Skip to main content

SSF ಧ್ವಜ ದಿನ

ನನ್ನ ಪ್ರೀತಿಯ ಎಸ್ ಎಸ್ ಎಫ್ ನ ಎಲ್ಲಾ ಕಾರ್ಯಕರ್ತರಿಗೂ   ಧ್ವಜಾದಿನದ ಶುಭಾಶಯಗಳನ್ನು ಕೋರುತ್ತಾ, ಸೆಪ್ಟಂಬರ್  19 ರ ದಿನ ಪ್ರೀತಿಯ ಎಸ್ ಎಸ್ ಎಫ್ ನ ಕಾರ್ಯ ಕರ್ತರಿಗೆ ಎಂದೂ ಮೆರಯಲಾಗದ ದಿನವಾಗಿದೆ,1989 ರ ಸೆಪ್ಟಂಬರ್ 19 ರಂದು ಪ್ರಾರಂಭವಾದ  ಎಸ್ ಎಸ್ ಎಫ್ ಎಂಬ ಸಂಘಟನೆಯು ಸ್ಥಾಪಿತವಾಗಿ ಇದೀಗ 28 ವರ್ಷಕ್ಕೆ ಮುನ್ನುಗ್ಗುತ್ತಿರುವಾಗ ಈ 28 ವರುಷದಲ್ಲಿ ಸವೆಸಿದ ಹಾದಿ ಅಷ್ಟು ಸುಲಭವಾಗಿರಲ್ಲಿಲ್ಲವದರೂ,ಎಲ್ಲಾ ಕಷ್ಟ  ಪಾಡುಗಳನ್ನು ಮೀರಿ ಒಂದೊಂದು ಹೆಜ್ಜೆಗಳನ್ನು ಇಡುತ್ತಾ ಇದೀಗ ಯುವ ಪ್ರಾಯಕ್ಕೆ ಸಂಘಟನೆಯು ಕಾಲಿಟ್ಟು ಉಲಮಾ ಸಾರಥ್ಯದಲ್ಲಿ ಯುವಕರನ್ನು ಸೇರಿಸಿ ಧಾರ್ಮಿಕ,ಲೌಕಿಕವಾದ ವಿಚಾರಗಳನ್ನು ತಿಳಿಸಿಕೊಟ್ಟು ದೇಶಪ್ರೇಮದೊಂದಿಗೆ ಈ ದೇಶದ ಬೆನ್ನುಲುಬಾಗಿರುವಂತಹ ಸಂಘಟನೆಯಾಗಿ ಎಸ್ ಎಸ್ ಎಫ್ ಕಾರ್ಯಚರಿಸುತ್ತಿದೆ,ಎಸ್ ಎಸ್ ಎಫ್ ನ ಬಗ್ಗೆ ಅರ್ಥಮಾಡಿಕೊಳ್ಳದವರು ಇದರವಿಶ್ಲೇಷಣೆ ಮಾಡುತ್ತಾರೇ ಹೊರತು ಎಸ್ ಎಸ್ ಎಫ್ ಏನು,?ಎಸ್ ಎಸ್ ಎಫ್ ಏನೂ ಮಾಡುತ್ತಿದೆ, ಎಸ್ ಎಸ್ ಎಫ್ ನ ಶಕ್ತಿ ಏನೂ,? ಎಂಬುದರ ಬಗ್ಗೆ ಅಳವಾಗಿ ಅಧ್ಯಯನ ಮಾಡಿದರೆ ಗೊತ್ತಾಗುತ್ತದೆ.

