*ಇಮಾಮ್ ಶಾಫಿಈ(ರ) ರವರ ಮಾತನ್ನು ಅರ್ಥೈಸುವಷ್ಟು ಬುದ್ದಿ ಇದ್ದರೆ ಅವನು ಸಳಪಿಯಾಗುತ್ತಾನಾ?*
*====≠====≠====≠=====*
ಸಳಪಿ ನೋಡಿದ್ದು ಇಷ್ಟೇ👇
وَأَنْ لَيْسَ لِلْإِنْسَانِ إِلَّا مَا سَعَىٰ
ಮನುಷ್ಯನಿಗೆ ಅವನು ಪರಿಶ್ರಮ ಪಟ್ಟಿರುವುದರ ಹೊರತು ಬೇರೇನೂ ಇಲ್ಲವೆಂದು,[1066]
ಟಿಪ್ಪಣಿಗಳು :
[1066] ಯಾವುದೇ ಮನುಷ್ಯನಿಗೆ ಮೋಕ್ಷವು ಸಿಗಬೇಕಾದರೆ ಅದಕ್ಕೆ ಅವನ ಕರ್ಮಗಳ ಹೊರತು ಇನ್ನಾವುದೂ ಪ್ರಯೋಜನಪಡ ಲಾರದೆಂದು ಈ ಸೂಕ್ತಿಯು ಸ್ಪಷ್ಟಪಡಿಸುತ್ತದೆ.
ಶಾಫಿಈ ಮದ್ಹಬಿನ ಮಶ್ಹೂರ್ ಆದ ಅಭಿಪ್ರಾಯ ಕುರ್‌ಆನ್ ಓದಿ ಹದೀಯ ಮಾಡಿದರೆ ಅದು ಆ ಮಯ್ಯತ್ತಿಗೆ ತಲುಪುವುದಿಲ್ಲ ಎಂದು ಇಮಾಮ್ ಶಫೀಈ ಮತ್ತು ಅವರನ್ನು ಅನುಸರಿಸಿದವರೂ ಪುರಾವೆಯಾಗಿ ಕಂಡಿದ್ದು ಸೂರ ಅನ್ನಜ್ಮ್ 39 ನೇ ಸೂಕ್ತಿಯನ್ನಾಗಿದೆ. ಅದೇ ರೀತಿ ಪ್ರವಾದಿ ﷺ ರು ಹೇಳುತ್ತಾರೆ : ಒಬ್ಬ ಮರಣ ಹೊಂದಿದರೆ ಅವನಿಂದ ಮೂರು ಕಾರ್ಯಗಳು ಮಾತ್ರ ಬಾಕಿಯಾಗಿ ಉಳಿದಿರುತ್ತದೆ. ಅದೇನೆಂದರೆ 1. ಮರಣ ಹೊಂದಿದ ವ್ಯಕ್ತಿಯ ಸ್ವಾಲಿಹ್ ಆದ ಮಕ್ಕಳ ಪ್ರಾರ್ಥನೆ, 2. ಉಪಕಾರಕ್ಕೆ ಸಿಗುವಂತಹ ಅರಿವು, 3. ಜಾರಿಯಾ ಆದ ಸ್ವದಕಾ. ಎಂದಾಗಿದೆ ಇಮಾಮ್ ನವವೀ ತನ್ನ ಶರಹುಲ್ ಮುಸ್ಲಿಮ್ ನಲ್ಲಿ ಉಲ್ಲೇಖಿಸಿರುವುದು.
(ಶರಹ್ ಮುಸ್ಲಿಮ್ : 1/90)
*(👆ನೋಡಿ ಇದು ಸಳಪಿ ಸಂದರ್ಭದಿಂದ ಬೇರ್ಪಡಿಸಿದ ದುರ್ವ್ಯಾಖ್ಯಾನವಾಗಿದೆ)*
ಇಮಾಮ್ ಶಾಫಿಈ(ರ) ಮಾತಿನ ತಿರುಳು ಏನೆಂದು ವಿಶ್ವೋತ್ತರ ವಿದ್ವಾಂಸ ಇಬ್ನ್ ಹಜರ್(ರ) ರವರು ವಿವರಿಸುವುದು ನೋಡಿ👇
حمل جمع عدم الوصول.........
