ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಭಾರತ ದೇಶದ ಏಕೈಕ ವಿದ್ವಾಂಸ ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ =========================== *✍ಇರ್ಫಾಝ್ ತುಂಬೆ🇸🇱* ===========================
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ಭಾರತ ದೇಶದ ಏಕೈಕ ವಿದ್ವಾಂಸ ಶೈಖುನಾ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್
===========================
*✍ಇರ್ಫಾಝ್ ತುಂಬೆ🇸🇱*
===========================
*ಹೌದು...!* ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಕವರೆಗೂ ಪರಿಚಯವಿರುವ ದೇಶ ಕಂಡ ಅದ್ಭುತ ಮಹಾ ದಿವ್ಯ ಚೇತನ *ಶೈಖುನಾ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದ್*
*ಈ ಮಹಾ*ವಿದ್ವಾಂಸನನ್ನು ಜಗತ್ತೇ ಗುರಿತ್ತಿಸಲು ಹಲವಾರು ಕಾರಣಗಳಿವೆ ಅದನ್ನು ಹೇಳಿತಿರಲು ಸಾವಿರಾರು ವರ್ಷಗಳು ಸಾಗಬಹುದು.ಅದರೂ ಕೆಲವೊಂದ್ದು ಕಾರಣಗಳನ್ನು ನಾವು ನೋಡುವ...
👉 *ಯತೀಂ ಮಕ್ಕಳ ಪಿತಾಮಹಾ:-*
ಹೌದು ವಿಶ್ವ ವಿಖ್ಯಾತ ಮರ್ಕಝ್ ಎಂಬ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ಭಾರತ ದೇಶದ ಕಾಶ್ಮೀರದ ಗಲಭೆ ಪೀಡಿತ ರಾಜ್ಯದ ತಂದೆ ತಾಯಿ ಇಲ್ಲದ ಹಾಗು ನಿರ್ಗತಿಕ ಮಕ್ಕಳಿಗೆ ಪ್ರೀತಿಯ ಸಂದೇಶವನ್ನು ನೀಡಿ ಮರ್ಕಝ್'ಗೆ ಕರೆ ತಂದು ಕಾಶ್ಮಿರದಿಂದ ಹಿಡಿದು ಕನ್ಯಾಕುಮಾರಿಯವರೆಗೂ ಸಂಚರಿಸಿ ಸಾವಿರಾರು ಯತೀಂ ಮಕ್ಕಳನ್ನು ಸಾಕಿ ಸಲುಹಿಸಿ ಹೊಟ್ಟೆ ಪೂರ್ತಿ ಅನ್ನ ಕೊಟ್ಟು ಸುಂದರವಾದ ವಸ್ತ್ರ ಕೊಟ್ಟು ಉನ್ನತ ಮಟ್ಟದ ಎರಡು ರೀತಿಯ ಶಿಕ್ಷಣ ಕೊಟ್ಟು ಸಖಾಫಿ ಎಂಬ ಖ್ಯಾತಿಯ ಬಿರುದುದೊಂದಿಗೆ ವಕೀಲ,ಡಾಕ್ಟರ್,ಎಂಜಿನಿಯರ್ ಮುಂತಾದ ಶಿಕ್ಷಣವನ್ನು ನೀಡಿ ಪೋಷಿಸುವ ಓರ್ವ ಜಗ್ಗತ್ತೇ ಕಂಡರಿಯದ ಓರ್ವ ಮಹಾನ್ ವಿದ್ವಾಂಸ ಅದು *ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದ್*