               ಎಸ್ ಎಸ್ ಎಫ್  ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಕೆಡುಕಿನಿಂದ ದೂರವಿರುವಂತೆ ಮಾಡಿ ಸಮಾಜದಲ್ಲಿ ಒಬ್ಬ ಮೌಲ್ಯದಾರಿತ ಪ್ರಜೆಯನ್ನಾಗಿಸಿ ಮಾಡುದರ ಜೊತೆಗೆ ಅನಾಥ ಮಕ್ಕಳ,ನಿರ್ಗತಿಕರ,ಹೆಣ್ಣು ಮಕ್ಕಳ ಸಂರಕ್ಷಿಸಿ,ಅವರಿಗೆ ಬೇಕಾದ ಆಹಾರಬಟ್ಟೆ,ವಿಧ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಬದುಕನ್ನು ರೂಪಿಸಿ ಕೊಳ್ಳಲು ಅವಕಾಶವನ್ನು ನೀಡುತ್ತಾ,ಮಾನವೀಯತೆಯ ಮೌಲ್ಯಗಳನ್ನು ಕಲಿಸುತ್ತಾ ಧೃಢ ಹೆಜ್ಜೆಯನ್ನು ಇಡುತ್ತಿದೆ, ಭಯೋತ್ಪದನೆ,ಉಗ್ರವಾದ,ಕೋಮುವಾದ,ಮತೀಯವಾದವನ್ನು ಕಲಿಸದೆ, ಸಂಘಟನೆಯು ಮನುಷ್ಯತ್ವದ ಮೌಲ್ಯಗಳಿಗೆ ಬೆಲೆ ಕೊಡುವುದಕ್ಕೆ ಹೆಚ್ಚು ಅದ್ಯತೆಯನ್ನು ನೀಡುತ್ತಾ ಬಂದಿದೆ. ಬರೀ ಭಾಷಣವನ್ನು ಮಾಡುವ ನೀವೇನು ಮಾಡಿದ್ದಿರಿ(ಹತ್ಯೆಯ ಕುರಿತು ಮಾತನಾಡಿಲ್ಲ ಎಸ್ ಎಸ್ ಎಫ್) ಎಂದು ಹೇಳುವ ವಿರೋಧಿಗಳೆ ಇಲ್ಲಿ ಒಮ್ಮೆ ನೋಡಿ ನಮ್ಮ  ನಾಯಕರು ಅದರಲ್ಲೂ ಎ ಪಿ ಉಸ್ತಾದ್,ಭಾರತದಲ್ಲಿ ನಡೆಯುವ ಹತ್ಯೆ,ಪ್ರಪಂಚದಲ್ಲಿ ನಡೆಯುವ ಹತ್ಯೆಯನ್ನು ಬರೀ ಬಾಯಿಮಾತಿನಲ್ಲಿ  ಖಂಡಿಸದೇ ಜೊತೆಗೆ ಬರ್ಮಾದಲ್ಲಿ ನಡೆದ ಹತ್ಯೆಯ ಕುರಿತು ನಮ್ಮ ದೇಶದ ಪ್ರಧಾನಮಂತ್ರಿಯವರೊಂದಿಗೂ,ವಿದೇಶದಲ್ಲಿರುವ ಟರ್ಕಿ  ಪ್ರಧಾನಮಂತ್ರಿಯೊಂದಿಗೆ  ಚರ್ಚಿಸಿ ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿ, ಭಾರತಕ್ಕೆ ಬಂದ ರೋಹಿಗ್ಯ ಮುಸ್ಲಿಂಮರಿಗೆ ಅಝಹರಿ ಉಸ್ತಾದವರು ದೆಹಲ್ಲಿಯಲ್ಲಿ ಅಲ್ಲಿನ ಮಕ್ಕಳಿಗೆ ಬೇಕಾದ ಆಹಾರ,ಬಟ್ಟೆನ್ನು ನೀಡಿ,ಮಾತಿನಲ್ಲಿ ಹೇಳದೆ ಕೆಲಸದಲ್ಲಿ ಮಾಡಿ ತೋರಿಸಿದ್ದಾರೆ ಮತ್ತು ನಮ್ಮ ನಾಯಕರು ವಿಶ್ವಕ್ಕೆ ಇದರ ಬಗ್ಗೆ ಧ್ವನಿ ಎತ್ತುವಂತೆ ಮಾಡಿದ್ದು ಎಸ್ ಎಸ್ ಎಫ್ ನ ಸಾರಥಿಯನ್ನು ನೀಡುವ ಉಲಮಾ ನಾಯಕರು...... ಮುಸ್ಲಿಂರ ಅಭಿವೃಧ್ಧಿಯೊಂದೆ ಹೇಳುವ ನಾಯಕರು ಏನು ಮಾಡಿದ್ದಾರೆ,?

ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಮುನ್ನೇರುತಿರುವ ಸಂಘಟನೆ.ಅನ್ಯಾಯದ ಮಾರ್ಗದಲ್ಲಿ ಸಂಚರಿಸುವಾಗ, ನ್ಯಾಯಯುತವಾದ ಹಾದಿಯನ್ನು ತೋರಿಸಿಕೊಟ್ಟ ಸಂಘಟನೆ. ಕೆಡುಕುಗಳತ್ತ ಮನಸ್ಸಿನ ಚಿತ್ತ ಬೆಳೆಯುವಾಗ, ಒಳಿತಿನತ್ತ ಕೊಂಡೊಯ್ದ ಸಂಘಟನೆ, ತನ್ನ ಧರ್ಮವನ್ನು ಪ್ರೀತಿಸುತ್ತಿರುವಾಗ, ಅನ್ಯ ಧರ್ಮವನ್ನು ಗೌರವಿಸಲು ಎಚ್ಚರಿಸುತ್ತಾ ಬಂದ ಸಂಘಟನೆ ಅದುವೇ ಎಸ್ಸೆಸ್ಸಫ್..!!

"ಕೆಡುಕುಗಳಿಂದ ಒಳಿತಿನೆಡೆಗೆ" ಅನ್ನುವ ಉದಾತ್ತವಾದ ಘೋಷವಾಕ್ಯಗಳೊಂದಿಗೆ ಮುನ್ನೇರುತ್ತಿರುವ ಎಸ್ಸೆಸ್ಸಫ್
ಸಮಾಜದಲ್ಲಿ ತಾಂಡವಾಡುವ ವರದಕ್ಷಿಣೆಯ ವಿರುದ್ಧ ಪರಿಣಾಮಕಾರಿಯಾಗುವ ಆಂದೋಲನಕ್ಕೆ ಮುನ್ನುಡಿಯಿರಿಸಿ ಸಂಘಟನೆಯ ಇಪ್ಪತ್ತೈದನೇ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ಕಾರ್ಯಕರ್ತರಿಂದ ವರದಕ್ಷಿಣೆ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿ ವರದಕ್ಷಿಣೆಯ ವಿರುದ್ಧ ರಣಕಹಳೆ ಮೊಳಗಿಸುವಂತಾಗಲು ಸಂಘಟನೆ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ಅದು ಸಮಾಜದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಯಾಗಲಿ.
ಸಮುದಾಯದ ನಡುವಿನ ಪ್ರತಿಭೆಗಳು, ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರುವಂತಹ ಸಂದರ್ಭದಲ್ಲಿ ಪ್ರತಿಭೋತ್ಸವವನ್ನು ಸಂಘಟಿಸಿ ಅದೆಷ್ಟೋ ಯುವ ಪ್ರತಿಭೆಗಳ ಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸಲು ಸಾಧ್ಯವಾಗಿದೆ.

ಕಳೆದ ಇಪ್ಪತ್ತೆಂಟು ವರ್ಷಗಳಿಂದ ಕನ್ನಡ ನಾಡಿನಲ್ಲಿ  ಸಾರ್ಥಕತೆಯ ಹಾದಿಯನ್ನು ಮುನ್ನಡೆಸುತ್ತಾ ಬಂದ ಎಸ್ಸೆಸ್ಸಫ್ ಗಿಂದ ಜನುಮದಿನದ ಹರುಷ. ಸಂಘಟನೆಯ ಯಶಸ್ಸಿಗಾಗಿ ಹಲವಾರು ನಾಯಕರು ಹಲವು ತ್ಯಾಗ, ಕಷ್ಟಗಳನ್ನು ಸಹಿಸಿಕೊಂಡು ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ. ಹಲವು ಆರೋಪ,ಅಪಪ್ರಚಾರ, ಅಪಹಾಸ್ಯಗಳನ್ನು ಸಹಿಸಬೇಕಾಗಿ ಬಂದಾಗಲೂ ಧೃತಿಗೆಡದೆ ಮುನ್ನೇರಿದ್ದಾರೆ.