علي ما اذا قرأ لا بحضرة الميت ولم ينو القارئ ثواب قرائته له او نواه ولم يدع له(تحفة)
ಕುರಾನ್ ಪಾರಾಯಣದ ಪ್ರತಿಫಲ ಮಯ್ಯತಿಗೆ ಸಿಗುವುದಿಲ್ಲ ಎಂಬುದರ ತಾತ್ಪರ್ಯ, ಮಯ್ಯಿತಿನ ಸಮೀಪ ಪಾರಾಯಣಗೈದು, ಪಾರಾಯಣದ ಪ್ರತಿಫಲ ಮರಣಹೊಂದಿದ ವ್ಯಕ್ತಿಗೆ ಲಭಿಸಬೇಕೆಂದು ನಿಯ್ಯತ್ ಮಾಡದೆ ಇರುವಾಗ ಅದು ಮಯ್ಯತ್ ಗೆ ಲಭ್ಯವಾಗುವುದಿಲ್ಲ ಎಂದಾಗಿದೆ.
ಅಥವಾ ನಿಯ್ಯತ್ ಮಾಡಿದ ಮೇಲೆ ದುಆ ಕೂಡಾ ಮಾಡಬೇಕು ಹಾಗೆ ದುಆ ಮಾಡದೆ ಕೇವಲ ಪಾರಾಯಣ ಮಾತ್ರ ಮಾಡಿದರೆ ಅದರ ಪ್ರತಿಫಲ ಮಯ್ಯಿತ್ ಗೆ ಸಿಗಲ್ಲ ಎಂದಾಗಿದೆ.
(ತುಹ್ಫಾ 7/74)
ನೋಡಿ ಸಳಪಿಗೆ ಇಮಾಮ್ ಶಾಫಿಯವರ ಮಾತಿನ ತಿರುಳು ಅರ್ಥವಾಗಲೇ ಇಲ್ಲ.
ನಮ್ಮ ಪೂರ್ವಿಕ ಉಲಮಾಗಳು ನಮಗೆ ಕಲಿಸಿ ಕೊಟ್ಟ ಪಾಠ ಇದೆ.
ಮರಣ ಹೊಂದಿದ ಮನೆಯಲ್ಲಿ ಯಾಸೀನ್/ಫಾತಿಹಾ ಓದಿ ನಂತರ
*ಅಲ್ಲಾಹುಮ್ಮ ಅವ್'ಸಿಲ್ ಮಿಸ್ಲ ಸವಾಬಿ* ಅಂತ ದುಆ ಮಾಡುತ್ತಾರೆ. ಆವಾಗ ನಮ್ಮ ಯಾಸೀನ್ / ಫಾತಿಹಾದ ಪ್ರತಿಫಲ ಮಯ್ಯಿತಿಗೆ ಲಭ್ಯವಾಗುತ್ತದೆ.
ಆದರೆ ಸಳಪಿ ಅದನ್ನು *ಪಾರ್ಸಲ್* ಅಂತ ಗೇಲಿ ಮಾಡಿದ!
ಸಳಪಿ ಹಾಗೇನೆ...ತನ್ನ ಬದುಕನ್ನು ಮತ್ತೊಬ್ಬರನ್ನು ಪರಿಹಾಸ್ಯ ಮಾಡುವುದರಲ್ಲೂ ಕುರಾನ್ ಹದೀಸ್ ದುರ್ವ್ಯಾಖ್ಯಾನ ಮಾಡುವುದರಲ್ಲೂ ವಿನಿಯೋಗಿಸಿ ಸರ್ವನಾಶವಾದ.
ಸಳಪಿ ಇಷ್ಟೆಲ್ಲಾ ಕುತಂತ್ರ ಮಾಡಿಯೂ,ಹೆದರಿಸಿ,ಬೆದರಿಸಿ ಸುನ್ನಿಗಳ ಮೇಲೆ ಶಿರ್ಕ್ ಆರೋಪ ಮಾಡಿಯೂ ಬುದ್ದಿ ಇರುವ ಯಾವುದೇ ಸುನ್ನಿ ಸಳಪಿಯಾಗಲಿಲ್ಲ.ಕಾರಣ ಸುನ್ನಿಗಳಿಗೆ ಗೊತ್ತು ನಮ್ಮ ಉಲಮಾಗಳು ನಮಗೆ ದೀನನ್ನು ಯಥಾವತ್ತಾಗಿ ಕಲಿಸಿಕೊಟ್ಟಿದ್ದಾರೆ.
ಕೆಲವೊಮ್ಮೆ ಆಯತ್ ಹದೀಸ್ ನ ಆಳವಾದ ಜ್ಞಾನ ನಮಗೆ ಕಲಿಸದೆ ಇರಬಹುದು.
ಆದರೆ ಎಲ್ಲಾ ಆಯತ್ ಹದೀಸುಗಳು ಮತ್ತು ಬಾಹ್ಯವಾಗಿ ಕಂಡುಬರುವ ವೈರುದ್ಯಗಳನ್ನು ಒಟ್ಟು ಸೇರಿಸಿ ಅದರ ಪ್ರಾಕ್ಟಿಕಲ್ ಹೀಗೆ ಎಂಬುದನ್ನು ನಮ್ಮ ಉಲಮಾಗಳು ನಮಗೆ ಕಲಿಸಿಕೊಟ್ಟು ನಮಗೆ ಮಾದರಿಯಾಗಿದ್ದಾರೆ.
