Skip to main content

ಉಲಮಾಗಳ ಜೀವನ ಶೈಲಿ ಕಂಡು ನಿಂದಿಸುವವರು ಓದಲೇಬೇಕಾದ ನೈಜ ಕಥೆ.



ಉಲಮಾಗಳ ಜೀವನ ಶೈಲಿ ಕಂಡು ನಿಂದಿಸುವವರು ಓದಲೇಬೇಕಾದ ನೈಜ ಕಥೆ...


🌿🌿🌿🌿🌿🌿🌿🌿🌿🌿

ಶೈಖ್ ಅಬೂ ಮುಸ್ಲಿಂ ಅಲ್-ಫಾರಿಸಿ(ರ.ಅ) ಒಂದನುಭವ ವಿವರಿಸುತ್ತಾರೆ: ಒಂದು ದಿನ ನಾನು ಸಮಕಾಲಿನ ಶ್ರೇಷ್ಠ ವಿದ್ವಾಂಸರು, ‌ಔಲಿಯಾ‌,‌ ಸೂಫೀ‌ ಪ್ರಮುಖರೂ ಆದ‌ ಶೈಖ್ ಅಬೂ ಸ'ಈದ್‌ ಬ್ನ್ ಅಬಿಲ್ ಖೈರ್(ರ.ಅ) ಎಂಬವರ ಸಂದರ್ಶಿಸಲು‌‌ ತೆರಳಿದೆ. ಮಹಾನರು ಆಗ ಒಂದು ಪೀಠದ ಮೇಲೆ ನಾಲ್ಕು ತಲೆದಿಂಬನ್ನಿಟ್ಟು ಸ್ವಸ್ಥವಾಗಿ ಮಲಗುತ್ತಿದ್ದರು. ಕಾಲನ್ನಿಡಲು ಮತ್ತೊಂದು ದಿಂಬು. ಇಷ್ಟಕ್ಕೆ ಮುಗಿಯಲಿಲ್ಲ. ಮಹಾನರು ಒಳ್ಳೆಯ ಫಸ್ಟ್ ಕ್ಲಾಸ್ ಈಜಿಪ್ಟ್ ನಿರ್ಮಿತ ಮೇಲಂಗಿಯನ್ನೂ ಧರಿಸಿದ್ದರು. ನಾನಾದರೆ‌ ಒಂದೇ ಬಟ್ಟೆ ಧರಿಸಿರುವೆನು. ಅದೂ ಕೂಡ ಮಣ್ಣು,‌ ಕೊಳಕು ಆವರಿಸಿ ಬಟ್ಟೆಯ ಬಣ್ಣವೇ‌ ಬದಲಾಗಿತ್ತು. ನಿರಂತರವಾಗಿ ಎಲ್ಲವನ್ನೂ  ಪರಿತ್ಯಾಗ(ಮುಜಾಹದಃ) ಮಾಡಿದರಿಂದ ನನ್ನ ಶರೀರ ತೀವ್ರವಾಗಿ ಹದಗೆಟ್ಟಿತು. ಕೆನ್ನೆ ಹಳದಿ ಬಣ್ಣಕ್ಕೆ ತಿರುಗಿತ್ತು. ಶೈಖರ ಈ ಅವಸ್ಥೆ ಕಂಡಾಗ ನನ್ನ ಮನದಲ್ಲಿ ಜಿಗುಪ್ಸೆ ಭಾವ ಮೂಡಿತು. ನಾನು ನನ್ನೊಂದಿಗೆ ಹೇಳಿದೆ "ಇವರೂ ಒಂದು ದರ್ವೇಷ್(ಫಕೀರ್), ನಾನೂ ಒಬ್ಬ ದರ್ವೇಷ್, ನಾನು ಇಷ್ಟೆಲ್ಲಾ ಪರಿತ್ಯಾಗ ಮಾಡಿ ನಿರಾಡಂಬರವಾಗಿ ಜೀವಿಸುತ್ತಿರುವಾಗ ಇವರು ಮಾತ್ರ ಈ ಕಾಣುವ ಐಹಿಕ ಸುಖಲೋಲುಪತೆಯ ಆಡಂಬರ ಜೀವನ ಸಾಗಿಸುತ್ತಿದ್ದಾರಲ್ಲವೇ..!!" ಇಷ್ಟು ಭಾವಿಸಿದ್ದೇ ತಡ..
ಶೈಖ್ ನನ್ನ ಮನಸ್ಸು ವಾಚಿಸಿದರು.‌ ನನ್ನ ಹೃದಯದ ಸ್ವಂತಿಕೆ, ಉದ್ವೇಗ, ಸ್ವಕಪೋಲಕಲ್ಪನೆ ಮಹಾನರು ಮನದಟ್ಟು ಮಾಡಿದ ನಂತರ ಮಹಾನರು ನನ್ನೊಂದಿಗೆ ಪ್ರಶ್ನಿಸಿದರು "ಓ..ಅಬೂ ಮುಸ್ಲಿಂ.. ತನ್ನ ಚಿಂತೆ, ಸ್ವಂತಿಕೆಯೊಂದಿಗೆ ನಡೆಯುವವನೇ ದರ್ವೇಷ್ ಎಂದು ಯಾವ ಗ್ರಂಥದಲ್ಲಾಗಿದೆ ನೀ ಕಂಡದ್ದು..!? ನೀ ಒಂದು ವಿಷಯ ತಿಳಿಯಬೇಕು, ನಾನು ಎಲ್ಲದರಲ್ಲೂ ಅಂದರೆ ಈ ಎಲ್ಲಾ ಸುಖ, ದುಃಖದಲ್ಲೂ ಅಲ್ಲಾಹನ ಮಾತ್ರ ಕಂಡೆನು(ಅಲ್ಲಾಹನ ಪ್ರವೃತ್ತಿಯಾಗಿ ಕಂಡೆ ಎಂದರ್ಥ, ಈ ಐಹಿಕ ಜೀವನದಿ ನನಗೆ ತೋರಿದ ಆಸಕ್ತಿ, ಅಭಿಲಾಷೆ, ಸುಖ, ದುಃಖ ಎಲ್ಲದರಲ್ಲೂ ಅಲ್ಲಾಹನ ಕಂಡೆನು, ಇದೆಲ್ಲವೂ ಅಲ್ಲಾಹನ ತೀರ್ಮಾನವಾಗಿದೆ ಎಂದೂ ಗ್ರಹಿಸಿದೆನು). ಆಗ ನನ್ನೊಂದಿಗೆ "ನಿನ್ನನ್ನು ನಾನು ಪೀಠದಲ್ಲೇ ಕುಳ್ಳಿರಿಸುವೆನು" ಎಂದು ಅಲ್ಲಾಹು ಹೇಳಿದ, ಅಲ್ಲಾಹನ ತೀರ್ಮಾನದ ಮುಂದೆ ನಾವು ಕೈ ಕಟ್ಟಿ ನಿಲ್ಲಬೇಕಲ್ಲವೇ. ಅವನ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಲು ನಾವ್ಯಾರು..!
ನನ್ನ ಸುಖದಿ ನೀ ಕಂಡದ್ದು ನಿನ್ನ ಅವಸ್ಥೆಗೆ ತಾರತಮ್ಯತೆಗೊಳಿಸಿಯಾಗಿದೆ. ಎಲ್ಲದರಲ್ಲೂ ನೀನು ಕಂಡದ್ದು ನಿಮ್ಮ ಅವಸ್ಥೆಯನ್ನು ಮಾತ್ರವಾಗಿತ್ತು(ಮಹಾನರು ಅಲ್ಲಾಹನ ಕಂಡರು). ಆಗ ಅಲ್ಲಾಹು "ನಿನ್ನನ್ನು ನಾನು ನೆಲದಲ್ಲಿ ಕುಳ್ಳಿರಿಸಿದೆ." ಎಂದು ಹೇಳಿದ. ಹಾಗೆಯೇ ನನಗೆ ಮುಶಾಅದಃದ(ತ್ವರೀಖತಿನ ಒಂದು ಸ್ಥಾನ- ಹೃದಯದ ಮಾತು,ಚಿಂತನೆ ವಾಚಿಸುವ ಶಕ್ತಿ) ಅದೃಷ್ಟ ಲಭಿಸಿದರೆ ತಮಗೆ ಮುಜಾಹದಃದ(ತ್ವರೀಖತಿನ ಒಂದು ಸ್ಥಾನ- ಪರಿತ್ಯಾಗ) ಅವಕಾಶ ಲಭಿಸಿತು. ಈ ‌ಎರಡೂ ತ್ವರೀಖತಿನ ಒಂದೊಂದು ಸ್ಥಾನವಾಗಿದೆ. ಅಲ್ಲಾಹು ಅಪಾರ ಮಹಿಮೆಯುಳ್ಳವನು. ಅವನು ಉದ್ಧೇಶಿಸಿದವರಿಗೆ ಅದಕ್ಕಿರುವ ಅವಕಾಶ, ‌ಅರ್ಹತೆ ಎಲ್ಲವನ್ನೂ ನೀಡುತ್ತಾನೆ. ಓರ್ವ ದರ್ವೇಷ್ ಅಂದರೆ ಈ ಎಲ್ಲಾ ಸ್ಥಾನಮಾನಗಳಿಂದ ಮುಕ್ತನಾಗಿರಬೇಕು. ಎಲ್ಲದರಲ್ಲೂ ಅಲ್ಲಾಹನ ಮಾತ್ರವೇ ಕಾಣಬೇಕು." ಎಂದಾಗಿದೆ. ಮಹಾನರ ಈ ಉಪದೇಶ ಕೇಳಿ ಅದಕ್ಕೆ ತಕ್ಕ ನ್ಯಾಯ ನನ್ನ ಬಳಿ ಏನೂ ಇರಲಿಲ್ಲ. ನನ್ನ ತುಟಿ ಪಿಟಿಕೆನ್ನಲು ಸಾಧ್ಯವಾಗಲಿಲ್ಲ. ನನ್ನ ಸುತ್ತಲಿನ ಪ್ರಪಂಚವು ಕತ್ತಲು ಆವರಿಸಿದಂತೆ ನನಗೆ ತೋಚಿತು. ತುಂಬಾ ಹೊತ್ತು ಕಳೆಯದೆ ತಕ್ಷಣವೇ ನಾನು ಪ್ರಜ್ಞಾಹೀನನಾದೆ.‌ ಪ್ರಜ್ಞೆ ಬಂದಾಗ ನಾನು ಶೈಖರ ಬಳಿ ಕ್ಷಮೆ ಯಾಚಿಸಿ‌ ನಾನು ಹೇಳಿದೆ; ನನಗೆ ಇನ್ನು ಹೋಗಲು ಸಮ್ಮತಿ ನೀಡಬೇಕು, ಸದ್ಯದ ಪರಿಸ್ಥಿತಿಯಲ್ಲಿ ತಮ್ಮನ್ನು ಸಮಚಿತ್ತವಾಗಿ ಕಾಣಲು ನನಗೆ ಸಾಧ್ಯವಾಗುತ್ತಿಲ್ಲ.‌
ಆಗ ಶೈಖ್ ಹೇಳಿದರು: "ನೀವು ಹೇಳಿದ್ದು ಸರಿಯಾಗಿದೆ.." ನಂತರ ನಾನು ಒಂದು ಪರ್ಷಿಯನ್ ಕವಿತೆ ಹಾಡುತ್ತಾ ಅಲ್ಲಿಂದ ತೆರಳಿದೆ. ಅದರ ಆಶಯ ಈ ರೀತಿ ಇದೆ "ನನ್ನ ಕಿವಿಯಿಂದ ಕೇಳಲು ಅಸಾಧ್ಯವಾದ ಒಂದು ಒಳ್ಳೆಯ ಒಳಿತು ನನ್ನೀ ಕಣ್ಣುಗಳು ಕಂಡಿದೆ.." [Kashaf- 591]

