ಪಿಶಾಚಿಗಳಿಗೆ ಇಬ್‌ಲೀಸನಿಂದ ಸೂಕ್ತ ಉಪದೇಶ
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119
▪ *ಪ್ರವಾದಿ* ಸುಲೈಮಾನ್ (ಅ) ರವರು ಪವಿತ್ರ ಬೈತುಲ್ ಮುಖದ್ದಸ್‌ನ ನಿರ್ಮಾಣದ ಬೃಹತ್ ಕಾಮಗಾರಿಯ ವೇಳೆ ಜಿನ್ನ್ , ಪಿಶಾಚಿ ಮತ್ತು ಶೈತಾನರಿಂದ ಬೆನ್ನೆಲುಬು ಮುರಿಯುವಂತಹಾ ಬಹಳ ಕಠಿಣ ಕೆಲಸಗಳನ್ನು ಮಾಡಿಸುತ್ತಿದ್ದರು. ಎಡೆಬಿಡದ ಕೆಲಸ. ಒಂದು ಬೀಡಿ ಕೂಡ ಸೇದಲು ಸಮಯವಿರಲಿಲ್ಲ. ಬಹಳ ಸಂಕಷ್ಟಕ್ಕೀಡಾದ ಶೈತಾನರು ಇವರಿಂದ ಹೇಗೆ ಬಚಾವು ಆಗುವುದು ಎಂದು ಆಲೋಚಿಸಿ ಕೊನೆಗೆ ಅವರ ಅಜ್ಜ ಇಬ್‌ಲೀಸನಲ್ಲಿ ದೂರು ಕೊಟ್ಟರು.
▪ *ದೂರು* ಕೊಡಲು ಹೋದ ಪಿಶಾಚಿ ಶೈತಾನರಲ್ಲಿ ಇಬ್ಲೀಸನು ಕೇಳಿದನು. *"ಹಾಗಾದರೆ ನಿಮಗೆ ಬಿಡುವು ಇಲ್ಲವೇ.."* ಆಗ ಅವರು ಹೇಳಿದರು. *"ಇಲ್ಲ...ಇಲ್ಲ... ಬರೇ ರಾತ್ರಿ ಮತ್ತು ಕೆಲಸಕ್ಕೆ ಹೋಗುವಾಗ ಮತ್ತು ಮರಳಿ ಬರುವಾಗ ಮಾತ್ತ ವಿರಾಮ. ಬೆಳಗಿನಿಂದ ಸಂಜೆಯ ತನಕ ಬಿಡುವಿಲ್ಲದ ಕೆಲಸ."* ಇಬ್‌ಲೀಸನು ಹೇಳಿದನು. *"ನೀವು ಬೇಜಾರು ಮಾಡದಿರಿ. ನಿಮಗಿಂತಲೂ ಕಷ್ಟದಲ್ಲಿ ಇರುವವರು ಎಷ್ಟೋ ಜನ ಇದ್ದಾರಲ್ಲಾ..? ನಿಮಗೆ ಇಷ್ಟಾದರೂ ಬಿಡುವಿದೆಯಲ್ಲವೇ..? ಸುಮ್ಮನಿರಿ. ಬದಿಯಲ್ಲಿರುವ ಕೊಡಲಿಯನ್ನು ಅನಗತ್ಯ ತೆಗೆದು ಕಾಲಿಗೆ ಹಾಕಬೇಡಿ"*
▪ *ಪಿಶಾಚಿಗಳು* ಅವರ ತಂದೆ ಇಬ್‌ಲೀಸನಲ್ಲಿ ದೂರು ಕೊಟ್ಟ ವಿಷಯ ಹಝ್ರತ್ ಸುಲೈಮಾನ್ (ಅ) ರಿಗೆ ತಲುಪಿತು. ಕೂಡಲೇ ಪ್ರವಾದಿ ಸುಲೈಮಾನ್ (ಅ) ರವರು ಒಂದು ಹೊಸ ಕಾನೂನನ್ನು ಜಾರಿಗೆ ತಂದರು. *"ಮುಂದಕ್ಕೆ ಕೆಲಸ ಮುಗಿದು ಹೋಗುವಾಗ ಆ ದಿನದ ಕಸಕಡ್ಡಿಗಳನ್ನು ಹೊತ್ತುಕೊಂಡು ವಾಸಜಾಗದಲ್ಲಿ ಎಸೆಯಬೇಕು. ಬೆಳಿಗ್ಗೆ ಕೆಲಸಕ್ಕೆ ಬರುವಾಗ ಅಲ್ಲಿಂದ ಕಲ್ಲು ಹೊತ್ತು ತರಬೇಕು"*
▪ *"ಬಿಳಿ* ಮಾಡಲು ಹೋಗಿ ಕೊನೆಗೆ ಪಾಂಡು ರೋಗವಾಯಿತು" ಎಂಬ ಗಾದೆ ಮಾತಿನಂತೆ ಶೈತಾನರು ಇಬ್‌ಲೀಸನಲ್ಲಿ ದೂರು ಕೊಟ್ಟ ಕಾರಣ ಕೆಲಸದಲ್ಲಿ ಮತ್ತೂ ಕಷ್ಟ ಜಾಸ್ತಿಯಾಯಿತು. ಇನ್ನೇನು ಮಾಡುವುದು.? ನೋಡುವ ಎಂದು ಹೇಳಿ ಪುನಃ ಇಬ್‌ಲೀಸನ ಮೊರೆ ಹೋದರು. ಅವನಲ್ಲಿ ಹೇಳಿದರು. *"ನಿಮ್ಮಲ್ಲಿ ದೂರು ಕೊಟ್ಟದ್ದು ಅವರಿಗೆ ತಿಳಿದಿದೆ. ಆ ಕೋಪದ ಕಾರಣ ಕೆಲಸಕ್ಕೆ ಹೋಗುವಾಗಲೂ ಮರಳಿ ಬರುವಾಗಲೂ ಭಾರ ಹೊರುವ ಕೆಲಸ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಏನು ಮಾಡಬೇಕೆಂದು ತಿಳಿಯದೆ ಬಹಳ ಸಂಕಷ್ಟದಲ್ಲಿದ್ದೇವೆ. ಈಗ ಇದಕ್ಕೆ ನೀವೇ ಒಂದು ಪರಿಹಾರ ಹೇಳಿ"*
