Skip to main content

ಕಲ್ಲು ಕರಗಿಸುವ ಕಲ್ಲಂಗಡಿ ಹಣ್ಣು

ಕಲ್ಲು ಕರಗಿಸುವ  ಕಲ್ಲಂಗಡಿ ಹಣ್ಣು  (ಬಚ್ಚಂಗಾಯಿ, Watermelon, بطيخ)
ಯೂಸುಫ್ ನಬ್‌ಹಾನಿ ಕುಕ್ಕಾಜೆ
📞00971 553499119

   ▪ ಕಲ್ಲಂಗಡಿ ಹಣ್ಣಿನ ಬಗ್ಗೆ ತಿಳಿಯದವರು ಯಾರೂ ಈ ಜಗತ್ತಿನಲ್ಲಿ ಇರಲಿಕ್ಕಿಲ್ಲ. ಕಲ್ಲಂಗಡಿಯು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಬಹಳ ಇಷ್ಟವಾದ ಹಣ್ಣಾಗಿತ್ತು. ಅವರು ಅದನ್ನು ತಿನ್ನುವಾಗ ಅದರೊಂದಿಗೆ ಒಂದೆರಡು ಹಸಿ ಖರ್ಜೂರವನ್ನು ಕೂಡ ಕೆಲವೊಮ್ಮೆ ತಿನ್ನುತ್ತಿದ್ದರು. ಅದರ ಕಾರಣವೇನೆಂದು ಕೇಳಿದಾಗ, *"ಕಲ್ಲಂಗಡಿಯು ಬಹಳ ತಂಪಾಗಿದೆ. ಖರ್ಜೂರವು ಬಹಳ ಉಷ್ಣವಾಗಿದೆ. ಆದ್ದರಿಂದ ಕಲ್ಲಂಗಡಿ ತಿಂದು ಶೀತ ಆಗುವ ಭಯವಿದ್ದರೆ ಅದರೊಂದಿಗೆ ಖರ್ಜೂರವನ್ನೂ ಸೇವಿಸಿರಿ. ಒಂದರ ಉಷ್ಣತೆಯ ಪ್ರಮಾಣವನ್ನು ಮತ್ತೊಂದರ ಶೀತವು ನಿಯಂತ್ರಣ ಮಾಡುವಾಗ ಇನ್ನೊಂದರ ಶೀತವನ್ನು ಮತ್ತೊಂದರ ಉಷ್ಣವು ಹತೋಟಿ ಮಾಡುತ್ತದೆ"* ಎಂದು ಉತ್ತರಿಸಿದರು.
   ▪ *"ಕಲ್ಲಂಗಡಿಯನ್ನು* ನೀವು ಕಚ್ಚಿ ತಿನ್ನಿರಿ. ಅದರ ಒಳಗಿರುವ ನೀರು ಅಲ್ಲಾಹನ ಪ್ರತ್ಯೇಕ ಅನುಗ್ರಹವಾಗಿದೆ. ಅದರ ಅಸಾಮಾನ್ಯ ರುಚಿ ಸ್ವರ್ಗದ ಹಣ್ಣಿನ ರುಚಿಯಾಗಿದೆ. ಪ್ರಪ್ರಥಮವಾಗಿ  ಪ್ರಪಂಚಕ್ಕೆ  ಸ್ವರ್ಗದಿಂದ ತರಲಾದ ಹಣ್ಣು ಇದಾಗಿದೆ" ಎಂದು ಒಂದು ಹದೀಸಿನಲ್ಲಿ ವರದಿಯಾಗಿದೆ.