👆🏻ಉಲಮಾಗಳು ಅಲ್ಲಾಹನ ಪ್ರವಾದಿಗಳ ವಾರಸುದಾರರಾಗಿದ್ದು ಅವರ ಮನೆ, ಅಂತಸ್ತು, ವಸ್ತ್ರ, ಜೀವನ ಶೈಲಿ ಕಂಡು ಅವರನ್ನು ನಿಂದಿಸಬಾರದು. ಬದಲಾಗಿ ಅವರ ಮನದಲ್ಲಿರುವ ಈಮಾನ್, ಭಯ-ಭಕ್ತಿ, ನಿಷ್ಕಲ್ಮಷತೆ, ಕಾರ್ಯವೈಖರಿ ಕಂಡು ಅವರನ್ನು ಗೌರವಿಸಬೇಕು ಎಂಬುವುದು ಈ ಘಟನೆಯಿಂದ ಸುವ್ಯಕ್ತ. ಉಲಮಾಗಳ ಗೌರವಿಸುವ,  ಅವರ ನೆರಳಲ್ಲೇ ಮರಣದ ವರೆಗೂ ನೈಜ ಸುನ್ನತ್ ಜಮಾ'ಅತಿನ ಆಶಯ ಆದರ್ಶದಿ ಜೀವಿಸಿ ಮರಣ ಹೊಂದುವಾಗ ಈಮಾನ್ ಬೆಳಗಿ ಮರಣ ಹೊಂದುವ ಸೌಭಾಗ್ಯಶಾಲಿಗಳ ಪೈಕಿ ಅಲ್ಲಾಹು ನಮ್ಮನ್ನು ಸೇರಿಸಲಿ, ಆಮೀನ್...🤲🏻

*☘ _ಪುಣ್ಯ ಪ್ರವಾದಿ(ﷺ) ರ ಮೇಲೆ ಸ್ವಲಾತ್, ಸಲಾಂ ಅಧಿಕಗೊಳಿಸಿರಿ_👇🏻*
*اللهم صل على سيدنا محمد عدد ما في علم الله صلاة دائمة بدوام ملك الله*

*✍🏻ಸಾಲಿಮ್ ಮುಈನಿ ಸಖಾಫಿ ರಬ್ಬಾನಿ‌ ರಾಜಸ್ಥಾನ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...