Skip to main content

ಕಟ್ಟಿಗೆ ಹೊತ್ತು ತಂದ ಪ್ರವಾದಿ

ಕಟ್ಟಿಗೆ ಹೊತ್ತು ತಂದ ಪ್ರವಾದಿ

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119


▪ *ಒಮ್ಮೆ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಕೆಲವು ಸ್ವಹಾಬಿಗಳು ಒಂದು ದೀರ್ಘ ಪ್ರಯಾಣದಲ್ಲಿದ್ದರು‌. ಪ್ರಯಾಣ ಮಧ್ಯೆ ಮಧ್ಯಾಹ್ನದ ಭೋಜನದ ಸಮಯವಾದಾಗ ಒಂದು ಕಡೆ ತಂಗಿದರು.
   ▪ *ಮಧ್ಯಾಹ್ನದ* ಊಟಕ್ಕೆ ಪ್ರಯಾಣ ಹೋಗುವಾಗಲೇ ಕೊಂಡುಹೋದ ಒಂದು ಆಡನ್ನು ದ್ಸಬಹ್ ಮಾಡಿ (ಚೂರಿಹಾಕಿ) ಪದಾರ್ಥ ಮಾಡುವ ತೀರ್ಮಾನಕ್ಕೆ ಬಂದರು. ಆಗ ಅವರಲ್ಲಿ ಒಬ್ಬರು ಸ್ವಹಾಬಿ ಹೇಳಿದರು. *"ನಾನಿದನ್ನು ಚೂರಿಹಾಕುತ್ತೇನೆ* ಮತ್ತೊಬ್ಬರು ಹೇಳಿದರು. *"ನಾನು ಚೂರಿಹಾಕಿದ ನಂತರ ಅದರ ಚರ್ಮ ಸುಲಿದು ಮಾಂಸ ಮಾಡುತ್ತೇನೆ*" ಇದನ್ನು ಕೇಳಿದಾಕ್ಷಣ ಮತ್ತೊಬ್ಬರು ಸ್ವಹಾಬಿ ಹೇಳಿದರು. *"ಹಾಗಾದರೆ ನಾನು ಸುಮ್ಮನಿರುವುದಾ..? ನಾನು ಮಾಂಸವನ್ನು ನೀರು ತಂದು ತೊಳೆಯುತ್ತೇನೆ*" ಆಗ ನಾಲ್ಕನೆಯ ವ್ಯಕ್ತಿ ಹೇಳಿದರು. *"ನೀವೆಲ್ಲಾ ಈ ಕೆಲಸಗಳನ್ನು ಮಾಡುವಾಗ ನಾನದನ್ನು ಪದಾರ್ಥ ಮಾಡುತ್ತೇನೆ."*
   ▪ *ಈ ಪ್ರಯಾಣದಲ್ಲಿ* ಸ್ವಹಾಬಿಗಳಲ್ಲಿ ಇಷ್ಟೊಂದು ಸಾಮರಸ್ಯ ಮನೋಭಾವವನ್ನು ಕಂಡಾಗ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು *"ಹಾಗಾದರೆ ನಾನು ಸುಮ್ಮನಿರುವುದಾ...? ನನಗೆ ಕೆಲಸ ಬೇಡವೇ..? ನಾನು ಇದನ್ನು ಅಡುಗೆ ಮಾಡಲು ಗುಡ್ಡಕ್ಕೆ ಹೋಗಿ ಕಟ್ಟಿಗೆ ತರುತ್ತೇನೆ.*" ಎಂದು ಹೇಳಿ ಕಟ್ಟಿಗೆ ತರಲು ಹೋದರು.

ಸಂಗ್ರಹ; ಇಮಾಮ್ ಅಬೂ ಸಯೀದ್ ಅಲ್ ಖರ್‌ಕೂಷಿಯವರ *ಶರಫುಲ್ ಮುಸ್ತಫಾ* ಎಂಬ ಗ್ರಂಥ.

  ▪ *ಹಲವಾರು* ಮಿತ್ರರು ಪರಸ್ಪರ ಒಗ್ಗೂಡಿ ದೂರದ ಊರುಗಳಿಗೆ ಪ್ರಯಾಣ (Tour) ಹೊರಟು ಮರಳಿ ಬರುವಾಗ, ಗೆಳೆಯರಾಗಿ ಹೊರಟವರು ಶತ್ರುಗಳಾಗಿ ಬರುವ ಇಂದಿನ ಪೀಳಿಗೆಗೆ ಈ ಪ್ರಯಾಣವು ಒಂದು ಮಾದರಿಯಾಗಲಿ.
   ▪ *ಈಮಾಮ್* ಶಾಫಿಯೀ (ರ) ರಲ್ಲಿ ಒಂದು ವ್ಯಕ್ತಿಯ ಕುರಿತು *"ಆತನು ಬಹಳ ಒಳ್ಳೆಯ ವ್ಯಕ್ತಿ. ಉತ್ತಮ ಸ್ವಭಾವದವನು "* ಎಂದು ಹೇಳಿದಾಗ *"ನೀನು ಅವನೊಂದಿಗೆ ದೀರ್ಘ ಪ್ರಯಾಣ ಮಾಡಿದ್ದಿಯಾ..?"* ಎಂದು ಕೇಳಿದ್ದನ್ನು ಸಾಂದರ್ಭಿಕವಾಗಿ ನೆನಪಿಸುತ್ತೇನೆ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...