ಅಹ್ಲುಬೈತ್'ನೊಂದಿಗಿನ ಸ್ನೇಹ
ಮುಹಮ್ಮದ್ ತೌಸ್ವೀಫ್ ಕಾಪು
ಬಗ್ದಾದಿನ ವ್ಯಾಪಾರಿಯೊಬ್ಬರು ನಮಾಝ್ ನಿರ್ವಹಿಸಲು ಮಸ್ಜಿದ್'ಗೆ ಪ್ರವೇಶಿಸಿದರು. ಅಲ್ಲಿ *ಜಮಾಅತ್ (ಸಾಮೂಹಿಕ)* ನಮಾಝ್ ನಡೆಯುತ್ತಿತ್ತು. ನಮಾಝ್ ಮುಗಿದೊಡನೆ ಆ ನಮಾಝಿನಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರು ಎದ್ದು ನಿಂತು ಹೇಳಿದರು; *'ಸ್ನೇಹಿತರೇ ನಾನು ನಬಿ ಕುಟುಂಬದ ಓರ್ವ ಸದಸ್ಯನಾಗಿದ್ದೇನೆ. ನನಗೆ ವಿವಾಹ ಪ್ರಾಯ ತಲುಪಿದ ಓರ್ವ ಮಗಳಿದ್ದಾಳೆ. ಅವಳನ್ನು ಮದುವೆ ಮಾಡಿಕೊಡಲು ಆರ್ಥಿಕ ಸಾಮರ್ಥ್ಯವು ನನಗಿಲ್ಲ. ಆದ್ದರಿಂದ ನನ್ನ ಪಿತಾಮಹರಾದ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ನೆನೆದು ನೀವು ನನಗೆ ಸಹಾಯ ಮಾಡಬೇಕು.'*
ನಮಾಝ್ ಮುಗಿಸಿ ಹೊರಟ ಹಲವರು, *'ಇವರಂತೆ ಅದೆಷ್ಟೋ ಮಂದಿಯನ್ನು ನಾವು ಕಂಡಿದ್ದೇವೆ'* ಎಂಬ ಭಾವನೆಯೊಂದಿಗೆ ಆ ವ್ಯಕ್ತಿಯನ್ನು ಕಡೆಗಣಿಸಿದರು. ಕೆಲವೇ ಕೆಲವರು ಮಾತ್ರ ಸಣ್ಣ ಪುಟ್ಟ ಸಹಾಯವನ್ನು ಮಾಡಿದರು. *ಆದರೆ ಒಬ್ಬ ವ್ಯಾಪಾರಿಗೆ ಈ ಅಪೇಕ್ಷೆಯು ಸಣ್ಣದಾಗಿ ಕಾಣಲಿಲ್ಲ. ಓರ್ವ ಸಯ್ಯದ್ ಅಲ್ಲವೇ ಈ ರೀತಿ ಕೇಳುತ್ತಿರುವುದು? ಮತ್ತವರು ಹೆಚ್ಚೇನೂ ಚಿಂತಿಸಲಿಲ್ಲ. ತನ್ನ ಕೈಯಲ್ಲಿದ್ದ ಐನೂರು ಬೆಳ್ಳಿ ನಾಣ್ಯಗಳನ್ನು ಆ ಸಯ್ಯದರಿಗೆ ಅವರು ಕೊಟ್ಟುಬಿಟ್ಟರು.! ಸಯ್ಯದ್‌ರವರಿಗೆ ತುಂಬಾ ಸಂತೋಷವಾಯಿತು. ಓರ್ವ ಸಯ್ಯದರಿಗೆ ಸಹಾಯ ಮಾಡಿದ್ದೇನೆಂದು ವ್ಯಾಪಾರಿಗೂ ಆತ್ಮ ತೃಪ್ತಿ! ಇಬ್ಬರೂ ಪರಸ್ಪರ ಬೀಳ್ಕೊಟ್ಟು ಹೊರಟು ಹೋದರು.*
ಅಂದು ರಾತ್ರಿ ಆ ವ್ಯಾಪಾರಿಯು *ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರನ್ನು* ಕನಸಿನಲ್ಲಿ ದರ್ಶಿಸಿದರು. ಪ್ರಕಾಶಿಸುತ್ತಿರುವ ಮುಖ! ಹಬೀಬ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮುಗುಳ್ನಕ್ಕರು! ನಂತರ ಹೇಳಿದರು; *“ಓ ಯುವಕನೇ... ನನ್ನ ಪೌತ್ರನಿಗೆ ತಾವು ನೀಡಿದ ಕೊಡುಗೆಯ ಬಗ್ಗೆ ನಾನು ತಿಳಿದುಕೊಂಡೆ. ತಾವು `ಬಲ್ಖಾ' ನಗರಕ್ಕೆ ಹೋಗಿ ಅಬ್ದುಲ್ಲಾಹಿಬ್ನು ತ್ವಾಹಿರ್ ಎಂಬವರನ್ನು ಭೇಟಿಯಾಗಬೇಕು. ಅವರಿಗೆ ನನ್ನ ಸಲಾಂ ತಿಳಿಸಿದ ನಂತರ ಐನೂರು ಚಿನ್ನದ ನಾಣ್ಯಗಳನ್ನು ನೀಡಲು ಹೇಳಬೇಕು.'*
