SSF ದ್ವಜ ದಿನವನ್ನು ಆಚರಿಸುವ ಮುನ್ನ ಸ್ವಲ್ಪ ಚಿಂತಿಸಿ.
= ಚಿಂತಿಸಿದೆ, ಎಸ್ಸೆಸ್ಸೆಫ್ ಧ್ವಜ ದಿನ ಅಂದರೆ ಕರ್ನಾಟಕದಲ್ಲಿ ಎಸ್ಸೆಸ್ಸೆಫ್ ಸ್ಥಾಪಿತವಾದ ದಿನ.
*SSF* ಸ್ಥಾಪಕಾಧ್ಯಕ್ಷರು,ಕಾರ್ಯದರ್ಶಿ,ಕೋಶಾಧಿಕಾರಿ ಯಾರು? ಅದು ಎಲ್ಲಿ ಸ್ಥಾಪನೆಗೊಂಡಿತು.? ಅದರ ಉದಯದ ಚರಿತ್ರೆಯನ್ನು ತಿಳಿಯಲು ಪ್ರಯತ್ನಿಸಿ.
= ಪ್ರಯತ್ನಿಸಿದೆ, ಸ್ಥಾಪಕಧ್ಯಕ್ಷ ಹಸನುಲ್ ಫೈಝಿ ಅಜ್ಜಾವರ, ಕಾರ್ಯದರ್ಶಿ ಕೆಸಿರೋಡ್ ಸಅದಿ, ಕೋಶಾಧಿಕಾರಿ ಜಿಎಂ ಕಾಮಿಲ್. ಸ್ಥಾಪನೆಗೊಂಡದ್ದು ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿದ್ದ ಎಸ್ಸೆಸ್ಸೆಫ್ ಕಚೇರಿಯಲ್ಲಿ. ಉದಯದ ಚರಿತ್ರೆ ಅಹ್ಲುಸ್ಸುನ್ನ ಭದ್ರ ಕೋಟೆಯ ಕಾವಲಿಗೆ.
ಹೀಗೆ *SSF* ಸ್ಥಾಪಕ ಅಧ್ಯಕ್ಷರು ಮತ್ತು ಅದರ ಸ್ಥಾಪಕ ಕಾರ್ಯದರ್ಶಿ ಎಲ್ಲಿದ್ದಾರೆ ಎಂದು ತಿಳಿಯಿರಿ.
= ತಿಳಿದಿದೆ, ಹಸನುಲ್ ಫೈಝಿ ಈಗ ವೃಧಾಪ್ಯ ಕಾರಣ ಮನೆಯಲ್ಲಿದ್ದಾರೆ, ಕಾರ್ಯದರ್ಶಿ ಜಾಮಿಅ ಸಅದಿಯಾ ಪ್ರೊಫೆಸರ್ ಮತ್ತು ರಾಜ್ಯ ಎಸ್‌ವೈಎಸ್ ಮಾಜಿ ಅಧ್ಯಕ್ಷರು. ಇಬ್ಬರೂ ಅಪ್ಪಟ ಎ.ಪಿ ಸುನ್ನಿಗಳು.
ನಿಮ್ಮಲ್ಲಿ ಚಿಂತಿಸುವ ಮನಸ್ಸು ಇದ್ದರೆ ಅದಕ್ಕೆ ದ್ರಷ್ಟಾಂತಗಳಿವೆ.
ಚಿಂತಿಸಿ....
= ಹೌದು ಚಿಂತಿಸಿದೆ, ಉತ್ತರಿಸಿದೆ.
*- ಶಾಕಿರ್ MSe*
Comments