ಪರಂಪರೆಯ ಸಂರಕ್ಷಣೆಗೆ ಉಲಮಾ ಸಾರಥ್ಯವೊಂದೇ ಎಸ್ ಎಸ್ ಎಫ್ ಗೆ ಅಶ್ರಯವಾಗಿದೆ,ನೆತ್ತರ  ವಾಸನೆಯಿಲ್ಲದೆಯೂ ಸಮಾಜದಲ್ಲಿ ಕ್ರಾಂತಿಮೂಡಿಸಲೂ ಸಾದ್ಯವಿದೆ ಎಂದೂಸಾಧಿಸಿ ತೋರಿಸಿದ ಯುವ ಶಕ್ತಿ ಎಸ್ ಎಸ್ ಎಫ್, ಹಸಿರು ಶ್ವೇತ ನೀಲ ಧ್ವಜವನ್ನು ಎದೆಗಪ್ಪಿ ಉಲ್ಲಾಸದೊಂದಿಗೆ ಕಾರ್ಯಕ್ಷೇತ್ರಕ್ಕಿಳ್ಳಿದು ಕಾರ್ಯಚರಣೆಗೆ ಇಳಿದ ಎಸ್ ಎಸ್ ಎಫ್, ಭವ್ಯ ನಾಳೆಗಳ ನಿರ್ಮಾಣದ ಕಾರ್ಯಕ್ಕೆ ಕೈ ಜೋಡಿಸಿದ ಎಸ್ ಎಸ್ ಎಫ್,ನಾವು ಯಾರು,ನಮ್ಮ ಜವಬ್ದಾರಿ ಏನೂ ಎಂದು ತೊರಿಸಿಕೊಟ್ಟ ಎಸ್ ಎಸ್ ಎಫ್ 

ಎಸ್ ಎಸ್ ಎಫ್ ಸಂಘಟನೆಯು ಯಾರಲ್ಲೂ ದ್ವೇಷವನ್ನಾಗಲಿ,ಅಲೀಂಗಳನ್ನು ಹೀಯಾಳಿಸುದಾಗಲಿ,ಇನ್ನೊಬ್ಬರ ತೇಜೊವಧೆಯನ್ನಾಗಲಿ ಮಾಡುತ್ತಿಲ್ಲ,ಬದಲಾಗಿ ಸುನ್ನತ್ ಜಮಾಅತಿನ ಅದರ್ಶವನ್ನು ಮಾತ್ರ ಜನರಿಗೆ ತಲುಪಿಸುವ ಸಿದ್ದಾಂತವನ್ನು ಇಟ್ಟುಕೊಂಡಿರುವ ಸಂಘಟನೆಯಾಗಿದೆ.ಭಾರತ ಮಾತ್ರವಲ್ಲದೆ ಪ್ರಪಂಚವೇ ಮುಸ್ಲಿಂ ನಾಯಕರಾಗಿ ಒಪ್ಪಿಕೊಂಡಿರುವ ಒಬ್ಬ ಅಕ್ಷರ ಜ್ಞಾನದ ಪಾಂಡಿತ್ಯ,ಪ್ರಗಲ್ಬ ಪಂಡಿತ,ಎಸ್ ಎಸ್ ಎಫ್ ನ ಸಾರಥ್ಯದ ಸಮ್ರಾಟ ಆನಾಥ ಮಕ್ಕಳ ಅಶಾಕಿರಣ ಬಹುವನ್ಯಾರಾದ ಎ ಪಿ ಉಸ್ತಾದ್ ಕಾಂತಪುರಂ ಈ ಸಂಘಟನೆಗೆ ಸಿಕ್ಕಿದ  ಒಂದು ನಿಧಿ , ಇವರ ನಾಯಕತ್ವದಲ್ಲಿ ಎಸ್ ಎಸ್ ಎಫ್ 28ವರುಷ ಕಾರ್ಯಚರಿಸಿದೆ ಎಂಬುದೆ ದೊಡ್ಡ ಅಭಿಮಾನವಾಗಿದೆ,ಕರುನಾಡ ಮಣ್ಣಿನಲ್ಲಿ ನಡೆದ ಕರ್ನಾಟಕ ಯಾತ್ರೆ ಕರ್ನಾಟಕದಲ್ಲಿ ಇತಿಹಾಸದ ಪುಟದಲ್ಲಿ ದಾಖಲಾಗಿದೆ.ಸಂಘಟನೆಯು ದೀನಿಕಾರ್ಯವಲ್ಲದೇ ಸಮಾಜಿಕ ಕಾರ್ಯಗಳಿಗೆ ಕೈ ಜೋಡಿಸುತ್ತಾ ಮುಂದೆ ಸಾಗುತ್ತಿದೆ ಇದನ್ನು ಯಾರಿಂದಲೂತಡೆಯಲು ಸಾದ್ಯವಿಲ್ಲ ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಲೆ ಇರುವಷ್ಟು,ನಾವು ಇನ್ನೂ ಹೆಚ್ಚು ಬೆಳೆಯುತ್ತಾ ಹೊಗುತ್ತಿದ್ದೇವೆ ಅದೇ ನಮ್ಮ ಸಾಧನೆಯಾಗಿದೆ.

