Skip to main content

SSF ಧ್ವಜ ದಿನ. ಧ್ಯೇಯ ಗೀತೆ

*ಬನ್ನಿ ಬನ್ನಿ ಸೋದರೇ ಸುನ್ನಿ ಕರ್ಮ ಧೀರರೇ*
*ವಿಶ್ವ ಶಾಂತಿಗಾಗಿ ಧರ್ಮ ಕ್ರಾಂತಿ ಪಡೆಯ ಯೋಧರೇ...!!*

*ಎದ್ದೇಳಿರಿ ಸಹಚರರೇ ಧರ್ಮ ಧ್ವನಿಯ ಸಾರುವ*
*ಕರ್ಮ ಧನ್ಯ ಸರಣಿಗಾಗಿ ಎಸ್ಸೇಸ್ಸಫ್ ಸೇರುವಾ...!!*

*ಹರಿತ ಶ್ವೇತ ನೀಲ ಧ್ವಜವ ಗಗನಕೆತ್ತಿ ಚಲಿಸುವಾ*
*ವಿಧ್ಯೆ ಸೇವೆ ಹೋರಾಟದ ನವ ಸಂಚಯ ರಚಿಸುವಾ...!!*

*ಪುಣ್ಯ ನಬಿ ಪೋಣಿಸಿದ ಧರ್ಮ ರತ್ನ ಹಾರವು*
*ಮರಳು ಗಾಡಿನಲ್ಲಿ ಅರಳಿ ನಿಂತ ಕುಸುಮವು...!!*

*ಉಮರ್ ಹಂಝ ಬಿಲಾಲರ ಜಅ್'ಫರುಗಳ ಕಂಠದಿ*
*ಉದುರಿ ಬಿದ್ದ ಕ್ರಾಂತಿ ಗೀತೆ ಹಾಡುವಾ ಸಹೋದರೇ...!!*

*ನಾವೊಂದೆ ನಮ್ಮದೆ ಎಸ್ಸೆಸ್ಸಫ್ ನ ಭವ್ಯ ಶಕ್ತಿಯು*
*ಅಹ್ಲು ಸುನ್ನ ವಲ್ ಜಮಾಅ ಹರಿಸಿ ಕೊಟ್ಟ ಸ್ಪೂರ್ತಿಯು...!!*

*ಜೈ ಜಯಾ ರವಗಳ ಕೂಗಿ ದ್ವಜದ ಹಿಡಿದು ಸಾಗುವಾ*
*ರಾಷ್ಟ್ರ ಧರ್ಮ ನಾಡ ಮುಕ್ತಿಗಾಗಿ ಸಜ್ಜರಾಗುವಾ...!!*

*ಜಾತಿವಾದ ಭೀತಿವಾದ ಕೋಮುವಾದ ಅಳಿಸುವಾ*
*ಮನುಜರೊಂದೆ ಎಂದು ಸಾರಿ  ಮಾನವತೆಗೆ ಮರಳುವಾ...!!*

*ಎಸ್ಸೆಸ್ಸಫ್ ಘೋಷಿಸುವ ಧರ್ಮ ಕ್ರಾಂತಿಯ ದ್ವನಿ*
*ದಿಗ ದಿಗಂತದಲ್ಲಿ ಎದ್ದು ಬರಲಿ ಸುನ್ನಿ ಮಾರ್ದನಿ...!!*

*ಅಷ್ಟ ದಿಕ್ಕು ನಡುಗುವಂತೆ ಗಟ್ಟಿಯಾಗಿ ಮೊಳಗಲಿ*
*ಎಸ್ಸೆಸ್ಸಫ್*
*ಎಸ್ಸೆಸ್ಸಫ್*
*ಎಸ್ಸೆಸ್ಸಫ್*
*ಝಿಂದಾಬಾದ್ ಝಿಂದಾಬಾದ್*

*ಹೋರಾಟವೇ ಜೀವನ, ಒಳಿತೆನೆಡೆಗೆ ಮುನ್ನುಗ್ಗಿ*
*S S F ದ್ವಜದಿನ*
*ಸೆಪ್ಟೆಂಬರ್ 19*

*ಶುಭಕೋರುವ*
*ಎಸ್ಸೆಸ್ಸಫ್ ಮೂಡು ಗೋಪಾಡಿ ಯುನಿಟ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...