Skip to main content

ಕಾಲದ ಸಂಗಾತಿ -- "ಸೂರತುಲ್ ವಾಖಿಅಃ"


 ಕಾಲದ ಸಂಗಾತಿ -- "ಸೂರತುಲ್ ವಾಖಿಅಃ"

ಯೂಸುಫ್ ನಬ್‌ಹಾನಿ ಕುಕ್ಕಾಜೆ
📞00971 553499119

▪ *ಪ್ರಖ್ಯಾತ* ಸ್ವಹಾಬಿ ಹಝ್ರತ್ ಅಬ್ದುಲ್ಲಾಹ್ ಬಿನ್ ಮಸ್‌ಊದ್ (ರ) ರವರು ಖಲೀಫಾ ಉಸ್‌ಮಾನ್ (ರ) ರ ಖಿಲಾಫತಿನ ವೇಳೆ ಇರಾಕಿನ 'ಕೂಫಾ' ಪ್ರಾಂತದ ಗವರ್ನರ್ ಆಗಿ ನಿಯುಕ್ತರಾಗಿದ್ದರು.
   ▪ *ಅಧಿಕಾರದಲ್ಲಿರುವಾಗಲೇ* ಅನಾರೋಗ್ಯ ಪೀಡಿತರಾದ ಅವರು ತನ್ನ ಊರಾದ ಮದೀನಾಕ್ಕೆ ವಾಪಾಸಾದರು. ಸ್ವಗೃಹದಲ್ಲಿ ಖಾಯಿಲೆ ಪೀಡಿತರಾಗಿ ಮಲಗಿರುವಾಗ ಒಮ್ಮೆ ಖಲೀಫಾ ಉಸ್‌ಮಾನ್ (ರ), ಅವರನ್ನು ಸಂದರ್ಶಿಸಲು ಹೋದರು. ಮನೆ ತಲುಪಿದ ಖಲೀಫರು ಬಿನ್ ಮಸ್‌ಊದ್ (ರ) ರನ್ನುದ್ದೇಶಿಸಿ,  *"ತಾವು  ವಫಾತಿನ ನಂತರ ತಮ್ಮ ಮಕ್ಕಳಿಗೆ  ಬದುಕಲು ಏನಾದರು ಆಸ್ತಿಪಾಸ್ತಿ ಮಾಡಿ ಇಟ್ಟಿದ್ದೀರಾ.?ಇಲ್ಲವೆಂದಾದಲ್ಲಿ ನಾನು ಇಲ್ಲಿನ  ದಾನಿಗಳಿಂದ ಸಂಗ್ರಹಿಸಿ ತಮ್ಮ ಮಕ್ಕಳ ಭವಿಷ್ಯಕ್ಕೆ ಒಂದು ವ್ಯವಸ್ಥೆ ಮಾಡಿದರೆ ಹೇಗೆ?* ಮಹಾತ್ಮರು  ಮುಗುಳ್ನಗುತ್ತಾ   *"ಬೇಡ.. ಬೇಡ... ನನಗೆ ಅದರ ಅಗತ್ಯವಿಲ್ಲ. ದೊಡ್ಡ ಆಸ್ತಿಪಾಸ್ತಿ ಏನೂ ನಾನು ಮಾಡಿಟ್ಟಿಲ್ಲ. ಆದರೆ ನನ್ನ ಮಕ್ಕಳು ಮೂರು ಹೊತ್ತಿನ ಅನ್ನ ಸಿಗದೆ ಹಸಿವಿಗೆ ಈಡಾಗುವ ಭಯ ನನಗೆ ಕಿಂಚಿತ್ತೂ ಇಲ್ಲ. ಯಾಕೆಂದರೆ, ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿ ಕೊಟ್ಟ ಖುರ್‌ಆನಿನ "ಸೂರಃ ಅಲ್ ವಾಖಿಅ" ವನ್ನು (الواقعة) ಅವರಿಗೆ  ನಾನು ಕಲಿಸಿ ಕೊಟ್ಟಿದ್ದೇನೆ. ಅವರೆಲ್ಲರೂ ಅದನ್ನು ತಪ್ಪದೆ ದಿನಾಲೂ  ಓದುತ್ತಿದ್ದಾರೆ. "ಆ ಸೂರತನ್ನು ರೂಢಿಯಾಗಿಸಿದವರಿಗೆ ಬಡತನದ ರುಚಿ ಮುಟ್ಟದು. ಯಾವತ್ತೂ ಬೇರೊಬ್ಬರಲ್ಲಿ ಹಸ್ತ ಚಾಚುವ ಗತಿ ಬಾರದು." ಎಂದು ಪ್ರವಾದಿ  ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನನ್ನಲ್ಲಿ ಹೇಳಿದ್ದಾರೆ"* ಎಂದು ಉತ್ತರ ಕೊಟ್ಟರು.
   ▪ *ರಸೂಲ್*  ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಎಂಟುನೂರ ನಲವತ್ತು ಹದೀಸುಗಳನ್ನು ವರದಿ ಮಾಡಿದ ಈ ಮಹಾನ್ ಸ್ವಹಾಬಿಯ ಮಖ್‌ಬರ *ಮದೀನದ ಜನ್ನತುಲ್ ಬಖೀಇ* ನಲ್ಲಿದೆ.

✍🏻ಸಂಗ್ರಹ: ಇಮಾಮ್ ಮುಹಮ್ಮದ್ ಜರ್ದಾನಿಯ *"ಅಲ್ ಜವಾಹಿರ್ ಅಲ್ ಲುಅ್‌ಲುಇಯ್ಯ ಫಿ ಶರಹಿ ಅರ್‌‌ಬ'ಈನ ಅಲ್ ನವವಿಯ್ಯ"*  ಎಂಬ ಗ್ರಂಥದಿಂದ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...