     ಕೆಲವರು ಗೋಹತ್ಯೆ,ತಲಾಖ್ ವಿರುದ್ದ ಪ್ರತಿಭಟಿಸುವುದ್ದಿಲ್ಲ ಎನ್ನುವ ವಿರೋದಿಗಳು ನಮ್ಮ ಸಂಘಟನೆಯನ್ನು ಕುಗ್ಗಿಸಲು ಶ್ರಮಿಸುತ್ತಲೆ ಇರುವಾಗ, ಇದಕ್ಕೆ ಉತ್ತರವನ್ನು ನಮ್ಮ ಉಲಮಾಗಳು ಯಾವ ರೀತಿಯಲ್ಲಿ ಸರ್ಕಾರಕ್ಕೂಹಾಗೂ ಸಮಾಜಕ್ಕೂ ತಿಳಿಸಬೇಕೊ ಅ ರೀತಿಯಲ್ಲಿ ನಮ್ಮ ಉಮಾರ, ಉಲಮಾಗಳು ಸೂಕ್ತವಾದ ಉತ್ತರವನ್ನು ಕೊಟ್ಟಿದ್ದಾರೆ,ನಮಗೆ ಯಾವುದೇ ರೀತಿಯ ರಾಜಕೀಯವನ್ನು ಮಾಡಿ ರಾಜಕೀಯ ಬೆಳೆಬೆಯಿಸಿಕೊಳ್ಳಲು,ಯುವಕರನ್ನು ದಾರಿ ತಪ್ಪಿಸಲು ನಮ್ಮ ಸಂಘಟನೆಯು ಪ್ರಯತ್ನಿಸುತ್ತಿಲ್ಲ, ಮುಸ್ಲಿಂ ಸಮಾಜವನ್ನು ದಾರಿ ತಪ್ಪಿಸುತಿರುವವರು ಸುನ್ನತ್ ಜಮಾಅತಿನ ವಿರೋಧಿಗಳು ಅವರು ಜನರಲ್ಲಿ ಒಡಕನ್ನು ಮೂಡಿಸಿರಾಜಕೀಯವಾಗಿ ಮೇಲೆಳಲು ನಿರಂತರ ಕೆಲಸ ಮಾಡುತ್ತಿದ್ದಾರೆ !ಎಸ್ ಎಸ್ ಎಫ್ ಸಂಘಟನೆಯು ಇದಕ್ಕೆ ವಿರುಧ್ದವಾಗಿ,ಸೌರ್ಹಾದತೆ,ಪ್ರೀತಿಯ ಸಂದೇಶವನ್ನು ನೀಡಿ ಸಮಾಜದಲ್ಲಿ ಉತ್ತಮವಾದ ಕಾರ್ಯಗಳನ್ನು ಮಾಡಿ ಯುವ ಸಮೂಹವನ್ನು ಜಾಗೃತಗೊಳಿಸುವತ್ತಾ ಎಸ್ ಎಸ್ ಎಫ್ ಸಂಘಟನೆಯು ಈ ದಿಕ್ಕಿನಲ್ಲಿ ಸಾಗುತ್ತಿದೆ,ಕಳೆದ ತಿಂಗಳಲ್ಲಿ ,"ದ್ವೇಷ ಅಳಿಸಿ,ದೇಶಉಳಿಸಿ," ಎಂಬ ಘೋಷಣೆಯೊಂದಿಗೆ ಎಲ್ಲಾ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಜನರಿಗೆ ತಲುಪಿಸಿದ್ದೇವೆ.

