ಪ್ರವಾದಿಯವರನ್ನು ಕನಸಲ್ಲಿ ನೋಡ ಬಯಸಿದ ಪಂಡಿತ!
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಹಿಜ್‌ರಾ* ನೂರ ಎಂಬತ್ತ ಎಂಟರಲ್ಲಿ ಹುಟ್ಟಿ ಇನ್ನೂರ ಅರುವತ್ತ ಒಂದರಲ್ಲಿ ವಿಧಿವಶರಾದ ಪ್ರಖ್ಯಾತ ಪಂಡಿತ ಮತ್ತು ಸೂಫಿವರ್ಯ ಶೈಖ್ ಅಬೂ ಯಝೀದುಲ್ ಬುಸ್ತಾಮಿ (ರ) ಹತ್ತಿರ ಸಮಕಾಲಿಕ ಊರಿನ ಪಂಡಿತರೊಬ್ಬರು ಬಹಳ ಬೇಸರದಿಂದ ಅಳುತ್ತಾ ಬಂದು ಹೇಳಿದರು. *"ಶೈಖ್ ಬುಸ್ತಾಮಿಯವರೇ.., ನಾನೊಬ್ಬ ಪಂಡಿತ. ಎಲ್ಲಾ ಆರಾಧನೆಗಳನ್ನೂ ತಪ್ಪದೆ ಮಾಡುತ್ತೇನೆ. ಒಂದು ದಿನದಲ್ಲಿ ಎಷ್ಟೋ ಸ್ವಲಾತ್ ಹೇಳುತ್ತೇನೆ. ಆದರೆ ನನ್ನ ಈ ಬದುಕಿನಲ್ಲಿ ಒಮ್ಮೆಯೂ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕನಸಲ್ಲಿ ಕಾಣಲಿಲ್ಲ. ಮರಣ ಹೊಂದುವ ಮೊದಲು ಒಮ್ಮೆಯಾದರು ಕಾಣಬೇಕೆಂಬ ಆಸೆ ಮತ್ತು ಹಂಬಲವಿದೆ. ಅದಕ್ಕೆ ಬೇಕಾಗಿ ನಾನೇನು ಮಾಡಬೇಕು..?"*
▪ *ಶೈಖ್* ಬುಸ್ತಾಮೀ (ರ) ನಗುತ್ತಾ ಕೇಳಿದರು. *"ಹಾದಾ.., ನಿಜವಾಗಿ ನಿಮಗೆ ಹಾಗೆ ಒಂದು ಆಸೆ ಇದೆಯಾ..?"* "ಹೌದು ಶೈಖ್‌ರವರೇ.. ದೇವರಾಣೆ ಇದೆ" ಎಂದು ಬಂದ ಪಂಡಿತರು ಹೇಳಿದರು.
▪ *ಅಲ್ಲಾಹುವಿನ* ವಲಿಯ್ಯ್ ಆಗಿದ್ದ ಶೈಖ್ ಬುಸ್ತಾಮಿಯವರು ಅವರಲ್ಲಿ ಹೇಳಿದರು. *"ನೀವು ಮೊದಲಾಗಿ ನಿಮಗೆ ಹಣದಲ್ಲಿರುವ ದುರಾಸೆಯನ್ನು ಕಡಿಮೆ ಮಾಡಬೇಕು. ನಿಮ್ಮ ಮನೆಯ ಒಂದು ಕೋಣೆಯಲ್ಲಿ ನೆಲದಡಿಯಲ್ಲಿ ಹೊಂಡಮಾಡಿ ನೀವು ಹುಗಿದಿಟ್ಟ ಮುನ್ನೂರು ಪವನ್ (ಎರಡುವರೆ ಕೆಜಿ) ಬಂಗಾರವನ್ನು ಹೊರತೆಗೆದು ಅದರಲ್ಲಿ ಮೂರರ ಒಂದು ಭಾಗ ಬಡವರಿಗೆ ದಾನ ಮಾಡಬೇಕು. ಇಂಶಾ ಅಲ್ಲಾಹ್.. ಇದನ್ನು ಮಾಡುವಾಗಲೇ ಖಂಡಿತಾ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ನೀವು ಕನಸಿನಲ್ಲಿ ಕಾಣುತ್ತೀರಿ."*
▪ *ಸುಬ್‌ಹಾನಲ್ಲಾಹ್* ಶೈಖ್ ಬುಸ್ತಾಮಿಯವರು ಈ ರಹಸ್ಯ ಸಂಗತಿಯನ್ನು ಬಹಿರಂಗಮಾಡಿ ಹೇಳಿದಾಗ ಬೆಚ್ಚಿಬಿದ್ದ ಆ ಪಂಡಿತರು ಶೈಖ್ ಬುಸ್ತಾಮಿ (ರ) ರಲ್ಲಿ ಕೇಳಿದರು. *ನಾನನಲ್ಲದೆ ಎರಡನೇ ಒಬ್ಬ ವ್ಯಕ್ತಿಗೆ ತಿಳಿಯದ ಈ ಬಂಗಾರ ಹುಗಿದಿಟ್ಟ ರಹಸ್ಯ ಸಂಗತಿ ನಿಮಗೆ ಹೇಗೆ ತಿಳಿಯಿತು..?"*
▪ *ಬುಸ್ತಾಮಿಯವರು* ನಗುತ್ತಾ ಹೇಳಿದರು. *"ಗಾಬರಿಪಡಬೇಡ. ನಾನೇನೂ ನಿಮ್ಮ ಮನೆಗೆ ದರೋಡೆ ಮಾಡಲು ಬರಲಿಲ್ಲ. ನೀವು ಪಣತೊಟ್ಟು ಹಟದಿಂದ ಕನಸಲ್ಲಿ ಕಾಣಲು ಬಯಸುವ ಆ ವ್ಯಕ್ತಿಯೇ ನನ್ನಲ್ಲಿ ಹೇಳಿದ್ದು.!!!"*
ಸಂಗ್ರಹ; ಇಮಾಮ್ ಯೂಸುಫ್ ಬಿನ್ ಇಸ್ಮಾಯೀಲ್ ಅಲ್ ನಬ್‌ಹಾನಿಯ *,ಜಾಮಿಅ್ ಕರಾಮಾತುಲ್ ಅವುಲಿಯಾ* ಎಂಬ ಗ್ರಂಥ.

Comments