*👉 ಮಸೀದಿ ಮದ್ರಸಗಳ ನಿರ್ಮಾಪಕ:-*
ಜಗ್ಗತ್ತೇ ತನ್ನ ಕಣ್ಣನ್ನು ದಿಟ್ಟಿಸಿ ನೋಡುತ್ತಿದೆ ಹೌದು..ನಮಗೂ ಅಲ್ಲಾಹನು ಉತ್ತಮ ಆರೋಗ್ಯ ನೀಡಿದರೂ ನಮಿಂದ್ದ ಒಂದು ಯತೀಂ ಮಕ್ಕಳಿಗೆ ಒಂದು ಒತ್ತಿನ ಊಟ ನೀಡಲು ಸಾಧ್ಯವಾಗಿಲ್ಲ ಅದು ಬಿಡಿ ಊರಲ್ಲೂ ಒಂದು ಮಸೀದಿ ಕಟ್ಟಲು ಸ್ವಲ್ಪ ಹಣ ಕೊಟ್ಟು ಸಹಾಯ ಮಾಡಲು ನನಗೂ ನಿಮಗೂ ಸಾಧ್ಯವಾಗಿಲ್ಲವೆಂದರೆ ಕೇವಲ ಭಾರತ ದೇಶದಲ್ಲಿ ಮೂರೂ ಸಾವಿರಕ್ಕಿಂತ್ತ ಅಧಿಕ ಮಸೀದಿಗಳನ್ನು ಹಾಗು ಪವಿತ್ರ ಇಸ್ಲಾಂ ಧರ್ಮದ ಅರಿವಿನ ಕೊರತೆವಿರುವ ಧಾರಾಳ ಹಳ್ಳಿಗಳ್ಳಿಗಳಲ್ಲೂ ಅದೆಷ್ಟ್ತೋ ಮಸೀದಿ ಮದ್ರಸಗಳನ್ನು ನಿರ್ಮಿಸಿ ಕೊಟ್ಟು ಮುಸ್ಲಿಮರಿಗೆ ಮಸೀದಿ ಇಲ್ಲದ ದೇಶವಾದ ಅಸ್ಟ್ರೇಲಿಯಾ,ಕಿನ್ಯಾ ಮುಂತಾದ ದೇಶದಲ್ಲೂ ಮಸೀದಿ ನಿರ್ಮಿಸಿಕೊಡುತ್ತಿರುವ ಓರ್ವ ಮಹಾನ್ ಸಮುದಾಯದ *ದಿವ್ಯ ಚೇತನಾ ಸುಲ್ತನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದ್*
*👉 ಶಿಕ್ಷಣದ ಹರಿಕಾರ:-*
ಹೌದು..!ನೀವು ನೋಡಿ ಹೆಸರು ಕೇಳುತ್ತಿರುವ ಸಖಾಫಿ,ಅಹ್ಸನಿ,ಸಹದಿ,ಮದನಿ,ಝುಹುರಿ,ಅಮಾನಿ,ಮರ್ಝುಕ್ಕಿ,ಹಿಮಾಮಿ,ಜಾಹರಿ,ಹನೀಫಿ,ಅಮ್ಜದಿ,ನಈಮಿ,ಅಶ್ರಫಿ ಮುಂತಾದ ಹಲವಾರು ಬಿರುದುದಾರಿಗಳು ನೈಜ್ಯ ಪವಿತ್ರ ಇಸ್ಲಾಮಿನ ಅಡ್ಡಿಗಲ್ಲಾಲದ ಅಹ್ಲುಸುನ್ನತ್ ಜಮಾತನ್ನು ಲೋಕವಿಡಿ ಪ್ರಸರಿಸಿ ದೀನಿ ದಾಹಿಗಳಿಗೆ ಆಸರೆಯಾಗುತ್ತಿರುವ ಎಲ್ಲಾ ಬಿರುದುದಾರಿಗಳು ಶೈಖುನಾ ಸುಲ್ತಾನುಲ್ ಉಲಮಾರ ಅಧೀನದಲ್ಲಿರುವ ಸ್ಥಾಪನೆಗಳ ಬಿರುದುದಾರಿಗಳಾಗಿರುವವರು.
