ಆರೋಗ್ಯದ ಅಂಗಿ
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞0097155 3499119
▪ *ಪ್ರವಾದಿ* ಮೂಸಾ (ಅ) ರಿಗೆ ಒಮ್ಮೆ ಅನಾರೋಗ್ಯವಾಯಿತು. ಮಾಡಿದ ಯಾವ ಚಿಕಿತ್ಸೆಯೂ ಫಲ ಕಾಣದೆ ಹೋದಾಗ ಅವರು ತನ್ನ ಸಂಕಟವನ್ನು ಅಲ್ಲಾಹನಲ್ಲಿ ಹೇಳಿದರು. ಕೂಡಲೇ ಅಲ್ಲಾಹನು ಜಿಬ್‌ರೀಲ್ (ಅ) ಮುಖಾಂತರ ಸ್ವರ್ಗದಿಂದ ಒಂದು ಅಂಗಿಯನ್ನು ತೆಗೆದು ಅವರಿಗೆ ಧರಿಸಲು ಆಜ್ಞಾಪಿಸಿದನು.
▪ *ಅಲ್ಲಾಹನ* ಆಜ್ಞೆಯಂತೆ ಹಝ್ರತ್ ಜಿಬ್‌ರೀಲ್ (ಅ) ರು ಸ್ವರ್ಗದಿಂದ *ಖಮೀಸುಲ್ ಆಫಿಯಾ* (ಆರೋಗ್ಯದ ಅಂಗಿ) ಎಂಬ ಒಂದು ಅಂಗಿಯನ್ನು ತೆಗೆದು ಅವರಿಗೆ ಧರಿಸಿಕೊಟ್ಟರು. ಸುಬ್‌ಹಾನಲ್ಲಾಹ್.. ಧರಿಸಿದ್ದೇ ತಡ ಖಾಯಿಲೆ ಗುಣವಾಯಿತಲ್ಲದೆ ಅವರಿಗೆ ಮತ್ತೆ ತನ್ನ ಜೀವಮಾನದಲ್ಲಿ ಮರಣದ ತನಕ ಒಮ್ಮೆಯೂ ಒಂದು ಜ್ವರ ಕೂಡ ಬರಲಿಲ್ಲ.
▪ *ಹಝ್ರತ್* ಮೂಸಾ (ಅ) ರವರ ವಫಾತಿನ ಸಮಯವಾದಾಗ ಅವರ ಬಳಿ ಮಲಕ್ ಜಿಬ್‌ರೀಲ್ (ಅ) ಮತ್ತು ಮಲಕ್ ಅಝ್‌ರಾಯೀಲ್ (ಅ) ಜಂಟಿಯಾಗಿ ಬಂದಿದ್ದರು. ಅಝ್‌ರಾಯೀಲ್ (ಅ) ರವರು ಅವರ ರೂಹನ್ನು ತೆಗೆದುಕೊಂಡು ಹೋಗುವಾಗ ಜಿಬ್‌ರೀಲ್ (ಅ) ಅವರು ಧರಿಸಿದ್ದ ಆ ಅಂಗಿಯನ್ನು ಕಳಚಿ ಕೊಂಡುಹೋದರು.
▪ *ಕಳಚಿದ* ಈ ಅಂಗಿಯನ್ನು ಏನು ಮಾಡಬೇಕೆಂದು ಮಲಕ್ ಜಿಬ್‌ರೀಲರು ಅಲ್ಲಾಹನಲ್ಲಿ ಕೇಳಿದಾಗ ಅದನ್ನು ಸೂರ್ಯನಿಗೆ ಹೊದಿಸಲು ಆಜ್ಞಾಪಿಸಿದನು.
▪ *ಗಮನಾರ್ಹ* ಸಂಗತಿಯೆಂದರೆ, ಈ ಕಾರಣದಿಂದ ಯಾವುದೇ ಖಾಯಿಲೆಗಳ ಅಥವಾ ರೋಗಗಳ ಉಲ್ಬಣವು ರಾತ್ರಿಯಾಗಿರುತ್ತದೆ ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. ಉದಾಹರಣೆಗೆ; ಶರೀರದಲ್ಲಿ ಒಂದು ಬೊಕ್ಕೆ ಆಗುವುದಾದರೂ ಅದು ರಾತ್ರಿಯಾಗುವುದು. ರಾತ್ರಿ ವಿಪರೀತವಿದ್ದ ಜ್ವರ ಬೆಳಗ್ಗೆ ಎದ್ದೇಳಿ ಸ್ವಲ್ಪ ಸಮಯ ಕಳೆದಾಗ ಆರಾಮವಾಗುವುದು ಮಾಮೂಲು.
▪ *ಸೂರ್ಯನಲ್ಲಿ* ಈವೊಂದು ಗುಣವಿರುವುದರಿಂದ ಸಾಧಾರಣ ಮೃಗಗಳು ಕೂಡ ಯಾವಾಗಲೂ ವಿರಾಮ ವೇಳೆಯಲ್ಲಿ ಸೂರ್ಯನಿಗೆ ಮುಖಮಾಡಿ ನಿಲ್ಲುತ್ತದೆ. ಅಂತೆಯೇ ಯಾವುದೇ ಗಿಡ ಅಥವಾ ಮರಗಳು ಕೂಡ ಸೂರ್ಯನ ಬೆಳಕಿನತ್ತ ವಾಲುತ್ತದೆ.
ಸಂಗ್ರಹ; ಇಮಾಮ್ ಅಬುಲ್ ಹಸನ್ ಅಲ್ ಖಯ್‌ಸಿಯ *ಅಲ್ ಝಾಹಿರ್ ಫೀ ಬಯಾನಿ ಮಾ ಯಜ್‌ತನಿಬು ಮಿನಲ್ ಖಬಾಯಿಸ್* ಎಂಬ ಗ್ರಂಥ.

Comments