Skip to main content

SSF ಜನಾಕರ್ಷಣೆ ಪಡೆದದ್ದು ಹೇಗೆ ಗೊತ್ತಾ ..

SSF ಸ್ಥಾಪಕ‌ ದಿನದ ಶುಭಾಶಯಗಳು - ಏಪ್ರಿಲ್ 29

SSF ಜನಾಕರ್ಷಣೆ ಪಡೆದದ್ದು ಹೇಗೆ ಗೊತ್ತಾ ..

ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಈ ಹೆಸರೇ ಅಚ್ಚರಿ. ಇದರ ಕಾರ್ಯ ಚಟುವಟಿಕೆ ರೋಮಾಂಚನಕಾರಿ.
ಕಾರ್ಯಕರ್ತರು ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುತ್ತಾರೆ.ಏನೇ ಬಂದರು ಆದರ್ಶದಲ್ಲಿ ದೃಢವಾಗಿ ನಿಲ್ಲುತ್ತಾರೆ.ಉಲಮಾಗಳ ಹಿಂದೆ ಭದ್ರವಾಗಿ ಕೆಲಸ ಮಾಡುತ್ತಾರೆ.

ಇದಕ್ಕೆ ಕಾರಣವೇನೆಂದು ಹುಡುಕುತ್ತಾ ಹೊರಟರೆ ತಿಳಿಯುವುದು  ಅಚ್ಚರಿಯ ಸಂಗತಿ.

ಸಾಧಾರಣ ಎಲ್ಲಾ ಮುಸ್ಲಿಮರಿಗೆ ಪರಲೋಕದ ಮೇಲೆ ಬಲವಾದ ವಿಶ್ವಾಸ.ಅಲ್ಲಾಹು ,ಪ್ರವಾದಿಗಳನ್ನು, ಮಹಾತ್ಮರನ್ನು ಜೀವಕ್ಕಿಂತ ಜಾಸ್ತಿ ಪ್ರೀತಿಸುವುದು ಇದೇ ಕಾರಣಕ್ಕಾಗಿ.ಮುಸ್ಲಿಮರ ಅಂತಿಮ ಗುರಿ ಪರಲೋಕದ ವಿಜಯ ತಾನೇ.

ಇಲ್ಲಿ ಎಷ್ಟೇ ಕಷ್ಟ ಬಂದರು ಪರವಾಗಿಲ್ಲ ,ಪರಲೋಕದಲ್ಲಿ ವಿಜಯ ಸಿಕ್ಕರೆ ಸಾಕೆಂದು ಎಲ್ಲಾ ಮುಸ್ಲಿಮರ ಭಾವನೆ 

ಇದೇ ಕಾರಣಕ್ಕಾಗಿ ಆರಾಧನೆ,ದಾನ,ಉಪವಾಸ,ಪರಸ್ಪರ ಸಹಾಯ ಸಹಕಾರ ಮಾಡುತ್ತಿರುತ್ತಾರೆ. ಶ್ರೀಮಂತನಾದರೂ ಕೂಡ ಆತನ ಮನದಲ್ಲಿರುವುದು ಅಲ್ಲಾಹನ ಸಂತ್ರಪ್ತಿ, ಪರಲೋಕದ ವಿಜಯ. ಅದಕ್ಕಾಗಿ ಆತ ಝಕಾತ್, ದಾನ ಧರ್ಮ ಮಾಡುತ್ತಾನೆ.
ಬಡವನು ಕೂಡ ಇಲ್ಲಿ ಎಷ್ಟೇ ಕಷ್ಟ ಬಂದರೂ ಪರವಾಗಿಲ್ಲ, ಪರಲೋಕದಲ್ಲಿ ಸುಖ ಸಿಕ್ಕರೆ ಸಾಕೆಂದು ಭಾವಿಸುತ್ತಾನೆ.

ಜನರ ಈ ಆಧ್ಯಾತ್ಮಿಕ ವಾಂಛೆಯನ್ನು, ಆಗ್ರಹವನ್ನು SSF ಪ್ರೋತ್ಸಾಹಿಸಿತು  .

ಒಂದರ್ಥದಲ್ಲಿ ಹೇಳುವುದಾದರೆ  ಯುವ ಜನತೆಯಲ್ಲಿ ಧರ್ಮದ ನೈಜ  ಅರಿವನ್ನು, ಆಧ್ಯಾತ್ಮಿಕ ಚಿಂತನೆಯನ್ನು ಬಡಿದೆಬ್ಬಿಸಿದ್ದು SSF ನ ಸಾಧನೆ.ಇತರ ಸಂಘಟನೆಗಳ ಮಧ್ಯೆ SSF ಬೇರ್ಪಟ್ಟು ನಿಲ್ಲುವುದು ಇದೇ ಕಾರಣಕ್ಕಾಗಿ.
ಇದರಿಂದಲೇ ಜನರಲ್ಲಿ ಇಂದಿಗೂ SSF  ತನ್ನ ಪ್ರಭಾವ ಉಳಿಸಿಕೊಂಡಿದೆ.

