ಅಝ್‌ರಾಯೀಲ್ (ಅ) ರನ್ನು ಅಳುವಂತೆ ಮಾಡಿದ ಘಟನೆ!
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119
▪ *ಒಮ್ಮೆ ಮಲಕ್* ಅಝ್‌ರಾಯೀಲ್ (ಅ) ರವರನ್ನು ಅಲ್ಲಾಹನು ಒಂದು ಹೆಂಗಸಿನ ರೂಹನ್ನು ತೆಗೆಯಲು ಕಳುಹಿಸಿದನು. ಅಲ್ಲಾಹುವಿನ ಆಜ್ಞೆ ಕಟ್ಟುನಿಟ್ಟಾಗಿ ಪಾಲಿಸಬೇಕಾದ ಮಲಕ್ ಅಝ್‌ರಾಯೀಲ್ (ಅ) ರವರು ರೂಹ್ ತೆಗೆಯಲು ಬಂದಾಗ ಆ ಸಾಧು ಮಹಿಳೆಯು ಮನುಷ್ಯರು ಯಾರೂ ಇಲ್ಲದ ಒಂದು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ತನ್ನ ಪುಟ್ಟ ಕಂದನಿಗೆ ಮೊಲೆಯುಣಿಸುತ್ತಿದ್ದಳು.
▪ *ಏಕಾಂಗಿಯಾಗಿ* ಯಾರೂ ಇಲ್ಲದ ಒಂದು ಜಾಗದಲ್ಲಿ ತನ್ನ ಕಂದನನ್ನು ಲಾಲಿಸುತ್ತಾ ಮೊಲೆಯುಣಿಸುತ್ತಿರುವ ಮಹಿಳೆಯನ್ನು ಕಂಡಾಗ ಯಾರೂ ಇಲ್ಲದ ಜಾಗವಾದ್ದರಿಂದ ಆ ಮಗುವಿನ ಮುಂದಿನ ಭವಿಷ್ಯವನ್ನು ಆಲೋಚಿಸಿ ಮಲಕ್ ಅಝ್‌ರಾಯೀಲರಿಗೆ ಈ ಪ್ರಪಂಚವೇ ತನ್ನ ಮೇಲೆ ಬಿದ್ದಂತಾಯಿತು. ಬೇಸರದಿಂದ ಕಣ್ಣಲ್ಲಿ ನೀರು ಬಂತು. ಏನು ಮಾಡಬೇಕೆಂದು ತಿಳಿಯದೆ ಒಂದು ಕ್ಷಣ ನಿಂತಲ್ಲೇ ನಿಂತು ಹೋದರು. ಆದರೇನು ಮಾಡುವುದು.? ಏನೂ ಮಾಡುವಂತಿಲ್ಲ. ಅಲ್ಲಾಹನ ಕಟ್ಟುನಿಟ್ಟಿನ ಆಜ್ಞೆ ಪಾಲಿಸಲೇಬೇಕು. ಬೇರೆ ಏನೂ ಮಾಡುವಂತಿಲ್ಲ. ಕೊನೆಗೆ ಹೆಂಗಸಿನ ರೂಹ್ ತೆಗೆದುಕೊಂಡು ಮಲಕ್ ಅಝ್‌ರಾಯೀಲ್ ಆಕಾಶ ಲೋಕಕ್ಕೆ ಹೋದರು. ಹೆಂಗಸು ಮಯ್ಯಿತಾದರು. ಮಗು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಅನಾಥವಾಯಿತು.
▪ *ವರ್ಷಗಳು* ಕಳೆಯಿತು. ಸಾಧಾರಣ ಕಸಬಿನಂತೆ ಮತ್ತೊಮ್ಮೆ ಹೀಗೆಯೇ ಬೇರೊಬ್ಬರ ರೂಹ್ ತೆಗೆಯಲು ಆಜ್ಞೆಯಾಯಿತು. ಆಲ್ಲಾಹನ ಆಜ್ಞೆಯಂತೆ ಅವರಿರುವ ಜಾಗಕ್ಕೆ ಅಝ್‌ರಾಯೀಲರು (ರ) ತಲುಪಿದರು. ನೋಡುವಾಗ ಒಬ್ಬ ಮುದುಕ ವ್ಯಕ್ತಿ. ತುಂಬಾ ಪ್ರಾಯವಾಗಿದೆ. ಚೆನ್ನಾಗಿ ನಡೆಯಲಿಕ್ಕೂ ಸಾದ್ಯವಾಗುವುದಿಲ್ಲ. ಕೈಯಲ್ಲಿ ಒಂದು ಮರದ ಬೆತ್ತವಿದೆ. ವ್ಯಕ್ತಿ ಯಾದರೆ ಒಂದು ಕಬ್ಬಿಣದ ಕೆಲಸ ಮಾಡುವ ಕಮ್ಮಾರನ ಅಂಗಡಿಯಲ್ಲಿ ಕುಳಿತು ಕಮ್ಮಾರನಲ್ಲಿ ಹೇಳುತ್ತಿದ್ದಾರೆ. *"ಕೈಯಲ್ಲಿರುವ ಬೆತ್ತ ನೆಲಕ್ಕೆ ಕುಟ್ಟಿ ನಡೆಯುವಾಗ ಸವೆದು ಹೋಗುತ್ತದೆ. ಆದ್ದರಿಂದ ಈ ಬೆತ್ತದ ಬುಡಕ್ಕೆ ಬಹಳ ಗಟ್ಟಿಯಾಗ ಮತ್ತು ಭದ್ರವಾದ ಒಂದು ಕಬ್ಬಿಣದ ಮುಚ್ಚಳ ಮಾಡಿ ಹಾಕಬೇಕು. ಹಲವಾರು ವರ್ಷಗಳಿಗೆ ಮತ್ತೆ ಅದರ ತಲೆಬಿಸಿ ಇರಬಾರದು."*
▪ *ಸುಬ್‌ಹಾನಲ್ಲಾಹ್* ಮುದುಕನಿಂದ ಈ ಮಾತು ಕೇಳಿದಾಗ ಮಲಕ್ ಅಝ್‌ರಾಯೀಲ್ (ಅ) ರಿಗೆ ನಿಯಂತ್ರಣ ತಪ್ಪಿ ನಗು ಬಂತು. *"ಈ ಮುದಿ ಮುದುಕನಿಗೆ ಇನ್ನೂ ಹಲವಾರು ವರ್ಷಗಳ ಬದುಕಬೇಕೆಂಬ ಆಶೆ. ಇಷ್ಟು ದೀರ್ಘ ಆಯುಷ್ಯದ ವ್ಯಕ್ತಿ ಬಹುಶಃ ಈ ಊರಲ್ಲಿ ಯಾರು ಇರಲಾರರು. ಸಾಧುವಿಗೆ ಇನ್ನು ಕೆಲವೇ ನಿಮಿಷಗಳಲ್ಲಿ ತನ್ನ ರೂಹು ಹೋಗುತ್ತದೆ ಎಂದು ಗೊತ್ತಿಲ್ಲ. ಏನು ಮಾಡುವುದು ಅಲ್ಲಾಹನ ಆಜ್ಞೆ"* ಎಂದು ಮಲಕ್ ಅಝ್‌ರಾಯೀಲ್ ತನ್ನ ಮನದಲ್ಲೇ ಹೇಳಿದರು.
▪ *ಕೂಡಲೇ* ಅಲ್ಲಾಹನ ಭಾಗದಿಂದ ಸಂದೇಶ ಬಂತು. *"ಅಝ್‌ರಾಯೀಲರೇ ಎಷ್ಟೋ ವರ್ಷಗಳ ಮೊದಲು ನಿಮ್ಮನ್ನು ಅಳುವಂತೆ ಮಾಡಿದ ಆ ಪುಟ್ಟ ಮಗು ಇವತ್ತು ನಿಮ್ಮನ್ನು ನಗುವಂತೆ ಮಾಡುತ್ತಿದೆ. ಅವತ್ತು ನೀವು ಒಂದು ಹೆಂಗಸಿನ ರೂಹ್ ತೆಗೆಯಲು ಹೋದಾಗ ಹೆಂಗಸು ಪುಟ್ಟ ಮಗುವಿಗೆ ಮೊಲೆಯುಣಿಸುವುದರಿಂದ ಮುಂದಕ್ಕೆ ಈ ಮಗುವಿನ ಗತಿ ಏನಾಗಬಹುದು ಎಂದು ಆಲೋಚಿಸಿ ನೀವು ಕಣ್ಣೀರು ಸುರಿಸಿದ್ದೀರಿ. ಆಗ ಮಗು ನಿಮ್ಮನ್ನು ಅಳುವಂತೆ ಮಾಡಿದೆ. ಈಗ ದೊಡ್ದವನಾಗಿ ಈ ಪ್ರಾಯಕ್ಕೆ ತಲುಪಿ ನಿಮ್ಮನ್ನು ನಗುವಂತೆ ಮಾಡಿದೆ."*
▪ *ಈ ಚರಿತ್ರೆಯಿಂದ* ನಮಗೆ ತಿಳಿಯುವುದೇನೆಂದರೆ, ಪ್ರತಿಯೊಬ್ಬನೂ ಈ ಜಗತ್ತಿಗೆ ಬರುವುದಕ್ಕಿಂತ ಮೊದಲೇ ಅವನ ಜೀವನೋಪಾಯ, ಬದುಕು, ಆಯುಷ್ಯ ಎಲ್ಲದರ ಬಗ್ಗೆ ಅಲ್ಲಾಹನು ಸ್ಪಷ್ಟವಾಗಿ ಗಣನೆ ಮಾಡಿರುತ್ತಾನೆ ಎಂಬುದಾಗಿದೆ. ಅಲ್ಲದೆ ನಿಷ್ಚಯಿಸಿದ ವಾಯಿದೆಯಿಂದ ಒಂದು ನಿಮಿಷವೂ ಹೆಚ್ಚು ಬದುಕಲಾರೆವು.
ಸಂಗ್ರಹ; ಚರಿತ್ರೆ ಗ್ರಂಥಗಳಿಂದ...

Comments