Skip to main content

ಇಂಗು ತಿಂದ ಮಂಗನಂತಾದ ಸೊಳಪಿ

ಬೆತ್ತ ಕೊಟ್ಟು ಪೆಟ್ಟು ತಿನ್ನುತ್ತಿರುವ ಸಳಪಿ!
""""""'"''"'""""""""""""""""""""

1. ಪ್ರವಾದಿ(ಸ)ರವರು ಉಹುದ್ ಶುಹದಾಗಳ ಕಬರ್ ಝಿಯಾರತ್ ಮಾಡುವಾಗ ಊರಿಡೀ ಪ್ರಚಾರ ಮಾಡಿ ಹೆಂಗಸರು, ಗಂಡಸರು, ಮಕ್ಕಳು ಎಲ್ಲರನ್ನೂ ಒಟ್ಟುಗೂಡಿಸಿ ಸಾಮೂಹಿಕವಾಗಿ ಝಿಯಾರತ್ ಮಾಡುತ್ತಿದ್ದರೇ?

🔴ಓ ಕೆ ಹಾಗೆ ಪ್ರಚಾರ ಮಾಡಬಾರದು ,
ನೀವೆಲ್ಲಾ ಒಬ್ಬಬ್ಬರಾಗಿ ಮಾತ್ರ ಝಿಯಾರತ್ ಮಾಡಬೇಕು,ಹಾಗೆ ಪ್ರಚಾರ ಮಾಡಿ ಝಿಯಾರತ್ ಮಾಡಿದರೆ ನೀನು ಇಸ್ಲಾಮಿನ ಚೌಕಟ್ಟಿನಿಂದ ಹೊರಗೆ ಎಂದು ನೆಬಿ (ಸ) ಹೇಳಿದ್ದಾರಾ❓
ಹಾಗೆ ನೆಬಿಯವರು ಹೇಳದೆ ತನಕ ಅದು ನಿಷಿದ್ದವೆಂದು ಫತ್ವ ಕೊಡಲು ನಿನಗೆ ಯಾರು ಅಧಿಕಾರ ಕೊಟ್ಡದ್ದು❓
--------------------------

2. ಉಹುದ್ ಶುಹದಾಗಳ ಕಬರ್ ಝಿಯಾರತ್ತಿಗೆ ಪ್ರವಾದಿ(ಸ)ರವರು ಇಟ್ಟ ಹೆಸರು ಯಾವುದು?

🔴 ಹೆಸರು ಇಟ್ಟರೂ ಇಲ್ಲದಿದ್ದರೂ ಮುತ್ತು ನೆಬಿ ಝಿಯಾರತ್ ಸುನ್ನತ್ ಮಾಡಿರುವಾಗ ಆ ಝಿಯಾರತ್ ಗೆ ನೆಬಿ ವಿರೋಧಿಸದ ಯಾವುದಾದರೂ ಹೆಸರು ಇಟ್ಟರೆ ಅದು ಹರಾಂ ಎಂಬುದಕ್ಕೆ ಪುರಾವೆ ಇದೆಯಾ❓
ಹಾಗೆ ನೋಡಿದರೆ ನೀವು ನಿಮ್ಮ ಸಮ್ಮೇಳನಗಳಿಗೆ 'ದಿ ಲೈಟ್' ಎಂದು ಹೆಸರಿಟ್ಟಿದ್ದೀರಿ ತಾನೇ ಹಾಗೆ ಒಂದು ಸಮ್ಮೇಳನ ನೆಬಿ ಮಾಡಿದ್ದಾರಾ❓
ಅದಕ್ಕೆ 'ದಿ ಲೈಟ್ ' ಎಂದು ಹೆಸರಿಟ್ಟಿದ್ದಾರಾ❓
-------------------------

3. ಸ್ವಲಾತ್ ಹರಕೆ, ಉರೂಸ್ ಹರಕೆ, ಮಾಲಿದಾ ಹರಕೆ, ಭಂಡಾರದ ಹರಕೆ ಇತ್ಯಾದಿಗಳಲ್ಲಿ ಯಾವ ಹರಕೆಯನ್ನು ಸಂದಾಯ ಮಾಡಲು ಪ್ರವಾದಿ(ಸ)ರವರು ಉಹುದ್ ಶುಹದಾಗಳ ಕಬರ್ ಝಿಯಾರತ್ ಮಾಡಿದ್ದರು?