   ▪ *ಯಾವಾಗಲೂ*  ಉಷ್ಣ ಶರೀರದವರು ಕಲ್ಲಂಗಡಿಯನ್ನು ಖರ್ಜೂರವಿಲ್ಲದೆ  ತಿನ್ನಬಹುದು. ತಿಂದ ಕೂಡಲೇ ನೆಗಡಿ ಮತ್ತು ಶೀತದ ತೊಂದರೆ ಆಗುವುದಾದರೆ ಖರ್ಜೂರ ಮತ್ತು ಒಂದು ಶುಂಠಿಯ ತುಂಡನ್ನು ತಿಂದರೆ ಸರಿಯಾದ ಸಮತೋಲನವಾಗುತ್ತದೆ. ತಿಂದ ಕೂಡಲೇ ಕಫದ ತೊಂದರೆಗಳು ಬರುವುದಾದರೆ ಈ ಹೇಳಿದವುಗಳಲ್ಲದೆ ತಿಂದ ನಂತರ ಸ್ವಲ್ಪ ಜೇನುತುಪ್ಪ ಸೇವಿಸುವುದು ಒಳಿತು.
   ▪ *ಪ್ರವಾದಿಯವರು* ಯಾವಾಗಲೂ ಕಲ್ಲಂಗಡಿಯನ್ನು ಊಟಕ್ಕೆ ಸ್ವಲ್ಪ ಮೊದಲು ತಿನ್ನುತ್ತಿದ್ದರು. ನಂತರ ಊಟ ಮಾಡುತ್ತಿದ್ದರು. ಹೀಗೆ ತಿನ್ನುವುದರಿಂದ ಆಗುವ ಪ್ರಯೋಜನವೆಂದರೆ, ಮೊದಲೇ ಹೊಟ್ಟೆ ಸೇರಿದ ಕಲ್ಲಂಗಡಿಯು ಜಠರವನ್ನು ಚೆನ್ನಾಗಿ ತೊಳೆದು ಶುಭ್ರ ಮಾಡುತ್ತದೆ. ಮಾತ್ರವಲ್ಲ ಜಠರದಲ್ಲಿರುವ ಎಲ್ಲಾ ರೋಗಾಣುಗಳನ್ನು ಕೊಲ್ಲುತ್ತದೆ. ನಂತರ ಊಟ ಮಾಡುವಾಗ ಅದರಿಂದ ಶರೀರಕ್ಕೆ ಒಳ್ಳೆಯ ಫಲ ಸಿಗುತ್ತದೆ. ತಿಂದ ಆಹಾರವು ಸರಿಯಾಗಿ ಜೀರ್ಣವಾಗುತ್ತದೆ.
   ▪ *ಕಲ್ಲಂಗಡಿ* ಮಾತ್ರವಲ್ಲ ಯಾವುದೇ ಹಣ್ಣು ಹಂಪಲುಗಳಾದರೂ ಊಟಕ್ಕೆ ಮೊದಲು ಸೇವಿಸಬೇಕು. ಅದು ಆರೋಗ್ಯಕ್ಕೆ ಬಹಳ ಉತ್ತಮ. ಪವಿತ್ರ ಖುರ್‌ಆನಿನ *ಅಲ್ ವಾಖಿಅ* ಅಧ್ಯಾಯದ ಇಪ್ಪತ್ತು ಮತ್ತು ‌ಇಪ್ಪತ್ತ ಒಂದನೆಯ ಸೂಕ್ತಗಳು ಇದಕ್ಕೆ ಬಲ ಕೊಡುತ್ತದೆ. ಮಾತ್ರವಲ್ಲ ‌ಇಮಾಮ್ ಗಝಾಲಿ (ರ) ರವರು ತನ್ನ ಪ್ರಸಿದ್ಧ ಗ್ರಂಥವಾದ *ಇಹ್‌ಯಾ‌ಅ್‌ ಉಲೂಮುದ್ದೀನ್* ನಲ್ಲಿ ಇದನ್ನು ಸಮರ್ಥಿಸಿದ್ದಾರೆ.
