Skip to main content

📖 *ಅರಿವು* 🍁              ✍ *ಇಕ್ಬಾಲ್ ಜಿ.ಕೆ.ಗುಲ್ವಾಡಿ* =============================

📖 *ಅರಿವು* 🍁
             ✍ *ಇಕ್ಬಾಲ್ ಜಿ.ಕೆ.ಗುಲ್ವಾಡಿ*
=============================
👉 ಲೋಕದಲ್ಲಿರುವ ಎಲ್ಲಾ  ಮಸೀದಿಗಳಲ್ಲೂ ನಮಾಝ್ ನಿರ್ವಹಿಸಿದ ನಂತರ ಇಮಾಂ ಅಲ್ಪ ಬಲಭಾಗಕ್ಕೆ ಸರಿದು ಕುಳಿತುಕೊಳ್ಳುವರು. ಆದರೆ, ವಿಶ್ವದ ಒಂದೇ ಒಂದು ಮಸೀದಿಯಲ್ಲಿ ಮಾತ್ರವೇ ಇಮಾಂ ಎಡಭಾಗಕ್ಕೆ ಸರಿದು ಕುಳಿತುಕೊಳ್ಳುವರು.
ಅದು ಯಾವ ಮಸೀದಿಯಲ್ಲಾಗಿದೆ? ಯಾವ ಕಾರಣಕ್ಕಾಗಿ?
✅ ಮದೀನಾದ ಮಸ್ಜಿದ್ ನಬವೀ ಯ ಇಮಾಂ ಎಡಭಾಗಕ್ಕೆ ಸರಿದಾಗಿದೆ ಕುಳಿತುಕೊಳ್ಳುವುದು.
ಕಾರಣ, ಅಲ್ಲಿ ಬಲಭಾಗದಲ್ಲಿ ಕುಳಿತುಕೊಂಡರೆ ಇಮಾಮಿನ ಹಿಂಬಾಗ ಪ್ರೀತಿಯ ಹಬೀಬ್ ﷺ ಹತ್ತಿರ ಬರುವುದು.

👉 ಖುರಾನಿನಲ್ಲಿ ಒಂದೇ ಒಂದು ಸ್ತ್ರೀಯ ಹೆಸರು ಮಾತ್ರವೇ ಇರುವುದು... ಮರಿಯಂ(ರ).
ಆದರೆ ಅಲ್ಲಾಹು (ಖುರಾನ್ ನಲ್ಲಿ ಅಲ್ಲ) ಸಲಾಂ ಹೇಳಿದ ಮಹದೀ ಯಾರು? ಆ ಮಹದೀ ಹೇಗೆ ಆ ಸಲಾಂ ಗೆ ಉತ್ತರಿಸಿರುವುದು?
✅ ಅಲ್ಲಾಹುವಿನ ಸಲಾಂ ನಬಿ ﷺ ಹೇಳಿರುವುದು ಖದೀಜಾ(ರ) ರವರೊಂದಿಗಾಗಿದೆ‌. ಅವರು ಸಲಾಂ ಗೆ ಉತ್ತರಿಸಿದ್ದು ಈ ರೀತಿ... ಅಲೈಕುಂ ವ ಅಲಾ ಜಿಬ್ರೀಲ್ ವ ಅಲೈಹು ನಫ್ಸು ಸಲಾಂ (ನಿಮಗೆ ಸಲಾಂ, ಜಿಬ್ರೀಲ್(ಅ)ಗೆ ಸಲಾಂ, ಅಲ್ಲಾಹನಿಗೆ ಸ್ವಯಂ ಸಲಾಂ).

👉 ಪ್ರೀತಿಯ ನಬಿ ﷺ ರವರು ಯುದ್ಧಗಳಲ್ಲಿ ಉಪಯೋಗಿಸುತ್ತಿದ್ದ ಬಾವುಟದ ಬಣ್ಣ ಯಾವುದು?
✅ ಕಪ್ಪು

👉 ಖುರಾನಿನಲ್ಲಿ ಎಷ್ಟು ಬಾರಿ ಮುಹಮ್ಮದ್ ಎಂಬ ಹೆಸರಿದೆ?
✅ ನಾಲ್ಕು (ಅದರಲ್ಲಿ ಒಂದು ಆಯತ್ ಮದೀನಾದಲ್ಲಿ ನಮ್ಮ ಪ್ರೀತಿಯ ನಬಿ ﷺ ವಿಶ್ರಮಿಸುತ್ತಿರುವ, ಅದರ ಮೇಲ್ಬಾಗದ ಗೋಡೆಯಲ್ಲಿ ಬರೆದಿಡಲಾಗಿದೆ.

