Skip to main content

ಹತ್ತು ವರ್ಷಗಳ ಕಾಲ ತಮ್ಮಯﷺ ಸೇವೆ ಗೈಯ್ಯಲು ಭಾಗ್ಯ ಲಭಿಸಿದ ಅನಸ್ رضي الله عنه


ಮನದಲ್ಲಿ ಮದೀನಾ
   *Habeebaredege payana_92*
الصَّلاَۃُ وَالسّلَامُ عَلَيۡكَ يَا سيِّدي ياَ رَسُولَ ﷲ. خُذ بِاَيۡدِيِناَ ياَ حَبِيبَ ﷲﷺ.
*ಯಾ ಮುತ್ತು ರಸೂಲಲ್ಲಾಹ್ ﷺ*
    ಹತ್ತು ವರ್ಷಗಳ ಕಾಲ ತಮ್ಮಯﷺ ಸೇವೆ ಗೈಯ್ಯಲು ಭಾಗ್ಯ ಲಭಿಸಿದ ಅನಸ್ رضي الله عنه ತಮ್ಮಯﷺ ವಫಾತ್ ಬಳಿಕ ಅಷ್ಟೇನು ಬೇಸರ ಮಾಡಲಿಲ್ಲ, ಸ್ವಹಾಬಿಗಳು ಅವರೊಂದಿಗೆ ಕೇಳಿದರು, ಹತ್ತು ವರ್ಷಗಳ ಕಾಲ ಮುತ್ತು ನಬಿﷺ ರವರ ಸೇವೆಗೈಯ್ಯಲು ಭಾಗ್ಯ ಲಭಿಸಿದ ಓ ಅನಸ್ رضي الله عنه, ಮುತ್ತು ನಬಿﷺ ರವರು ವಫಾತ್ ಆದಮೇಲೆ ಅಷ್ಟೇನು ಬೇಸರ ನಿಮ್ಮಲ್ಲಿ ಕಾಣುತಿಲ್ಲವಲ್ಲ ಯಾಕೆ? ಆಗ ಅನಸ್ رضي الله عنه ರವರು ಹೇಳಿದರು ಮುತ್ತು ನಬಿﷺ ರವರು ವಫಾತ್ ಆದ ಆ ದಿನದಿಂದ ಇಂದಿನ ತನಕ ಪ್ರತೀ ನಿತ್ಯ ರಾತ್ರಿ ಕನಸಿನಲ್ಲಿ ಆ ಮುತ್ತು ನಬಿﷺ ತಂಙಳರನ್ನು ಕಾಣುತ್ತಾ ಆನಂದಗೊಳ್ಳುತ್ತಿದ್ದೇನೆ, ಆ ಮುತ್ತು ನಬಿﷺ ರವರನ್ನು ಪ್ರತೀ ದಿನ ಕಾಣುವ ಸಂತೋಷದಲ್ಲಿ ಅವರ ವಫಾತಿನ ದುಖವನ್ನು ಮರೆಯುತ್ತಿದ್ದೇನೆ, ಮತ್ತೇಕೆ ನಾ ಬೇಸರಿಸಲಿ....
ಯಾ ಹಬೀಬಲ್ಲಾಹ್ﷺ ತಮ್ಮಯﷺ ಸೇವಕರಾಗಿದ್ದ ಅನಸ್ رضي الله عنه ರವರು ಅದೆಷ್ಟು ಭಾಗ್ಯವಂತರು ರಸೂಲರೆﷺ, ಅವರು ಪ್ರತಿ ಪ್ರತಿ ನಿತ್ಯ ಕನಸಿನಲ್ಲಿ ತಮ್ಮನ್ನುﷺ ಕಾಣಬೇಕಾದರೆ ತಮ್ಮೊಂದಿಗಿರುವ ಪ್ರೀತಿ ಅದೆಷ್ಟು ಅದಮ್ಯವಾಗಿರಬಹುದು ರಸೂಲರೆﷺ ಊಹಿಸಲೂ ನಮ್ಮಿಂದ ಸಾಧ್ಯವಾಗುತ್ತಿಲ್ಲ, ತಮ್ಮಯﷺ ಸ್ವಹಾಬಿಗಳು, ಆಶಿಖುಗಳು ಪ್ರತೀ ದಿನ ತಮ್ಮನ್ನುﷺ, ಕಾಣುವುದಾದರೆ, ಏನು ಇಲ್ಲದ ಪಾಪಿಗಳಾದ ನಾವೂ ಆಗ್ರಹಿಸುತ್ತಿದ್ದೇವೆ ಹಬೀಬರೆﷺ ನಾವು ಮರಣ ಹೊಂದುವ ಮುಂಚೆ ಒಮ್ಮೆಯಾದರೂ ಕನಸಿನಲ್ಲಿ ತಮ್ಮನ್ನುﷺ ದರ್ಶಿಸಬೇಕು, ಅರ್ಹತೆ ಇಲ್ಲದಿದ್ದರೂ ಮನದಾಸೆಯಿದೆ ಅನುಗ್ರಹಿಸಿರಿ *ಯಾ ರಾಹತುಲ್ ಆಶಿಖೀನ್ﷺ*
✒_ಕೆ.ಎಂ ಇರ್ಶಾದ್ ಪಕ್ಷಿಕೆರೆ
🍃🍃🍃🍃🍃🍃🍃🍃🍃🍃🍃

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...