Skip to main content

ಹಲ್ಲುಜ್ಜುವಿಕೆಯ ಕುರಿತು ಪ್ರವಾದಿ ಸ.ಅ ರವರ ಹತ್ತು ನುಡಿಮುತ್ತುಗಳು..... ರಿಯಾಝ್ ಮಲಾರ್

ಮಿಸ್ವಾಕ್'ನ(ಹಲ್ಲುಜ್ಜುವುದು) ಬಗ್ಗೆ ಪುಣ್ಯ ಪ್ರವಾದಿ(ﷺ) ರವರ 10 ನುಡಿ ಮುತ್ತುಗಳು.

1. ಹಲ್ಲುಜ್ಜಿ  2 ರಕಾತ್ ನಮಾಝ್ ನಿರ್ವಹಿಸುವುದು  ಹಲ್ಲುಜ್ಜದೆ 70 ರಕಾತ್ ನಮಾಝ್ ನಿರ್ವಹಿಸುವುದಕ್ಕೆ ಸಮಾನ.

(ಅತ್ತರ್'ಗಿಬ್ ವತ್ತರ್'ಹೀಬ್, ಸಂಪುಟ-1, ಪುಟ-102, ಹದೀಸ್-18)

2. ಹಲ್ಲನ್ನು ಉಜ್ಜಿ  ನಮಾಝ್ ನಿರ್ವಹಿಸುವುದು, ಮಿಸ್ವಾಕ್ ಮಾಡದೇನೇ... 70 ಬಾರಿ ನಮಾಜ್ ಮಾಡುದಕ್ಕಿಂತ ಹೆಚ್ಚು ಪುಣ್ಯದಾಯಕವಾಗಿದೆ.

(ಸು'ಅಬ್ ಅಲ್ ಇಮಾನ್ ಸಂಪುಟ-3, ಪುಟ-26, ಹದೀಸ್-2774)

3.ಈ 4 ಪುಣ್ಯ ಕ್ರಿಯೆಗಳು ಪುಣ್ಯ ಪ್ರವಾದಿ (ﷺ)'ರವರ ಚರ್ಯೆಯಾಗಿದೆ.

(i) ಅತ್ತರ್ (ಸುಗಂಧ ದ್ರವ್ಯ) ಲೇಪಿಸುವುದು

(ii) ನಿಕಾಹ್ ನಿರ್ವಹಿಸುವುದು.

(iii) ಮಿಸ್ವಾಕ್ ಉಪಯೋಗಿಸುವುದು (ಹಲ್ಲುಜ್ಜುವುದು)

(iv) ಲಜ್ಜೆಯನ್ನು ಹೊಂದಿರುವುದು.

(ಮುಸ್ನದ್ ಇಮಾಮ್ ಅಹ್ಮದ್ ಬಿನ್ ಹಂಬಲ್, ಸಂಪುಟ-9, ಪುಟ-147, ಹದೀಸ್ 2364)

4. ಮಿಸ್ವಾಕನ್ನು ಉಪಯೋಗಿಸಿರಿ (ಹಲ್ಲುಜ್ಜಿರಿ) ! ಹಳದಿ ಹಲ್ಲುಗಳಿಂದ ನನ್ನನ್ನು ಸಮೀಪಿಸದಿರಿ.

(ಜಾಮಿ ಉಲ್ ಜವಾಮಿ, ಸಂಪುಟ-1,  ಪುಟ-389, ಹದೀಸ್-2875)

5. ಮಿಸ್ವಾಕ್ ನಿಂದ (ಹಲ್ಲುಜ್ಜುವುದುರಿಂದ) ಮರಣವನ್ನು ಬಿಟ್ಟು ಎಲ್ಲಾ ರೋಗಕ್ಕೆ ಶಮನವಿದೆ.

(ಜಾಮಿ ಉಸ್-ಸಘೀರ್, ಪುಟ-297, ಹದೀಸ್-4840)

6.ಪ್ರವಾದಿ (ﷺ) ಹೇಳಿದರು ನನ್ನ ಸಮುದಾಯಕ್ಕೆ ಕಷ್ಟವಾಗದಿರುತ್ತಿದ್ದರೆ ಪ್ರತಿಯೊಂದು ನಮಾಝ್'ಗಾಗಿ ಹಲ್ಲುಜ್ಜುವುದನ್ನು ಕಡ್ಡಾಯವಾಗಿ ಆದೇಶಿಸುತ್ತಿದ್ದೆ.

(ಸಹೀಹ್ ಅಲ್ ಬುಖಾರಿ, ಸಂಪುಟ-2, ಗ್ರಂಥ್-13, ಹದೀಸ್-12)

7. ಹಲ್ಲುಜ್ಜುವುದು ರೂಡಿಮಾಡಿರಿ,  ಏಕೆಂದರೆ ಇದು ನಿಮ್ಮ ಬಾಯಿಯನ್ನು ಶುಚಿಯಾಗಿರಿಸುತ್ತದೆ. ಮತ್ತು ಅಲ್ಲಾಹನ ಕರುಣೆಯನ್ನು ಪಡೆಯಲು ಇದು ಸಹಕಾರಿಯಾಗುವುದು.

(ಮುಸ್ನದ್ ಇಮಾಮ್ ಅಹ್ಮದ್ ಬಿನ್ ಹಂಬಲ್, ಸಂಪುಟ-7, ಪುಟ-437, ಹದೀಸ್-5869)

8. ವುಝು ಇಮಾನಿನ ಅರ್ಧ ಭಾಗವಾಗಿದೆ. ಮತ್ತು ಹಲ್ಲುಜ್ಜುವುದು(ಮಿಸ್ವಾಕ್) ವುಝುವಿನ ಅರ್ಧ ಭಾಗವಾಗಿದೆ.

(ಮುಸನ್ನಫ್ ಇಬ್ನ್ ಅಭೀ ಶೈಬಾ- ಸಂಪುಟ-1, ಪುಟ-197, ಹದೀಸ್-22)

9. ಒಂದು ವ್ಯಕ್ತಿಯು ಮಿಸ್ವಾಕನ್ನು ಉಪಯೋಗಿಸಿ (ಹಲ್ಲುಜ್ಜಿ ) ನಮಾಜ್ ನಿರ್ವಹಿಸಿದಲ್ಲಿ ಮಲಾಯಿಕ್(ದೇವದೂತರು) ಅವರ ಪಠಣವನ್ನು ಆಲಿಸಲು ಅವರ ಹಿಂದೆ ನಿಲ್ಲುವರು. ಮತ್ತೆ ಅವರು(ದೇವದೂತರು) ಅವನ ಹತ್ತಿರಕ್ಕೆ ಬಂದು ಆತನ ಬಾಯಿಗೆ ಅವರ ಬಾಯಿಯನ್ನಿಡುವರು.

(ಅಲ್- ಬಹರ್-ಉಝ್-ಜ಼ಖರ್, ಸಂಪುಟ-2, ಪುಟ-214, ಹದೀಸ್-603)

10. ಯಾರಾದರೂ ಜುಮಾ ದಿವಸದಂದು ಮಿಸ್ವಾಕ್ ಉಪಯೋಗಿಸಿ (ಹಲ್ಲುಜ್ಜಿ ), ಅತ್ತರ್(ಸುಗಂಧ ದ್ರವ್ಯ)ವನ್ನು ಲೇಪಿಸಿ, ಉತ್ತಮ ವಸ್ತ್ರವನ್ನು ಧರಿಸಿ ಮಸೀದಿಗೆ ಹೊರಟು, ನಮಾಝ್ ನಿರ್ವಹಿಸಿ ಇಮಾಮ್ ಆಗಮಿಸಿದ ಬಳಿಕ(ಕುತುಬಾದ ಸಮಯದಲ್ಲಿ) ನಮಾಝ್ ಮುಗಿಯುವವರೆಗೂ ನಿಶಬ್ದವಾಗಿ ಕುಳಿತಲ್ಲಿ ಅಲ್ಲಾಹನು ಆತನ ಆ ವಾರದ  ಪಾಪವನ್ನು ಮನ್ನಿಸುವನು.