   ▪ *ಪ್ರವಾದಿ ಮುಹಮ್ಮದ್* ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು, ಅಬೂಬಕರ್ ಸಿದ್ದೀಖ್ (ರ),  ಮತ್ತು ಉಮರ್ (ರ) ರವರು ಒಮ್ಮೆ ಸ್ವಹಾಬಿಯಾದ *ಅಬುಲ್ ಹಯ್‌ಸಮ್ ಬಿನ್ ತಯ್ಯಿಹಾನ್* (ರ) ರವರ ಮನೆಗೆ ಅತಿಥಿಯಾಗಿ ಹೋದಾಗ ಅವರು ಅತಿಥಿಗಳಿಗೆ ಮೊದಲು ಒಣ ಮತ್ತು ಹಸಿ ಖರ್ಜೂರ ತಿನ್ನಲು ಕೊಟ್ಟರು. ನಂತರ ದ್ಸಬಹ್ ಮಾಡಿ ಪಲ್ಯ ಊಟ ಬಡಿಸಿದರು. ಎಂಬ ಘಟನೆಯನ್ನು ಇಮಾಮ್ ನವವೀ (ರ) ರವರು ಇದಕ್ಕೆ ಆಧಾರವಾಗಿ ಕೊಟ್ಟಿದ್ದಾರೆ.
    ▪ *ಒಟ್ಟಿನಲ್ಲಿ* ಹಣ್ಣು ಹಂಪಲುಗಳನ್ನು ಊಟಕ್ಕೆ ಮೊದಲು ತಿನ್ನಬೇಕು ಎಂದಿರುವಾಗ, ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಊಟದ ನಂತರ ತಿನ್ನುವ ರೂಡಿ ಚಾಲ್ತಿಯಲ್ಲಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಮಾತ್ರವಲ್ಲ ಅದು ಕೆಲವೊಮ್ಮೆ ಕೆಲವು ಖಾಯಿಲೆಗಳಿಗೂ ಕಾರಣವಾಗಬಹುದಾದ್ದರಿಂದ ಹಾಗೆ ತಿನ್ನಬಾರದೆಂದು ಕೆಲವು ವೈದ್ಯಶಾಸ್ತ್ರ ಪಂಡಿತರು
ತಾಕೀತು ಕೊಟ್ಟಿದ್ದಾರೆ. ಅಂತೆಯೇ ಊಟ ಮುಗಿದ ನಂತರ ತಿನ್ನಬೇಕಾದ ಸಿಹಿ ಪದಾರ್ಥಗಳನ್ನು ನಾವಿಂದು ಊಟಕ್ಕೆ ಮೊದಲು ತಿನ್ನುತ್ತಿದ್ದೇವೆ. ಅದು ಕೂಡ ಆರೋಗ್ಯಕ್ಕೆ ಹಾನಿಕಾರಕವಾಗಿದೆ. "ಊಟಕ್ಕೆ ಮೊದಲು ಹಣ್ಣು ಹಂಪಲುಗಳು, ನಂತರ ಊಟ, ಕೊನೆಗೆ ಸಿಹಿತಿಂಡಿ ತಿನ್ನುವುದು" ಇದಾಗಿದೆ ಸರಿಯಾದ ರೂಪ. ಒಟ್ಟಿನಲ್ಲಿ ಇನ್ನಾದರೂ ಆ ರೂಡಿಯನ್ನು ನಮ್ಮ ಮುಸ್ಲಿಮ್ ಸಮಾಜ ತೊರೆಯಬೇಕಾಗಿದೆ.
   ▪ *ಹೊಟ್ಟೆ* ಸಂಪೂರ್ಣವಾಗಿ ತುಂಬಿದ ನಂತರ ತಿಂದರೆ ತೊಂದರೆ ಇರುವಂತೆಯೇ ಹೊಟ್ಟೆಯು ಸಂಪೂರ್ಣವಾಗಿ ಖಾಲಿಯಾದ ಸಮಯದಲ್ಲೂ ಕಲ್ಲಂಗಡಿಯನ್ನು ತಿನ್ನುವುದು ಒಳ್ಳೆಯದಲ್ಲ. ಹಸಿ ಹೊಟ್ಟೆಗೆ ಬೆಳಿಗ್ಗೆ ಇತರ ಕೆಲವು ಹಣ್ಣುಗಳನ್ನು ತಿನ್ನುವುದರ ಬಗ್ಗೆ ಹಲವಾರು ಗ್ರಂಥಗಳಲ್ಲಿ ಉಲ್ಲೇಖವಿದ್ದರೂ, ಕಲ್ಲಂಗಡಿಯ ಬಗ್ಗೆ ಎಲ್ಲೂ ಹೇಳಲಿಲ್ಲ. ಹಸಿಹೊಟ್ಟೆಗೆ ಕಲ್ಲಂಗಡಿ ತಿಂದು, ಕೂಡಲೇ ನಿದ್ರಿಸಿದರೆ ಅವನಿಗೆ "ಜ್ವರ ಬರುವುದು" ಖಾತರಿ ಎನ್ನಲಾಗುತ್ತದೆ.
