ಮಲಕ್ ರಿಝ್‌ವಾನ್ (ಅ) ರನ್ನು ಬೇಟಿಯಾದ ಹಝ್ರತ್ ಉಮರ್ (ರ) ರ ದಾಸಿ
*✍ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಇಸ್ಲಾಮಿನ* ಎರಡನೇ ಖಲೀಫಾ ಹಝ್ರತ್ ಉಮರ್ ಬಿನ್ ಅಲ್ ಖತ್ತಾಬ್ (ರ) ರ ಮನೆಯಲ್ಲಿ *ಝಾಯಿದಾ* ಎಂಬ ಹೆಸರಿನ ಒಂದು ದಾಸಿ ಮನೆ ಕೆಲಸಕ್ಕಿದ್ದರು. ತನ್ನ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದ ಆ ಮಹಿಳೆಯಲ್ಲಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೂ ಬಹಳ ಇಷ್ಟವಾಗಿತ್ತು. ಮಾತ್ರವಲ್ಲ ಆ ಮಹಿಳೆಯನ್ನು ನೋಡುವಾಗಲೆಲ್ಲ *"ನೀನು ಭಾಗ್ಯವಂತೆ. ನೀನು ಅದೃಷ್ಟಶಾಲಿ"* ಎಂದು ಪ್ರವಾದಿಯವರು ಯಾವಾಗಲೂ ಹೇಳುತ್ತಿದ್ದರು.
▪ *ಒಂದು ದಿನ* ಈ ದಾಸಿಯು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ಬಂದು ಹೇಳಿದರು. "ನಾನಿವತ್ತು ಮನೆಯಲ್ಲಿ ಅಡುಗೆ ಮಾಡಲು ಕಟ್ಟಿಗೆ ತರಲು ಹತ್ತಿರದ ಬೆಟ್ಟಕ್ಕೆ ಹೋದೆನು. ಜಮೆ ಮಾಡಿದ ಕಟ್ಟಿಗೆಯ ಕಟ್ಟು ಬಹಳ ದೊಡ್ಡ ಗಾತ್ರದ್ದಾದರಿಂದ ನನಗೆ ಅದನ್ನು ಸ್ವಂತವಾಗಿ ತಲೆಯ ಮೇಲಿಟ್ಟು ಹೊರಲು ಕಷ್ಟಸಾಧ್ಯಯಿತು. ಹಾಗೆಯೇ ಏನು ಮಾಡುವುದು..? ಯಾರಾದರೂ ಸಹಾಯ ಮಾಡಲು ಸಿಗುತ್ತಾರಾ ಎಂದು ಆಲೋಚಿಸಿ ಕುಳಿತಿರುವಾಗ ಬಹಳ ಸುಂದರವಾದ ಒಬ್ಬ ಯುವಕ ಒಂದು ಕುದುರೆಯ ಮೇಲೆ ಕುಳಿತು ಸವಾರಿ ಮಾಡುತ್ತಾ ಬರುತ್ತಿದ್ದರು. ಎಷ್ಟು ಸುಂದರನೆಂದರೆ, ನಾನೊಮ್ಮೆಯೂ ನನ್ನ ಬದುಕಿನಲ್ಲಿ ಅಷ್ಟೊಂದು ಚೆಂದವಾದ ವ್ಯಕ್ತಿಯನ್ನು ಒಮ್ಮೆಯೂ ನೋಡಿರಲಿಲ್ಲ. ಬಹಳ ಶುಭ್ರವಾದ ವಸ್ತ್ರ ಧರಿಸಿದ ಆ ವ್ಯಕ್ತಿ ಹತ್ತಿರ ಬರುತ್ತಿದ್ದಂತೆಯೇ ಅವರು ಪೂಸಿದ ಸುಗಂಧದ ಘಮಘಮ ಪರಿಮಳವು ಇಡೀ ಜಗತ್ತನ್ನೇ ಪರಿಮಳದಿಂದ ಮುಳುಗಿಸಿದೆಯೇ ಎಂದು ಭಾಸವಾಗುತ್ತಿತ್ತು."