(ಮುಸ್ನದ್ ಇಮಾಮ್  ಅಹ್ಮದ್ ಬಿನ್ ಹಂಬಲ್, ಸಂಪುಟ-4, ಪುಟ-162, ಹದೀಸ್-117)

*ಹಲ್ಲುಜ್ಜುವ ಮುಂಚೆ:*
ನಿಶ್ಚಯ ಕರ್ಮಗಳೆಲ್ಲವೂ ನಿಯ್ಯತ್(ಸಂಕಲ್ಪ)'ಗಳಿಂದ ಮಾತ್ರ ಸ್ವಿಕೃತವಾಗುವುವು" ಎಂಬ ಪ್ರವಾದಿ(ﷺ)ರವರ ವಚನವು ಇದಕ್ಕೂ ಅನ್ವಯಿಸುವುದು.. ಆದುದರಿಂದ ಹಲ್ಲುಜ್ಜುವುದರ ಮೊದಲು ಉತ್ತಮ ನಿಯ್ಯತ್ ಮಾಡದಿದ್ದರೆ ಮೇಲೆ ತಿಳಿಸಲಾದ ಪ್ರತಿಫಲ ಲಭಿಸುವುದಿಲ್ಲ. ಪ್ರವಾದಿ (ﷺ)ರವರ ಚರ್ಯೆಯ(ಸುನ್ನತ್) ಪ್ರತಿಫಲ ಲಬಿಸಬೇಕಾದರೆ ಈ ರೀತಿಯ ನಿಯ್ಯತ್ ಮಾಡಿರಿ. ನೀವು ಪವಿತ್ರ ಖುರಾನ್ ಓದಲು ಹಲ್ಲುಜ್ಜಲು ಮುಂದಾದಲ್ಲಿ, *"ನಾನು ಅಲ್ಲಾಹನ ಪವಿತ್ರ ಗ್ರಂಥವಾದ ಖುರ್'ಆನ್ ಓದಲು ನನ್ನ ಬಾಯಿಯನ್ನು ಹಲ್ಲುಜ್ಜಿ ಸ್ವಚ್ಚಗೊಳಿಸುತ್ತೇನೆ."* ಎಂದೂ, ಅಲ್ಲಾಹನ ದ್ಸಿಕ್ರ್ ಹೇಳಲು ಮುಂದಾದಲ್ಲಿ *"ಅಲ್ಲಾಹನ ದ್ಸಿಕ್ರ್ ಹೇಳಲು ಬಾಯಿಯನ್ನು ಹಲ್ಲುಜ್ಜಿ ಸ್ವಚ್ಚಗೊಳಿಸುತ್ತೇನೆ."* ಎಂದು ನಿಯ್ಯಾತ್ ಮಾಡಿ ಹೀಗೆ ನೀವು ಯಾವ ಉದ್ದೇಶಕ್ಕೆ ಹಲ್ಲಜ್ಜುತ್ತೀರೋ ಆ ಉದ್ದೇಶವನ್ನು ಮನಸ್ಸಿನಲ್ಲಿ ಸಂಕಲ್ಪಿಸಬೇಕಾಗಿದೆ.

*ಈ ಸಂದೇಶವನ್ನು ಎಲ್ಲರಿಗೂ ರವಾನಿಸಿರಿ. ನೀವು ರವಾನಿಸಿದ ಈ ಸಂದೇಶದಿಂದ ಯಾರಾದರೂ ಮೇಲೆ ತಿಳಿಸಲಾದ ಪ್ರವಾದಿ (ﷺ)ರವರ ಚರ್ಯೆಯನ್ನು(ಸುನ್ನತ್ತ್) ಜೀವನದಲ್ಲಿ ಅಳವಡಿಸಿದ್ದಲ್ಲಿ ಅದರ ಪ್ರತಿಫಲ ನಿಮಗೂ, ಇದನ್ನು ಬರೆದ ಪಾಪಿಯಾದ ನನಗೂ ಲಭಿಸಿವುದು.*

ಅಲ್ಲಾಹನು ನಮಗೆಲ್ಲರಿಗೂ ಪ್ರವಾದಿ (ﷺ)ರವರ ಚರ್ಯೆಯನ್ನು ಕಲಿಯಲು ಮತ್ತು ಅದನ್ನು ಜೀವನದಲ್ಲಿ ಅಳವಡಿಸಲು ಭಾಗ್ಯವನ್ನು ಮತ್ತು ಶಕ್ತಿಯನ್ನು ನೀಡಲಿ.. ಆಮೀನ್.

✍ ರಿಯಾಝ್ ಮಲಾರ್

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...