🔴ನೆಬಿ (ಸ) ರವರು ಮಾಲಿದಾ ನೇರ್ಚೆ ಮಾಡಿದ್ದಾರಾ, ಸಲಾತ್ ನೇರ್ಚೆ ಮಾಡಿದ್ದಾರಾ? ಎಂದು ಕೇಳುವ ಸಳಪಿಯಲ್ಲಿ ನಾನು ಉಲ್ಟಾ ಕೇಳುತ್ತೇನೆ ನೀವು ಎರಡು ವರ್ಷಕ್ಕೊಮ್ಮೆ ಮಾಡುವ ಸ್ಟೇಟ್ ಸಮ್ಮೇಳನ, ಬಲೂನ್ ಊದುವ ಸ್ಪರ್ಧೆ,ರೆಕ್ಸೋನಾ ಸೋಪ್ ಬಹುಮಾನ ಇದೆಲ್ಲವೂ ನೆಬಿಯವರ ಕಾಲದಲ್ಲಿ ನೆಬಿ ಮಾಡಿದ್ದಾರಾ❓
ಮತ್ತೆಲ್ಲಿಂದ ನಿಮಗೆ ಅದೆಲ್ಲಾ ಅನುವದನೀಯವಾಯಿತು❓
ನೆಬಿ ಮಾಡದ ಕಾರ್ಯಗಳನ್ನು ನಿಮಗೆ ಮಾಡಬಹುದಾ❓
ಹಾಗಾದರೆ ನೆಬಿ ಮಾಡಿದ ಸ್ಟೇಟ್ ಸಮ್ಮೇಳನ ಯಾವುದು❓
ನೀವು ಸ್ತ್ರೀಯರಿಗಾಗಿ ರಚಿಸಿದ ಸೂರಾ ಸಳಪಿ ಕೌನ್ಸಿಲ್ ನಂತೆ ಒಂದು ಕೌನ್ಸಿಲ್ ಮಹಿಳೆಯರಿಗಾಗಿ ನೆಬಿ ರಚಿಸಿದ್ದಾರಾ❓
ಅದರ ಅಧ್ಯಕ್ಷೆ ಯಾರು ಆಯಿಶಾ ಬೀವಿಯಾ ಅಥವಾ ಫಾತಿಮಾ ಬೀವಿಯಾ❓
ಹಾಗೆ ಮಹಿಳೆಯರಿಗಾಗಿ ಒಂದು ಸಂಘಟನೆ ನೆಬಿ ಮಾಡದೆ ಇರುವಾಗ ನೀವು ಯಾಕೆ ನೆಬಿ ಮಾಡದ ಒಂದು ಕಾರ್ಯವನ್ನು ಮಾಡುವುದು❓
---------------------------

4. ಉಹುದ್ ಶುಹದಾಗಳ ಕಬರ್ ಝಿಯಾರತ್ ಮಾಡುವಾಗ ಸಹಾಬಾಗಳು ಯಾವ ಡೋಲನ್ನು ಬಾರಿಸಿದ್ದರು? ಯಾವ ವಾದ್ಯವನ್ನು ಊದಿದ್ದರು? ಅಲ್ಲಿಗೆ ಬಂದ ಆನೆ ಆಫ್ರಿಕದ್ದೇ? ಅಥವಾ ಭಾರತದ್ದೇ?

🔴ಡೋಲು ವಾದ್ಯ ಬಾರಿಸಿದ್ದು ಸಲಪಿ ಫೆಸ್ಟ್ ನಲ್ಲಿ ಎಂಬುದನ್ನು ಮೆರೆಯಬೇಡ! ಹಾಗೆ ಬ್ಯಾಂಡ್, ಡೋಲು, ವಾದ್ಯ ಬಾರಿಸಿ ಮಾಡಿದ ನಿಮ್ಮ
'ಸಲಪಿ ಫೆಸ್ಟ್' ಗೆ ಯಾರು ಆದಾರ❓
ಇಬ್ಲೀಸಾ❓
ಮುತ್ತು ನೆಬಿ ಬ್ಯಾಂಡ್ ವಾದ್ಯ ವನ್ನು ವಿರೋಧಿಸಿದ್ದಾರೆ.
ಸುನ್ನಿಗಳಾದ ನಾವೂ ವಿರೋಧಿಸುತ್ತೇವೆ.
ಸಲಪಿಗಳ ವಿಷಯ ಗೊತ್ತಿಲ್ಲ...
ಜಾಹಿಲ್ ಗಳಿಗೆ ಹೇಗೆ ಬೇಕಾದರೂ ವೇಷ ಕಟ್ಟಬಹುದಲ್ಲವೇ❓
---------------------------

5. ಕತ್ತಂ, ಫಾತಿಹಾ, ಯಾಸೀನ್ ಮೊದಲಾದವುಗಳನ್ನು ಪ್ರವಾದಿ(ಸ)ರವರು ಯಥೇಷ್ಟವಾಗಿ ಓದಿದ್ದಾರಲ್ಲವೇ? ಅವುಗಳಲ್ಲಿ ಅವರು ಯಾವುದನ್ನು ಎಷ್ಟು ಕಾಸಿಗೆ ಮಾರಾಟ ಮಾಡಿದರು?

