Skip to main content

ಮೌಲಿದ್ ಇತಿಹಾಸ

ಮೌಲಿದ್ ಇತಿಹಾಸ
.
ಇಸ್ಲಾಮಿ ಇತಿಹಾಸ ಮತ್ತು ಖುರ್‌ಆನ್, ಹದೀಸ್‌ಗಳ ವಸ್ತು ನಿಷ್ಟ ಅಧ್ಯಯನ ನಡೆಸಿದ ಯಾರಿಗೂ ಮೌಲಿದ್ ಆಚರಣೆಯನ್ನು ವಿರೋಧಿಸಲು ಸಾಧ್ಯವಿಲ್ಲ.

*ಮೌಲಿದ್ ಆಚರಣೆಯ ಇತಿಹಾಸ ಆರಂಭವಾಗುವುದೇ 'ಮಕ್ಕಾ'ದಿಂದ.ಇತಿಹಾಸವನ್ನು ಸ್ವಲ್ಪ ತೆರೆದು ನೋಡಿದರೆ ಇದರ ಧಾರಳ ಉದಾಹರಣೆಗಳು ಲಭ್ಯ.*

ಇತಿಹಾಸಕಾರರದ ಇಬ್ನು ಜುಬೈರ್ (540-614) ತನ್ನ "ರಿಹಾಲ್" ಎಂಬ ಕ್ರತಿಯಲ್ಲಿ ಮಕ್ಕಾದ ಮೌಲಿದಾಚರಣೆಯ ಅನುಭವವನ್ನು ಹೀಗೆ ವಿವರಿಸುತ್ತಾರೆ.

" *ಈ ಅನುಗ್ರಹೀತ ಸ್ಥಳ ( ಪ್ರವಾದಿ ﷺ ರವರ ಜನನ ಸ್ಥಳ) ತೆರೆಯಲಾಯಿತು. ಬರ್ಕತ್ ಪಡೆಯುವ ಸಲುವಾಗಿ ಎಲ್ಲರೂ ಅದರೊಳಗೆ ಪ್ರವೇಶಿಸಿದರು. ಆ ದಿನ ಮತ್ತು ಆ ತಿಂಗಳ ಪ್ರತಿ ಸೋಮವಾರ ರೂಢಿಯದು.ಯಾಕೆಂದರೆ ಅವರು ಹುಟ್ಟಿದ ತಿಂಗಳದು"*

ಏಳನೇ ಶತಮಾನದ ಇತಿಹಾಸ ತಜ್ಞರಾದ ಅಬುಲ್ ಅಬ್ಬಾಸ್ ತಮ್ಮ ಕ್ರತಿಯಾದ " ಕಿತಾಬು ದುರ್ರ್ ಅಲ್ ಮುನಝಮ್ ನಲ್ಲಿ ಹೀಗೆಂದಿದ್ದಾರೆ.

*ಮಕ್ಕಾದಲ್ಲಿ  ಮೌಲಿದಾಚರಣೆಗೆ ಹೊರತಾದ ಯಾವುದೇ ಚಟುವಟಿಕೆಗಳು ಆ ದಿನ ನಡೆಯುವುದಿಲ್ಲ. ಜನ ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಪ್ರವಾದಿﷺ ರವರ ಜನ್ಮ ಸ್ಥಳದ ಸಂದರ್ಶನಕ್ಕೆ ತೆರಳುತ್ತಾರೆ.ಅಂದು ಕಾಬಾವನ್ನು ತೆರೆದು ಸಂದರ್ಶನಕ್ಕೆ ಅನುವು ಮಾಡಿ ಕೊಡಲಾಗುವುದು. "*.

ಎಂಟನೇ ಶತಮಾನದ ಖ್ಯಾತ ಇತಿಹಾಸ ತಜ್ಞ ಇಬ್ನು ಬತೂತ ತನ್ನ ರಿಹ್ಲಾ ದಲ್ಲಿ ಮೌಲಿದಾಚರಣೆಯನ್ನು ವಿವರಿಸುವುದು ಹೀಗೆ.

" *ಪ್ರವಾದಿ ﷺ ರವರ ಜನ್ಮ ದಿನದಂದು ಕ‌ಅಬಾದ ಕಾವಲುಗಾರರಾದ ಬನೂ ಶೈಬಾದ ಮುಖಂಡ ನಿಂದ ಕ‌ಅಬ ತೆರೆಯಲ್ಪಡುತ್ತದೆ.*
*ಮೌಲಿದ್ ದಿನ ಮಕ್ಕಾದ ನ್ಯಾಯಾಧೀಶರಿಂದ ಪ್ರವಾದಿ ﷺ ರವರ ಕುಟುಂಬಸ್ಥರಿಗೆ,ಊರಿನ ಪ್ರಮುಖರಿಗೆ,ಹಾಗೂ ಮಕ್ಕಾ ನಿವಾಸಿಗಳಿಗೆ ಆತಿಥ್ಯ, ಮತ್ತು ಭಕ್ಷ್ಯ ವಿತರಣೆ ನಡೆಯುತ್ತದೆ*

ಹತ್ತನೇ ಶತಮಾನದ ಈ ಕೆಳಗಿನ ಇತಿಹಾಸ ಕ್ರತಿಗಳಲ್ಲಿ ಅಂದು ನಡೆದ ಮೌಲಿದಾಚರಣೆಗಳ ಮಾಹಿತಿ ದೊರೆಯುತ್ತದೆ.
ಇತಿಹಾಸ ವಿದ್ವಾಂಸರಾದ ಇಬ್ನು ಹುರೈರಾ ರವರ " ಅಲ್ ಜಾಮಿಉಲ್ ಲತೀಫ್" ಹಾಫಿಳ್ ಇಬ್ನು ಹಜರಿಲ್ ಹೈತಮಿಯವರ ಅಲ್ ಮೌಲಿದ್ ಅಲ್ ಶರೀಫಿಲ್ ಮುಅಳ್ಳಮ್ " ಇತಿಹಾಸ ವಿದ್ವಾಂಸರಾದ ಅಲ್ ನಹ್ರವಾಲಿಯಾ ರವರ ಅಲ್ ಇಅ್‌ಲಾಂ ಬಿ ಅಅ್‌ಲಾ‍ಂ ಬೈತುಲ್ಲಾಹಿಲ್ ಹರಾಂ ಮುಂತಾದ ಕ್ರತಿಗಳೇ ಇದಕ್ಕೆ ಸಾಕ್ಷಿ.

*ಮಕ್ಕಾದಲ್ಲಿ ಮೌಲಿದ್ ಇದೆಯಾ,ಮದೀನಾದಲ್ಲಿ ಮೀಲಾದುನ್ನಬೀ ಇದೆಯಾ ಎಂದು ಕೇಳುವವರು ಇತಿಹಾಸ ಅರಿತಿಲ್ಲವೆಂದೇ ಅರ್ಥ.*
*ವಹಾಬಿಸಂ ಬರುವ ವರೆಗು ಮಕ್ಕ,ಮದೀನದಲ್ಲಿ ಎಲ್ಲವೂ ಇತ್ತು.ಆದರೆ ಪ್ರವಾದಿﷺ ರವರ ಭವಿಷ್ಯ ನುಡಿದಂತೆ ಶೈತಾನ್ ಕೊಂಬು (ವಹಾಬಿಸಮ್) ಉದಯವಾದ ನಂತರ ಎಲ್ಲವೂ ಮಾಯವಾಯಿತು.*

         *ಎಂ ಎಂ ಸಖಾಫಿ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...