   ▪ *ದಿನಾಲೂ* ಈ ಹಣ್ಣನ್ನು ತಿನ್ನುವವನಿಗೆ ಚರ್ಮ ಸಂಬಂಧವಾದ ಮತ್ತು ಮೂತ್ರ ಸಂಬಂಧವಾದ  ಯಾವುದೇ ಖಾಯಿಲೆಗಳು ಬಾರಲಾರದು. ಮೂತ್ರಕೋಶ, ಮೂತ್ರಜನಕಾಂಗ ಮತ್ತು ಮೂತ್ರ ನಾಳವನ್ನು ಶುಭ್ರಗೊಳಿಸುತ್ತದೆ. ಅಲ್ಲದೆ ಮೂತ್ರಕಲ್ಲು ಖಾಯಿಲೆ ಇರುವವನು ದಿನಾಲೂ ತಿನ್ನುವ ಅಭ್ಯಾಸ ಮಾಡಿದರೆ ಖಾಯಿಲೆಯು ಬೇರೆ ಔಷಧಿ ಇಲ್ಲದೆಯೇ ಗುಣವಾಗುತ್ತದೆ. ಎಂತಹಾ ಮೂತ್ರ ಕಲ್ಲನ್ನೂ ಹುಡಿ ಮಾಡುತ್ತದೆ. ನಿತ್ಯ ತಿನ್ನುವವನ ಚರ್ಮಕ್ಕೆ ಕಾಂತಿ ಹೆಚ್ಚಾಗುತ್ತದೆ. ಚರ್ಮದಲ್ಲಿ ಕಾಣಲ್ಪಡುವ ಕಲೆಗಳು ಮಾಯವಾಗುತ್ತದೆ. ವೀರ್ಯವು ವೃದ್ಧಿಯಾಗುತ್ತದೆ. ರಕ್ತದ ಒತ್ತಡವು ಕಡಿಮೆಯಾಗುತ್ತದೆ.
   ▪ *ಕಲ್ಲಂಗಡಿ* ತಿನ್ನುವುದರಿಂದ ಶರೀರದ ಉಷ್ಣತೆ ಕಡಿಮೆಯಾಗುತ್ತದೆ. ಬಾಯಾರಿಕೆ ನಿಲ್ಲುತ್ತದೆ. ಅಂತೆಯೇ ಆಹಾರ ಸೇವಿಸಿದ ಕೂಡಲೇ ಕೆಲವರಿಗೆ ಬರುವ ಹುಳಿ ತೇಗಿಗೆ ಕಡಿವಾಣ ಹಾಕುತ್ತದೆ. ಹಳದಿಜ್ವರ ಗುಣವಾಗಲೂ ಇದು ಸಹಾಯಕವಾಗುತ್ತದೆ.
   ▪ *ಇದನ್ನು* ತಿನ್ನುವಾಗ ಇದರ ಬೀಜವನ್ನು ಬೇರ್ಪಡಿಸಿ ತಿನ್ನಬಾರದು. ಅದರ ಬೀಜದಲ್ಲೂ ಬಹಳಷ್ಟು ರೋಗ ನಿರೋಧಕ ಶಕ್ತಿಯಿದೆಯೆಂದು ವೈದ್ಯ ವಿಜ್ಞಾನಿಗಳಾದ ಉಲಮಾಗಳು ಹೇಳಿದ್ದಾರೆ. 