ಮಯ್ಯತಿಗಾಗಿ ಪಾರಾಯಣ ಮಾಡಿದ ಕುರಾನ್ ಅದು ಆ ಮಯ್ಯತ್ ಗೆ ಸಿಗಬೇಕಾದರೆ ದುಆ ಮಾಡಬೇಕೆಂಬ ಇಮಾಮ್ ಶಾಫಿಯವರ ,ಇಮಾಮ್ ಇಬ್ನ್ ಹಜರ್ ತಂಙಳ ಅಭಿಪ್ರಾಯಗಳನ್ನು ನಮ್ಮ ಉಲಮಾಗಳು ನಮಗೆ ಕಲಿಸಿ ಕೊಡದೆ,ಯಾವ ರೀತಿ ಪಾರಾಯಣ ಮಾಡಿದರೆ ಮಯ್ಯತ್ ಗೆ ಪ್ರತಿಫಲ ಲಭ್ಯವಾಗಬಹುದೆಂಬುದನ್ನು
*ಅಲ್ಲಾಹುಮ್ಮ ಅವ್ಸಿಲ್ ಮಿಸ್ಲಾ ಸವಾಬಿ* ಮೂಲಕ ಪ್ರಾಕ್ಟಿಕಲ್ ಆಗಿ ತೋರಿಸಿಕೊಟ್ಟರು.
ಸುನ್ನಿಗಳು ಆಚರಿಸುವ ಎಲ್ಲಾ ಸಂಗತಿಗಳು ಅಷ್ಟೇ ಅದರ ಆಧಾರ ಪುರಾವೆಗಳು ಕುರಾನ್ ಹದೀಸ್ ಗಳಲ್ಲಿ ಸ್ಪಷ್ಟವಾಗಿದ್ದರೂ ಅದನ್ನು ಪ್ರತಿಯೊಬ್ಬ ಸಾಮನ್ಯನಿಗೂ ಕಲಿಯಲು ಸಾದ್ಯವಿಲ್ಲ.ಕಾರಣ ಅದಕ್ಕಾಗಿಯೇ ಧೀರ್ಘ ವರ್ಷಗಳ ಕಾಲ ಕಲಿಯಬೇಕಾಗಿದೆ.
ಅದೆಲ್ಲವೂ ಸಾಮಾನ್ಯ ಕೂಲಿ ಕೆಲಸ ಮಾಡುವವರಿಂದ ಹಿಡಿದು ದೊಡ್ಡ ದೊಡ್ಡ ಬ್ಯುಸ್ ನೆಸ್ ಮಾಡುವವರ ತನಕ ಎಲ್ಲರಿಗೂ ಸಾದ್ಯವಿಲ್ಲ.
ಹಾಗಾಗಿ ನಮ್ಮ ಉಲಮಾಗಳು ಸತ್ಕರ್ಮದ ಆಧಾರ ಪುರಾವೆಗಳನ್ನು ಕಲಿಸುವ ಬದಲು ಅದನ್ನೇ ಪ್ರಾಕ್ಟಿಕಲ್ ಆಗಿ ನಮಗೆ ಕಲಿಸಿಕೊಟ್ಟಿದ್ದಾರೆ.
ಆದರೆ ಸಳಪಿ ಪ್ರತಿಯೊಂದಕ್ಕೂ ಪುರಾವೆ ಹುಡುಕತ್ತಲೇ ಹೋಗಿ ಸತ್ಕರ್ಮ ಮಾಡಲು ಸಮಯ ಸಿಗದೆ ನಾಶವಾಗಿ ಹೋದ..
ಅದಕ್ಕಾಗಿಯೇ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳದ್ದರು.
*"ನೀವು ಉಲಮಾಗಳನ್ನು ಹಿಂಬಾಲಿಸಿರಿ ಅವರು ನಿಮಗೆ ದುನ್ಯಾ ಮತ್ತು ಪರಲೋಕ ದಲ್ಲಿ ದಾರಿ ದೀಪಗಳಾಗಿದ್ದಾರೆ"*
ಬಾಕಿ ಕೆಲವೊಂದು ಅಸಂಬದ್ದ ಸಳಪಿ ಬರೆದಿದ್ದಾನೆ ಇನ್ಶಾಅಲ್ಲಾ ಅದಕ್ಕೂ ಮುಂದೆ ಉತ್ತರಿಸುತ್ತೇನೆ.
ಅಬೂಶಝ
Comments