▪ *ಇಬ್‌ಲೀಸನು* ಹೇಳಿದನು. *"ತಲೆಬಿಸಿ ಮಾಡಬೇಡಿ. ನಿಮಗೆ ರಾತ್ರಿಯಾದರೂ ವಿರಾಮ ಇದೆಯಲ್ವಾ..? ಅದನ್ನು ನೆನೆಸಿಯಾದರೂ ಸಂತೋಷಪಟ್ಟುಕೊಳ್ಳಿ."*
▪ *ಎರಡನೇ* ಬಾರಿ ಇಬ್‌ಲೀಸನ ಮೊರೆಹೋದ ವಿಷಯವೂ ಹಝ್ರತ್ ಸುಲೈಮಾನ್ (ಅ) ರಿಗೆ ಮುಟ್ಟಿತು. ಕೂಡಲೇ ಅವರೊಂದು ಕಾನೂನು ಜಾರಿ ಮಾಡಿದರು. *"ಮುಂದಕ್ಕೆ ವಿರಾಮ ಇಲ್ಲ. ಇಪ್ಪತ್ತನಾಲ್ಕು ಗಂಟೆಯೂ ಕೆಲಸ.*"
▪ *ಮೂರನೇ* ಬಾರಿಯೂ ಅಜ್ಜ ಇಬ್‌ಲೀಸನ ಸನ್ನಿಧಿಗೆ ಹೋಗಿ ಬಿಡುವಿಲ್ಲದೆ ರಾತ್ರಿ ಹಗಲು ಕೆಲಸ ಮಾಡಲು ಸುತ್ತೋಲೆ ಹೊರಡಿಸಿದ ವಿಷಯ ಹೇಳಿದರು. ಇಬ್‌ಲೀಸನು ಹೇಳಿದನು. *"ಗಾಬರಿ ಗೊಳ್ಳಬೇಡಿ. ಅವರಿಗೆ ಮಂದಕ್ಕೆ ನಿಮಗೆ ಇದಕ್ಕಿಂತಲೂ ಕಷ್ಟ ಕೊಡಲು ಸಾಧ್ಯವಿದೆಯೇ..? ನೀವೀಗ ನಿದ್ದೆಯಿಲ್ಲದೆ ಕೆಲಸ ಮಾಡುತ್ತಿದ್ದೀರಿ. ಸರಿಯಾಗಿ ಹೇಳುವುದಾದರೆ ನಿಮಗೆ ಈಗ ಆಗಿರುತ್ತದೆ ಮೋಕ್ಷ ಲಭಿಸಿರುವುದು. ಯಾಕೆಂದರೆ ಕಷ್ಡ ಅಥವಾ ಸಂಕಟದ ಪರಮಾವಧಿ ಹಂತಕ್ಕೆ ತಲುಪಿದರೆ ಅದರ ಬೆನ್ನಲ್ಲೇ ಮೋಕ್ಷ ಅಥವಾ ಸುಖ ಇದೆ. ಸ್ವಲ್ಪ ಕ್ಷಮಿಸಿ. ಎಲ್ಲಾ ಸರಿಯಾಗುತ್ತದೆ."*
▪ *ಇಬ್‌ಲೀಸನು* ಈ ಉಪದೇಶ ಕೊಟ್ಟು ಕೆಲವೇ ದಿನಗಳಾಗುವಾಗ ಹಝ್ರತ್ ಸುಲೈಮಾನ್ (ಅ) ವಫಾತಾದರು. ವಫಾತಾಗದ ನಂತರ ಶೈತಾನರುಗಳನ್ನು ಕಂಡಾಗ ಇಬ್‌ಲೀಸನು ಕೇಳಿದನಂತೆ. *"ಈಗ ಏನಾಯುತು..? ನಾನು ಹೇಳಿದ್ದು ಸರಿಯಾಗಲಿಲ್ಲವೇ..? ಇನ್ನು ನಿಮ್ಮಿಂದ ಯಾರ ಕೆಲಸ ಮಾಡಿಸುವುದು..? ಬೇಗ ಅಲ್ಲಿಂದ ಜಾಗ ಕಾಲಿ ಮಾಡಿ ನಿಮ್ಮ ಹಾದಿಗೆ ಹೋಗಿ. ಸ್ವತಂತ್ರವಾಗಿ ಬದುಕಿ"*
▪ *ಯಾವಾಗಲೂ* ಕಷ್ಟ ಅಥವಾ ಸಂಕಟ ಅದರ ಪರಮಾವಧಿ ಹಂತಕ್ಕೆ ತಲುಪಿದಾಗ ಅದರ ಬೆನ್ನಲ್ಲಿ ಮೋಕ್ಷ ಮತ್ತು ಸುಲಭವಿದೆ ಎಂದು ಉಲಮಾಗಳು ಹೇಳಿರುತ್ತಾರೆ. ಮಾತ್ರವಲ್ಲ ಪವಿತ್ರ ಖುರ್‌ಆನಿನ ಸೂರಃ ಅಲ್ ಶರ್ಹಿನಲ್ಲೂ ಹೇಳಿರುತ್ತಾನೆ.
ಸಂಗ್ರಹ: ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments