Skip to main content

ಮಾನವೀಯ ಬೆಳಕನ್ನು ಪಸರಿಸಿದ ವಿಶ್ವ ವಿಮೋಚಕ ಪ್ರವಾದಿ ಸ.ಅ, ಸ್ನೇಹಜೀವಿ ಅಡ್ಕ

*ಜಗತ್ತಿಗೆ ಮಾನವೀಯ ಬೆಳಕನ್ನು ಪಸರಿದ ವಿಶ್ವ ವಿಮೋಚಕ ಪ್ರವಾದಿ (ﷺ)...!!*
*ಪ್ರವಾದಿ (ﷺ) ರವರನ್ನು ವಿಮರ್ಷಿಸುವ ಮುನ್ನ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಸಡೆಸುವಂತವರಾಗಿ.*

ಅಂಧಕಾರದಿಂದ ಕೂಡಿದ ಜಗತ್ತಿಗೆ ಮಾನವೀಯ ಬೆಳಕನ್ನು ಪಸರಿಸಿದವರಾಗಿದ್ದರು ವಿಶ್ವ ವಿಮೋಚಕ ಪ್ರವಾದಿ ಮುಹಮ್ಮದ್ ಮುಸ್ತಫಾ  (ﷺ)ರವರು.
ಹುಟ್ಟಿದ ಮಗು ಹೆಣ್ಣಂದರಿತ ಕೂಡಲೇ ಜೀವಂತವಾಗಿ ಹೂತು ಹಾಕಲ್ಪಡುತ್ತಿದ್ದ ಸಮೂಹದ ನಡುವೆ ಹೆಣ್ಣು ನಿಮ್ಮ ಮನೆಗೆ ಶಾಪವಲ್ಲ ,ಹೆಣ್ಣು ಮಗು ನಿಮ್ಮ ಮನೆಯ ಬೆಳಕು ಅಂತ ಜಗತ್ತಿಗೆ ಸಾರಿ ಹೇಳಿದ ವಿಶ್ವ ಪ್ರವಾದಿ (ﷺ) ರವರು ತಾಯಿಯ ಕಾಲಡಿಯಲ್ಲಾಗಿದೆ ಸ್ವರ್ಗ.  ನಿಮ್ಮ ಆಸ್ತಿಯಲ್ಲಿ ಹೆಣ್ಣಿಗೂ ಪಾಲು ನೀಡಬೇಕೆಂದು ಕಲಿಸಿಕೊಟ್ಟರು.
ಪ್ರಸಕ್ತವಾಗಿ ಇಸ್ಲಾಮಿನಲ್ಲಿ ಸ್ತ್ರೀ ಶೋಷಣೆಗೊಳಪಡುತ್ತಿದ್ದಾಳೆ ಅನ್ನುವಂತಹ ಅರ್ಥವಿಲ್ಲದ ಕೂಗಿಗೆ ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ  (ﷺ)ರವರು ಉತ್ತರವನ್ನು ಕಂಡುಕೊಂಡು, ಆಕೆಗೆ ಮಾಣಿಕ್ಯಗಿಂತಲೂ ಅಧಿಕವಾದ ಸ್ಥಾನಮಾನವನ್ನು ನೀಡಿ ಗೌರವಿಸಿದೆ.
ಇಂದಿಗೂ ಋತುಮತಿಯಾದ ಹೆಣ್ಣನ್ನು ಮನೆಯ ಹೊರಗಡೆ ಮಲಗಿಸುವ ಅಮಾನವೀಯ ಪದ್ದತಿ, ಗಂಡ ಮರಣ ಹೊಂದಿದರೆ ಜೀವನ ಪರ್ಯಂತ ವಿಧವೆಯಾಗಿ ಜೀವಿಸುವಂತಹ  ವ್ಯವಸ್ಥೆ ಜಾರಿಯಲ್ಲಿದ್ದರೂ, ತ್ವಲಾಕ್ ನ ಸಾಧಕ, ಬಾಧಕಗಳ ಕುರಿತೂ, ತ್ವಲಾಕ್ ನ ರೂಪಗಳನ್ನು ತಿಳಿಯುವ ಪ್ರಯತ್ನ ನಡೆಸದೆ ಇಸ್ಲಾಮಿನಲ್ಲಿ ಸ್ತ್ರೀ ಸ್ವಾತಂತ್ರ್ಯವಿಲ್ಲ ಎಂದು ವಾದ ನಡೆಸುವವರು ಪ್ರವಾದಿ (ﷺ) ರವರು ಜಗತ್ತಿಗೆ ತೋರಿಸಿಕೊಟ್ಟ ಮಾದರೀಯೋಗ್ಯ ನಡೆ, ಮಹಿಳೆಯರಿಗೆ ಕಲ್ಪಿಸಿದ ಸ್ಥಾನಮಾನಗಳ ಕುರಿತು ಅಧ್ಯಯನ ನಡೆಸಬೇಕಾಗಿದೆ.

ನಿನ್ನ ನೆರೆಯವನು ಹಸಿದಿರುವಾಗ (ಅವನೊಬ್ಬ ಸಹೋದರ ಧರ್ಮೀಯನಾಗಿದ್ದರೂ ) ಹೊಟ್ಟೆ ತುಂಬಾ ಉಣ್ಣುವವನು ಮುಸ್ಲಿಮನಲ್ಲ ಎಂದು ಕಲಿಸಿಕೊಟ್ಟಾಗ ನಿನ್ನ ನೆರೆಯಲ್ಲಿ ಹಸಿದಿರುವನು ಮುಸ್ಲಿಮನಾಗಿದ್ದರೆ ಮಾತ್ರ ನೀನು ಸಹಾಯ ಮಾಡು ಎಂದು ಕಲಿಸಿಕೊಟ್ಟಿಲ್ಲ. ಆತ ಯಾವುದೇ ಧರ್ಮವನಾಗಿದ್ದರೂ ನೀನು ಆತನಿಗೆ ಸಹಾಯ ಮಾಡು ಎಂದು ಕಲಿಸಿಕೊಡುವುದರ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ಬಿತ್ತರಿಸಿದರು.

ದೇಶದೆಲ್ಲೆಡೆ ಧರ್ಮ ಧರ್ಮಗಳ ಹೆಸರೇಳಿ ಕೊಲೆಪಾತಕಗಳು ಅಧಿಕವಾಗಿತ್ತಿರುವ ಈ ಕಾಲಘಟ್ಟದಲ್ಲಿ ಮನುಷ್ಯರಿಗೆ ಮನುಷ್ಯತ್ವವು ಮರೀಚಿಕೆಯಾಗಿಯೇ ಉಳಿದಿದೆ.
ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ﷺ)  ರವರು ಮುನ್ನೆಚ್ಚರಿಕೆ ನೀಡಿದ್ದರು. ಅದೊಂದು ಕಾಲ ಬರಲಿದೆ ಅಂದು ಕೊಲೆಗೈಯುವವನಿಗೆ ಗೊತ್ತಿರಲಿಕ್ಕಿಲ್ಲ ನಾನು ಯಾಕೆ ಕೊಲೆಗೈಯುತ್ತಿದ್ದೇನೆಂದು, ಕೊಲೆಗೈಯಲ್ಪಟ್ಟವನಿಗೆ ನಾನು ಯಾಕೆ ಕೊಲೆಗೈಯಲ್ಪಡುತ್ತಿದ್ದೇನೆ ಅಂತ ಗೊತ್ತಿರುವುದಿಲ್ಲ ಅನ್ನುವ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.
ವರ್ಣ ಭೇದ ದ ಹೆಸರಿನಲ್ಲಿ ಕರಿಯರನ್ನು ಕೀಳಾಗಿ ಕಾಣುತ್ತಿದ್ದ ಕಾಲಘಟ್ಟದಲ್ಲಿ ಕರಿಯನಾದ ಬಿಲಾಲ್ ರ.ಅ ರವರನ್ನು ಮಸೀದಿಯಲ್ಲಿ ಬಾಂಗ್ ಕರೆ ನೀಡಲು ಆಜ್ಞಾಪಿಸಿ ಕರಿಯನಿಗೂ - ಬಿಳಿಯನಿಗೂ, ಬಡವನಿಗೂ - ಶ್ರೀಮಂತನಿಗೂ ಒಂದೇ ಸ್ಥಾನಮಾನವನ್ನು ನೀಡಿ ವರ್ಣಭೇದ ನೀತಿಗೆ ಅಂತ್ಯ ಹಾಡಿದರು. ಇಂದಿಗೂ ಮಸೀದಿಗಳಲ್ಲಿ ಬಡವ -ಶ್ರೀಮಂತ ,ಕರಿಯ -ಬಿಳಿಯ ಅನ್ನುವ ತಾರತಮ್ಯವಿಲ್ಲದೆ ಪರಸ್ಪರ ಭುಜಕ್ಕೆ ಭುಜ ಸೇರಿಸಿ ನಮಾಝ್ ಮಾಡುವ ದೃಶ್ಯಗಳನ್ನು ಕಾಣಿಸಲು ಸಾಧ್ಯವಿದೆ.

