Skip to main content

ಲಕ್ಷಾಂತರ ಜನರನ್ನು ಬಲಿಪಡೆದ ಪ್ರಾಚೀನ ಕೊರೋನಾ


ಲಕ್ಷಾಂತರ ಜನರನ್ನು ಬಲಿಪಡೆದ ಪ್ರಾಚೀನ ಕೊರೋನಾ
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
00971553499119
*"ಒಂದು*  ಊರಿನಲ್ಲಿ ಅಥವಾ ಒಂದು ಪ್ರದೇಶದಲ್ಲಿ ಪ್ಲೇಗ್, ಕೊರೋನಾ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಬಂದರೆ ನೀವು ಇರುವ ಊರಿನಿಂದ ರೋಗವನ್ನು ಭಯಪಟ್ಟು  ಪಲಾಯನ ಮಾಡಬಾರದು. ಅಂತೆಯೇ ನೀವು ಸುರಕ್ಷಿತ ಜಾಗದಲ್ಲಿ ಇರುವುದಾರೆ ರೋಗಪೀಡಿತ ಜಾಗಕ್ಕೂ ಹೋಗಬಾರದು." ಎಂದು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಮಾತಿನ ಮಹತ್ವ ಮತ್ತು ಅದರ ಪರಿಣಾಮ ಎಷ್ಟೆಂದು ಹಾಲಿ ವಿದ್ಯಮಾನಗಳು ನಮಗೆ ಮನವರಿಕೆ ಮಾಡಿಕೊಡುತ್ತವೆ.
   ▪️ *ಸುಮಾರು"* ಮೂರು ಸಾವಿರ ವರ್ಷಗಳ ಮುಂಚೆ ಪ್ರವಾದಿ ಹಝ್ರತ್ ಮೂಸಾ (ಅ) ಅವರ ವಫಾತಿನ ಕೆಲವು ವರ್ಷಗಳ ಬಳಿಕ ಬಂದ  ಪ್ರವಾದಿಯಾಗಿದ್ದರು ಹಝ್ರತ್ *"ಹಿಝ್‌ಖೀಲ್*" (ಅ) . ಅವರ ಜನತೆ ಅವರನ್ನು ಅನುಸರಿಸದೆ ಹೋದಾಗ ಅಲ್ಲಾಹನು ಪ್ಲೇಗ್ ರೋಗ ಕೊಟ್ಟು ಅವರನ್ನು ಪರೀಕ್ಷಿಸಿಸಿದನು. ಮೊದಲೊಮ್ಮೆ ಸಣ್ಣ ಮಟ್ಟದಲ್ಲಿ ಪ್ಲೇಗು ಬಂದಾಗ ಊರಿನ ಕೆಲವರು ಅಲ್ಲಿಂದ ಪಲಾಯನ ಮಾಡಿದ್ದರು. ಪಲಾಯನ ಮಾಡಿದವರು ಬಚಾವು ಆಗಿದ್ದರು. ಅದನ್ನು ನೋಡಿ ಎರಡನೇ ಸಲ ಪ್ಲೇಗ್ ಬಂದಾಗ ಊರಿನ ಎಲ್ಲರೂ ಗುಂಪಾಗಿ ಹತ್ತಿರದ ಗ್ರಾಮಕ್ಕೆ ವಲಸೆ ಹೋದರು. ಹೋದವರ ಸಂಖ್ಯೆ ಹತ್ತು ಸಾವಿರವೆಂದೂ, ಮೂವತ್ತು ಸಾವಿರವೆಂದೂ, ಎಪ್ಪತ್ತು ಸಾವಿರವೆಂದೂ  ಅಭಿಪ್ರಾಯಗಳಿವೆ. ಅವರು ಹತ್ತಿರದ ಗ್ರಾಮ ತಲುಪಿದಾಕ್ಷಣ ಅಲ್ಲಾಹನು ಎರಡು ಮಲಕುಗಳನ್ನು ಕಳುಹಿಸಿ ಅವರನ್ನು ನಾಶಮಾಡಲು ಆಜ್ಞೆ ಕೊಟ್ಟನು. ಭೂಮಿಗೆ ತಲುಪಿದ ಮಲಕುಗಳು ಅವರೊಂದಿಗೆ ದೊಡ್ಡ ದನಿಯಲ್ಲಿ *"ಮೂತೂ"* (ನೀವು ಸಾಯಿರಿ) ಎಂದು ಹೇಳಿದರು. ಮಲಕುಗಳ ಈ ಶಬ್ದ ಕೇಳಿದಾಗ ಎಪ್ಪತ್ತು ಸಾವಿರ ಜನರೂ ತಕ್ಷಣ ಸಾವಿಗೀಡಾದರು.