▪ *"ಅಂತೆಯೇ* ಆ ವ್ಯಕ್ತಿ ನನ್ನ ಹತ್ತಿರ ಬಂದು ನನಗೆ ಸಲಾಮ್ ಹೇಳಿ ನನ್ನಲ್ಲಿ ಕೇಳಿದರು. *"ಝಾಯಿದಾಃ.., ಹೇಗಿರುವಿ..? ಏನು ಸಮಾಚಾರ..?"* ನಾನು ಹೇಳಿದೆ. *"ಅಲ್ ಹಂದುಲಿಲ್ಲಾಹ್... ಪರವಾಗಿಲ್ಲ ಸೌಖ್ಯವಾಗಿದ್ದೇನೆ."* ನಂತರ ಕೇಳಿದರು. *"ಮುಹಮ್ಮದರು ಹೇಗಿದ್ದಾರೆ..? ಅವರ ಸಮಾಚಾರವೇನು.?"* ನಾನು ಹೇಳಿದೆ. *"ಅವರು ಸೌಖ್ಯವಾಗಿದ್ದಾರೆ. ಚೆನ್ನಾಗಿದ್ದಾರೆ. ಜನರಿಗೆ ಇಸ್ಲಾಮಿನ ಧರ್ಮ ಭೋದನೆ ಚೆನ್ನಾಗಿ ಮಾಡುತ್ತಿದ್ದಾರೆ."* ಆಗ ಅವರು ಹೇಳಿದರು. *"ನೀನು ಇವತ್ತು ಅಥವಾ ಮತ್ಯಾವುದೇ ದಿನ ಅವರನ್ನು ಬೇಟಿಯಾದರೆ ಅವರಗೆ ನನ್ನ ಸಲಾಮ್ ಹೇಳಬೇಕು. ನನ್ನ ಹೆಸರು ರಿಝ್ವಾನ್. ಸ್ವರ್ಗದ ಕಾವಲುಗಾರನಾಗಿ ಕೆಲಸ ನಿರ್ವಹಿಸುತ್ತಿರುವ ನಾನು ಬಿಡುವಿನಲ್ಲಿ ಈ ಕಡೆ ಬಂದಿರುತ್ತೇನೆ. ಅವರಲ್ಲಿ ನೀನು ಹೇಳಬೇಕು. ನಿಮ್ಮ ಆಗಮನದೊಂದಿಗೆ ಇಡೀ ಜಗತ್ತೇ ಸಂತೋಷದಲ್ಲಿ ಮುಳುಗಿದೆ. ನಿಮ್ಮ ಸಮುದಾಯವನ್ನು ಅಲ್ಲಾಹನು ಮೂರು ವಿಭಾಗಗಳಾಗಿ ವಿಂಗಡಿಸಿದ್ದಾನೆ."* 1.ಯಾವುದೇ ವಿಚಾರಣೆ ಇಲ್ಲದೆ ನೇರವಾಗಿ ಸ್ವರ್ಗ ಪ್ರವೇಶ ಮಾಡುವವರು.
2.ಪುಟ್ಟ ವಿಚಾರಣೆಯೊಂದಿಗೆ ಸ್ವರ್ಗಕ್ಕೆ ಹೋಗುವವರು.
3.ನಿಮ್ಮ (ಪ್ರವಾದಿಯವರ) ಶಿಫಾರಸಿನ ಮೇರೆಗೆ ಸ್ವರ್ಗ ಪ್ರವೇಶಿಸುವವರು.