ಇಷ್ಟರಲ್ಲಿ ಆ ವ್ಯಾಪಾರಿ ನಿದ್ದೆಯಿಂದ ಎದ್ದು ಬಿಟ್ಟರು. ತಾನು ಕಂಡ ಕನಸಿನ ವಿಷಯವನ್ನು ತನ್ನ ಪತ್ನಿಗೆ ತಿಳಿಸಿದರು. ಪತ್ನಿಗೆ ಸಂತೋಷವಾದರೂ ಒಂದು
ಕಳವಳ, ಅದನ್ನವಳು ಸ್ಪಷ್ಟವಾಗಿ ಹೇಳಿದಳು; *'ತಾವು ಬಲ್ಕಾಗೆ ಹೋಗಿ ಮರಳಿ ಬರುವವರೆಗೂ ನಾನು ಹೇಗೆ ಜೀವನ ಸಾಗಿಸಲಿ?* ಖರ್ಚಿಗೆ ನಮ್ಮ ಕೈಯಲ್ಲಿ ಏನೂ ಇಲ್ಲವಲ್ಲ...!”
ಪತ್ನಿಯ ಮಾತುಗಳನ್ನು ಕೇಳಿದ ವ್ಯಾಪಾರಿಯು ಚಿಂತಿಸತೊಡಗಿದರು.ಅವಳು ಹೇಳುತ್ತಿರುವುದು ಸರೀನೇ ಎಂದು ಅವರಿಗೆ ಹೊಳೆಯಿತು. ಆದರೆ, ಏನು ಮಾಡವುದು? ಏನೇ ಆಗಲಿ, ಎಂದು ಭಾವಿಸಿದ ಆ ವ್ಯಾಪಾರಿಯು ಅದಕ್ಕೊಂದು ಪರಿಹಾರವನ್ನು ಕಂಡುಕೊಳ್ಳಲು ತನ್ನ ಮಿತ್ರನಾಗಿರುವ ನೆರೆಮನೆಯವನನ್ನು ಭೇಟಿ
ಮಾಡಿದರು. ಅವರಲ್ಲಿ ತನ್ನ ವ್ಯಥೆಯನ್ನು ತೋಡಿಕೊಂಡರು. ನಂತರ ಹೇಳಿದರು; *'ಮಿತ್ರಾ...* ನಾನು ಒಂದು ಉದ್ದೇಶಕ್ಕಾಗಿ ಬಲ್ಕಾಗೆ ಹೊರಡುತ್ತೇನೆ. ನಾನು ಮರಳಿ ಬರುವವರೆಗೂ ನನ್ನ ಕುಟುಂಬಕ್ಕೆ ನಿತ್ಯ ಖರ್ಚಿಗೆ ಅಗತ್ಯವಾದ ಬೆಳ್ಳಿ ನಾಣ್ಯಗಳನ್ನು
ತಾವು ಅವರಿಗೆ ನೀಡಬೇಕು. ತಾವು ಖರ್ಚು ಮಾಡಿದ ಪ್ರತಿಯೊಂದು ಬೆಳ್ಳಿ ನಾಣ್ಯಕ್ಕೂ ಬದಲಾಗಿ ನಾನು *ಚಿನ್ನದ ನಾಣ್ಯವನ್ನು* ನೀಡುತ್ತೇನೆ.'
ಇದನ್ನು ಕೇಳಿದ ಆ ಮಿತ್ರನು ನೀಡಿದ ಪ್ರತಿಕ್ರಿಯೆಯು ವ್ಯಾಪಾರಿಯಲ್ಲಿ
ಆಶ್ಚರ್ಯವನ್ನು ಮೂಡಿಸಿತು. ಅವರು ಹೇಳಿದರು; *'ಮಿತ್ರಾ... ತಾವು ಬಲ್ಖಾಕ್ಕೆ ಹೋಗಿ ಮರಳಿ ಬರುವವರೆಗೂ ತಮ್ಮ ಕುಟುಂಬದ ಖರ್ಚು ವೆಚ್ಚವನ್ನು ನೋಡಿಕೊಳ್ಳಲು ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕನಸಿನಲ್ಲಿ ನನಗೆ ಆದೇಶಿಸಿದ್ದಾರೆ.!* ನೀವು ಬಲ್ಕಾಕ್ಕೆ ಹೊರಡಿರಿ. ತಮ್ಮ ಕುಟುಂಬವನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ.' ಇದನ್ನು ಕೇಳಿದ ವ್ಯಾಪಾರಿಯು ವಿಳಂಬ ಮಾಡದೆ ಬಲ್ಖಾದತ್ತ ಹೊರಟರು.
