Skip to main content

ಮಯ್ಯಿತ್ ಹಂದಿಯ ರೂಪವಾಗಿ ಬದಲಾದಾಗ.

ಮಯ್ಯಿತ್ ಹಂದಿಯ ರೂಪವಾಗಿ ಬದಲಾದಾಗ..!

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*📞0097155349119

   ▪ *ಒಂದು ದಿನ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮತ್ತು ಕೆಲವು ಸ್ವಹಾಬಿಗಳು ಮದೀನಾ ಮಸೀದಿಯಲ್ಲಿ ಕುಳಿತು ಧಾರ್ಮಿಕವಾಗಿ ಚರ್ಚೆ ನಡೆಸುತ್ತಿದ್ದರು. ಆಗ ಒಬ್ಬ ಯುವಕ ಬಹಳ ದನಿಯಿಂದ ಅಳುತ್ತಾ ಮಸಿದಿಯೊಳಗೆ ಓಡಿ ಬಂದು ಹೇಳಿದರು. *"ಪ್ರವಾದಿಯವರೇ.., ನನ್ನ ತಂದೆ ಮರಣ ಹೊಂದಿದ್ದಾರೆ. ಮಯ್ಯಿತನ್ನು ಸ್ನಾನ ಮಾಡಿಸಲು ಮನೆಯಲ್ಲಿ ನಾನಲ್ಲದೆ ಬೇರೆ ಯಾರೂ ಇಲ್ಲ. ಅಲ್ಲದೆ ಕಫನ್ ಬಟ್ಟೆ ಖರೀದಿಸಲು ಒಂದು ನಯಾ ಪೈಸೆಯೂ ನನ್ನಲ್ಲಿ ಇಲ್ಲ. ಒಟ್ಡಿನಲ್ಲಿ ಬಹಳ ಕಂಗಾಲಾಗಿದ್ದೇನೆ."*
   ▪ *ಕೂಡಲೇ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಫನ್ ಬಟ್ಟೆ ತೆಗೆದುಕೊಟ್ಟು ಹಝ್ರತ್ ಅಬೂಬಕರ್ ಸಿದ್ದೀಖ್ (ರ) ಮತ್ತು ಹಝ್ರತ್ ಉಮರ್ (ರ) ರನ್ನು ಆ ಮೃತರ ಮನೆಗೆ ಕಳುಹಿಸಿದರು. ಇಬ್ಬರೂ ಮನೆ ತಲುಪಿ ಮಯ್ಯಿತನ್ನು ಸ್ನಾನ ಮಾಡಿಸಲು ಸ್ನಾನಕೊಠಡಿಗೆ ಕೊಂಡುಹೋಗಲು ತಯಾರಾದಾಗ ಸುಬ್‌ಹಾನಲ್ಲಾಹ್... ಜನಾಝ ಒಂದು ಕಪ್ಪು ಬಣ್ಣದ ಹಂದಿಯ ರೂಪವಾಗಿ ಬದಲಾವಣೆಯಾಗಿತ್ತು. ಈ ಭಯಾನಕ ದೃಶ್ಯವನ್ನು ಕಂಡಾಗ ಈ ಇಬ್ಬರು ಸ್ವಹಾಬಿಗಳು ಕೂಡಲೇ ಪ್ರವಾದೀ ಸನ್ನಿಧಿಗೆ ಬಂಧು ವಿಷಯ ತಿಳಿಸಿದರು.
   ▪ *ನಂತರ* ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರೊಂದಿಗೆ ಮೃತರ ಮನೆಗೆ ಹೋದರು. ಹಂದಿಯ ರೂಪದಲ್ಲಿರುವ ಮಯ್ಯಿತನ್ನು ಅದರ ನಿಜವಾದ ಮನುಷ್ಯ ರೂಪಕ್ಕೆ ಬದಲಾವಣೆ ಮಾಡಲು ದುಆ ಮಾಡಿದರು. ಪ್ರವಾದಿವರ್ಯರು ದುಆ ಮಾಡಿದ ತತ್‌ಕ್ಷಣವೇ ಮನುಷ್ಯ ರೂಪವಾಗಿ ಮಾರ್ಪಟ್ಟಿತು. ನಂತರ ಸಹಾಬಿಗಳು ಸ್ನಾನ ಮಾಡಿಸಿ ಕಫನ್ ಮಾಡಿ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಇಮಾಮತಿನಲ್ಲಿ ಮಯ್ಯಿತ್ ನಮಾಝ್ ಮಾಡಲಾಯಿತು.
  ▪ *ಬಳಿಕ* ಸ್ವಹಾಬಿಗಳು ಮಯ್ಯಿತನ್ನು ದಫನ ಮಾಡಲು ಖಬರಿನೊಳಗೆ ಇಳಿಸಿದಾಗ ಪುನಃ ಮೊದಲಿನಂತೆಯೇ ಹಂದಿಯ ರೂಪವಾಯಿತು. ಈ ದೃಶ್ಯವನ್ನು ಕಂಡ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅವರ ಮಗನಲ್ಲಿ ಕೇಳಿದರು. *"ನಿಮ್ಮ ತಂದೆ ಮಾಡುತ್ಯಿದ್ದ ತಪ್ಪು ಏನು.."* ಅದಕ್ಕೆ ಮಗನು ಹೇಳಿದರು. *"ದೊಡ್ಡ ತಪ್ಪೇನೂ ಮಾಡಿತ್ತಿರಲಿಲ್ಲ. ಆದರೆ ನಮಾಝ್ ಎಂಬ ಅದ್ಯಾಯವೇ ಅವರಿಗೆ ಅವರಿಗೆ ಇರಲಿಲ್ಲ. ಒಂದು ವಖತ್ ಕೂಡ ನಮಾಝು ಮಾಡುತ್ತಿರಲಿಲ್ಲ."*
   ▪ *ಪ್ರವಾದಿವರ್ಯರು* ಹೇಳಿದರು. *"ನಮಾಝು ನಿರ್ವಹಿಸದವನನ್ನು ಅಂತ್ಯದಿನ ಈ ರೀತಿ ರೂಪ ಬದಲಾವಣೆ ಮಾಡುವುದರಿಂದ ಅಲ್ಲಾಹನಲ್ಲಿ ಕಾಲವನ್ನು ಕೇಳುತ್ತೇನೆ. ಆ ಅನಾಹುತದಿಂದ ಅಲ್ಲಾಹನು ಕಾಪಾಡಲಿ."*

ಸಂಗ್ರಹ,; *ಬಹ್‌ಜತುಲ್ ಅಬ್‌ರಾರ್ ಎಂಬ ಗ್ರಂಥ.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...