Skip to main content

ಇಮಾಮ್ ಬುಖಾರಿಯನ್ನು ಪರಲೋಕಕ್ಕೆ ಕಾಯುತ್ತಿದ್ದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್

ಇಮಾಮ್ ಬುಖಾರಿಯನ್ನು ಪರಲೋಕಕ್ಕೆ ಕಾಯುತ್ತಿದ್ದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್!

*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞0097155 3499119


   *ಹಿಜ್‌ರಾ ವರ್ಷ* ನೂರ ತೊಂಬತ್ತ ನಾಲ್ಕರಲ್ಲಿ ಹುಟ್ಟಿ ಇನ್ನೂರ ಐವತ್ತ ಆರರಲ್ಲಿ ವಫಾತಾದ ಜ್ಞಾನ ಶಿಖರ ಇಮಾಮ್ ಬುಖಾರಿಯವರ ಬಗ್ಗೆ ತಿಳಿಯದವರು ಈ ಮುಸ್ಲಿಮ್ ಜಗತ್ತಿನಲ್ಲಿ ಬಹುಶಃ ಯಾರೂ ಇರಲಿಕ್ಕಿಲ್ಲ. ಪವಿತ್ರ ಖುರ್‌ಆನಿನ ನಂತರ ಬಹಳ ಶ್ರೇಷ್ಠವಾದ *ಸಹೀಹುಲ್ ಬುಖಾರಿ* ಎಂಬ ಹದೀಸ್ ಗ್ರಂಥವನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಹದಿನಾರು ವರ್ಷಗಳ ಕಠಿಣ ಪರಿಶ್ರಮದಿಂದ ಊಟ ನಿದ್ದೆಯಿಲ್ಲದೆ ರಚಿಸಿದ ಸುಮಾರು ಏಳು ಸಾವಿರ ಚಿಲ್ಲರೆ ಪ್ರವಾದೀ ಹದೀಸುಗಳನ್ನು ಒಳಗೊಂಡ ಒಂದು ಹದೀಸ್ ಗ್ರಂಥವಾಗಿದೆ ಇದು.
   ▪ *ಇಮಾಮ್* ಬುಖಾರಿಯವರ ಸಮಕಾಲೀನ ಪಂಡಿತರೂ ಅವರ ಊರಾದ ಸಮರ್‌ಖಂದ್ ಪಟ್ಟಣದ ಸಮೀಪ ನಿವಾಸಿಯೂ ಆದ *ಅಬ್ದುಲ್ ವಾಹಿದ್ ಬಿನ್ ಆದಮ್ ಅಲ್ ತ್ವವಾವೀಸೀ* (ರ) ಹೇಳುತ್ತಾರೆ. *"ನನಗೆ ಒಂದು ದಿನ ರಾತ್ತಿ ನಿದ್ದೆಯಲ್ಲಿ ಒಂದು ಅದ್ಭುತ ಕನಸು ಬಿತ್ತು. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಕೆಲವು ಗಣ್ಯ ಸ್ವಹಾಬಿಗಳು ಒಂದು ಕಡೆ ನಿಂತು ಯಾರಾನ್ನೋ ಕಾಯುತ್ತಿದ್ದಾರೆ. ನಾನು ಅವರ ಹತ್ತಿರ ಹೋಗಿ ಸಲಾಮ್ ಹೇಳಿದೆ. ಅಲ್ಲಿ ಜಮಾಯಿಸಿದ ಎಲ್ಲರೂ ನನ್ನ ಸಲಾಮಿಗೆ ಬಹಳ ಸಂತೋಷದಿಂದ ವ ಅಲೈಕುಮುಸ್ಸಲಾಮ್.. ಎಂದು ಉತ್ತರ ಕೊಟ್ಟರು. ನಂತರ ನಾನು ಪ್ರವಾದಿಯವರಲ್ಲಿ ಕೇಳಿದೆ. "ಯಾ ರಸೂಲಲ್ಲಾಹ್... ನೀವು ಇಲ್ಲಿ ಬಹಳ ಉತ್ಸಾಹದಿಂದ ಯಾರನ್ನು ಕಾಯುತ್ತಿರುವುದು..? ಯಾಕೆ ಇಲ್ಲಿ ನಿಂತಿದ್ದೀರಿ..?"* ಕೂಡಲೇ ಪ್ರವಾದಿಯವರು ನನ್ನಲ್ಲಿ ಹೇಳಿದರು. *"ನಾವು ಇಮಾಮ್ ಬುಖಾರಿಯನ್ನು ಕಾಯುತ್ತಿದ್ದೇವೆ."*
   ▪ *ಅಷ್ಟರಲ್ಲಿ* ನನಗೆ ನಿದ್ರೆಯಿಂದ ಎಚ್ಚರವಾಯಿತು. ನನಗೆ ಬಿದ್ದ ಈ ಕನಸಿನ ವ್ಯಾಖ್ಯಾನ ಏನೆಂದು ತಿಳಿಯದೆ ನಾನು ಬಹಳ ಚಿಂತೆಗೊಳಗಾದೆನು. ಎರಡು ದಿನಗಳು ಕಳೆದಾಗ ಅವರ ಸಮೀಪವಾಸಿಯಾದ ನನಗೆ ಅವರ ವಫಾತಿನ ದುಖಃವಾರ್ತೆ ತಿಳಿಯಿತು. ವಾರ್ತೆ ನನಗೆ ಮುಟ್ಟುವಾಗ ಅವರ ವಫಾತ್ ಕಳೆದು ಎರಡು ಮೂರು ದಿನ ಆಗಿತ್ತು. ಸುಬ್‌ಹಾನಲ್ಲಾಹ್... ಕೆಲವು ದಿನಗಳ ಮೊದಲು ನನಗೆ ಬಿದ್ದ ಕನಸಿನ ಸಮಯ ಮತ್ತು ಇಮಾಮ್ ಬುಖಾರಿಯ ವಫಾತಿನ ಸಮಯ ನಾನು ನೋಡುವಾಗ ಒಂದೇ ಆಗಿತ್ತು.!!!"

ಸಂಗ್ರಹ; ಇಮಾಮ್ *ಇಬ್‌ನು ಹಜರ್ ಅಲ್‌ ಅಸ್‌ಖಲಾನಿ* (ರ) ರವರ ಫತುಹುಲ್ ಬಾರೀ ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...