನ್, ಹದೀಸ್* ಗಳಲ್ಲಿ ಧಾರಾಳವಾಗಿ ಆ ಸುಂದರ ತರುಣಿಯರ ಬಗ್ಗೆ ಪ್ರಸ್ತಾಪಿಸಲಾಗಿದೆ.

ಯಾವುದೇ ಒಂದು ಹೆಣ್ಣಿನ ಸೌಂದರ್ಯ ನೊಡಲು ಮೊದಲು ನೊಡುವುದು ಅವಳ ಕಣ್ಣಾಗಿದೆ. ಖುರ್ ಆನ್ ಸ್ವರ್ಗದ ತರುಣಿಯರ ಬಗ್ಗೆ ಹೇಳುವುದು ಇದೇ ರೀತಿಯಾಗಿದೆ  *"ಸುಂದರ ಬೊಗಸೆ ಕಣ್ಣುಗಳುಲ್ಲ ರೂಪವತಿಯರು"*

*ಹುಣ್ಣಿಮೆಯ ಚಂದ್ರನಂತಿದೆ ಅವರ ಶರೀರದ ಬಣ್ಣ*

*ಬೆಣ್ಣೆಯಂತೆ ಮ್ರುದುವಾಗಿದೆ ಅವರ ಶರೀರ*

*ಜೆನಿನಂತೆ ಸಿಹಿಯಾಗಿದೆ ಅವರ ಉಗುಳು*

*ಮುತ್ತಿನಂತಿದೆ ಅವರ ಹಲ್ಲುಗಳು*

*ಅವರ ಶರೀರವಿಡೀ ಸುಗಂಧದಿಂದ ಘಮ ಘಮಿಸುತ್ತಿರುತ್ತದೆ*

*ಅವರ ಶರೀರಕ್ಕೆ ಯಾವುದೇ ಕೇಡು ಸಂಭವಿಸುವುದಿಲ್ಲ. ಅವರ ಆಕರ್ಷಣೀಯವಾದ ಉಬ್ಬಿದ ಸ್ತನಗಳು ಎಷ್ಟು ಕಾಲವಾದರೂ ಇಳಿ ಬೀಳುವುದಿಲ್ಲ*

*ಸ್ವರ್ಗದ ಒಬ್ಬಳು ರೂಪವತಿಯೇನಾದರೊ ಭೊಮಿಗೆ ಬಂದರೆ ಇಡೀ ಭೊಲೋಕವೇ ಪ್ರಕಾಶದಿಂದ ಕಂಗೊಳಿಸುತ್ತದೆ. ಈ ಭೊಲೋಕವಿಡೀ ಪರಿಮಳದಿಂದ ಕೂಡುತ್ತದೆ*

*ಅವಳು ಧರಿಸುವ  ತಲೆಯ ಮಕ್ಕನೆಗೆ ಇಡೀ ಭೊಲೋಕದ ಸರ್ವ ಐಶ್ವರ್ಯವನ್ನು ಮಾರಿದರೊ ಕೂಡಾ ಅದರ ಬೆಲೆ ಸಿಗುವುದಿಲ್ಲ*

*ಅವಳು ಸಮುದ್ರಕ್ಕೆ ಉಗುಳಿದರೆ ಈಡೀ ಸಮುದ್ರದ ನೀರೆಲ್ಲಾ ಸಿಹಿಯಾಗುವುದು*

*ಆ ತರುಣಿಯರಿಗೆ ಸಿಟ್ಟು, ಹಠ, ಅಸೂಯೆ, ಅತೃಪ್ತಿ, ಭಯ, ಅಳು, ಬೆವರು, ಹೈಳ್, ದುರಾಸೆ, ಮಲಮೂತ್ರ, ನಿರಾಶಕ್ತಿ, ಮುಂತಾದ ಯಾವುದೇ ರೀತಿಯ ಸಮಸ್ಯೆಗಳಿರುವುದಿಲ್ಲ*

*ಅವರನ್ನು ಮುಂಚೆ ಯಾವುದೇ ಜಿನ್ನೋ ಮನುಷ್ಯನೊ ಮುಟ್ಟಿರುವುದಿಲ್ಲ*

*ಅವರನ್ನು ಮುತ್ತು ರತ್ನಗಳ ಚಿಪ್ಪಿನೊಳಗೆ ಅಲ್ಲಾಹು ಅಡಗಿಸಿಟ್ಟಿದ್ದಾನೆ*

*ಅವರನ್ನು ಮುಟ್ಟುವ ಅಧಿಕಾರ ಇರುವುದು ಅವರ ಹೆಜಮಾನನಾದ ಸ್ವರ್ಗವಾಸಿಗೆ ಮಾತ್ರ*

*ಆ ತರುಣಿಯರು ತನ್ನ ಹೆಜಮಾನನಾದ ಸ್ವರ್ಗವಾಸಿಯನ್ನು ಅವರ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುವ ಪ್ರೇಮಿಗಳಾಗಿದ್ದಾರೆ*