👉 ವಿಶ್ವದಲ್ಲಿನ ಎಲ್ಲಾ ಸ್ವತಂತ್ರ ದೇಶಗಳ (UNO - ಮತ್ತುರಾಷ್ಟ್ರಸಭೆಯಲ್ಲಿನ ಅಂಗಗಳಾದರೆ) ಅಮೇರಿಕಾದ ಐಕ್ಯ ರಾಷ್ಟ್ರಗಳಲ್ಲಿರುವ ಪತಾಕೆಗಳು UNO ಕಚೇರಿಯ ಮುಂಭಾಗದಲ್ಲಿರುವ ಧ್ವಜ ಸ್ಥಂಭಗಳಲ್ಲಿ ಹಾರಾಡುತ್ತಿರುತ್ತದೆ. ಯಾವುದಾದರೂ ಒಂದು ರಾಷ್ಟ್ರದ ಅಧ್ಯಕ್ಷರು ಮರಣಹೊಂದಿದರೆ ಆ ದೇಶದಲ್ಲಿ ಮತ್ತು UNO ನಲ್ಲಿ (ಒಂದು ದೇಶವನ್ನು ಬಿಟ್ಟು) ಪತಾಕೆಯನ್ನು ಅರ್ಧಕ್ಕೆ ಇಳಿಸಿ ಕಟ್ಟುವರು(Half Mast). ಆದರೆ, ಒಂದು ದೇಶ ಮಾತ್ರ ಆ ದೇಶದ ಅಧ್ಯಕ್ಷರು ಮರಣ ಹೊಂದಿದರೂ ಆ ದೇಶದ ಪತಾಕೆಯನ್ನು ಯಾವುದೇ ಸ್ಥಳಗಳಲ್ಲೂ ಅರ್ಧಕ್ಕಿಳಿಸಿ ಕಟ್ಟುವುದಿಲ್ಲ. ಅದು ಯಾವ ದೇಶ ಮತ್ತು ಕಾರಣವೇನು?
✅ ಆ ದೇಶವಾಗಿದೆ ಸೌದಿ ಅರೇಬಿಯಾ. ಕಾರಣ, ಆ ಪತಾಕೆಯಲ್ಲಿರುವ ವಾಕ್ಯಗಳು - ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದ್ ರಸೂಲುಲ್ಲಾಹ್ (ಆರಾಧನೆಗೆ ಅರ್ಹನು ಅಲ್ಲಾಹು ಅಲ್ಲದೇ ಬೇರೆ ಯಾರೂ ಇಲ್ಲ, ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ) ಎಂದಾಗಿದೆ.
ಅದಕ್ಕಿಂತ ದೊಡ್ಡ ಒಬ್ಬ ಮನುಷ್ಯ ಕೂಡಾ ಇಲ್ಲ ಎಂಬ ಕಾರಣಕ್ಕಾಗಿ ಆ ವಾಕ್ಯಗಳಿರುವ ಪತಾಕೆಯನ್ನು ಅರ್ಧಕ್ಕಿಳಿಸದೇ ಇರುವುದು. ಅದು UNO ಕೂಡಾ ಅಂಗೀಕರಿಸಿದೆ.
🍁🍁🍁🍁🍁🍁🍁🍁🍁🍁
🍁 ಮಗ್ರಿಬ್ ನಮಾಝಿನ ನಂತರ ಖುರಾನ್ ಓದುವ ಸೂರಾಃ ಗಳು:
🔴 ಸೂರಾಃ ಯಾಸೀನ್
🔴 ಸೂರಾಃ ವಾಖಿಅ
🔴 ಸೂರಾಃ ಮುಲ್ಕ್
🔴 ಸೂರಾಃ ಹಶ್'ರ್(ಕಡೆಯ ನಾಲ್ಕು ಆಯತು ಗಳು)
🔴 ಸೂರಾಃ ಬಕರ(ಕಡೆಯ ಎರಡು ಆಯತ್ - ಆಮನ ರಸೂಲು)
🔴 ಆಯತುಲ್ ಕುರ್'ಸೀ
             _:ಇಕ್ಬಾಲ್ ಜಿ.ಕೆ.ಗುಲ್ವಾಡಿ_
♦ಇದನ್ನು ಎಲ್ಲಾ ದಿವಸಗಳಲ್ಲೂ ತಪ್ಪದೇ ಓದಿ, ನಿಮ್ಮ ಎಲ್ಲಾ ತೊಂದರೆಗಳಿಗೂ ಪರಿಹಾರ ದೊರಕುವುದು.(ಇನ್'ಶಾ ಅಲ್ಲಾಹ್)
♦ಇದನ್ನು ತಪ್ಪದೇ ಎಲ್ಲರಿಗೂ ವರ್ಗಾಯಿಸಿ. ಕಾರಣ, ಇದೊಂದು 'ಜಾರಿಯಾದ ಸ್ವದಖಾ' ಆಗಿದೆ. ನಿಮ್ಮ ಈ ಪ್ರಯತ್ನದಿಂದ ಯಾರಾದರೂ ಓದಿದರೆ ಅದರ ಎಲ್ಲಾ ಪುಣ್ಯ ಗಳೂ ತಮ್ಮ ಖಾತೆಗೆ ಜಮಾ ಆಗುವುದು...
ಅಲ್ಲಾಹು ತೌಫೀಖ್ ನೀಡಲಿ, ಆಮೀನ್...
🍁🍁🍁🍁🍁🍁🍁🍁🍁🍁
🔹ನಬಿ ﷺ ರವರ ಮೇಲೆ ಸ್ವಲಾತ್
💫اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله🌹
〰〰〰〰〰〰〰〰〰〰

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...