ಎಂಬತ್ತು ಛಡಿಯೇಟು ಕೊಡಲು ಇಮಾಮ್ ಮಾಲಿಕ್‌ರ ಫತ್ವಾ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞 00971553499119
▪ *ಒಮ್ಮೆ* ಮದೀನದಲ್ಲಿ ಒಂದು ಹೆಂಗಸು ಮರಣ ಹೊಂದಿದರು. ಸಾಮಾನ್ಯ ಮರಣ ಹೊಂದಿದರೆ ಕಡ್ಡಾಯವಾಗಿ ಮಾಡುವ ಮೊದಲ ಕರ್ಮವಾದ ಜನಾಝವನ್ನು ಸ್ನಾನ ಮಾಡಿಸಲು ಪರಿಸರದ ಕೆಲವು ಮಹಿಳೆಯರು ಸ್ನಾನಗೃಹಕ್ಕೆ ಕೊಂಡು ಹೋದರು.
▪ *ಅಂತೆಯೇ* ಸ್ನಾನ ಮಾಡಿಸುತ್ತಿರುವಾಗ ಒಂದು ಮಹಿಳೆ ಹೇಳಿದರಂತೆ. *"ಈ ಮಹಿಳೆ ಎಷ್ಟೋ ಮಂದಿಯೊಂದಿಗೆ ಅತ್ಯಾಚಾರ ಮಾಡಿರಬಹುದು*" ಸುಬ್‌ಹಾನಲ್ಲಾಹ್...! ಅಷ್ಟು ಹೇಳಿದ್ದೇ ತಡ, ಹೇಳಿದ ಮಹಿಳೆಯ ಕೈ ಮೃತ ಶರೀರದಲ್ಲಿ ಅಂಟಿಕೊಂಡಿತು. ಏನು ಮಾಡಿದರೂ ಯಾವ ಶಕ್ತಿ ಉಪಯೋಗಿಸಿಯೂ ಕೈಯನ್ನು ಅಂಟಿದಲ್ಲಿಂದ ತೆಗೆಯಲಾಗದೆ ತೊಂದರೆಗೀಡಾದರು. ಹೊರಗೆ ಕಫನ ಮತ್ತು ದಫನ ಮಾಡಲು ಕಾಯುತ್ತಿದ್ದವರು ಸ್ನಾನಗೃಹದಿಂದ ಮಯ್ಯಿತನ್ನು ಹೊರಗೆ ತರುವುದು ಕಾಣದೆಯಾದಾಗ ಕಂಗಾಲಾದರು.
▪ *ಅಷ್ಟರಲ್ಲಿ* ಹೊರಗಿನಿಂದ ಬೇರೊಂದು ಮಹಿಳೆ "ಸ್ನಾನಗೃಹದಲ್ಲಿ ಏನೋ ಅಸಾಮಾನ್ಯ ಘಟನೆ ನಡೆದಿರಬೇಕು. ಇಲ್ಲವಾದರೆ ಇಷ್ಟು ತಡವಾಗಲು ಸಾಧ್ಯವಿಲ್ಲ" ಎಂದು ಹೇಳಿ ಒಳಗೆ ಹೋದರು. ಒಳಗೆ ಹೋದಾಗ ಸ್ನಾನ ಮಾಡಿಸುತ್ತಿದ್ದ ಒಂದು ಮಹಿಳೆಯ ಕೈ ಮೃತ ಶರೀರದಲ್ಲಿ ಅಂಟಿ ಹೋಗಿದೆ. ತೆಗೆಯಲಾಗುವುದಿಲ್ಲ.
▪ *ಒಟ್ಟಿನಲ್ಲಿ* ಸ್ನಾನಗೃಹದ ಹೊರಗಿರುವವರಿಗೂ ವಿಷಯ ತಿಳಿಯಿತು. ಮನೆಯಲ್ಲಿ ನೆರೆದವರೆಲ್ಲರೂ ಏನು ಮಾಡಬೇಕೆಂದು ತಿಳಿಯದೆ ಕಂಗಾಲಾದರು. ಜೀವಂತವಿರುವ ವ್ಯಕ್ತಿಯ ಕೈ ತುಂಡು ಮಾಡುವುದಾ..? ಅಥವಾ ಮೃತ ಶರೀರದಿಂದ ಒಂದು ತುಂಡು ಮಾಂಸವನ್ನು ತುಂಡುಮಾಡಿ ಮಹಿಳೆಯನ್ನು ಬಚಾವು ಮಾಡುವುದಾ..? ನೆರದವರಲ್ಲಿ ಹಲವಾರು ಪಂಡಿತರೂ ಇದ್ದರು. ಕೆಲವು ಪಂಡಿತರು ಫತ್‌ವಾ ಕೊಟ್ಟರು. *"ಅವಳು ಹೇಳಿದ್ದು ಮಹಾ ತಪ್ಪು. ಆದ್ದರಿಂದ ಅವಳ ಕೈ ತುಂಡು ಮಾಡಬೇಕು"* "ಹಾಗೆ ಮಾಡುವುದು ಸರಿಯಲ್ಲ. ಹೇಳಿದ್ದು ತಪ್ಪಾದರೂ ಬದುಕಿರುವವರ ಕೈ ತುಂಡು ಮಾಡುವುದಕ್ಕಿಂತ ಜೀವವಿಲ್ಲದ ಮಯ್ಯಿತಿನ ಒಂದು ತುಂಡು ಕತ್ತರಿಸುವುದು ಉತ್ತಮ" ಎಂದು ಬೇರೆ ಕೆಲವು ಉಲಮಾಗಳು ಫತ್‌ವಾ ಕೊಟ್ಟರು.