   ▪ *ಕಲ್ಲಂಗಡಿ* ಕೃಷಿ ಮಾಡುವವರು ಇದರ ಬೀಜವನ್ನು ಜೇನು ಮತ್ತು ಹಾಲು ಮಿಶ್ರಿತ ದ್ರಾವಣದಲ್ಲಿ ಒಂದು ದಿನ ಮುಳುಗಿಸಿಟ್ಟು ನಂತರ ಬಿತ್ತಿದರೆ ಅದರ ಫಸಲಿನಲ್ಲಿ ಬರುವ ಹಣ್ಣು ಬಹಳ ಸಿಹಿಯಾಗಿರುವುದು. ಆದರೆ ಯಾವ ಕಾರಣಕ್ಕೂ ಅದರ ಬೀಜವನ್ನು ಯಾವುದೇ ಎಣ್ಣೆಯ ವಾಸನೆ ಬರುವಲ್ಲಿಯೂ ಅಥವಾ ಅದಕ್ಕೆ ಎಣ್ಣೆ ತಗಲುವಲ್ಲಿಯೂ ಇಡಬಾರದು. ಹಾಗೆ ಮಾಡಿದಲ್ಲಿ ಅದರಲ್ಲಿ ಉಂಟಾಗುವ ಕಲ್ಲಂಗಡಿ ಸಿಹಿ ಇರಲಾರದು. ಕೆಂಪು ಗುಲಾಬಿ ಹೂವಿನೊಂದಿಗೆ ಇದರ ಬೀಜವನ್ನು ಒಂದೆರಡು ದಿನ ಇಟ್ಟು ನಂತರ ಬಿತ್ತಿದರೆ ಫಸಲು ಬರುವ ಕಲ್ಲಂಗಡಿಗೆ ಬಹಳ ಪರಿಮಳವಿರುತ್ತದೆ.
   ▪ *ಇದರ* ಕೃಷಿ ಮಾಡುವ ಜಾಗದ ಮಧ್ಯ ಭಾಗದಲ್ಲಿ ಒಂದು ಸತ್ತ ಕತ್ತೆಯ ತಲೆ ಬುರುಡೆಯನ್ನು ಹುಗಿದಿಟ್ಟರೆ ಗಿಡವು ಬೇಗನೆ ಬೆಳೆದು ಯಥೇಚ್ಛವಾಗಿ ಫಸಲು ಕೊಡುತ್ತದೆ. ಮಾತ್ರವಲ್ಲ ಯಾವುದೇ ಹುಳ ಕೀಟಗಳ ತೊಂದರೆ ಇರಲಾರದು. ಆದರೆ ಯಾವತ್ತೂ ಇದರ ಕೃಷಿ ಜಾಗಕ್ಕೆ ಋತುಸ್ರಾವವಿರುವ ಮಹಿಳೆಯರು ಬರಬಾರದು. ಹಾಗೆ ಬಂದರೆ ಬೆಳೆದು ಬರುವ ಕಲ್ಲಂಗಡಿಯಲ್ಲಿ ಹೆಚ್ಚಿನವುಗಳು ಹಾಳಾಗುತ್ತದೆ.
   ▪ *ಮನೆಯ* ಒಂದು ಕೋಣೆಯಲ್ಲಿ ಕೆಲವು ಕಲ್ಲಂಗಡಿ ಹಣ್ಣುಗಳಿದ್ದು, ಅಲ್ಲಿ ಅಕ್ಕಿ ಹಿಟ್ಟನ್ನು ಹುಳಿ ಮಾಡಲು ಇಟ್ಟಿದ್ದಲ್ಲಿ ಆ ಕಲ್ಲಂಗಡಿ ಅಲ್ಲಿ ಇರುವ ತನಕ ಹಿಟ್ಟು ಹಾಳಾಗಿ ಹೋದರೂ ಯಾವತ್ತೂ ಹುಳಿಯಾಗದು.
   ▪ *ಕಫದ* ತೊಂದರೆಯಿಂದ ತಲೆಗೆ ಭಾರ ಬಂದು ತೊಂದರೆ ಆಗುವವನು ಕಲ್ಲಂಗಡಿಯ ಒಂದು ಸಿಪ್ಪೆಯನ್ನು ತನ್ನ ಹಣೆಗೆ ಕಟ್ಟಿದರೆ, ಕೂಡಲೇ ಭಾರ ಇಳಿಯುವುದು.