ಕೆಲವು ವರ್ಷಗಳ ಹಿಂದೆ  ನಡೆದ ಘಟನೆ ಯೊಂದು ಇದಕ್ಕೆ ಪುಷ್ಟಿ ನೀಡುತ್ತದೆ. ಮರ್‌ಹುಂ ಸಿರಾಜುದ್ದೀನ್ ಪಡಿಕ್ಕಲ್‌.
ಸಾಧಾರಣ SSF ಕಾರ್ಯಕರ್ತ.ಅವರೇನು ಪರಿಚಿತರೇನಲ್ಲ.ಆದರೂ ಅವರು ಮರಣ ಹೊಂದಿದಾಗ ಕೇರಳ, ಕರ್ನಾಟಕ ಮಾತ್ರವಲ್ಲ ವಿದೇಶದಲ್ಲೂ ಸದ್ದು ಮಾಡಿದವು.ಮರಣ ಹೊಂದಿದಾಗ ನಾಯಕರೂ ಸೇರಿದಂತೆ ನೂರಾರು ಕಾರ್ಯಕರ್ತರು ಮನೆಯತ್ತ ಧಾವಿಸಿದರು.ನಿರಂತರ ತಹ್ಲೀಲ್,ಖುರ್‌ಆನ್ ಪಾರಾಯಣ,ಸ್ವಲಾತ್, ಪ್ರಾರ್ಥನೆಗಳು ನಡೆದವು.ಮಯ್ಯತ್ ಕೊಂಡೊಯ್ಯುವಾಗ, ಮಯ್ಯತ್ ನಮಾಜ್, ದಫನದ ವೇಳೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದರು.ಅವರ ದುಅ,ತಹ್ಲೀಲ್‌ಗಳು ಎಂತಹವರನ್ನು ವಿಸ್ಮಯಗೊಳಿಸದೆ ಇರದು.

ಮರಣದ ನಂತರ ಖತ್ಮುಲ್ ಖುರ್‌ಆನ್, ತಹ್ಲೀಲ್ ಸಮರ್ಪನೆ,ಅನುಸ್ಮರಣ ಕಾರ್ಯಕ್ರಮ ವ್ಯಾಪಕವಾಗಿ ನಡೆದವು. Ssf ನಾಯಕರದ್ದಾಗಲೀ, ಕಾರ್ಯಕರ್ತರದ್ದಾಗಲೀ ವಾಟ್ಸಪ್,ಫೇಸ್ ಬುಕ್ ಪೇಜ್‌ಗಳಲ್ಲಿ ಇದೇ ವಿಷಯ ಚರ್ಚೆಯಾಗುತ್ತಿದೆ.

ಒಬ್ಬ ಸಾಧಾರಣ ಕಾರ್ಯಕರ್ತ ಮರಣ ಹೊಂದಿದ ಕಾರ್ಯಕ್ರಮಕ್ಕೆ  ಪ್ರಗಲ್ಭ ನಾಯಕರೇ ಆಗಮಿಸುತ್ತಾರೆ*. 
*ಉನ್ನತ ನಾಯಕರು, ಉಲಮಾಗಳು ಆಗಮಿಸುವುದು ನಿಜಕ್ಕೂ ವಿಸ್ಮಯ. ಮಾಹಾ ಭಾಗ್ಯ.ಒಬ್ಬ ಕಾರ್ಯಕರ್ತನಿಗೆ ಇದಕ್ಕಿಂತ ದೊಡ್ಡ ಭಾಗ್ಯ ಬೇರೇನಿದೆ ?

ಕಾರ್ಯಕರ್ತರು ಮರಣ ಹೊಂದಿದಾಗ ನಡೆಸಲಾಗುವ ಖತ್ಮುಲ್ ಖುರ್‌ಆನ್, ತಹ್ಲೀಲ್, ಸ್ವಲಾತ್,ದುಆ ಮುಂತಾದ ಸತ್ಕರ್ಮಗಳು ತಾನು ಮರಣ ಹೊಂದಿದಾಗ ತನಗೂ ಸಿಗುತ್ತದೆ ಎಂಬ ಅಭಿಲಾಷೆಯೇ SSF ನ ಪ್ರಾಧಾನ್ಯತೆಗೆ ಕಾರಣ.

ಮರಣವನ್ನು ಸಂಘಟನೆ ಬೆಳೆಸಲು ಉಪಯೋಗಿಸಲಾಗುತ್ತದೆ ಎಂದು ಕೆಲವರು ಟೀಕಿಸಬಹುದು. ಟೀಕಿಸುವವರು ಟೀಕಿಸುತ್ತಲೇ ಇರಲಿ.ಅದರೆ ಕಾರ್ಯಕರ್ತ ಮರಣ ಹೊಂದಿದಾಗ ಅವನನ್ನು ನೆನಪಿಸುವ ಸಂಘಟನೆಯಿದ್ದರೆ ಅದು SSF ಮಾತ್ರ. ಕೆಲವು ಸಂಘಟನೆಗಳು ನಾಯಕರ ಅನುಸ್ಮರಣೆ ಮಾಡುತ್ತಿವೆ . ಆದರೆ ಕಾರ್ಯಕರ್ತರ ಸ್ಮರಣೆ ಮಾಡಬೇಕಿದ್ದರೆ ಅದು SSF ನಿಂದ ಮಾತ್ರ ಸಾಧ್ಯ .

ಏನಂತೀರಿ ?

           ಎಂ.ಎಂ.ಸಖಾಫಿ

https://m.facebook.com/story.php?story_fbid=1330686447119821&id=100005354345418

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...