🔴ಸಹಾಬಿಗಳು ಫಾತಿಹಾ ಮಂತ್ರಿಸಿ ಅದಕ್ಕೆ ಬೇಕಾಗಿ 40 ಆಡು ಪಡೆದು ನೆಬಿಯವರಿಗೆ ಒಪ್ಪಿಸಿದ್ದು ನೆಬಿಯವರು ಅದನ್ನು ಅಂಗೀಕರಿಸಿದ್ದು ಹದೀಸ್ ನಲ್ಲಿ ಇದೆ.
ಜಾಹಿಲ್ ಸಳಪಿ ಗೆ ಅದು ಗೊತ್ತಿಲ್ಲದ್ದಕ್ಕೆ ನಾವು ಜವಾಬ್ದಾರರಲ್ಲ.
-----------------------------

6. ಉಹುದ್ ಶುಹದಾಗಳ ಕಬರ್‌ಗಳ ಬಳಿ ಪ್ರವಾದಿ(ಸ)ರವರು ಪ್ರಸಾದವಾಗಿ ಹಂಚಿದ ಎಣ್ಣೆ, ಬೂದಿ ಯಾವುದು?

🔴ಸೂರತುಲ್ ಇಸ್ರಾಅ್ ನ 'ಬಾರಕ್'ನಾ ಹವ್'ಲಹೂ'ಎಂಬ ಆಯತ್'ನ ವ್ಯಾಖ್ಯಾನ ನೋಡು ಅಲ್ಲಿ ಯಾವುದಕ್ಕೆಲ್ಲಾ ಬರಕತ್ ಇದೆ ಎಂದು ವಿವರಿಸಲಾಗಿದೆ.
ಏನೂ ಕಲಿಯದೆ ಅಂಡೆ ಪಿರ್ಕಿ ಪ್ರಶ್ನೆ ಕೇಳಿ ನಾನೊಬ್ಬ ಸೊಬಗ ಅಂತ ಭಾವಿಸಬೇಡಿರಿ
ಪರಿಹಾಸ್ಯ ನಿಲ್ಲಿಸಿ ಕಲಿಯಲು ಪ್ರಯತ್ನಿಸು.
----------------------------

7. ಉಹುದ್ ಶುಹದಾಗಳ ಕಬರ್‌ಗಳ ಬಳಿ ಅನ್ನದಾನ ಮಾಡಲು ಎಷ್ಟು ಒಂಟೆಗಳನ್ನು ಕಡಿಯಲಾಯಿತು? ಎಷ್ಟು ಜನರು ಅಲ್ಲಿ ಅನ್ನದಾನವನ್ನು ಸ್ವೀಕರಿಸಿದರು?

🔴 ಇಸ್ಲಾಮಿನಲ್ಲಿ ಅನ್ನದಾನಕ್ಕೆ ಅಪಾರ ಪುಣ್ಯವಿದೆ. ಅದರಲ್ಲಿ ಒಂಟೆಯ ಲೆಕ್ಕ ಹೇಳುವ ಅಗತ್ಯವಿಲ್ಲ ಅನ್ನದಾನ ಸ್ವೀಕರಿಸುವವರ ಸಂಖ್ಯೆಯೂ ಮುಖ್ಯವಲ್ಲ.
ಅನ್ನದಾನ ಮುಖ್ಯ.
ನಿಮ್ಮ ಕಾನ್ಪರೆನ್ಸ್ ಗಳಲ್ಲಿ ದೊಡ್ಡ ದೊಡ್ಡ ಅಂಡೆಯಲ್ಲೇ ಅನ್ನ ಬೇಯಿಸಿ ಬಡಿಸುತ್ತೀರಿ
ಮುತ್ತು ನೆಬಿ ಹಾಗೆ ಒಂದು ಕಾನ್ಫೆರೆನ್ಸ್ ಕರೆದು ಅನ್ನದಾನ ಮಾಡಿದ ಚರಿತ್ರೆ ಇದೆಯಾ ❓
ನೆಬಿ (ಸ) ಮಾಡದ ಒಂದು ಕಾರ್ಯ ನೀವು ಹೇಗೆ ಮಾಡುವುದು❓
ನಿಮಗೆ ಏನು ಬೇಕಾದರೂ ಮಾಡಬಹುದು ಸುನ್ನಿಗಳು ಮಾಡುವಾಗ ಮಾತ್ರ ಹದೀಸ್ ಉಂಟಾ, ಆಯತ್ ಉಂಟಾ, ನೆಬಿ ಮಾಡಿದ್ದಾರಾ ಎಂಬ ರೆಡಿಮೆಡ್ ಪ್ರಶ್ನೆ ಗಳೊಂದಿಗೆ ಬರುತ್ತೀರಿ❓
------------------------------