▪ *"ಮುಂದುವರಿಯುತ್ತಾ* ಝಾಯಿದಾಃ ಹೇಳುತ್ತಾರೆ. "ನಂತರ ಅವರು ನನ್ನನ್ನು ಬೀಳ್ಕೊಟ್ಟರು. ನಾನು ಶೇಖರಣೆ ಮಾಡಿದ ಕಟ್ಟಿಗೆಯ ಕಟ್ಟನ್ನು ತಲೆಯ ಮೇಲೆ ತೆಗೆದಿಡಲು ತಯಾರಾಗುತ್ತಿರುವಾಗ ದೂರ ಸರಿದ ಅವರು ಪುನಃ ನನ್ನ ಹತ್ತಿರ ಬಂದು ಕೇಳಿದರು. *" ಝಾಯಿದಾ.., ನಿನಗೆ ಇಷ್ಟು ದೊಡ್ಡ ಕಟ್ಟು ತಲೆಗಿಟ್ಟು ಹೊರಲು ಕಷ್ಟವಾಗುತ್ತದೆಯೇ..?"* ನಾನು ಹೇಳಿದೆ. *"ಹೌದು ಮಲಕ್‌ರವರೇ.."* ಕೂಡಲೇ ಅವರು ತನ್ನ ಕೈಯಲ್ಲಿದ್ದ ಒಂದು ಕೆಂಪು ಬಣ್ಣದ ಬೆತ್ತವನ್ನು ಕಟ್ಟಿನ ಒಳಗೆ ತುರುಕಿಸಿ ಯಾವುದೇ ಆಯಾಸವಿಲ್ಲದೆ ಅದನ್ನು ಎತ್ತಿ ಹಿಡಿದರು. ಕ್ಷಣದಲ್ಲೆ ಅವರೆದುರಲ್ಲಿ ಒಂದು ಬೃಹದಾಕಾರದ ಬಂಡೆಕಲ್ಲು ಪ್ರತ್ಯಕ್ಷವಾಯಿತು. ಕಟ್ಟನ್ನು ಬಂಡೆ ಕಲ್ಲಿನ ಮೇಲೆ ಇಟ್ಟು ಹೇಳಿದರು. *"ಝಾಯಿದಳೊಂದಿಗೆ ಈ ಕಟ್ಟಿಗೆಯ ಕಟ್ಟನ್ನು ಹೊತ್ತುಕೊಂಡು ಅವಳ ಮನೆಗೆ ತಲುಪಿಸು"* ಅಷ್ಟು ಹೇಳಿದ್ದೇ ತಡ ಆ ಅದ್ಭುತ ಬಂಡೆಯು ನನ್ನ ಕಟ್ಟನ್ನು ಹೊತ್ತುಕೊಂಡು ಉರುಳುತ್ತಾ ಇಲ್ಲಿಯ ತನಕ ಬಂತು."
▪ *ದಾಸಿ* ಝಾಯಿದಳಿಂದ ಈ ಅಧ್ಬುತ ವಾರ್ತೆ ಕೇಳಿದಾಕ್ಷಣ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಜನತೆಯ ಬಗ್ಗೆ ಮಲಕ್ ರಿಝ್‌ವಾನ್ ರಿಂದ ದೊರೆತ ಸಂತೋಷ ವಾರ್ತೆಯ ಕಾರಣ ಅಲ್ಲಾಹನಿಗೆ ಸ್ತುತಿಯಾಗಿ ಶುಕುರಿನ ಸುಜೂದು ಮಾಡಿದರು. ನಂತರ ತನ್ನೊಂದಿಗಿದ್ದ ಸಹಾಬಿಗಳೊಂದಿಗೆ ಆ ಬಂಡೆಯನ್ನು ನೋಡಲು ಹೋದರು. ಸುಬ್‌ಹಾನಲ್ಲಾಹ್.. ಹೊದಾಗ ಬಂಡೆಕಲ್ಲು ಮಾತ್ರವಲ್ಲ ಅದು ಉರುಳಿ ಉರುಳಿ ಬಂದ ಅದರ ಗುರುತು ಕೂಡ ಹಾಗೆಯೇ ಚೆನ್ನಾಗಿ ಕಾಣುತ್ತಿತ್ತು.
ಸಂಗ್ರಹ; ಇಮಾಮ್ ಇಬ್‌ನ್ ದಫ್‌ರ್‌ರವರ *ಕಿತಾಬು ಅಲ್ ನಸಾಯಿಹ್* ಎಂಬ ಗ್ರಂಥ.

Comments