ಒಬ್ಬ ನಿರಪರಾಧಿಯನ್ನು ಕೊಂದರೆ ಸಕಲ ಮಾನವ ಕುಲವನ್ನೇ ಕೊಂದಂತೆ ಅನ್ನುವಂತಹ ಎಚ್ಚರಿಕೆಯ ಸಂದೇಶವನ್ನು ನೀಡಿ ಮನುಷ್ಯ ಮನಸ್ಸುಗಳ ನಡುವಿನ ಸಂಬಂಧಗಳ ಕುರಿತಾದ ಮಹತ್ವವನ್ನು ಈ ಜಗತ್ತಿನ ಮುಂದೆ ತೆರೆದಿಟ್ಟಿದ್ದರು.
ಕಾರ್ಮಿಕನ ಬೆವರು ಆರುವ ಮುನ್ನವೇ ಆತನಿಗೆ ಆತನ ದುಡಿಮೆಯ ವೇತನವನ್ನು ನೀಡಿ ಎಂದು ಆಜ್ಞಾಪಿಸಿದ್ದು ಪ್ರವಾದಿ (ﷺ) ರವರು ಕಾರ್ಮಿಕ ವರ್ಗದ ಭವನೆಯನ್ನು ಅರ್ಥೈಸಿಕೊಂಡಾಗಿತ್ತು
ಇಂದು ದೇಶದೆಲ್ಲೆಡೆ ಕಾರ್ಮಿಕ ವರ್ಗವು ಬೀದಿ ಬೀದಿಗಳಲ್ಲಿ ತಮಗೆ ಅನುಕೂಲವಾದ ವೇತನವನ್ನು ನೀಡಬೇಕೆಂದು ಪ್ರತಿಭಟಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಹದಿನಾಲ್ಕು ಶತಮಾನಗಳ ಹಿಂದೆಯೇ ಪ್ರವಾದಿ (ﷺ) ರವರು ಇದಕ್ಕೊಂದು ಪರಿಹಾರವನ್ನು ಕಂಡುಕೊಂಡಿದ್ದಾರೆ.

ತನ್ನ ಕರುಳಕುಡಿಯಾದ ಫಾತಿಮಾ ರ.ಅ ಕದ್ದರೂ ಆಕೆಯ ಕೈಯನ್ನು ಕಡಿಯದೆ ಬಿಡಲಾರೆ ಎಂದು ಖಡಾ ಖಂಡಿತವಾಗಿ ಹೇಳಿದ ಪ್ರವಾದಿ  (ﷺ) ರವರು ನ್ಯಾಯ ಪಾಲನೆಯಲ್ಲಿ ಎಂದೂ ತಾರತಮ್ಯದ ನೀತಿಯನ್ನು ಅನುಸರಿಸಿದವರಲ್ಲ.