ಅಲ್ಲಿಗೆ ತಲುಪಿ ನೋಡುವಾಗ ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಕನಸಿನಲ್ಲಿ ಭೇಟಿಯಾಗಲು ನಿರ್ದೇಶಿಸಿದ್ದ *ಅಬ್ದುಲ್ಲಾಹಿ ಬಿನ್ ತ್ವಾಹಿರ್‌ರವರು* ಈ ವ್ಯಾಪಾರಿಯನ್ನು ಸ್ವೀಕರಿಸಲು ಕಾದು ನಿಂತಿದ್ದರು. ಅವರು ಇವರನ್ನು ಕಂಡ ತಕ್ಷಣ ಹೇಳಿದರು; *“ಪ್ರೀತಿಯ ಮಿತ್ರಾ.. ಬಗ್ದಾದಿನಿಂದ ಆಗಮಿಸುವ ನಿಮ್ಮನ್ನು ಸ್ವೀಕರಿಸಲು, ಗೌರವಿಸಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ನನಗೆ ಕನಸಿನಲ್ಲಿ ನಿರ್ದೇಶಿಸಿದ್ದಾರೆ.*
ತದನಂತರ *ಅಬ್ದುಲ್ಲಾಹಿಬ್‌ನು ತ್ವಾಹಿರ್‌ರವರು* ಯುವಕನಾದ ಆ
ವ್ಯಾಪಾರಿಯನ್ನು ತನ್ನ ಮನೆಗೆ ಕರೆದುಕೊಂಡು ಹೋದರು. ಮೂರು ದಿನಗಳವರೆಗೆ ಅವರ ಮನೆಯಲ್ಲಿಯೇ ವಸತಿ ವ್ಯವಸ್ಥೆ ಮಾಡಿ ಸತ್ಕರಿಸಿದರು. ಮರಳಿ ಹೋಗುವಾಗ
*ಐನೂರು ಚಿನ್ನ ನಾಣ್ಯಗಳನ್ನು ನೀಡಿ ಬಿಳ್ಕೊಟ್ಟರು.* ಅಷ್ಟೇ ಅಲ್ಲ, ಆ ಯುವ ವ್ಯಾಪಾರಿಯನ್ನು ನಿರ್ಭಯವಾಗಿ ಅವರ ಮನೆ ತಲುಪಿಸಲು ಒಂದು ಸಂಘವನ್ನೂ
ಕಳುಹಿಸಿದರು.
*(ತಪ್ಸೀರ್ ರೂಹುಲ್ ಬಯಾನಿ)*
_ಇದರಲ್ಲಿ ವಿವರಿಸಿದ ಈ ಘಟನೆಯು *ಅಹ್ಲುಬೈತಿನ ಅಥವಾ ಪ್ರವಾದಿ ಕುಟುಂಬದ ಮಹತ್ವವನ್ನು, ಅವರನ್ನು ಗೌರವಿಸುವುದರ ಪುಣ್ಯವನ್ನೂ ನಮಗೆ ಕಲಿಸಿಕೊಡುತ್ತದೆ.* ನಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೊಮ್ಮಕ್ಕಳಾದ ಹಸನ್, ಹುಸೈನ್ ರಳಿಯಲ್ಲಾಹು ಅನ್'ಹುಮಾರವರ ಸಂತಾನ ಪರಂಪರೆಯಲ್ಲಿ ಒಳಪಟ್ಟವರಾಗಿದ್ದಾರೆ *ತಂಙಲ್‌ಗಳೆಂದು* ಪರಿಚಿತರಾದ ಸಯ್ಯದರುಗಳು. ಅವರೊಂದಿಗಿನ ಸ್ನೇಹವು ಸತ್ಯವಿಶ್ವಾಸದ ಒಂದು ಭಾಗವಾಗಿದೆ. ಪ್ರಪಂಚದಾದ್ಯಂತ ಸಾಮಾನ್ಯವಾಗಿ ಹಾಗೂ ಪ್ರತ್ಯೇಕವಾಗಿ *ಕೇರಳದಲ್ಲಿ ಇಸ್ಲಾಂ ಧರ್ಮ ಪ್ರಚಾರದಲ್ಲಿಯೂ, ಈ ಸಮುದಾಯಕ್ಕೆ ಎಲ್ಲಾ ಕಾಲದಲ್ಲಿಯೂ ನಾಯಕತ್ವ ನೀಡುವುದರಲ್ಲಿ ತಂಙಲ್‌ಗಳ ಪಾತ್ರವು ಅಪಾರ.🥰*_
☘☘☘☘🍀🍀🍀🍀🍀

Comments