8. ಪ್ರವಾದಿ(ಸ)ರವರು ಉಹುದ್ ಶುಹದಾಗಳ ಕಬರ್ ಝಿಯಾರತ್ ಮಾಡುವಾಗ ಉಹುದ್ ಪರ್ವತಕ್ಕೆ ಪೂರ್ತಿಯಾಗಿ ಚಪ್ಪರ ಹಾಕಲಾಗುತ್ತಿತ್ತೇ? ಮದೀನದಿಂದ ಉಹುದ್ ತನಕ ರಸ್ತೆಯನ್ನು ಹಸಿರು ತೋರಣಗಳಿಂದ ಅಲಂಕರಿಸಲಾಗುತ್ತಿತ್ತೇ? ದೀಪಗಳಿಂದ ಅಲಂಕರಿಸಲಾಗುತ್ತಿತ್ತೇ?

🔴ಪುತ್ತೂರಿಗೆ ಹುಸೈನ್ ಸಳಪಿ ಬಂದಾಗ 02 ಲಕ್ಷದ ಚಪ್ಪರ ಹಾಕಿದ್ದೀರಿ.
ಸ್ಟೇಜ್ ದೀಪಾಲಂಕೃತವಾಗಿತ್ತು
ಇದೆಲ್ಲಾ ನೆಬಿ ಮಾಡಿದ್ದಾರಾ❓

ನೆಬಿ(ಸ) ಹಾಕಿದ ಚಪ್ಪರ ಯಾವುದು❓
ಅದಕ್ಕೆ ಎಷ್ಟು ಖರ್ಚಾಗಿದೆ❓

ನಿಮಗೆ ಏನು ಎಷ್ಟು ಲಕ್ಷದ ಚಪ್ಪರ ಕೂಡಾ ಹಾಕಬಹುದು ಅದಕ್ಕೆ ಆಯತ್ ಹದೀಸ್ ನ ಅಗತ್ಯ ಇಲ್ಲ.
ಸುನ್ನಿಗಳು ಹಾಕುವ ಚಪ್ಪರ ಲೈಟ್, ದೀಪ ಎಲ್ಲದಕ್ಕೂ ಹದೀಸ್ ಬೇಕು ಇದು ಯಾವ ನ್ಯಾಯ❓
----------------------------

9. ಉಹುದ್ ಶುಹದಾಗಳ ಕಬರ್ ಝಿಯಾರತ್ ಮಾಡುವಾಗ ಸಹಾಬಾಗಳ ಪೈಕಿ ಯಾರಾದರೂ ಕಾಣಿಕೆ ನೀಡುತ್ತಿದ್ದರೇ? ಕಾಣಿಕೆ ಸ್ವೀಕರಿಸಲು ಪ್ರವಾದಿ(ಸ)ರವರು ಯಾರನ್ನು ನೇಮಿಸಿದ್ದರು? ಕಬರ್‌ಗಳ ಬಳಿ ಕಾಣಿಕೆ ಹುಂಡಿಯನ್ನು ಸ್ಥಾಪಿಸಲಾಗಿತ್ತೇ?

