ಜೀವಂತ ಮರ
*﷽*
*1450 ಕ್ಕಿಂತ ಹೆಚ್ಚು ಕಾಲದಿಂದ ಜೀವಂತವಿರುವ ವಿಶಾಲ ಮರ. ಪ್ರವಾದಿ ಮುಹಮ್ಮದ್ (ಸ ಅ) ರವರಿಗೆ ನೆರಳು ನೀಡಿದ ಮರವಿದು.* ಸುಡು ಬಿಸಿಲಿನ ಮರುಭೂಲಿಯಲ್ಲಿ ಸುತ್ತಮುತ್ತ ಒಂದು ಮರವೂ ಇಲ್ಲ. ನೀರಿಲ್ಲದ ಜಾಗದಲ್ಲಿ 1450 ವರ್ಷಗಳಿಂದ ಈ ಮರ ಜೀವಂತವಾಗಿದೆ. ಇದಕ್ಕೆ ಜೀವಂತ ಸ್ವಹಾಬಿ ಎಂಬ ಹೆಸರಿನಿಂದಲು ಕರೆಯುತ್ತಾರೆ. ಸ್ವಹಾಬಿಯ ಅರ್ಥ ಪ್ರವಾದಿಯನ್ನು ಭೇಟಿಯಾಗಿದ್ದ ಅನುಯಾಯಿ.
*ಈ ಮರದ ವಿಶೇಷತೆ ಇಲ್ಲಿದೆ.*
ಒಮ್ಮೆ ಪ್ರವಾದಿಯವರು 9 ರಿಂದ 12 ವರ್ಷದ ವಯಸ್ಸಿನವರಾಗಿದ್ದಾಗ ಮಕ್ಕಾದಿಂದ ಸಿರಿಯಾಕ್ಕೆ ಹೋಗುತ್ತಿದ್ದ ವ್ಯಾಪಾರಿಗಳ ತಂಡದಲ್ಲಿ ಹೋಗುತ್ತಿದ್ದರು. ವಿಶೇಷತೆಯೇನೆಂದರೆ ಸುಡು ಬಿಸಿಲಿನ ಸಮಯದಲ್ಲಿ ಅವರ ತಂಡ ಹೋಗುತ್ತಿದ್ದ ಎಲ್ಲ ಕಡೆ ಅವರಿಗೆ ಒಂದು ಮೋಡ ನೆರಳಿಗಾಗಿ ಹಿಂದೆ ಹಿಂದೆ ಬರುತ್ತಿತ್ತು. ಅವರು ನಿಂತಲ್ಲಿ ನಿಲ್ಲುತ್ತಿದ್ದ ಆ ಮೋಡ ಅವರ ಪ್ರಯಾಣ ಮುಗಿಯುವವರೆಗೆ ಅವರಿಗೆ ನೆರಳಾಗಿ ಬರುತ್ತಿತ್ತು. ನಂತರ ಸಿರಿಯಾದ ಮತ್ತು ಮಕ್ಕಾ ನಗರದ ಮಧ್ಯ ಜೋರ್ಡಾನ್ ನ ಒಂದು ಪ್ರದೇಶದಲ್ಲಿ ಮರವನ್ನು ಕಂಡ ಅವರ ತಂಡ ಅದರ ಕೆಳಗೆ ಕುಳಿತಾಗ ಆ ಮರ ಬಾಲಕ ಮುಹಮ್ಮದ್ ( ಸ ಅ) ರವರಿಗೆ ನೆರಳು ನೀಡುವ ಉದ್ದೇಶದಿಂದ ತನ್ನ ಟೊಂಗೆಗಳನ್ನು ಕೆಳಗೆ ಚಾಚಿತು. ಈ ವಿಸ್ಮಯಗಳನ್ನೆಲ್ಲ ನೋಡುತ್ತಿದ್ದ ಓರ್ವ ಜೋರ್ಡಾನಿನ ಕ್ರಿಶ್ಚಿಯನ್ ಪಾದ್ರಿ ಬಾಹಿರಾ ಎನ್ನುವವರು ಆಶ್ಚರ್ಯಚಕಿತರಾಗಿ ತಂಡದಲ್ಲಿ ಯಾವುದೋ ಪವಾಡ ಶಕ್ತಿ ಇದೆ ಎಂದು ಮನಗಂಡು ತಂಡದಲ್ಲಿದ್ದ ಎಲ್ಲರನ್ನು ಒಬ್ಬೊಬ್ಬರಾಗಿ ಪ್ರಶ್ನಿಸತೊಡಗಿದರು.ಕೊನೆಗೆ ಉಳಿದ ಬಾಲಕನ ಬಗ್ಗೆ ವಿಚಾರಿಸಿದಾಗ ಅವರ ಬಗ್ಗೆ ಎಲ್ಲವನ್ನು ವಿಚಾರಿಸಿ ಪಾದ್ರಿಯವರ ಪೂರ್ವಜರು ಜೀವಿತಾವಧಿಯಲ್ಲಿ ಓರ್ವ ಪ್ರವಾದಿ ಜನಿಸುವವರಿದ್ದಾರೆ ಅವರೊಂದಿಗೆ ಕೆಲವು ವಿಸ್ಮಯಗಳು ನಡೆಯಲಿದೆ ಎಂಬ ಮಾತು ನೆನಪಾಯಿತು. ಈ ಪಾದ್ರಿಯವರು ಭವಿಷ್ಯದಲ್ಲಿ ಬರಲಿರುವ ಪ್ರವಾದಿಯ ಬಗ್ಗೆಯೇ ತಿಳಿದುಕೊಳ್ಳುವ ಉದ್ದೇಶದಿಂದ ಅರಬ್ ದೇಶದಿಂದ ಬರುವ ಎಲ್ಲ ತಂಡಗಳನ್ನು ಸೂಕ್ಷಮವಾಗಿ ಗಮನಿಸುತ್ತಿದ್ದರು. ಎಲ್ಲ ಸಂಗತಿಗಳನ್ನು ವಿಚಾರಿಸಿ ಅದು ಇವರೇ ಎಂದು ಮನಗಂಡ ಅವರು ಪ್ರವಾದಿಯೊಂದಿಗಿದ್ದ ಅವರ ಚಿಕ್ಕಪ್ಪರವರನ್ನು ಕರೆದು ಇವರಿಗೆ ಮಕ್ಕಾಗೆ ಕರೆದುಕೊಂಡು ಹೋಗಿ ಕೆಟ್ಟ ಶಕ್ತಿಗಳಿಂದ ಅವರ ರಕ್ಷಣೆ ಮಾಡಲು ತಿಳಿಹೇಳಿದರು.
ಇದೇ ಮರ ಸುಡುವಂತಹ ಬಿಸಿಲಿರುವ ಮರುಭೂಮಿಯಲ್ಲಿ ಇಂದಿಗೂ ಜಿವಂತವಾಗಿದೆ. ಇದನ್ನು , Blessed Tree ಎಂದೂ ಸಹ ಕರೆಯುತ್ತಾರೆ.
➖➖➖➖➖➖➖➖➖➖
ಇಸ್ಲಾಮಿಕ್ ಚರಿತ್ರೆ ಸಮೂಹ ನಿರ್ವಾಹಕರು
ಜೆ .ಮುಹಮ್ಮದ್ ಫಾರೂಕ್ ಪಾಣೆಮಂಗಳೂರು
&
ಹಂಝ ಬಜ್ಪೆ (ಹಂಷಮಿ ಬಜ್ಪೆ )
Comments