*ಅವರೊಡನೆ ದೈಹಿಕ ಸಂಪರ್ಕದಲ್ಲೇರ್ಪಟ್ಟರೆ ಅದರಿಂದ ಬೇರ್ಪಡಲು ನಲ್ವತ್ತು ದಿನಗಳು ಉರುಳುತ್ತದೆ*

*ಅವರು ಯಾವತ್ತೂ ಕನ್ಯೆಯಾಗಿಯೇ ಇರುತ್ತಾರೆ. ಅವರ ಬಳಿ ಸಂಪರ್ಕದಲ್ಲೇ ರ್ಪಟ್ಟ ನಂತರ ಹರಿದ ಕನ್ಯಾಪೊರೆ ಮತ್ತೆ ಮುಂಚೆಯಂತಾಗುತ್ತದೆ. ಅದು ಹರಿಯುವಾಗ ಅದರ ನೋವು ಕೂಡಾ ಅವರಿಗೆ ಉಂಟಾಗುವುದಿಲ್ಲ. ಎಷ್ಟು ಬಾರಿ ಸಂಪರ್ಕದಲ್ಲೇರ್ಪಟ್ಟರೂ ನಂತರ ಅವರು ಕನ್ಯಾಯಾಗಿಯೇ ಉಳಿಯುತ್ತಾರೆ ಅವರ ಕನ್ಯತ್ವಕ್ಕೆ ಯಾವುದೇ ಕೊರತೆ ಬರುವುದಿಲ್ಲ.*

*ಅವಳ ಜೊತೆ ದೈಹಿಕ ಸಂಪರ್ಕದಲ್ಲೆರ್ಪಡಬೇಕೆಂದು ಒಬ್ಬ ಸ್ವರ್ಗವಾಸಿ ಆಶಿಸಿದರೆ ಅದು ಅವಳಿಗೆ ತಿಳಿಸಬೇಕೆಂದಿಲ್ಲ. ಆ ರೀತಿಯ ಭಾವನೆ ಮೂಡುವಾಗ ತಕ್ಷಣವೇ ಅದು ಅವಳಿಗೆ ತಿಳಿದು ತನ್ನ ಹೆಜಮಾನನಾದ ಸ್ವರ್ಗವಾಸಿಯ ಆಸೆಯನ್ನು ಈಡೇರಿಸುತ್ತಾಳೆ.*

ಆ ತರುಣಿಯರು ಸ್ವರ್ಗ ವಾಸಿಗಳಾದ ತಮ್ಮ ಹೆಜಮಾನನ ತಲೆ ಮತ್ತು ಕಾಲುಗಳ ಬಳಿಯಲ್ಲಿ ರಾಗವಾಗಿ ಈ ಹಾಡುಗಳನ್ನು ಹಾಡಿ ಅವರನ್ನು ಸಂತೋಷ ಪಡಿಸುತ್ತಿರುತ್ತಾರೆ👇.

*ನಮಗೆ ಸಾವಿಲ್ಲ ನಾವು ಬದುಕುವವರು*

*ನಮಗೆ ಭಯವಿಲ್ಲ ನಾವು ನಿರ್ಭಯರು*

*ನಮಗೆ ಅತೃಪ್ತಿ ಇಲ್ಲ ನಾವು ಯಾವತ್ತೂ ತೃಪ್ತರು*

*ನಾವು ಬೇರೆ ಬೇರೆ ವಿಧದ ರೇಷ್ಮೆ ವಸ್ತ್ರ ಧರಿಸುವವರು ಅದು ಎಂದಿಗೂ ಹಳತಾ ಗುವುದಿಲ್ಲ*

*ನಾವು ಸುಂದರಿಯರು ನಮ್ಮ ಸೌಂದರ್ಯಕ್ಕೆ ಕೊರತೆಯೇ ಬರುವುದಿಲ್ಲ*

*ಆ ರೂಪವತಿಯರನ್ನು ಅಲ್ಲಾಹು ಮುತ್ತು ರತ್ನದಂತೆ ಎಂದು ಖುರ್ ಆನಿನಲ್ಲಿ ವರ್ಣಿಸಿದ್ದಾನೆ*

*ಅತ್ಯಂತಾ ಕನಿಷ್ಟ ದರ್ಜೆಯಲ್ಲಿ ಸ್ವರ್ಗ ಪ್ರವೇಶ ಮಾಡುವವನಿಗೆ ಕೂಡಾ ಇಂತಹಾ ಎಪ್ಪತ್ತೆರಡು ರೂಪವತಿಯರಾದ ಮಡದಿಗಳು ಸ್ವರ್ಗದಲ್ಲಿರುತ್ತಾರೆ.*

ಅಲ್ಲಾಹು ನಮ್ಮನ್ನು ಹಾಗೂ ನಮ್ಮನ್ನಗಲಿದ ಕುಟುಂಬದವರ ನ್ನೂ ಆ ಸುಂದರವಾದ ಲೋಕದಲ್ಲಿ ಒಗ್ಗೂಡಿಸಲಿ *"ಆಮೀನ್"*
💎💎💎💎💎💎💎💎💎

*ಪ್ರೇಮ ಬಾಜನರ ಮೇಲೆ ಪ್ರೀತಿಯಿಂದ ಒಂದು ಸ್ವಲಾತ್*

💚💚💚💚💚💚💚💚💚
*ಅಲ್ಲಾಹುಮ್ಮ ಸ್ವಲ್ಲಿ ಅಲಾ ಸಯ್ಯದನಾ ಮುಹಮ್ಮದಿನ್ ವ ಅಲಾ ಆಲಿಹಿ ವ ಸ್ವಹ್ ಬಿಹೀ ವ ಸಲ್ಲಮ್*
💚💚💚💚💚💚💚💚💚

*✍ನಾಸೀರ್ ಕಾವೂರು🍇*
➖➖➖➖➖➖➖➖➖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...