ಅಲ್ ಅಮೀನ್ ಅನ್ನುವ ಹೆಸರಿನಿಂದಲೇ ಕರೆಯಲ್ಪಡುತ್ತಿದ್ದ ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫಾ(ﷺ) ರವರು ನ್ಯಾಯದ ವಿಷಯದಲ್ಲಿ ಎಂದೂ ರಾಜಿಮಾಡಿಕೊಂಡವರಲ್ಲ.
ಇಲ್ಲಿನ ಕೆಲವೊಂದು ಪತ್ರಿಕೆಗಳು, ಇನ್ನು ಕೆಲವು ಸಂಘಟನೆಗಳು, ಇನ್ನು ಕೆಲವು ವ್ಯಕ್ತಿಗಳು  ಪ್ರವಾದಿ (ﷺ)  ರವನ್ನು ನಿಂದಿಸಿದ ಮಾತ್ರಕ್ಕೆ ಇಲ್ಲಿ ಇಸ್ಲಾಮಿನ ಬೆಳವಣಿಗೆಯನ್ನೋ, ಪ್ರವಾದಿ (ﷺ) ರವರ ಮೇಲಿನ ಪ್ರೀತಿಯನ್ನೋ ಇಲ್ಲವಾಗಿಸಲು ಸಾಧ್ಯವಿಲ್ಲ.
ಪ್ರವಾದಿ(ﷺ)  ರವರನ್ನು ಯಾರೆಲ್ಲಾ ವಿಮರ್ಷಿಸಲು ಪ್ರಯತ್ನಿಸುತ್ತಾರೋ ಆವಾಗಲೆಲ್ಲಾ ಜನತೆ ಆ ಪ್ರವಾದಿಯನ್ನು ಅರಿಯಲು ಪ್ರಯತ್ನಿಸುತ್ತದೆ. ಪರಿಣಾಮ ಅವರು ಆ ಪ್ರವಾದಿ (ﷺ) ರವರ ಆದರ್ಶದಲ್ಲಿ ಸತ್ಯವನ್ನು ಮನಗಂಡು ಇಸ್ಲಾಮಿನತ್ತ ಆಕರ್ಷಿತರಾಗುತ್ತಿದ್ದಾರೆ.
  ಪ್ರವಾದಿ(ﷺ) ರವರು ಕಲಿಸಿಕೊಟ್ಟ ಸತ್ಯದ ಹಾದಿ,  ಆದರ್ಶವು ಜಗತ್ತಿಗೆ ಮಾದರಿಯಾಗಿದೆ.
ಅಂತಹ ಪ್ರವಾದಿ (ﷺ) ರವರನ್ನು ಹೀಯಾಳಿಸುವುದೋ , ವಿಮರ್ಷಿಸುವುದರ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂದುಕೊಂಡಿದ್ದರೆ ಆ ಪ್ರವಾದಿ (ﷺ)ರವರ ಕುರಿತು ಆಳವಾಗಿ ಅಧ್ಯಯನ ನಡೆಸಿ.
ಇಪ್ಪತ್ತಮೂರು ವರ್ಷಗಳ ಕಾಲ ಪ್ರಬೋಧನೆ ನಡೆಸಿದಾಗ ಪ್ರವಾದಿ (ﷺ) ರವರಿಗೆ ಹಲವು ತ್ಯಾಗ ,ಕಷ್ಟಗಳನ್ನು ಸಹಿಸಬೇಕಾಗಿ ಬಂದಿತ್ತು.
ಹಲವು ಹಿಂಸೆಗಳು ಪ್ರವಾದಿ  (ﷺ)ರವರ ಮೇಲೆ ನಡೆದಿದ್ದವು. ಆದರೂ ಪ್ರವಾದಿ (ﷺ) ರವರಿಗೆ ಅಲ್ಲಾಹನ ಸಂದೇಶ ವಾಹಕರ ಆಜ್ಞೆ  ಓ ಪ್ರವಾದಿ ವರ್ಯರೇ ನೀವು ಅವರನ್ನು ಕ್ಷಮಿಸಿಬಿಡಿ. ಅವರಿಗೆ ಒಳಿತಿನ ಬಾಗಿಲುಗಳನ್ನು ತೆರೆದುಕೊಡಿ ಎಂದಾಗಿತ್ತು.
ಜಗತ್ತಿನ ಮುಸ್ಲಿಮರು ತಮ್ಮ ಹೆತ್ತವರು ,ಹೆಂಡತಿ ,ಮಕ್ಕಳಿಗಿಂತ ಅಧಿಕವಾಗಿ ಪ್ರೀತಿಸಲ್ಪಡುವುದು ಪ್ರವಾದಿ (ﷺ) ರವರನ್ನಾಗಿದೆ.
ಯಾರದೋ ಮೇಲಿನ ದ್ವೇಷಕ್ಕೆ  ಇಸ್ಲಾಮನ್ನೂ ,ಪ್ರವಾದಿ   (ﷺ)      ರವರನ್ನು ನಿಂದಿಸುವಾಗ ಆ ಪ್ರವಾದಿಯ ಕುರಿತು ಅರಿಯುವ ಪ್ರಯತ್ನ ನಡೆಸಿದರೆ ಖಂಡಿತವಾಗಿಯೂ ನಿಮ್ಮಿಂದ ವಿಮರ್ಷಿಸಲೋ, ವಿರೋಧಿಸಲೋ ಖಂಡಿತವಾಗಿಯೂ  ಸಾಧ್ಯವಾಗದು.

*ಸ್ನೇಹಜೀವಿ ಅಡ್ಕ*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...