   ▪️ *ಈ ವೇಳೆ* ಹಝ್ರತ್ ಹಿಝ್‌ಖೀಲ್ (ಅ) ರವರು ಎಲ್ಲೋ ಊರಿನ ಹೊರ ವಲಯದಲ್ಲಿದ್ದರು. ಒಂದು ವಾರ ಕಳೆದು ಆ ಪ್ರದೇಶದಲ್ಲಿ ಹಾದು ಬರುವಾಗ ಸಾವಿರಾರು ಜನರ ಶವ ಒಂದು ಕಡೆ ಬಿದ್ದು ಕೊಳೆತು ನಾರುತ್ತಿತ್ತು. "ತನ್ನ ಜನತೆಗೆ ತಿಳುವಳಿಕೆ ಇಲ್ಲದೆ ಈ ರೀತಿಯಾಗಲು ಕಾರಣವಾಯಿತು" ಎಂದು ತಿಳಿದ ಪ್ರವಾದಿ ಹಿಝ್‌ಖೀಲ್ (ಅ) ರವರು ಜನರಿಗೆ ಪುನರ್ಜೀವ  ಕೊಡಲು ಪ್ರಾರ್ಥಿಸಿದರು. ಕೂಡಲೇ ಆ ಸತ್ತು ಕೊಳೆತ ಸಾವಿರಾರು ಜನರ ದೇಹಗಳು ಜೀವವಾಗಿ ಎದ್ದು ನಿಂತವು.
   ▪️ *ಇದು* ಯಾವುದೇ ಪುರಾಣದ ಕತೆಯಲ್ಲ. ಪವಿತ್ರ ಖುರ್‌ಆನಿನ ಸೂರಃ ಅಲ್ ಬಕರದ ಇನ್ನೂರ ನಲವತ್ತ ಮೂರನೇ ಸೂಕ್ತವು ಈ ಘಟನೆಯ ಬಗ್ಗೆ ಈ ರೀತಿ ವಿವರಿಸುತ್ತದೆ. "ಸಾವಿರಾರು ಜನರಿದ್ದೂ ಮೃತ್ಯು ಭಯದಿಂದ ತಮ್ಮ ಮನೆಗಳನ್ನು ತ್ಯಜಿಸಿ ಹೊರಹೋದ ಒಂದು ಜನತೆಯ ಬಗ್ಗೆ ತಾವು ಅರಿತಿಲ್ಲವೇ..? ಆಗ ಅಲ್ಲಾಹನು ಅವರೊಂದಿಗೆ ಹೇಳಿದನು.  *ನೀವು ಮರಣ ಹೊಂದಿರಿ."* ತರುವಾಯ ಅವನು ಅವರಿಗೆ ಜೀವವನ್ನು ನೀಡಿದನು."
   ▪️ *ಒಮ್ಮೆ* ಇಸ್ಲಾಮಿನ ಎರಡನೇ ಖಲೀಪಾ
ಹಝ್ರತ್ ಉಮರ್ (ರ) ತನ್ನ ಖಿಲಾಫತ್ ಕಾಲದಲ್ಲಿ ಮದೀನಾದಿಂದ ಸಿರಿಯಾ ದೇಶದ ಕಡೆ ಹೊರಟು *"ಸರಗ್"* ಎಂಬ ಜಾಗ ತಲುಪಿದಾಗ "ಸಿರಿಯಾದಲ್ಲಿ ಮಹಾಮಾರಿ ಪ್ಲೇಗ್ ಹರಡಿ ಸಾವಿರಾರು ಜನರು ಸಾಯುತ್ತಿದ್ದಾರೆಂದು" ಸ್ವಹಾಬಿಯಾದ ಹಝ್ರತ್ ಅಬ್ದುಲ್ ರಹ್‌ಮಾನ್ ಬಿನ್ ಅವ್‌‌ಫ್ (ರ) ರವರು ತಿಳಿಸಿದರು. ಕೂಡಲೇ ಖಲೀಫರು ಸಿರಿಯಾ ಹೋಗದೆ ಅಲ್ಲಿಂದಲೇ ಮರಳಿದರು. ಈ ಮಹಾಮಾರಿಯಲ್ಲಿ ಸುಮಾರು ಇಪ್ಪತ್ತ ಐದು ಸಾವಿರ ಜನರು ಮರಣಹೊಂದಿದರು.