ಅದು ಅಲ್ಲದೆ ಶೈಖುನಾ ಉಸ್ತಾದರ ಶಿಷ್ಯಂದಿರು ಅನೇಕರು ವಕೀಲ,ಡಾಕ್ಟರ್,ಎಂಜಿನಿಯರ್,ಪೊಲೀಸ್ ಮುಂತಾದ ಉದೋಗ್ಯದಲ್ಲಿದ್ದು ದೇಶ ವಿದೇಶದಲ್ಲೂ ಸೇವೆ ಸಲ್ಲಿಸುತ್ತಿರುವರು.
ಅದು ಅಲ್ಲದೇ ಶೈಖುನಾ ಉಸ್ತಾದರ ಅಧ್ಯಕ್ಸತೆಯಲ್ಲಿ ಭಾರತ ದೇಶಾದ್ಯದಂತ ಸಾವಿರಾರು ಧಾರ್ಮಿಕ ಹಾಗು ಲೌಕಿಕ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ ಇದೆಲ್ಲದರ ರೂವಾರಿ *ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದ್*
*👉 ಸುನ್ನಿ ಸಂಘಟ್ಟಣೆಗಳ ನೇತ್ರತ್ವ:-*
ಭವ್ಯ ಭಾರತ ದೇಶದಲ್ಲಿ 45 ವರ್ಷಗಳ ಇತಿಹಾಸವಿರುವ ದೇಶದ ಅತೀ ದೊಡ್ಡ ಸುನ್ನಿ ವಿದ್ಯಾರ್ಥಿ ಸಂಘಟ್ಟಣೆ *ಎಸ್ಸಸ್ಸಫ್*ಇದೀಗ ದೇಶದ 21 ರಾಜ್ಯಗಳಲ್ಲೂ ಸಕ್ರಿಯವಾಗಿ ಕಾರ್ಯಾಚರಿಸುತ್ತಿವೆ.
ಎಸ್.ವೈ.ಎಸ್,ಸುನ್ನಿ ಬಾಲ ಸಂಘ,ಸುನ್ನಿ ಜಂಹಿಯತ್ತುಲ್ ಉಲಮಾಲ್,ಮುಸ್ಲಿಂ ಜಮಾಹತ್ ಮುಂತಾದ ಸುನ್ನಿ ಸಂಘಟ್ಟಣೆಗಳಿಗೆ ನೇತ್ರತ್ವ ಅದು *ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್*
*ಅಲ್ಲದೆ ದೇಶದಲ್ಲಿ* ನಡೆಯುವ ಕೋಮು ಗಲಭೆಯನ್ನು,ಭಯೋತ್ಪದನೆಯನ್ನು ವಿರೋದಿಸುತ್ತ ಶಾಂತಿಯನ್ನು ಮಾತ್ರ ಪಠಿಸುತ್ತ ದೇಶದಲ್ಲಿ ಇದುವರೆಗೂ ಉಸ್ತಾದರ ಅನುಯಾಯಿಗಳ ಮೇಲೆ ಒಂದೇ ಒಂದು ಕ್ರಿಮಿನಲ್ ಪ್ರಕರಣವು ದಾಖಲೆಯಾಗಿಲ್ಲ ಎಂಬುದು ಗಮನಾರ್ಹ.
ಅಂದು ಕಾರ್ಗಿಲ್ ಯುದ್ದದ ಸಮಯದಲ್ಲಿ ದೇಶದ ಮೇಲೆ ಎರಗಿ ಬರಲು ಶ್ರಮಿಸಿದ ಪಾಕಿಸ್ತಾನಿ ಪಡೆಗಳ ವಿರುದ್ಧ ಸಮರ ಸಾರಿ ಹೋರಾಡಲು ನಮ್ಮ ಎಸ್ಸಸ್ಸಫ್ ಎಸ್.ವೈ.ಎಸ್ ಎಂಬ ಮಹತ್ವದ ಸಂಘಟ್ಟಣೆಯ ಪಡೆಗಳನ್ನು ಕಳುಹಿಸಿ ಕೊಡಲು ನಾವು ಸದಾ ಸಿದ್ದ ಎಂದು ಅಂದಿನ ಪ್ರಧಾನಿ ಮಂತ್ರಿಗೆ ಸಂದೇಶ ರವಾನಿಸಿ ಹಾಗು ಯಾವ ಸಂದರ್ಭದಲ್ಲೂ ದೇಶದ ಭದ್ರತೆಗೆ ಹಾನಿಯಾದಾರೆ ದೇಶದ ಮಿಲಿಟರಿ ಪಡೆಗಳೊಂದಿಗೆ ನಮ್ಮ ಸಂಘಟ್ಟಣೆಯ *ಮಿನಿ ಮಿಲಿಟರಿ ಪಡೆಗಳು* ಹೋರಾಡಲು ಸದಾ ಸಿದ್ದ ಎಂಬ ಸಂದೇಶ ರವಾನಿಸಿದ ಓರ್ವ ಮಹಾನ್ ವಿದ್ವಾಂಸ ಅದು *ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದ್*
*👉 ಅಸೆಯ್ಯದ್ ತಾಜುಲ್ ಉಲಮಾ ಹಾಗು ಉಲಮಾ ದಿಗ್ಗಜರ ದಿವ್ಯ ಆಶೀರ್ವಾದ:-*
ಸಮಸ್ತ ಎಂಬ ಪಂಡಿತ ಸಭೆಯಲ್ಲಿ ರಾಜಕೀಯ ಅಡಗಿ ಭಿನಾಭಿಪ್ರಾಯ ಉಂಟಾದಾಗ ಧೈರ್ಯದಿಂದ್ದ ಹೊರ ನಡೆದ ಅಸೆಯ್ಯದ್ ತಾಜುಲ್ ಉಲಮಾ ಉಳ್ಳಾಲ್ ತಂಗಳ್ ಎಲ್ಲ ವಿಧದಲ್ಲೂ ಶೈಖುನಾ ಎ.ಪಿ ಉಸ್ತಾದರಿಗೆ ಶಕ್ತಿಯಾಗಿದ್ದರು.
ತಾಜುಲ್ ಉಲಮಾ ಒಂದು ಮಹಾ ಸಮೆಲ್ಲನದಲ್ಲಿ ಹೇಳುವಂತೆ *"ನನಗೆ ಅನಾರೋಗ್ಯದ ಕಾರಣ ದೇಶ ವಿದೇಶಕ್ಕೆ ಓಡಾಡಲು ಸಾಧ್ಯವಾಗದ ಕಾರಣ ಅಲ್ಲಾಹು ನನಗೆ ಎ.ಪಿ ಎಂಬ ಶಕ್ತಿಯನ್ನು ನೀಡಿದ್ದಾನೆ ದೇಶ ವಿದೇಶಕ್ಕೆ ಓಡಾಡಿ ಸಮಸ್ತ ಹಾಗು ಸಂಘಟ್ಟಣೆಯನ್ನು ಬಲ ಪಡಿಸಲು ಅಲ್ಲಾಹು ನನಗೆ ಕೊಟ್ಟ ಶಕ್ತಿಯಾಗಿದೆ ಎ.ಪಿ"*(ಈ ಮಾತು ಇಂದು ಸಹ ಯೂಟ್ಯೂಬ್ನಲ್ಲಿ ಲಭ್ಯವಿದೆ).
*ಅದು ಅಲ್ಲದೆ*ಅಂತಾರಾಷ್ಟ್ರೀಯ ಉಲಮಾಗಳಿಗೆ ಸುಲ್ತಾನುಲ್ ಉಲಮಾವೆಂದರೆ ಪ್ರೀತಿಯ ಸಾಗರ.
ಸೌದಿ ಅರೇಬಿಯಾದ ಸುನ್ನಿ ನಾಯಕ ಮಾಲೀಕಿ ಮಕ್ಕಿ,ಅಬ್ಬಾಸ್ ಆಲ್-ಮಾಲಿಕಿ,ಸ್ವಬಾವುದ್ದೀನ್ ರಿಫಾಯಿ ಬಗ್ದಾದಿ,ಈಜಿಫ್ಟ್,ಕಿನ್ಯ,ಸಿರಿಯಾ,ಯಮನ್ ಮುಂತಾದ ರಾಷ್ಟ್ರದ ಹಲವಾರು ನಾಯಕರು ಅನುಗ್ರಹಿಸಿದ ನಾಯಕ ಶೈಖುನಾ ಸುಲ್ತನುಲ್ ಉಲಮಾ ಎ.ಪ ಉಸ್ತಾದ್.
ಭಾರತ ದೇಶದದಲ್ಲಿ ನೋಡುದಾದರೆ ಶೈಖುನಾ ಓ.ಕೆ ಉಸ್ತಾದ್,ಸಿ.ಎಂ ಮಡವೂರ್,ಕುಂಡೊರ್ ಉಸ್ತಾದ್,ನೆಲ್ಲಿಕುತ್ ಉಸ್ತಾದ್,ತ್ವಾಹಿರುಲ್ ಅಹ್ಡಲ್ ತಂಗಳ್,ನೂರುಲ್ ಉಲಮಾ ಎಂ.ಎ ಉಸ್ತಾದ್,ಸಿ.ಪಿ ಮಂಜನಾಡಿ ಉಸ್ತಾದ್, ಅಸೆಯ್ಯದ್ ಪೊಸೋಟ್ ತಂಗಳ್,ಸುರಿಬೈಲ್ ಉಸ್ತಾದ್,ಶೈಖುನಾ ಇ.ಸುಲೈಮಾನ್ ಉಸ್ತಾದ್,ಶೈಖುನಾ ಪೊನ್ಮಲ ಉಸ್ತಾದ್,ಶೈಖುನಾ ಅಲಿ ಕುಂಞ ಉಸ್ತಾದ್,ಅಸೆಯ್ಯದ್ ಖಲೀಲ್ ತಂಗಳ್,ಖಂಝುಲ್ ಉಲಮಾ ಚಿತ್ತಾರಿ ಉಸ್ತಾದ್,ಶೈಖುನಾ ಅಬ್ಬಾಸ್ ಉಸ್ತಾದ್ ಮಂಜನಾಡಿ,ಶೈಖುನಾ ಮಾಣಿ ಉಸ್ತಾದ್,ಅಸೆಯ್ಯದ್ ಬಾಫಖಿ ತಂಗಳ್,ಶೈಖುನಾ ಬೇಕಲ್ ಉಸ್ತಾದ್,ಅಸೆಯ್ಯದ್ ಕೂರ ತಂಗಳ್,ಅಸೆಯ್ಯದ್ ಬಾಯರ್ ತಂಗಳ್ ಮುಂತಾದ ಹೇಳಿ ತೀರದ ಸಾವಿರಾರು ಉಲಮಾ ದಿಗ್ಗಜ ಪಂಡಿತರು ಇಂದು ಉಸ್ತಾದರ ನೇತ್ರತ್ವದಲ್ಲಿ ಪ್ರವರ್ತಿಸುವ ಉಲಮಾ ನಾಯಕರಾಗಿರುವವರು.
*👉 ವಿಶ್ರಾಂತಿವಿಲ್ಲದ ಪಂಡಿತ:-*
ವಿಶ್ರಾಂತಿವೇಂಬುದು ಉಸ್ತಾದರ ಪಾಲಿಗೆ ಮಾಯವಾಗಿದ್ದು ಕೇವಲ ಪವಿತ್ರ ಇಸ್ಲಾಮಿನ ಅಶಯಕ್ಕಾಗಿ ರಾತ್ರಿಹಗಲೆನ್ನದೆ ದೇಶವಿದೇಶಕ್ಕೆ ಹೊಡಾಡುವ ಮಹಾನ್ ವಿದ್ವಾಂಸ ಶೈಖುನಾ *ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್*
ಇಂದು ಭಾರತದ ಕೇರಳದಲ್ಲಾದರೆ ಮಧ್ಯಯಾನ ಕರ್ನಾಟಕದಲ್ಲಾದರೆ ರಾತ್ರಿ ಬಿಹಾರದಲ್ಲಿ,ಮರುದಿನ ಬೆಳಿಗ್ಗೆ ಗುಜಾರಾತ್ತಲಾದ್ರೆ ಮತ್ತೆ ದೆಹಲಿ ಅಸ್ಸಾಂ'ಮಿನಲ್ಲಿ.
