ಪ್ರಖ್ಯಾತ ಪಂಡಿತ ಕುಖ್ಯಾತ ಕಳ್ಳನೊಂದಿಗೆ
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಒಂದು ದಿನ* ರಾತ್ರಿ ಇಮಾಮ್ ಮಾಲಿಕ್ ಬಿನ್ ದೀನಾರ್ (ರ) ರ ಮನೆಗೆ ಒಬ್ಬ ಕಳ್ಳನು ನುಗ್ಗಿದನು. ಮನೆಯಲ್ಲಿ ಎಲ್ಲಿ ಹುಡಿಕಿದರೂ ಕಳ್ಳನಿಗೆ ಕದಿಯಲು ಯೋಗ್ಯವಾದ ಯಾವುದೇ ಸಾಮಾನು ಸಿಗಲಿಲ್ಲ. ಕೊನೆಗೆ ಮನೆಯಲ್ಲಿ ಒಂದು ಕೊಠಡಿಯ ಒಳಗೆ ಹೋದಾಗ ಇಮಾಮ್ ಮಾಲಿಕ್ ಬಿನ್ ದೀನಾರರು (ರ) ಒಂಟಿಯಾಗಿ ನಮಾಝು ಮಾಡುತ್ತಿದ್ದರು.
▪ *ನಮಾಝ್* ಮುಗಿದ ಬಳಿಕ ಇಮಾಮ್ ಮಾಲಿಕ್ ಬಿನ್ ದೀನಾರರು ಮನೆಗೆ ನುಗ್ಗಿದ ಕಳ್ಳನಲ್ಲಿ ಕೇಳಿದರು. *"ನೀನು ನಿನ್ನ ಇಹಲೋಕದ ಸುಖಕ್ಕೆ ಬೇಕಾದ ಏನದಾರೂ ಸಿಗಬಹುದಾ ಎಂದು ಹುಡುಕಿ ಬಂದರೂ ನಿನಗೆ ಏನೂ ಸಿಗಲಿಲ್ಲ. ಆದರೆ ನೀನು ಈ ತನಕ ನಿನ್ನ ಪರಲೋಕದ ಸುಖಕ್ಕೆ ಏನಾದರೂ ಹುಡುಕಿ ತಯಾರು ಮಾಡಿದ್ದಿಯಾ..?"*
▪ *ಮಾಲಿಕ್* ಬಿನ್ ದೀನಾರ್ (ರ) ರಿಂದ ಉತ್ತರ ಕೊಡಲು ಅಸಾಧ್ಯವಾದ ಈ ಅರ್ಥವತ್ತಾದ ಮಾತು ಕೇಳಿದಾಗ ಕಳ್ಳನು ಒಂದು ನಿಮಿಷ ಮಾತನಾಡಲಾಗದೆ ಮೌನವಾಗಿ ಒಂದು ಕಡೆ ಕುಳಿತನು. ಬಳಿಕ ಇಮಾಮರು ಆತನನ್ನು ತನ್ನ ಹಾಸಿಗೆಯ ಮೇಲೆ ಕುಳ್ಳಿರಿಸಿ ಆತನಿಗೆ ಬೇಕಾದ ಉಪದೇಶ ಕೊಟ್ಟರು. ಅವರ ಉಪದೇಶದಿಂದ ಮನ ಪರಿವರ್ತನೆಯಾದ ಆತನಿಗೆ ತಾನು ಈ ತನಕ ಮಾಡುತ್ತಿದ್ದ ತಪ್ಪಿನ ಅರಿವಾಗಿ ಬಿಕ್ಕಿ ಬಿಕ್ಕಿ ಆಳಲು ತೊಡಗಿದನು.
▪ *ಊರಲ್ಲೆಲ್ಲಾ* ಕಳ್ಳತನ ಮಾಡಿ ಕುಖ್ಯಾತನಾದ ಆತನನ್ನು ಆ ಊರಲ್ಲಿ ತಿಳಿಯದವರು ಯಾರೂ ಇರಲಿಲ್ಲ. ಇಮಾಮರ ಉಪದೇಶದಿಂದ ಮನ ಬದಲಾವಣೆಯಾದ ಆತ ಆದಿನ ಬೆಳಗಿನ ಸುಬ್‌ಹ್ ನಮಾಝಿಗೆ ಇಮಾಮ್ ಮಾಲಿಕ್ ಬಿನ್ ದೀನಾರರೊಂದಿಗೆ ಮಸೀದಿಗೆ ಹೋದನು. ಮಸೀದಿಯಲ್ಲಿ ಪ್ರಥಮ ಸಾಲಿನಲ್ಲಿ ಇಮಾಮ್ ಮಾಲಿಕ್ ಬಿನ್ ದೀನಾರರ ಸಮೀಪ ಅವರಿಗೆ ಬುಜಕ್ಕೆ ಬುಜಕೊಟ್ಟು ನಮಾಝು ಮಾಡಲು ನಿಂತನು. ಈ ಅದ್ಭುತ ದೃಶ್ಯವನ್ನು ಕಂಡಾಗ ಮಸೀದಿಯಲ್ಲಿ ಹಾಜರಾದ ಜನರು ಪರಸ್ಪರ ಹೇಳ ತೊಡಗಿದರು. *"ಪ್ರಖ್ಯಾತ ಪಂಡಿತ ಕುಖ್ಯಾತ ಚೋರನೊಂದಿಗೆ... ಏನಿದು ಅವಸ್ಥೆ..? ಊಹಿಸಲು ಕೂಡ ಸಾಧ್ಯವಾಗುವುದಿಲ್ಲ."*
▪ *ಇಮಾಮ್* ಮಾಲಿಕ್ ಬಿನ್ ದೀನಾರ್ (ರ) ಹೇಳಿದರು. *"ಗಾಬರಿ ಪಡಬೇಡಿ. ಆತ ನಮ್ಮನ್ನು ಕದಿಯಲು ಬಂದಾಗ ನಾನು ಅವನ ಹೃದಯವನ್ನು ಕದ್ದು ತೆಗೆದೆನು"*
ಸಂಗ್ರಹ; ಇಮಾಮ್ ಝಯಬಿಯ *ತಾರೀಖುಲ್ ಇಸ್ಲಾಮ್* ಎಂಬ ಗ್ರಂಥ.

Comments