   ▪️ *ಹಿಜ್‌ರಾ* ವರ್ಷ ನಾಲ್ಕುನೂರ ಅರವತ್ತ ಎರಡರಲ್ಲಿ ಈಜಿಪ್ಟಿನಲ್ಲಿ ಉಂಟಾದ ಪ್ಲೇಗ್ ಮಾರಿಯ ಮೂಲಕ ಲಕ್ಷಾಂತರ ಮಂದಿ ಸಾವನ್ನಪ್ಪಿದರಲ್ಲದೆ ಬದುಕುಳಿದ ಜನರಿಗೆ ತಿನ್ನಲು ಆಹಾರವಿಲ್ಲದೆ ಭೀಕರ ದಾರಿದ್ರ್ಯ ಬಂದಿತ್ತು. ಎಷ್ಟರತನಕವೆಂದರೆ, ತಿನ್ನುವ ಬಾದಾಮಿ, ಆಕ್ರೋಟ ಮುಂತಾದ ಒಣಧಾನ್ಯಗಳು ತಕ್ಕಡಿಯ ಒಂದು ತಟ್ಟೆಯಲ್ಲಿಡುವಾಗ ಮತ್ತೊಂದು ತಟ್ಟೆಯಲ್ಲಿ ತೂಕದ ಕಲ್ಲಿಗೆ ಬದಲಾಗಿ ಗ್ರಾಹಕ ಕೊಡುವ ದೀನಾರ್ ಅಥವಾ ದಿರ್‌ಹಮನ್ನು ಇಟ್ಟು ಅದರ ತೂಕಕ್ಕೆ ಸಮಾನವಾಗಿ ಕೊಡುತ್ತಿದ್ದರು. ಒಂದು ಕೋಳಿಮೊಟ್ಟೆಗೆ ದಿರ್‌ಹಮುಗಳ ಕಟ್ಟೇ ಕೊಡಬೇಕಾಗಿತ್ತು.
   ▪️ *ಈ ಕ್ಷಾಮ ಬಂದ ವೇಳೆ ಒಮ್ಮೆ ಅಂದಿನ ಈಜಿಪ್ಟಿನ ಮಂತ್ರಿಯೊಬ್ಬರು ಜನರಿಲ್ಲದ ಒಂದು ಪ್ರದೇಶದಲ್ಲಿ ತನ್ನ ಹೇಸರಗತ್ತೆಯ ಮೇಲೆ ಕುಳಿತು ಹೋಗುತ್ತಿರುವಾಗ ಮೂರು ಮಂದಿ ಅಪರಿಚಿತರು ಅವರನ್ನು ಕೊಂದು ಒಂದು ಮರಕ್ಕೆ ತೂಗುಹಾಕಿ ಅವರ ಮಾಂಸವನ್ನು ತಿಂದಿದ್ದರು. ಕೊನೆಗೆ ಮರದಲ್ಲಿ ತೂಗುತ್ತಿದ್ದ ಶವದಲ್ಲಿ ಬರೀ ಎಲುಬು ಮಾತ್ರ ಬಾಕಿಯಿತ್ತು.!!!*
  ▪️ *ಹಿಜ್‌ರಾ* ವರ್ಷ ಏಳುನೂರ ನಲವತ್ತ ಒಂಬತ್ತರಲ್ಲಿ ಉಂಟಾದ ಮಹಾಮಾರಿ ಇಡೀ ಜಗತ್ತನ್ನೇ ನಡುಗಿಸಿತ್ತು. ದಿನಾಲೂ ಎಪ್ಪತ್ತು ಸಾವಿರಕ್ಕಿಂತಲೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದರು. ಲಕ್ಷೋಪಲಕ್ಷ ಜನರನ್ನು ಬಲಿ ತೆಗೆದುಕೊಂಡ ಈ ಮಹಾಮಾರಿ ಸುಮಾರು ಆರು ತಿಂಗಳ ಕಾಲ ಜನರ ನಿದ್ದೆಗೆಡಿಸಿತ್ತು.
ಸಂಗ್ರಹ: ಇಮಾಮ್ ಅಬ್ದುಲ್ಲಾಹ್ ಬಿನ್ ಅಬ್ದುಲ್ ಮಲಿಕ್ ಅಲ್ ಮರ್‌ಜಾನಿಯ *"ಬಹ್‌ಜತುನ್ನುಫೂಸ್"* ಮತ್ತು ಇಮಾಮ್ ಇಬ್‌ನ್ ಕಸೀರ್ ರವರ *"ಅಲ್ ಬಿದಾಯ ವನ್ನಿಹಾಯಾ"* ಎಂಬ ಗ್ರಂಥಗಳಿಂದ.
'ಇದು ನಡೆದದ್ದು ಇರಾಕ್ ದೇಶದ *"ವಾಸಿತ್"* ಎಂಬ ಪ್ರದೇಶದಲ್ಲಾಗಿದೆ' ಎಂದು ತಿಳಿಯ ಬಯಸುತ್ತೇನೆ.
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...