ಅದು ಅಲ್ಲದೆ ಶೈಖುನಾ ಇಂದು ಭಾರತದಲ್ಲಾದ್ರೆ ನಾಳೆ ಸೌದಿ,ದುಬೈ,ಯಮನ್,ಲಂಡನ್,ಈಜಿಫ್ಟ್,ಸಿರಿಯಾ ಮುಂತಾದ ದೇಶದಲ್ಲಿ ಓಡಾಡಿ ಸುನ್ನತ್ ಜಮಾತಿಗಾಗಿ ಹಗಲಿರುಳು ಶ್ರಮಿಸುವರು.
*ಶೈಖುನರಿಗೆ ಪ್ರಾಯ 76 ದಾಟಿದರು ಯುವಕರನ್ನೇ ನಾಚಿಸುವಂತ್ತಿದೆ*
ಶೈಖುನರಿಗೆ ಅಲ್ಲಾಹು ಕೊಟ್ಟ ದಿವ್ಯ ಶಕ್ತಿಯಿಂದ ದೇಶವಿದೇಶಕ್ಕೆ ಓಡಾಡಿ ಸಮುದಾಯಕ್ಕೆ ಆಶಾ ಕೇಂದ್ರವಾಗಿರುವರು ನಮ್ಮ *ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್*
*👉 ಟೀಕೆ ನಿಂಧನೆಗೆ ಜಗ್ಗದ ನಾಯಕ:-*
ನೈಜ್ಯ ಉಲಮಾಗಳ ಪಾಲಿಗೆ ಟೀಕೆ ಟಿಪ್ಪಣಿಗಳು ಸರ್ವ ಸಾಮಾನ್ಯ.
ಲೋಕ ಪ್ರವಾದಿ ಮುಹಮ್ಮದ್ ಮುಸ್ತಾಫಾ(ಸ.ಅ)ರ ಪವಿತ್ರ ದೇಹಕ್ಕೆ ಕಲ್ಲೆಸೇದು,ಹಲವಾರು ರೀತಿಯಲ್ಲಿ ಹವಮಾನಿಸಿ ನಿಂದನೆಯ ಸರಮಾಲೆಯಾ ಘೋಷಣಯನ್ನೆ ಕೂಗಿದ ಶತ್ರುಗಳು ಇನ್ನು ಉಲಮಾ ಸೆಯ್ಯದ್ಗಳನ್ನು ಬಿಡುವರೇ?
ಇಲ್ಲ ಇಲ್ಲ ಹಲವಾರು ರೀತಿಯ ನಿಂದನೆ ಟೀಕೆಗಳ ಸರಮಾಲೆಯನ್ನೇ ಎದುರಿಸಿ ಆಕಾಶದೆತ್ತರಕ್ಕೆ ಬೆಳೆದು ನಮ್ಮ ಸಂಘಟ್ಟಣೆಯನ್ನು ಪುಣ್ಯ ಸುನ್ನಿ ಸಮಸ್ತವನ್ನು ವಿಶಾಲವಾದ ಎತ್ತರದ ಮರವನ್ನಾಗಿ ಬೆಳೆಸಿ ಟೀಕೆ ನಿಂದನೆಗಾರರಿಗೆ ಸಾಧನೆ ಕೆಲಸ ಕಾರ್ಯಗಳ ಮೂಲಕ ಉತ್ತರಿಸಿದ ನಮ್ಮ ಶೈಖುನಾ *ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್*
*👉 ಅಪ್ಪಟ ಪ್ರವಾದಿ ಪ್ರೇಮಿ:-*
ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಶೈಖುನಾ ಅದೇ ರೀತಿ ಅಪ್ಪಟ ಪ್ರವಾದಿ ಪ್ರೇಮಿಯಾದ ಕಾರಣ ಯು.ಎ.ಇ ರಾಷ್ಟ್ರದ ಶೈಖ್ ಖಜ್ರಜಿ ಶೈಖುನಾ ಉಸ್ತಾದರಿಗೆ ಲಕ್ಷಾಂತರ ಜನ ಸಾಗರದ ಮುಂದೆ ಪುಣ್ಯ ಪ್ರವಾದಿಯ ಪುಣ್ಯ ತೀರುಕೇಶ ಹಾಗು ಪಾನಪಾತ್ರೆಯನ್ನು ನೀಡಿ ಪ್ರವಾದಿ ಪ್ರೇಮಿಗಳಲ್ಲಿ ಹರುಷವನ್ನು ನೀಡಿದರು.
