ಮನದಲ್ಲಿ ಮದೀನಾ
*Habeebaredege payana_95*
الصَّلاَۃُ وَالسّلَامُ عَلَيۡكَ يَا سيِّدي ياَ رَسُولَ ﷲ. خُذ بِاَيۡدِيِناَ ياَ حَبِيبَ ﷲﷺ.
*ಯಾ ಮುತ್ತು ರಸೂಲಲ್ಲಾಹ್ ﷺ*
ತಮ್ಮಯﷺ ಪ್ರಿಯ ಪುತ್ರಿ ಫಾತಿಮಾ ಬೀವಿ رضي الله عنها ರವರ ಮಕ್ಕಳಾದ ಹಸನ್, ಹುಸೈನ್ رضي الله عنهم ರವರು ಒಂಟೆಯ ಮೇಲೆ ಕುಳಿತುಕೊಳ್ಳಲು ಆಸೆಪಡುತ್ತಿದ್ದರು, ಆದರೆ ಆ ಬಡ ಕುಟುಂಬಕ್ಕೆ ಸ್ವಂತವಾಗಿ ಒಂಟೆ ಖರೀದಿಸಲು ಹಣವಿರಲಿಲ್ಲ, ಫಾತಿಮ ಬೀವಿಯವರ ಮನೆಗೆ ತಾವುﷺ ಹೋದಾಗ ಮೊಮ್ಮಕ್ಕಳ ಆಸೆ ಕಂಡು ತಾವುﷺ ತಮ್ಮಯﷺ ಮೊನಕಾಲೂರಿ ತಮ್ಮಯﷺ
ಮೊಮ್ಮಕ್ಕಳಾದ ಹಸನ್, ಹುಸೈನ್ رضي الله عنهم ರವರನ್ನು ತಮ್ಮಯﷺ ಪುಣ್ಯ ಬೆನ್ನಿನ ಮೇಲೆ ಕುಳಿತುಕೊಳ್ಳಿಸಿ ಒಂಟೆ ನಡೆಯುವುವಂತೆ ಆಚೆ ಈಚೆ ನಡೆದಾಡಿದ್ದೀರಿ, ಆಗ ತಮ್ಮಯﷺ ಮೊಮಕ್ಕಳು ನೈಜ ಒಂಟೆಯ ಮೇಲೆ ಕುಳಿತು ಆನಂದಪಡುವುದಕ್ಕಿಂತಲೂ ಮಿಗಿಲಾಗಿ ಆನಂದಪಟ್ಟರು....
"ಮಕ್ಕಳೊಂದಿಗೆ ಕರುಣೆ ತೋರಿರಿ ಎಂದು, ಮಕ್ಕಳನ್ನು ಹೇಗೆ ಪ್ರೀತಿಸಿ, ಮುದ್ದಿಸಬೇಕೆಂದು ಜಗತ್ತಿಗೆ ಪ್ರಯೋಗಿಕವಾಗಿ ಮಾಡಿ ತೋರಿಸಿದ ಯಾ ಹಬೀಬಲ್ಲಾಹ್ﷺ ತಮ್ಮಯﷺ ಪುಣ್ಯ ಬೆನ್ನನ್ನು ಸ್ಪರ್ಶಿಸಿದ ಆ ಮೊಮ್ಮಕ್ಕಳೆಷ್ಟು ಭಾಗ್ಯವಂತರು....ತಮ್ಮನ್ನುﷺ ನೇರವಾಗಿ ಸ್ಪರ್ಶಿಸಲು, ದರ್ಶಿಸಲು ಸಾಧ್ಯವಾಗದ ನಿರ್ಭಾಗ್ಯವಂತರು ನಾವು, ಅದಕ್ಕಿರುವ ಅರ್ಹತೆಯೂ ಇಲ್ಲದವರು ನಾವು, ಆದರೆ, ನಮಗೊಂದು ಆಗ್ರಹವಿದೆ, ತಮ್ಮಯﷺ ಕುಟುಂಬವನ್ನು ಅತೀಯಾಗಿ ಪ್ರೀತಿಸಿ ಗೌರವಿಸುವ ಕಾರಣಕ್ಕಾದರೂ ನಾವು ನಮ್ಮ ಕನಸಿನಲ್ಲಿ ತಮ್ಮನ್ನುﷺ ದರ್ಶಿಸಿ, ತಮ್ಮಯﷺ, ಪುಣ್ಯ, ಕೈ,ಕಾಲುಗಳನ್ನು ಸ್ಪರ್ಶಿಸಬೇಕು ಅನುಗ್ರಹಿಸಿರಿ *ಯಾ ಜದ್ದುಲ್ ಹಸನ್ ವಲ್ ಹುಸೈನ್ﷺ*
✒_ಕೆ.ಎಂ ಇರ್ಶಾದ್ ಪಕ್ಷಿಕೆರೆ
🍃🍃🍃🍃🍃🍃🍃🍃🍃🍃🍃

Comments