   ▪ *ಯಾವುದೇ* ಮಾಂಸವನ್ನು ಪದಾರ್ಥ ಮಾಡುವಾಗ ಅದು ಬೇಯಲು ತುಂಬಾ ಸಮಯ ಬೇಕಾಗುತ್ತದೆ ಎಂದಾದರೆ, ಮಾಡುವ ಪದಾರ್ಥದೊಂದಿಗೆ ಕಲ್ಲಂಗಡಿಯ ಒಂದು ತುಂಡು ಸಿಪ್ಪೆಯನ್ನು ಹಾಕಬೇಕು. ಆ ನಿಮಿಷದಲ್ಲೇ ಮಾಂಸ ಬೇಯುತ್ತದೆ.
   ▪ *ಯಾರಿಗಾದರೂ* ಅಪರೂಪಕ್ಕೆ ಕಲ್ಲಂಗಡಿ ತಿಂದ ಕೂಡಲೇ ಹೊಟ್ಟೆಗೆ ಭಾರವಾಗುವುದು ಅಥವಾ ಇನ್ಯಾವುದೇ ತೊಂದರೆಯಾಗುವುದಾದರೆ, ಬಿಸಿನೀರಿಗೆ ಜೇನುತುಪ್ಪ ಮಿಶ್ರಣ ಮಾಡಿ ಕುಡಿಯಬೇಕು.
   ▪ *ಒಬ್ಬನಿಗೆ* ಕಲ್ಲಂಗಡಿಯ ಕನಸು ಬಿದ್ದರೆ ಅವನಿಗೆ ಏನೋ ದುಃಖ ದುಮ್ಮಾನಗಳು ಬರುವುದರ ಲಕ್ಷಣವಾಗಿದೆ. ಕೆಲವೊಮ್ಮೆ ಮಾರಕ ರೋಗದ ಲಕ್ಷಣವೂ ಆಗಿರಬಹುದು.
   ▪ *ಜೈಲು* ಅಥವಾ ಸೆರೆಯಲ್ಲಿ ಇರುವವನಿಗೆ ಕಲ್ಲಂಗಡಿ ತಿಂದ ಕನಸು ಬಿದ್ದರೆ ಅದರಿಂದ ಹೊರಬರುವುದರ ಸಂಕೇತವಾಗಿದೆ.
   ▪ *ಒಬ್ಬನಿಗೆ* ಅವನ ಮನೆಯೊಳಗೆ ಯಾರೋ ಕಲ್ಲಂಗಡಿಯನ್ನು ಎಸೆಯುತ್ತಾರೆ ಎಂಬ ಕನಸು ಕಂಡರೆ ಆ ಮನೆಯಲ್ಲಿ ಯಾರೋ ಮರಣ ಹೊಂದುವುದರ ನಿಶಾನೆಯಾಗಿದೆ.

ಸಂಗ್ರಹ ; ಇಮಾಮ್ ಖಝ್‌ವೀನಿಯ *ಅಜಾಯಿಬುಲ್ ಮಖ್‌ಲೂಖಾತ್,* ಇಮಾಮ್ ಇಬ್‌ನು ಅಲ್ ಖಯ್ಯಿಮ್ ಅಲ್ ಜವ್‌ಝಿಯ್ಯ‌ರವರ *ಅತ್ತಿಬ್ಬುನ್ನಬವೀ,* ಇಮಾಮ್ ಶಿಹಾಬುದ್ದೀನ್ ಅಹ್‌ಮದ್ ಅಲ್ ಉಮರಿಯ *ಮಸಾಲಿಕುಲ್ ಅಬ್‌ಸ್ವಾರ್ ಫೀ ಮಮಾಲಿಕಿಲ್ ಅಮ್‌ಸ್ವಾರ್*  ಮತ್ತು ಇಮಾಮ್ ನಾಬುಲ್ಸಿಯ *ತ‌ಅ್‌ಬೀರುಲ್ ಮನಾಮ್* ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...