ಪ್ರತಿ ರಬ್ಬಿವುಳ್ಳವಲ್ ತಿಂಗಳಲ್ಲಿ ಮರ್ಕಝ್ ವಿದ್ಯಾಕೆಂದ್ರರದಲ್ಲಿ ಪ್ರವಾದಿ(ಸ.ಅ)ರ ಪುಣ್ಯ ಕೇಶ ಪ್ರದರ್ಶನ ಹಾಗು ಜಲವನ್ನು ವಿತರಿಸಲಾಗುತ್ತದೆ.ಸಾವಿರಾರು ಪ್ರವಾದಿ ಪ್ರೇಮಿಗಳು ಸಾಲುಗಟ್ಟಿ ನಿಂತು ಪುಣ್ಯ ಜಲವನ್ನು ಪಡೆದು ಧನ್ಯಗೊಳ್ಳುವರು.
*👉 ಸರಕಾರದಿಂದ ಪ್ರಶಂಸೆ:-*
ಮಾನ್ಯ ಕೇರಳ ಸರಕಾರದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳುವಂತೆ *"ನಮ್ಮ ಸರಕಾರದಿಂದಗಾದ ಕೇಲಸ ಕಾರ್ಯಗಳು ಎ.ಪಿ ಅಬೂಬಕ್ಕರ್ ಮುಸ್ಲಿಯಾರ ಪ್ರಸ್ಥಾನದಿಂದಾಗುತ್ತಿವೆ ಇದು ನಿಜಕ್ಕೂ ಅದ್ಭುತವೇ ಸರಿ ಎಂದರು ಉಮ್ಮನ್ ಚಾಂಡಿ"*
ದೇಶದ ಅತೀ ದೊಡ್ಡ ಮಸ್ಜಿದ್ ಹಾಗು ಅದರ ಕೇಲಸ ಕಾರ್ಯಗಳು ಅರ್ಧ ಪಾಲು ಪೂರ್ತಿಗೊಂಡು ಸಾಗುತ್ತಿವೆ ಮತ್ತು ದೇಶದ ಅತೀ ದೊಡ್ಡ ನೋಲೇಜ್ ಸಿಟಿಯಾ ಹಲವಾರು ಕಟ್ಟಡಗಳು ತಲೆ ಎತ್ತಿ ನಿಂತಿವೆ.
ಇನ್ಶ ಅಲ್ಲಾ ಎಲ್ಲವು ಪೂರ್ತಿಗೊಳ್ಳುವ ಸಮಯವು ಸಮೀಪಿಸುತ್ತಿದೆ ಇದೆಲ್ಲದರ ರೂವಾರಿ *ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದ್*
*👉 "ಭಾರತ ರತ್ನ" ಪ್ರಶಸ್ತಿ ನೀಡಲು ಕೇಂದ್ರ ಸರಕಾರದಿಂದ ಚಿಂತನೆ:-*
ಶೈಖುನಾ ಉಸ್ತಾದರ ಶಿಕ್ಷಣ ಕ್ರಾಂತಿಯನ್ನು ಕಂಡು ಹಾಗು ಉಸ್ತಾದರ ವಿಶ್ವ ವಿಖ್ಯಾತ ಮರ್ಕಝ್ ಎಂಬ ವಿದ್ಯಾಸ್ಥಾಪನೆಯನ್ನು ಮತ್ತು ಮರ್ಕಝ್ ಅಧೀನದ ಗುಜರಾತ್,ಬಿಹಾರ,ಕರ್ನಾಟಕ,ದೆಹಲಿ,ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಕಾರ್ಯಾಚರಿಸುವ ಮರ್ಕಝ್ ಸ್ಥಾಪನೆ ಹಾಗು ಅದರಲ್ಲಿ ಕಲಿಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳನ್ನು ಕಂಡು ಮತ್ತು ಶೈಖುನಾ ಉಸ್ತಾದರ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕೀರ್ತಿಯನ್ನು ಕಂಡು ಶೈಖುನಾ *ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಗೆ ಭಾರತ ಸರಕಾರದ ಅಮೂಲ್ಯವಾದ ಪ್ರಶಸ್ತಿ "ಭಾರತ ರತ್ನ"* ನೀಡಲು ಕೇಂದ್ರ ಸರಕಾರ ಚಿಂತನೆ ನಡೆಸುತ್ತಿದೆ.
*ಉಸ್ತಾದಾರ ಮಹಿಮೆಯನ್ನು* ಹೇಳಿ ತೀರಲು ಸಾಧ್ಯವಿಲ್ಲ ಹಾಗು ನನ್ನಂತಹ ವ್ಯಕ್ತಿಗಳಿಗೆ ಈ ಚಿಕ್ಕದಾದ ವಾಟ್ಸಫ್ ಅದಕ್ಕೆ ಸೂಕ್ತವಾದ ಸ್ಥಳವು ಅಲ್ಲ
ಉಸ್ತಾದರ ಮಹಿಮೆಯನ್ನು ಸ್ವಲ್ಪ ಮಟ್ಟಿಗಾದರೂ ಓದಬೇಕಾದರೆ ಕನ್ನಡದ ವಿದ್ಯಾರ್ಥಿಗಳು ಹೊರ ತಂದ *"ಕ್ರಾಂತಿ ಪುರುಷ ಕಾಂತಪುರಂ"* ಎಂಬ ಕನ್ನಡ ಪುಸ್ತಕ ಓದಿದರೆ ಅದರಲ್ಲಿ ಉಸ್ತಾದರ ಅದರ್ಶ ಜೀವನದ ಹಲವಾರು ವಿಷಯಗಳಿವೆ
*ಅಖೀಲ ಭಾರತ ಸುನ್ನಿ ಜಂಹಿಯ್ಯತುಲ್ ಉಲಮಾದ ಪ್ರದಾನ ಕಾರ್ಯದರ್ಶಿ ಹಾಗು ಸಮಸ್ತ ಎಂಬ ಪಂಡಿತ ಸಭೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಮತ್ತು ಹಲವಾರು ಮೊಹಲ್ಲಾದ ಖಾಝಿಯು,ಹಲವಾರು ಸಂಘ ಸಂಸ್ಥೆಯ ಅಧ್ಯಕ್ಷರು ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುವ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಗೆ ಅಲ್ಲಾಹು ದೀರ್ಘ ಆರೋಗ್ಯ ಆಯುಷ್ಯವನ್ನು ನೀಡಿ ದಯಪಾಲಿಸಲಿ ಹಾಗು ಉಸ್ತಾದರ ನೆರಳಿನಲ್ಲಿ ಜೀವಿಸಿ ಪ್ರವರ್ತಿಸಲು ನಮಗೆಲ್ಲರಿಗೂ ಅಲ್ಲಾಹು ತಾೌಫೀಕ್ ನೀಡಲಿ (ಅಮೀನ್)*
Comments