ಎಸ್ ಎಸ್ ಎಫ್ ನ ಸಂಘಟನಗೆ 28 ವರುಷವದರೂ  ಅದೇ ಹೆಸರಿನಲ್ಲಿ ಕಾರ್ಯಚರಿಸುತ್ತಿದ್ದು,ಸತ್ಯ,ನ್ಯಾಯದ ಪರ ನಿಂತು ಎಲ್ಲಾ ಜನರ ಕಷ್ಟ ಸುಖಗಳಿಗೆಸ್ಪಂದಿಸುತ್ತಾ ಯುವಕರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುತ್ತಿದೆ ನಮ್ಮ ಈ ಸಂಘಟನೆಯ ಶಕ್ತಿಯೆ ನಮ್ಮ ಉಲಮಾಗಳು,ಅವರು 28 ವರುಷಗಳ ಹಿಂದೆ ಕಷ್ಟಪಟ್ಟು ಈ ಸಂಘಟನೆಯನ್ನು ಬೆಳೆಸಿ,ಅಲೀಂಗಳನ್ನು ಸಮಾಜಕ್ಕೆ ನೀಡುತ್ತಾ ಇದೆ ನಮ್ಮ ವಿಜಯವು ಅದೇ ಆಗಿದೆ,ಇದಕೆಲ್ಲಾ  ಕಾರಣರಾದ ಉಲಮಾ,ಉಮಾರ, ಸಾದತ್ ಗಳಿಗೂ,ಕಾರ್ಯಕರ್ತರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತಾ, ತಮ್ಮೆಲ್ಲರ ಸಹಾಕರವನ್ನು ಕೋರುತ್ತಾ,ಈಸಂಘಟನೆಯಲ್ಲಿ ಕೆಲಸ ಮಾಡುತ್ತಿರುವವರಿಗೂ,ಎಲ್ಲಾರಿಗೂ ಅಲ್ಲಾಹು ಧೀರ್ಘ ಯುಷ್ಯು ಅಫೀಯತ್ ನೀಡಲಿ (ಆಮೀನ್)

ಇಪ್ಪತ್ತೆಂಟು ಸಂವತ್ಸರಗಳನ್ನು ಪೂರೈಸಿಕೊಂಡು ಇಪ್ಪತ್ತೊಂಬತ್ತನೇ ವರ್ಷಕ್ಕೆ  ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ  ಎಲ್ಲರಿಗೂ ಎಸ್ಸೆಸ್ಸಫ್ ನ ಧ್ವಜ ದಿನದ ಶುಭಾಶಯಗಳನ್ನು ಕೋರುತ್ತಾ,

                                     ನಿಮ್ಮ ಪ್ರೀತಿಯ
                                         
       ಸಲಾಮ್ ಕಲ್ಕಂದೂರು (ಸಲ್ಲು)

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...