🔴ಕಾಣಿಕೆ ಅಂದರೆ ಹದಿಯಾ ನೆಬಿ (ಸ) ಹದಿಯಾ ಸ್ವೀಕರಿಸಿದ ಅದೆಷ್ಟೋ ಹದೀಸ್ ಇದೆ.
ಶಾರ್ಜಾ ಮೌಲವಿಯ ಒಂದು ಪ್ರಭಾಷಣಕ್ಜೆ ಬರೋಬ್ಬರಿ 50 ಸಾವಿರ ಪಡೆಯುತ್ತಾರೆಂದು ಅನಸ್ ಮೌಲವಿ.
ಅದು ಸರಿಯಾ❓
ನಿಮಗೆ ಕಾಣಿಕೆ ಹಲಾಲ್ ಸುನ್ನಿಗಳಿಗೆ ಹರಾಂ ❓ ಇದು ಯಾವ ನ್ಯಾಯ❓
--------------------------

10. ಉಹುದ್ ಶುಹದಾಗಳ ಈ ಕಬರ್ ಝಿಯಾರತ್ ಎಷ್ಟು ದಿನಗಳ ತನಕ ನಡೆಯುತ್ತಿತ್ತು?

🔴ಝಿಯಾರತ್ ಗೆ ಇಷ್ಟು ದಿನಗಳು ಎಂದು ನಿರ್ಣಯಿಸಬಾರದೆಂದು ರಸೂಲುಲ್ಲಾ ಹೇಳಿದ್ದಾರಾ❓

ನೀವು ಝಿಯಾರತ್ ಮಾಡಿ ಇಷ್ಟು ದಿನ ಎಂದು ನಿಶ್ಚಯಿಸಬೇಡಿ ಎಂದು ನೆಬಿ (ಸ) ಹೇಳಿದ ಹದೀಸ್ ಇದೆಯಾ❓

ಹಾಗೆ ನೋಡಿದರೆ ನೀವು ವರ್ಷದಲ್ಲಿ ಮೂರು ದಿನ ಎಕ್ಝಬ್ಯೂಷನ್, ನಾಲ್ಕು ದಿನ ಸಮ್ಮೇಳನ ಅಂತ ಹಲವಾರು ಕಾರ್ಯಗಳನ್ನು ಮಾಡುತ್ತಿರಿ
ಅದಕ್ಕೆಲ್ಲಾ ಇಸ್ಲಾಮಿನಲ್ಲಿ ಪುರಾವೆ ಇದೆ ಎಂದಾದರೆ ಸುನ್ನಿಗಳು ನಡೆಸುವ ಝಿಯರತ್ ನ ದಿವಸಗಳಿಗೂ ಪುರಾವೆ ಇದೆ. ಓಕೆ
------------—------—--
ಈ ಮೇಲಿನ ಹತ್ತು ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಕಂಡು ಹಿಡಿಯಲು ಸಾಧ್ಯವಾಗುವುದಾದರೆ ಪ್ರವಾದಿ(ಸ)ರವರು ಮಾಡಿದ ಉಹುದ್ ಶುಹದಾಗಳ ಕಬರ್ ಝಿಯಾರತ್  ಸುನ್ನಿಗಳು ಕಬರ್ ಝಿಯಾರತ್ ಆಗಿದೆ ಎಂದು ಎದೆ ತಟ್ಟಿ ಹೇಳಬಹುದಾಗಿದೆ.

🔴ಹೌದು ಎದೆ ತಟ್ಟಿ ಹೇಳು ಸುನ್ನಿಗಳು ಮಾಡುವ ಕಬರ್ ಝಿಯಾರತ್ ಮಾತ್ರವಲ್ಲ ಮೌಲೂದ್,ಕುತುಬಿಯ್ಯತ್ ರಾತೀಬ್, ಆಂಡ್ ನೇರ್ಚೆ, ಮಾಲಿದಾ, ಸಂದಲ್,ಎಲ್ಲದಕ್ಕೂ ಸ್ಪಷ್ಟವಾದ ಪುರಾವೆ ಇದೆ.ಕಾರಣ ಅದನ್ನು ನಿಯಂತ್ರಿಸುತ್ತಿರುವುದು ಪ್ರವಾದಿಗಳ ಉತ್ತರಾಧಿಕಾರಿಗಳಾದ ಉಲಮಾಗಳಾಗಿದ್ದಾರೆ. ಅಲ್ಲದೆ ಮೋಡರ್ನ್ ಅರಬಿಕ್ ಮತ್ತು ಪುಸ್ತಕ ನೋಡಿ ಅರೆಬರೆ ಕಲಿತ ಜಾಹಿಲ್ ಪ್ಯಾಂಟ್'ದಾರಿ ಮೌಲವಿಗಳಲ್ಲ ಓಕೆ❓
ಬೇಕಾದರೆ ಇನ್ನೊಮ್ಮೆ ಬೇಟಿಯಾಗುವ ಬಾಯ್ ಬಾಯ್..✋🏻✋🏻

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...