▪ *ಹೀಗೆಯೇ* ಸಮಸ್ಯೆಗೆ ಪರಿಹಾರ ಸಿಗದೆ ಪರಸ್ಪರ ಮಾತಿನಲ್ಲಿ ಮುಳುಗಿದ್ದಾಗ ಸಭೆಯಿಂದ ಒಬ್ಬರು ಹೇಳಿದರು *"ನಾವು ಯಾಕೆ ಪರಸ್ಪರ ಚರ್ಚೆ ಮಾಡಿ ಸಮಯ ಹಾಳು ಮಾಡುವುದು..? ನಮ್ಮ ಊರಾದ ಈ ಮದೀನದಲ್ಲಿ ಇಮಾಮ್ ಮಾಲಿಕ್ (ರ) ಬದುಕಿದ್ದಾರಲ್ವಾ.? ನಾವು ಅವರ ಹತ್ತಿರ ಹೋಗಿ ವಿಷಯ ಹೇಳುವ. ಅವರು ಏನು ಹೇಳುತ್ತಾರೆ ಹಾಗೆ ಮಾಡುವ. ಮಾಲಿಕ್ ಇಮಾಮರು ಬದುಕಿರುವ ಈ ಯುಗದಲ್ಲಿ ಬೇರೊಬ್ಬರ ಫತ್‌ವಾದ ಅಗತ್ಯತೆ ಇದೆಯೇ..? "*
▪ *ಸಮಸ್ಯೆ* ಪರಿಹಾರಕ್ಕೆ ಇಮಾಮ್ ಮಾಲಿಕ್ (ರ) ರನ್ನು ಬೇಟಿ ಮಾಡಲಾಯಿತು. ನಂತರ ಇಮಾಮರು ಮೃತರ ಮನೆಗೆ ಬಂದರು. ಮನೆಗೆ ಬಂದ ಮಾಲಿಕರು ಸ್ನಾನಗೃಹದ ಹೊರಗಿನಿಂದ ಮಹಿಳೆಯಲ್ಲಿ ಕೇಳಿದರು. *"ನೀನು ಏನು ಅಸಭ್ಯ ಹೇಳಿರುವೆ..?"* ಆಗ ಆ ಮಹಿಳೆಯು ಹೇಳಿದಳು. "ನಾನು ಹೆಚ್ಚೇನು ಹೇಳಲಿಲ್ಲ. *ಈ ಮಹಿಳೆ ತನ್ನ ಬದುಕಿನಲ್ಲಿ ಎಷ್ಟೋ ಬಾರಿ ವ್ಯಭಿಚಾರ ಮಾಡಿರಬಹುದು* ಎಂದು ಮಾತ್ರ"
▪ *ಮಹಿಳೆಯಿಂದ* ಇದನ್ನು ಕೇಳಿದಾಕ್ಷಣ ವಿಜ್ಞಾನದ ಶಿಖರ ಇಮಾಮ್ ಮಾಲಿಕರು ಹೇಳಿದರು. *"ಸುಶೀಲೆಯರ ಮೇಲೆ ವ್ಯಭಿಚಾರ ಆರೋಪ ಮಾಡಿ ನಾಲ್ಕು ಸಾಕ್ಷಿಗಳನ್ನು ಹಾಜರು ಪಡಿಸಲು ಸಾಧ್ಯವಾಗದಿದ್ದಲ್ಲಿ ಅವರಿಗೆ ಛಾಟಿಯಿಂದ ಎಂಬತ್ತು ಛಡಿಯೇಟು ಬಾರಿಸಬೇಕೆಂದು ಪವಿತ್ರ ಖುರ್‌ಆನಿನ ತಾಕೀತು ಇದೆ. ಆದ್ದರಿಂದ ನಿಮ್ಮಿಂದ ಯಾರಾದರೊಬ್ಬರು ಆ ಮಹಿಳೆಗೆ ಎಂಬತ್ತು ಛಾಟಿ ಏಟು ಕೊಡಿ. ಆಗಲೇ ಕೈ ತಾನಾಗಿಯೇ ಅಂಟಿಕೊಂಡಲ್ಲಿಂದ ಬಿಡುತ್ತದೆ. "*
▪ *ಎಂಬತ್ತು* ಏಟು ಕೊಟ್ಟದ್ದೇ ತಡ ಸುಬ್‌ಹಾನಲ್ಲಾಹ್... ಕೈ ಅಂಟಿದಲ್ಲಿಂದ ಬಿಟ್ಟಿತು.!
ಸಂಗ್ರಹ: ಇಮಾಮ್ ಇಬ್‌ನು ಹಜರ್ ಹೈತಮಿ (ರ) ತುಹ್ಫತುಲ್ ಮುಹ್‌ತಾಜ್ ಎಂಬ ಗ್ರಂಥ.

Comments